ಜಸ್ಟ್ 10499 ರೂ.! ಸದ್ದಿಲ್ಲದೆ ಬಂತು Samsung 5G ಮೊಬೈಲ್.. 50MP ಕ್ಯಾಮೆರಾ.. 5000mAh ಬ್ಯಾಟರಿ; ಯಾವ ಫೋನ್?
ಭಾರತೀಯ ಮಾರುಕಟ್ಟೆ ಸೈಲೆಂಟ್ ಆಗಿಯೇ ಹೊಸ ಸ್ಯಾಮ್‌ಸಂಗ್ ಮೊಬೈಲ್ ಎಂಟ್ರಿ ಕೊಟ್ಟಿದೆ. ಶಿವರಾತ್ರಿ ಹಬ್ಬಕ್ಕೂ ಮುನ್ನವೇ ಕಂಪನಿಯು ತನ್ನ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದೆ. ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ A06 5G (Samsung Galaxy A06 5G) ಸ್ಮಾರ್ಟ್ಫೋನ್ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ. ಕಂಪನಿಯು ತನ್ನ Galaxy 'A' ಸರಣಿಯ ಅಡಿಯಲ್ಲಿ ಈ ಹೊಸ ಫೋನನ್ನು ದೇಶೀಯ ಮಾರುಕಟ್ಟೆಗೆ ಪರಿಚಯಿಸಿದೆ. ಬನ್ನಿ, ಈ ಹೊಸ ಫೋನಿನ ಬೆಲೆ, ಮಾರಾಟದ ವಿವರ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಸ್ಯಾಮ್‌ಸಂಗ್ ಕೈಗೆಟುಕುವ ಬೆಲೆಯಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ A06 5G ಫೋನನ್ನು ಬಿಡುಗಡೆ ಮಾಡಿದೆ. ಇದು Galaxy A ಸರಣಿಯ ಅತ್ಯಂತ ಅಗ್ಗದ 5G ಸ್ಮಾರ್ಟ್‌ಫೋನ್ ಆಗಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಇದು 6.7 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 6GB RAM, 128GB ಸ್ಟೋರೇಜ್, 5000mAh ಬ್ಯಾಟರಿ ಮತ್ತು 25W ವೇಗದ ಚಾರ್ಜಿಂಗ್ ಒಳಗೊಂಡಿದೆ. ಕಂಪನಿಯು ಲಾಂಚ್ ಆಫರ್‌ನೊಂದಿಗೆ ಈ ಫೋನನ್ನು ಮಾರಾಟ ಮಾಡಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A06 5G ಬೆಲೆ ಮತ್ತು ಆಫರ್
4GB RAM + 64GB ಸ್ಟೋರೇಜ್ ಬೆಲೆ = 10,499
4GB RAM + 128GB ಸ್ಟೋರೇಜ್ ಬೆಲೆ = 11,499
6GB RAM + 128GB ಸ್ಟೋರೇಜ್ ಬೆಲೆ = 12,999
ಸ್ಯಾಮ್‌ಸಂಗ್ ಗ್ಯಾಲಕ್ಸಿ A06 5G ಮೊಬೈಲ್ ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ. ಈ ಫೋನಿನ ಆರಂಭಿಕ ಬೆಲೆ 10,499 ರೂ. ಆಗಿದೆ. ಇದರಲ್ಲಿ 4GB RAM ಮತ್ತು 64GB ಸ್ಟೋರೇಜ್ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ ಮೂರು ಆಕರ್ಷಕ ಬಣ್ಣಗಳಲ್ಲಿ ಬಿಡುಗಡೆಯಾಗಿದೆ. ನೀವು ಕಪ್ಪು, ಬೂದು ಮತ್ತು ತಿಳಿ ಹಸಿರು ಬಣ್ಣದಲ್ಲಿ ಖರೀದಿಸಬಹುದು. ಸ್ಯಾಮ್‌ಸಂಗ್ ಸ್ಯಾಮ್‌ಸಂಗ್ ಗ್ಯಾಲಕ್ಸಿ A06 5G ಲಾಂಚ್ ಆಫರ್ ಸಹ ನೀಡುತ್ತಿದೆ. ನೀವು ಕೇವಲ 129 ರೂ.ಗೆ ಸ್ಯಾಮ್‌ಸಂಗ್ ಕೇರ್ + ಪ್ಯಾಕೇಜ್‌ನೊಂದಿಗೆ ಒಂದು ವರ್ಷದ ಸ್ಕ್ರೀನ್ ಪ್ರೊಟೆಕ್ಷನ್ ಯೋಜನೆಯನ್ನು ಪಡೆಯಬಹುದು.
