ಕಡಿಮೆ ಬೆಲೆಗೆ ಸ್ಯಾಮ್ ಸಂಗ್ E2600 ಮೊಬೈಲ್

Posted By: Staff
ಕಡಿಮೆ ಬೆಲೆಗೆ ಸ್ಯಾಮ್ ಸಂಗ್ E2600 ಮೊಬೈಲ್

ವಿವಿಧ ರೀತಿಯ ಗ್ರಾಹಕರಿಗೆ ತಕ್ಕಂತೆ ಅನೇಕ ಮೊಬೈಲ್ ಗಳನ್ನು ಸ್ಯಾಮ್ ಸಂಗ್ ನೀಡುತ್ತಾ ಬಂದಿದೆ. ಇತ್ತೀಚೆಗಷ್ಟೆ ಅಂತರರಾಷ್ಟ್ರೀಯ ಮೊಬೈಲ್ ಮಾರುಕಟ್ಟೆಗೆ ಹೊಸತೊಂದು ಮೊಬೈಲನ್ನು ಸ್ಯಾಮ್ ಸಂಗ್ ಬಿಡುಗಡೆಗೊಳಿಸಿದೆ.

ಸ್ಯಾಮ್ ಸಂಗ್ E2600 ಎಂಬ ಈ ಮೊಬೈಲ್ ನಲ್ಲಿ ಅನೇಕ ಆಧುನಿಕ ಆಯ್ಕೆಗಳು ಇವೆ.

ಸ್ಯಾಮ್ ಸಂಗ್ E2600 ಮೊಬೈಲ್ ವಿಶೇಷತೆ:

* 2.4 ಇಂಚಿನ TFT QVGA ಸ್ಕ್ರೀನ್ ಡಿಸ್ಪ್ಲೇ

* 89 ಗ್ರಾಂ ತೂಕ

* 2.0 ಮೆಗಾ ಪಿಕ್ಸಲ್ ಕ್ಯಾಮೆರಾ, 1600 x 1200 ಪಿಕ್ಸಲ್ ರೆಸೊಲ್ಯೂಷನ್

* 97 x 49.9 x 15.3 ಎಂಎಂ ಸುತ್ತಳತೆ

* 40 ಎಂಬಿ ಆಂತರಿಕ ಮೆಮೊರಿ ಸಾಮರ್ಥ್ಯ

* ಮೆಮೊರಿ ವಿಸ್ತರಣೆಗೆ 16 ಜಿಬಿ ಮೈಕ್ರೊ SD ಕಾರ್ಡ್ ಸ್ಲಾಟ್

* USB 2.0, ಬ್ಲೂಟೂಥ್ v3.0, A2DP

* GPRS, EDGE

* ಎಫ್ ಎಂ ರೇಡಿಯೋ,

* GSM 900/ 1800 MHz

ಈ ಮೊಬೈಲಿನ ಕ್ಯಾಮೆರಾದೊಂದಿಗೆ ಡಿಜಿಟಲ್ ಝೂಮ್ ಸೌಲಭ್ಯವನ್ನೂ ನೀಡಲಾಗಿದೆ. ಮನರಂಜನೆಗೆಂದು ಎಫ್ ಎಂ ಮತ್ತು ಗೇಮ್ ಗಳನ್ನು ಅಳವಡಿಸಲಾಗಿದೆ. MP3, AAC ಮತ್ತು AAC+ ಫಾರ್ಮೆಟ್ ಗಳನ್ನು ಬೆಂಬಲಿಸುವ ಮೀಡಿಯಾ ಪ್ಲೇಯರ್ ಇದರಲ್ಲಿದೆ.

800 mAh ಲೀಥಿಯಂ ಐಯಾನ್ ಬ್ಯಾಟರಿ ಪಡೆದುಕೊಂಡಿರುವ ಈ ಮೊಬೈಲ್ ಉತ್ತಮ ಟಾಕ್ ಟೈಂ ಮತ್ತು ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ. ಈ ಮೊಬೈಲ್ ಫೇಸ್  ಬುಕ್ ಮತ್ತು ಟ್ವಿಟ್ಟರ್ ನಂತಹ ಸಾಮಾಜಿಕ ತಾಣಗಳ ಆಯ್ಕೆಯನ್ನೂ ಹೊಂದಿದೆ. ಈ ಸ್ಯಾಮ್ ಸಂಗ್ E2600 ಮೊಬೈಲ್ ಬೆಲೆ 2,500 ರು ಎಂದುಅಂದಾಜಿಸಲಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot