Home
ಮೊಬೈಲ್

ಶಿಯೋಮಿಗೆ ಸೆಡ್ಡು: ಸ್ಯಾಮ್ ಸಂಗ್ ನಿಂದ ಅತೀ ಕಡಿಮೆ ಬೆಲೆಗೆ ಆಂಡ್ರಾಯ್ಡ್ ಫೋನ್...!

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸಿರುವ ಆಂಡ್ರಾಯ್ಡ್ ಗೋ ಸ್ಮಾರ್ಟ್ ಫೋನ್ ಗಳನ್ನು ಎಲ್ಲಾ ಮೊಬೈಲ್ ತಯಾರಿಕಾ ಕಂಪನಿಗಳು ನಿರ್ಮಿಸಲು ಮುಂದಾಗಿವೆ. ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಆಂಡ್ರಾಯ್ಡ್ ಗೋ ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡುತ್ತಿವೆ. ಇದೇ ಮಾದರಿಯಲ್ಲಿ ಸ್ಯಾಮ್ ಸಂಗ್ ಸಹ ತನ್ನ ಬಳಕೆದಾರರಿಗೆ ಸಹಾಯವಾಗುವಂತೆ ಆಂಡ್ರಾಯ್ಡ್ ಗೋ ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡಲು ಮುಂದಾಗಿದೆ.

ಸ್ಯಾಮ್ ಸಂಗ್ ನಿಂದ ಅತೀ ಕಡಿಮೆ ಬೆಲೆಗೆ ಆಂಡ್ರಾಯ್ಡ್ ಫೋನ್...!

ಈಗಾಗಲೇ ಸ್ಯಾಮ್ ಸಂಗ್ ಮಾರುಕಟ್ಟೆಗೆ ಆಂಡ್ರಾಯ್ಡ್ ಗೋ ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡಲಿದೆ ಎನ್ನುವ ಮಾಹಿತಿಯೂ ಲೀಕ್ ಆಗಿದೆ. ಇದೇ ಹಿನ್ನಲೆಯಲ್ಲಿ ಸದ್ಯ ಮಾರುಕಟ್ಟೆಗೆ ಲಭ್ಯವಾಗಿರುವ ಆಂಡ್ರಾಯ್ಡ್ ಗೋ ಸ್ಮಾರ್ಟ್ ಫೋನ್ ಬಗ್ಗೆ ಸಾಕಷ್ಟು ಮಾಹಿತಿಯೂ ಲಭ್ಯವಾಗಿದ್ದು, ಮಾಡಲ್ ನಂಬರ್ ಸಹ ಇದರೊಂದಿಗೆ ಲೀಕ್ ಆಗಿದ್ದು, ಶೀಘ್ರವೇ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ.

ಅಮೊಲೈಡ್ ಡಿಸ್ ಪ್ಲೇ

ಅಮೊಲೈಡ್ ಡಿಸ್ ಪ್ಲೇ

ಸ್ಯಾಮ್ ಸಂಗ್ ಲಾಂಚ್ ಮಾಡಲಿರುವ ಆಂಡ್ರಾಯ್ಡ್ ಗೋ ಸ್ಮಾರ್ಟ್ ಫೋನಿನಲ್ಲಿ ಅಮೊಲೈಡ್ ಡಿಸ್ ಪ್ಲೇಯನ್ನು ಅಳಡಿಸಲಿದೆ ಎನ್ನುವ ಮಾಹಿತಿಯೂ ದೊರೆತಿದ್ದು, 5 ಇಂಚಿನ ಡಿಸ್ ಪ್ಲೇ ಇದಾಗಲಿದೆ. ಇದು ಟಾಪ್ ಎಂಡ್ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳಲ್ಲಿ ಇರುವಂತಹ ಡಿಸ್ ಪ್ಲೇ ಇದಾಗಿದ್ದು, ಉತ್ತಮ ಗುಣಮಟ್ಟವನ್ನು ಹೊಂದಿರಲಿದೆ.

