ಸ್ಯಾಮ್ ಸಂಗ್ ನೀಡುತ್ತಿದೆ ಪರಿಸರ ಸ್ನೇಹಿ ಮೊಬೈಲ್

Posted By:
ಸ್ಯಾಮ್ ಸಂಗ್ ನೀಡುತ್ತಿದೆ ಪರಿಸರ ಸ್ನೇಹಿ ಮೊಬೈಲ್

ಹೊಸ ಮೊಬೈಲ್ ಕೊಂಡಾಗ ಹಳೆಯದನ್ನು ಎಸೆದು ಬಿಡುತ್ತೇವೆ. ಆದರೆ ಈ ಮೊಬೈಲ್ ಗಳು ಪರಿಸರ ಮಾಲಿನ್ಯಕ್ಕೆ ಒಂದು ಕಾರಣವಾಗಿದೆ. ಮೊಬೈಲ್ ಬ್ಯಾಟರಿಯಲ್ಲಿರುವ ಆಸಿಡ್ ಮಣ್ಣಿನಲ್ಲಿ ಸೇರುತ್ತದೆ ಅಲ್ಲದೆ ಮೊಬೈಲ್ ತಯಾರಿಕೆಗೆ ಬಳಸಿದ ವಸ್ತುಗಳು ಮಣ್ಣಿನಲ್ಲಿ ಕರಗುವುದಿಲ್ಲ ಕೂಡ.

ಆದರೆ ಸ್ಯಾಮ್ ಪರಿಸರ ಸ್ವೀಹಿಯಾಗಿದೆ. ಏಕೆಂದರೆ ಇದು ಹೊಸ ಸ್ಮಾರ್ಟ್ ಫೋನ್ ತಯಾರಿಸಿದ್ದು ಇದರ ತಯಾರಿಕೆಗೆ ಬಳಸಲಾದ ಶೇ.80 ವಸ್ತುಗಳು ಪರಿಸರಕ್ಕೆ ಯಾವುದೆ ಹಾನಿಯನ್ನು ಉಂಟು ಮಾಡುವುದಿಲ್ಲ. ಈ ಮೊಬೈಲ್ ಅನ್ನು ಸ್ಯಾಮ್ ಸಂಗ್ ಎಕ್ಸಿಲರೇಟ್ ಎಂದು ಕರೆಯಲಾಗಿದ್ದು ಈ ಕೆಳಗಿನ ಪ್ರಮುಖ ಲಕ್ಷಣಗಳನ್ನು ಹೊಂದಿದೆ.

ಲಕ್ಷಣಗಳು:

* AMOLED 4.0 ಇಂಚಿನ ಟಚ್ ಸ್ಕ್ರೀನ್

* GSM, UMTS, LTE, WLAN ವೈಫೈ ಸೌಲಭ್ಯ

* ವೀಡಿಯೊ ಪ್ಲೇಯರ್, ರೇಡಿಯೊ ಪ್ಲೇಯರ್

* ಆಂಡ್ರಾಯ್ಡ್ v2.3 ಆಪರೇಟಿಂಗ್ ಸಿಸ್ಟಮ್

* HTML ಮತ್ತು Wap 2.0 ಬ್ರೌಸರ್

* ಯು ಟ್ಯೂಬ್, ಪಿಕಾಸ ಆನ್ ಲೈನ್ ಸಪೋರ್ಟಿಂಗ್ ಅಪ್ಲಿಕೇಶನ್

ಈ ಪರಿಸರ ಸ್ನೇಹಿ ಮೊಬೈಲ್ ಇನ್ನಷ್ಟೆ ಮಾರುಕಟ್ಟೆಗೆ ಬರಲಿದ್ದು ಇದರ ಭಾರತೀಯ ಮಾರುಕಟ್ಟೆ ಬೆಲೆಯ ಬಗ್ಗೆ ಇನ್ನೂ ನಿರ್ಧರಿಸಲಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot