Just In
- 33 min ago
ಭಾರತದಲ್ಲಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್ಟಾಪ್ ಲಾಂಚ್; ಏನೆಲ್ಲಾ ಫೀಚರ್ಸ್ ಇವೆ ಗೊತ್ತಾ!?
- 2 hrs ago
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- 2 hrs ago
ಅಗ್ಗದ ಬೆಲೆಗೆ ಹೊಸ ಪ್ಲ್ಯಾನ್ ಪರಿಚಯಿಸಿದ ವಿ ಟೆಲಿಕಾಂ; ಸಿಮ್ ಆಕ್ಟಿವ್ ಇಡಲು ಇದು ಬೆಸ್ಟ್!
- 5 hrs ago
ಏರ್ಟೆಲ್ ಜೊತೆಗೆ ಕೈ ಜೋಡಿಸಿದ ಮೆಟ್ರೋ, ಇನ್ಮುಂದೆ ಪ್ರಯಾಣಿಕರಿಗೆ ಈ ಸೇವೆ ಇನ್ನಷ್ಟು ಸರಳ!
Don't Miss
- News
ಉಡುಪಿಯಲ್ಲಿ ಬಿಜೆಪಿಗೆ ಪ್ರತಿಸ್ಪರ್ಧಿಗಳೇ ಇಲ್ಲ: ಶಾಸಕ ಕೆ. ರಘುಪತಿ ಭಟ್ ಸಂದರ್ಶನ
- Movies
ಏಜೆಯನ್ನು ಮುದ್ದಾಗಿ ಕಾಡಿದ ಲೀಲಾಳನ್ನು ಕಂಡು ಹಲ್ಲು ಮಸೆಯುತ್ತಿರುವ ದುರ್ಗಾ!
- Automobiles
ಜನಪ್ರಿಯ ನಟನ ಮನೆಗೆ ಕಥೆ ಹೇಳಲು ಹೋಗಿ ಆತನ ದುಬಾರಿ ಕಾರ್ ಓಡಿಸಿಬಂದ ನಿರ್ದೇಶಕ...
- Sports
ಮೂಲೆಗುಂಪಾದ ಶಿಖರ್ ಧವನ್ ಬಗ್ಗೆ ಅಶ್ವಿನ್ ಅಚ್ಚರಿಯ ಹೇಳಿಕೆ: ಇಶಾನ್, ಗಿಲ್ ಬಗ್ಗೆ ಹೇಳಿದ್ದೇನು?
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸ್ಯಾಮ್‌ಸಂಗ್ 'ಗ್ಯಾಲಕ್ಸಿ ಎ10 ಎಸ್' ಬಿಡುಗಡೆ!..ಬೆಲೆ 8,000 ರೂ.?
ಚೀನಾ ಕಂಪೆನಿಗಳಿಗೆ ಪೈಪೋಟಿ ನೀಡುವ ಸಲುವಾಗಿ ಸ್ಯಾಮ್‌ಸಂಗ್ ತನ್ನ 'ಗ್ಯಾಲಕ್ಸಿ ಎ' ಸರಣಿಯಲ್ಲಿ ಮತ್ತೊಂದು ಸ್ಮಾರ್ಟ್‌ಫೋನನ್ನು ಲಾಂಚ್ ಮಾಡಿದೆ. ಅನೇಕ ವದಂತಿಗಳು ಮತ್ತು ಮಾಹಿತಿ ಸೋರಿಕೆಯ ನಂತರ ಸ್ಯಾಮ್‌ಸಂಗ್ 'ಗ್ಯಾಲಕ್ಸಿ ಎ10 ಎಸ್' ಸ್ಮಾರ್ಟ್‌ಫೋನ್ ಅಧಿಕೃತವಾಗಿ ಬಿಡುಗಡೆಯಾಗಿದ್ದು, ಈ ವರ್ಷದ ಆರಂಭದಲ್ಲಿ ದೇಶದಲ್ಲಿ ಬಿಡುಗಡೆಯಾಗಿದ್ದ 'ಗ್ಯಾಲಕ್ಸಿ ಎ10' ಸ್ಮಾರ್ಟ್‌ಫೋನಿನ ಅಪ್‌ಗ್ರೇಡ್ ಫೋನ್ ಆಗಿ 'ಗ್ಯಾಲಕ್ಸಿ ಎ10 ಎಸ್' ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ.