1 GB RAM

1 GB RAM

ಇದಲ್ಲದೇ ಸ್ಯಾಮ್ ಸಂಗ್ ಆಂಡ್ರಾಯ್ಡ್ ಗೋ ಸ್ಮಾರ್ಟ್ ಫೋನಿನಲ್ಲಿ 1 GB RAM ಅನ್ನು ನೀಡಲಾಗಿದ್ದು, ಇದರೊಂದಿಗೆ ಸ್ಯಾಮ್ ಸಂಗ್ ಅಭಿವೃದ್ಧಿ ಮಾಡಿರುವಂತಹ ಎಕ್ಸ್ ನೋಸ್ 7570 ಪ್ರೋಸೆಸರ್ ಅನ್ನು ಅಳವಡಿಲಾಗದೆ. ಇದರೊಂದಿಗೆ 16 GB ಇಂಟರ್ನಲ್ ಮೆಮೊರಿಯನ್ನು ಇದರಲ್ಲಿ ಕಾಣಬಹುದಾಗಿದೆ.

ಆಂಡ್ರಾಯ್ಡ್ ಒರಿಯೋ

ಆಂಡ್ರಾಯ್ಡ್ ಒರಿಯೋ

ಸ್ಯಾಮ್ ಸಂಗ್ ಆಂಡ್ರಾಯ್ಡ್ ಗೋ ಸ್ಮಾರ್ಟ್ ಫೋನ್ ಆಂಡ್ರಾಯ್ಡ ಒರಿಯೋ ಆವೃತ್ತಿತಯಲ್ಲಿ ಕಾಣಿಸಿಕೊಳ್ಳಲಿದೆ. ಇದಲ್ಲದೇ ಇದರೊಂದಿಗೆ ಗೂಗಲ್ ಹೊಸದಾಗಿ ವಿನ್ಯಾಸವನ್ನು ಮಾಡಿರುವ ಗೋ ಆವೃತ್ತಿಯ ಆಪ್ ಗಳು ಬಳಕೆದಾರರಿಗೆ ಲಭ್ಯವಾಗಲಿದೆ.

ಕ್ಯಾಮೆರಾ

ಕ್ಯಾಮೆರಾ

ಸ್ಯಾಮ್ ಸಂಗ್ ಆಂಡ್ರಾಯ್ಡ್ ಗೋ ಸ್ಮಾರ್ಟ್ ಫೋನಿನ ಹಿಂಭಾಗದಲ್ಲಿ 8 MP ಕ್ಯಾಮೆರಾವನ್ನು ನೀಡಲಾಗಿದೆ. ಇದರೊಂದಿಗೆ 5 MP ಕ್ಯಾಮೆರಾವನ್ನು ಸೆಲ್ಪೀಗಾಗಿ ನೀಡಲಾಗಿದೆ. ಇದರಲ್ಲಿ ಉತ್ತಮ ಚಿತ್ರಗಳನ್ನು ಸೆರೆ ಹಿಡಿಯಬಹುದಾಗಿದೆ. ಬಳಕೆದಾರರಿಗೆ ಕಡಿಮೆ ಬೆಲೆಯಾದರು ಉತ್ತಮ ಕ್ಯಾಮೆರಾಗಳನ್ನು ಇದು ಹೊಂದಿದೆ.

ಬ್ಯಾಟರಿ

ಬ್ಯಾಟರಿ

ಸ್ಯಾಮ್ ಸಂಗ್ ಆಂಡ್ರಾಯ್ಡ್ ಗೋ ಸ್ಮಾರ್ಟ್ ಫೋನಿನಲ್ಲಿ 2600mAh ಬ್ಯಾಟರಿಯನ್ನು ಅಳವಡಿಲಾಗಿದ್ದು, ಇದು ಒಂದು ದಿನದ ಬ್ಯಾಟರಿ ಬ್ಯಾಕಪ್ ಅನ್ನು ನೀಡಲಿದೆ ಎಂದು ಕಂಪನಿಯೂ ತಿಳಿಸಿದೆ. ಇದಲ್ಲದೇ ಇದರಲ್ಲಿ ಡ್ಯುಯಲ್ 4G ಸೇವೆಯನ್ನು ಕಾಣಬಹುದಾಗಿದ್ದು, ಬಳಕೆದಾರರಿಗೆ ಹೆಚ್ಚಿನ ಲಾಭವಾಗಲಿದೆ.

Best Mobiles in India

English summary
Samsung's First Android Go Smartphone. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+