2019ಕ್ಕೆ ಬರಲಿದೆ ಹೊಸ ಫೀಚರ್‌ಗಳಿರುವ ಸ್ಯಾಮ್‌ಸಂಗ್ ಗ್ಯಾಲೆಕ್ಷಿ ಎ ಸರಣಿ ಸ್ಮಾರ್ಟ್‌ಫೋನ್..!
ಮುಂದಿನ ವರ್ಷ ಸ್ಯಾಮ್ ಸಂಸ್ಥೆಯಿಂದ ಸ್ಯಾಮ್ ಸಂಗ್ ಗ್ಯಾಲಕ್ಸಿ ಎ ಸರಣಿಯ ಹೊಸ ಫೋನ್ ಗಳು ಮಾರುಕಟ್ಟೆಗೆ ಕಾಲಿಡಲಿದೆ.ಸದ್ಯ ಹರಿದಾಡುತ್ತಿರುವ ಗಾಳಿಸುದ್ದಿಗಳು ಮತ್ತು ವರದಿಯ ಅನ್ವಯ ಹೇಳುವುದಾದರೆ ಗ್ಯಾಲಕ್ಸಿ ಎ ಸರಣಿಯ 2019 ರ ಫೋನ್ ಗಳಲ್ಲಿ ಸ್ಯಾಮ್ ಸಂಗ್ ಹೊಸ ಹಾರ್ಡ್ ವೇರ್ ಗಳನ್ನು ಪರಿಚಯಿಸುವ ನಿರೀಕ್ಷೆ ಇದೆ.
ಸದ್ಯ ಲಭ್ಯವಾಗುತ್ತಿರುವ ವರದಿಯ ಪ್ರಕಾರ ಹೇಳುವುದಾದರೆ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 10 ಸ್ಯಾಮ್ ಸಂಗ್ ನಿಂದ ಬಿಡುಗಡೆಗೊಳ್ಳುವ ಮೊದಲ 3 ಕ್ಯಾಮರಾ ಒಳಗೊಂಡ ಫೋನ್ ಆಗಿರಲಿದೆ. ಆದರೆ ಈಗ ಹೊಸ ಸುದ್ದಿಯೊಂದು ಲಭ್ಯವಾಗುತ್ತಿದ್ದು, ಮೂರು ಕ್ಯಾಮರಾ ವೈಶಿಷ್ಟ್ಯವು ಮೊದಲ ಬಾರಿಗೆ ಸ್ಯಾಮ್ ಸಂಗ್ ಗ್ಯಾಲಕ್ಸಿ ಎ ಸರಣಿಯಲ್ಲಿ ಪರಿಚಯಿಸುತ್ತದೆಯಂತೆ ಮತ್ತು ಆ ಫೋನ್ ಮುಂದಿನವ ವರ್ಷದಲ್ಲಿ ಬಿಡುಗಡೆಗೊಳ್ಳಲಿದೆ. ಮೂರು ಕ್ಯಾಮರಾಗಳನ್ನು ಸ್ಯಾಮ್ ಸಂಗ್ ಸ್ಮಾರ್ಟ್ ಫೋನಿನ ಹಿಂಭಾಗದಲ್ಲಿ ಅಳವಡಿಸಲಿದೆ.

ಅಷ್ಟೇ ಅಲ್ಲ, ಈಗಾಗಲೇ ನಾವು ತಿಳಿದಿರುವ ಸುದ್ದಿಯ ಪ್ರಕಾರ ಗ್ಯಾಲಕ್ಸಿ ಎಸ್ 10 ನಲ್ಲಿ ಸ್ಯಾಮ್ ಸಂಗ್ ಮೊದಲ ಬಾರಿಗೆ ಸ್ಪೋರ್ಟ್ ಇನ್ ಡಿಸ್ಪ್ಲೆ ಫಿಂಗರ್ ಪ್ರಿಂಟ್ ಸೆನ್ಸರ್ ನ್ನು ಅಳವಡಿಸುತ್ತದೆ ಎಂದು ತಿಳಿಯಲಾಗಿತ್ತು. ಇದು ಕೂಡ ಗ್ಯಾಲಕ್ಸಿ ಎಸ್ 10 ಬದಲಾಗಿ ಗ್ಯಾಲಕ್ಸಿ ಎ ಸರಣಿಯಲ್ಲೇ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ. ಗ್ಯಾಲಕ್ಸಿ ಎಸ್ 10 ನಲ್ಲಿ ಆಲ್ಟ್ರಾಸಾನಿಕ್ ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ಅಳವಡಿಸಲಾಗುತ್ತದೆ ಎಂದು ಅಂದುಕೊಳ್ಳಲಾಗಿತ್ತು.
ಸ್ಯಾಮ್ ಸಂಗ್ ತನ್ನ ಗ್ಯಾಲಕ್ಸಿ ಎ ಫೋನ್ ನಲ್ಲಿ ಕಡಿಮೆ ಬೆಲೆಯ ಆಪ್ಟಿಕಲ್ ಸ್ಕ್ಯಾನರ್ ನ್ನು ಪರಿಚಯಿಸುತ್ತದೆ. ಆದರೆ ಎರಡೂ ಸ್ಕ್ಯಾನರ್ ನ ಗುಣಮಟ್ಟ ಬೇರೆಯಾಗಿರುತ್ತದೆ. ಪ್ರೀಮಿಯಮ್ ಗ್ಯಾಲಕ್ಸಿ ಎಸ್ 10 ನಲ್ಲಿ ಗ್ಯಾಲಕ್ಸಿ ಎ ಗೆ ಹೋಲಿಸಿದರೆ ಉತ್ತಮ ಗುಣಮಟ್ಟದ ಸೆನ್ಸರ್ ಇರುತ್ತದೆ ಎಂದು ಹೇಳಲಾಗುತ್ತಿದೆ.
