ಸಿಂಪಲ್ ಮೊಬೈಲ್ ಬೇಕೆಂದರೆ ಈ ಆಯ್ಕೆ ನಿಮ್ಮದಿರಲಿ

By Super
|
ಸಿಂಪಲ್ ಮೊಬೈಲ್ ಬೇಕೆಂದರೆ ಈ ಆಯ್ಕೆ ನಿಮ್ಮದಿರಲಿ


ಇದೀಗ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಕಾಲವಾಗಿದ್ದರೂ ಬೇಸಿಕ್ ಮೊಬೈಲ್ ಗಳಿಗೂ ಬೇಡಿಕೆ ಹೆಚ್ಚಿದೆ. ಗ್ರಾಹಕರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಸ್ಯಾಮ್ ಸಂಗ್ ಕಂಪನಿ ನೂತನ ಫೋನ್ ತಂದಿದೆ. ಸಿಂಪಲ್ ಮೊಬೈಲ್ ಸಾಕು ಎನ್ನುವವರಿಗೆಂದೇ ಈ ಮೊಬೈಲ್ ತುಂಬಾ ಸೂಕ್ತವಾಗಲಿದೆ.

ಸ್ಯಾಮ್ ಸಂಗ್ E1230 ಎಂಬ ನೂತನ ಮೊಬೈಲನ್ನು ಬಾರ್ ಫೋನ್ ವಿನ್ಯಾಸದಲ್ಲಿ ತಯಾರು ಮಾಡಲಾಗಿದ್ದು, GSM ಬೆಂಬಲಿತ ಫೋನ್ ಇದಾಗಿದೆ. 900/1800 MHz ಫ್ರಿಕ್ವೆನ್ಸಿ ಯೊಂದಿಗೆ ಈ ಮೊಬೈಲ್ ಕಾರ್ಯ ನಿರ್ವಹಿಸುತ್ತದೆ. ಬ್ಲ್ಯಾಕ್ ಶೇಡ್ ಮತ್ತು ಬೂದು ಬಣ್ಣದಲ್ಲಿ ಮೂಡಿ ಬಂದಿರುವ ಈ ಮೊಬೈಲ್ ಬಿಳಿ ಬಣ್ಣದಲ್ಲೂ ಲಭ್ಯವಿದೆ. ಮೊಬೈಲಿನ ಕೀ ಪ್ಯಾಡ್ ಗಳನ್ನೂ ಅನುಕೂಲಕ್ಕೆ ತಕ್ಕಂತೆ ದೊಡ್ಡದಾಗಿ ನೀಡಲಾಗಿದೆ.

ಸ್ಯಾಮ್ ಸಂಗ್ E1230 ಮೊಬೈಲ್ ವಿಶೇಷತೆ:

* 110.6ಎಂಎಂ x 45.4 ಎಂಎಂ x 13.9ಎಂಎಂ ಸುತ್ತಳತೆ

* 73 ಗ್ರಾಂ ತೂಕ

* 1.8 ಇಂಚಿನ ಸ್ಕ್ರೀನ್, 128 x 160 ಪಿಕ್ಸಲ್ ರೆಸೊಲ್ಯೂಷನ್

* 56,000 ಬಣ್ಣ ಬೆಂಬಲಿತ TFT ಡಿಸ್ಪ್ಲೇ

800mAh ಸ್ಟ್ಯಾಂಡರ್ಡ್ ಲೀಥಿಯಂ ಐಯಾನ್ ಬ್ಯಾಟರಿ ಹೊಂದಿರುವ ಈ ಮೊಬೈಲ್ 660 ಗಂಟೆ ಸ್ಟ್ಯಾಂಡ್ ಬೈ ಟೈಂ ಮತ್ತು 8 ಗಂಟೆ 40 ನಿಮಿಷ ಟಾಕ್ ಟೈಂ ನೀಡುತ್ತದೆ. ಮನರಂಜನೆಗೆಂದು ಮೊಬೈಲಿನಲ್ಲಿ ಎಫ್ ಎಂ ಮತ್ತು ಗೇಮ್ ಕೂಡ ಇದೆ. ಮೊಬೈಲಿನಲ್ಲಿ ಕ್ಯಾಮೆರಾ ಇಲ್ಲದಿರುವುದು ಒಂದು ಹಿನ್ನಡೆಯೆನಿಸಿದರೂ ಇನ್ನೆಲ್ಲಾ ಅಂಶಗಳೂ ಇದನ್ನು ಮರೆಮಾಚಲಿದೆ.

ಹೆಡ್ ಸೆಟ್ ನೊಂದಿಗೆ ನೀಡಲಾಗುವ ಈ ಮೊಬೈಲ್ ಜೊತೆ ವಾರಂಟಿ ಕಾರ್ಡ್ ಕೂಡ ನೀಡಲಾಗುತ್ತೆ. ಈ ಸ್ಯಾಮ್ ಸಂಗ್ E1230 ಮೊಬೈಲ್ ಬೆಲೆ ಸ್ಯಾಮ್ 2,,000 ರು ಎಂದು ಕಂಪನಿ ತಿಳಿಸಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X