ಸ್ಯಾಮ್‌ಸಂಗ್ ಗ್ಯಾಲಕ್ಸಿ A06 5G ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಸ್ಯಾಮ್‌ಸಂಗ್ ಗ್ಯಾಲಕ್ಸಿ A06 5G ಸ್ಮಾರ್ಟ್‌ಫೋನ್ 6.7 ಇಂಚಿನ ಎಲ್‌ಸಿಡಿ ಡಿಸ್ಪ್ಲೇ ಹೊಂದಿದೆ. ಇದು ಇನ್ಫಿನಿಟಿ ಯು ನಾಚ್ ವಿನ್ಯಾಸದೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್, 90Hz ರಿಫ್ರೆಶ್ ದರ ಮತ್ತು HD+ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಇದು ಬಳಕೆದಾರರಿಗೆ ಸ್ಪಷ್ಟ ಮತ್ತು ಸುಗಮ ವೀಕ್ಷಣೆಯ ಅನುಭವ ನೀಡುತ್ತದೆ.
ಪ್ರೊಸೆಸರ್ ಸಾಮರ್ಥ್ಯ
ಸ್ಯಾಮ್‌ಸಂಗ್ ಗ್ಯಾಲಕ್ಸಿ A06 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ಹೊಂದಿದೆ.ಈ ಗ್ಯಾಲಕ್ಸಿ A06 5G ಫೋನ್ ಆಂಡ್ರಾಯ್ಡ್ 15 ಆಧಾರಿತ ಒನ್ ಯುಐ 7.0 ಓಎಸ್‌ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಕಂಪನಿಯು ಈ ಸ್ಯಾಮ್‌ಸಂಗ್ ಫೋನಿಗೆ 4 ಓಎಸ್ ಅಪ್‌ಗ್ರೇಡ್‌ಗಳು ಮತ್ತು 4 ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ನೀಡುತ್ತದೆ.
RAM ಮತ್ತು ಸ್ಟೋರೇಜ್
ಸ್ಯಾಮ್‌ಸಂಗ್ ಗ್ಯಾಲಕ್ಸಿ A06 5G ಫೋನ್ 6GB RAM ಹೊಂದಿದೆ. ಮತ್ತು 128GB ಆಂತರಿಕ ಸ್ಟೋರೇಜ್ ಆಯ್ಕೆಯೊಂದಿಗೆ ಬರುತ್ತದೆ. ನಿಮಗೆ ಹೆಚ್ಚಿನ ಸ್ಟೋರೇಜ್ ಅಗತ್ಯವಿದ್ದರೆ, ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 1.5TB ವರೆಗೆ ಸ್ಟೋರೇಜ್ ವಿಸ್ತರಿಸಬಹುದು.

ಕ್ಯಾಮೆರಾ ಸೆಟಪ್
ಸ್ಯಾಮ್‌ಸಂಗ್ ಗ್ಯಾಲಕ್ಸಿ A06 5G ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಜೊತೆಗೆ 2 ಮೆಗಾಪಿಕ್ಸೆಲ್ ದ್ವಿತೀಯ (ಡೆಪ್ತ್ ಸೆನ್ಸರ್) ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಹೊಸ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಸ್ಯಾಮ್‌ಸಂಗ್ ಗ್ಯಾಲಕ್ಸಿ A06 5G ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 25W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಇದು ದಿನವಿಡೀ ಬ್ಯಾಟರಿ ಬ್ಯಾಕಪ್ ನೀಡುತ್ತದೆ.
ಇತರೆ ವೈಶಿಷ್ಟ್ಯಗಳು
ಸ್ಯಾಮ್‌ಸಂಗ್ ಗ್ಯಾಲಕ್ಸಿ A06 5G ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿದೆ. ಈ ಸ್ಮಾರ್ಟ್‌ಫೋನ್ ಧೂಳು ಮತ್ತು ನೀರಿನ ಸ್ಪ್ಲಾಶ್ ವಿರುದ್ಧ ರಕ್ಷಣೆಗಾಗಿ IP54 ರೇಟಿಂಗ್ ಪಡೆದಿದೆ. ಇದಲ್ಲದೆ, ಮೊನೊ ಸ್ಪೀಕರ್ ಸಹ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ಡ್ಯುಯಲ್ ಸಿಮ್, 5G, ವೈ-ಫೈ 802.11ac, ಬ್ಲೂಟೂತ್ 5.3, ಜಿಪಿಎಸ್, ಯುಎಸ್‌ಬಿ ಟೈಪ್ ಸಿ ಪೋರ್ಟ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