ಹೂಡಿಕೆದಾರರ ವರದಿಯ ಪ್ರಕಾರ, ಸ್ಯಾಮ್ ಸಂಗ್ ಇನ್ ಡಿಸ್ಪ್ಲೇ ಬೆರಳಚ್ಚು ತಂತ್ರಜ್ಞಾನ ಮತ್ತು ಮೂರು ಕ್ಯಾಮರಾ ಲೆನ್ಸ್ ಗಳನ್ನು ಈ ಬಾರಿ ಗ್ಯಾಲಕ್ಸಿ ಎ ಸಿರೀಸ್ ಗೆ ಅಳವಡಿಸುತ್ತದೆ.ಈ ವರ್ಷ ಸ್ಯಾಮ್ ಸಂಗ್ ನ ಒಟ್ಟಾರೆ ಬಜೆಟ್ ಫೋನ್ ಗಳ ಮಾರಾಟವು ಅಂತಹ ನಿರೀಕ್ಷೆಯ ಮಟ್ಟಕ್ಕೆ ತಲುಪದೇ ಇರುವ ಹಿನ್ನೆಲೆಯಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬಜೆಟ್ ಫೋನ್ ಗಳಲ್ಲಿ ಹೆಚ್ಚು ವೈಶಿಷ್ಟ್ಯತೆಗಳನ್ನು ಸೇರಿಸಲು ಸ್ಯಾಮ್ ಸಂಗ್ ಚಿಂತನೆ ನಡೆಸಿದೆ.
ಗ್ಯಾಲಕ್ಸಿ ಎಸ್ 9 ಇತರೆ ಸ್ಯಾಮ್ ಸಂಗ್ ಫೋನ್ ಗಳಿಗೆ ಹೋಲಿಸಿದರೆ ಅಂದರೆ ಗ್ಯಾಲಕ್ಸ್ ಎಸ್ 3 ಯಿಂದಲೂ ಕೂಡ ಇಷ್ಟು ಕಡಿಮೆ ಅಥವಾ ನಿಧಾನಗತಿಯ ಮಾರಾಟವನ್ನು ಬೇರೆ ಯಾವುದೇ ಫೋನ್ ಕೂಡ ಕಂಡಿರಲಿಲ್ಲ ಎಂದು ವರದಿಯೊಂದು ಹೇಳುತ್ತದೆ. ಗ್ಯಾಲಕ್ಸಿ ಎಸ್ 9 ಎರಡನೇ ತ್ರೈಮಾಸಿಕದಲ್ಲಿ 9 ಮಿಲಿಯನ್ ಯುನಿಟ್ಸ್ ಮಾರಾಟವನ್ನು ಕಂಡಿದೆ.
ಸ್ಯಾಮ್ ಸಂಗ್ ಡಿಸ್ಪ್ಲೇ ವಿಚಾರದಲ್ಲಿ ಹೆಚ್ಚು ಗಮನ ಕೇಂದ್ರೀಕರಿಸಿದೆ. ತುಂಡಾಗದ OLED ಪೆನಲ್ ಗಳನ್ನು ಅಳವಡಿಸುವುದಕ್ಕೆ ನಿರ್ಧಾರ ಮಾಡಿದೆ. ಈ ಪೆನಲ್ ಗಳು ಯುಎಲ್ (Underwriters Laboratories ) ಗಳಿಂದ ಸರ್ಟಿಫಿಕೇಷನ್ ಕೂಡ ಪಡೆದಿರುತ್ತದೆ. ಅಷ್ಟೇ ಅಲ್ಲ ಅಧಿಕೃತ ಟೆಸ್ಟಿಂಗ್ ಕಂಪೆನಿ ಯು.ಎಸ್ ಇಲಾಖೆಯ ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯ ಆಡಳಿತ OSHA(Occupational Safety and Health Administration of the US Department of Labor) ದಿಂದ ಕೂಡ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ಯುಎಲ್ ಸರ್ಟಿಫಿಕೇಷನ್ ಅಂದರೆ ಅದನ್ನು ಗ್ರಾಹಕರ ಬಳಕೆಗೆ ಯೋಗ್ಯವಾಗಿದೆ ಎಂದರ್ಥ. ಒಟ್ಟಾರೆ ಗ್ಯಾಲಕ್ಸಿ ಎ ನಲ್ಲಿ ಹೈ ಎಂಡ್ ವೈಶಿಷ್ಟ್ಯತೆಗಳನ್ನು ಸೇರಿಸಲು ಸ್ಯಾಮ್ ಸಂಗ್ ಚಿಂತನೆ ನಡೆಸುತ್ತಿರುವುದಂತೂ ಸತ್ಯ . ನೀವು ಕೂಡ ಸ್ಯಾಮ್ ಸಂಗ್ ಫೋನ್ ಪ್ರಿಯರಾಗಿದ್ದರೆ ಇನ್ನು ಕೆಲವು ದಿನ ಕಾದರೆ ಅತ್ಯುತ್ತಮ ಫೋನ್ ನಿಮ್ಮ ಕೈಸೇರುವುದು ಪಕ್ಕಾ.


Click it and Unblock the Notifications