ಹೌದು, ಪ್ರಸ್ತುತ ಕೇವಲ 7,990 ರೂಪಾಯಿಗಳ ಬೆಲೆಯಲ್ಲಿ ಲಭ್ಯವಿರುವ ಸ್ಯಾಮ್‌ಸಂಗ್‌ನ ಬಜೆಟ್ ಸ್ಮಾರ್ಟ್‌ಫೋನ್ 'ಗ್ಯಾಲಕ್ಸಿ ಎ10'. ಇದನ್ನು ಈಗ ಅಪ್‌ಡೇಟ್ ಮಾಡಲು ಮುಂದಾಗಿರುವ ಕಂಪೆನಿ, ಹೊಸ 'ಗ್ಯಾಲಕ್ಸಿ ಎ10 ಎಸ್' ಸ್ಮಾರ್ಟ್‌ಫೋನನ್ನು ಪರಿಚಯಿಸಿದೆ. ಈ ಹೊಸ 'ಗ್ಯಾಲಕ್ಸಿ ಎ10 ಎಸ್' ಸ್ಮಾರ್ಟ್‌ಫೋನ್ 6.2-ಇಂಚಿನ ಇನ್ಫಿನಿಟಿ-ವಿಎಚ್‌ಡಿ + ಡಿಸ್‌ಪ್ಲೇ, ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹಾಗೂ ಇನ್ನಿತರ ವಿಶೇಷತೆಗಳನ್ನು ಹೊತ್ತು ದೇಶದ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿದೆ.
ಸ್ಯಾಮ್‌ಸಂಗ್ ಗ್ಲೋಬಲ್ ನ್ಯೂಸ್‌ರೂಮ್ ಹೊಸ 'ಗ್ಯಾಲಕ್ಸಿ ಎ10 ಎಸ್' ಫೋನಿನ ಪ್ರಮುಖ ವಿಶೇಷಣಗಳು ಮತ್ತು ವೈಶಿಷ್ಟ್ಯಗಳನ್ನು ನಮೂದಿಸುವುದರ ಜೊತೆಗೆ ವಿವರವಾಗಿ ಪ್ರದರ್ಶಿಸಿದೆ. ಆದರೆ, ಬೆಲೆ ಮತ್ತು ಉಡಾವಣಾ ವಿವರಗಳನ್ನು ಇನ್ನೂ ಪ್ರಕಟಿಸಿಲ್ಲ. ಅದೇನೇ ಇದ್ದರೂ,'ಗ್ಯಾಲಕ್ಸಿ ಎ10 ಎಸ್' ಸ್ಮಾರ್ಟ್‌ಫೋನ್ ಬೆಲೆ 8,000 ರೂ.ಗಳನ್ನು ಮೀರುವುದಿಲ್ಲ ಎಂದು ಹೇಳಲಾಗಿದೆ. ಹಾಗಾದರೆ, 'ಗ್ಯಾಲಕ್ಸಿ ಎ10 ಎಸ್' ಸ್ಮಾರ್ಟ್‌ಫೋನ್ ಹೇಗಿದೆ?, ಇತರೆ ಏನೆಲ್ಲಾ ಫೀಚರ್ಸ್ ಹೊಂದಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಗ್ಯಾಲಕ್ಸಿ ಎ10 ಎಸ್ ವಿನ್ಯಾಸ
'ಗ್ಯಾಲಕ್ಸಿ ಎ 10' ಫೋನಿನ ಅಪ್‌ಗ್ರೇಡ್ ಆಗಿ ಬಂದಿರುವ 'ಗ್ಯಾಲಕ್ಸಿ ಎ10 ಎಸ್' ಫೋನ್ ನೂತನ ಸ್ಮಾರ್ಟ್‌ಫೋನ್‌ಗಳ ಲುಕ್ ಹೊಂದಿದೆ. ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ ವಾಟರ್‌ಡ್ರಾಪ್ ಶೈಲಿಯ ಡಿಸ್‌ಪ್ಲೇ ನೋಚ್ ಹೊಂದಿರುವುದನ್ನು ನೋಡಬಹುದು. ಕಂಪೆನಿಯ ಬಜೆಟ್ ಫೋನ್ ಒಂದು ಹಿಂಬದಿ ಪ್ಯಾನಲ್‌ನಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿರುವುದು ವಿಶೇಷವಾಗಿದೆ.

ಗ್ಯಾಲಕ್ಸಿ ಎ10 ಎಸ್ ಡಿಸ್‌ಪ್ಲೇ
ಮೊದಲೇ ಹೇಳಿದಂತೆ, 'ಗ್ಯಾಲಕ್ಸಿ ಎ10 ಎಸ್' ಸ್ಮಾರ್ಟ್‌ಫೋನಿನಲ್ಲಿ 6.2 ಇಂಚಿನ ಇನ್ಫಿನಿಟಿ ವಿ ನಾಚ್ ಸಹಿತ ಡಿಸ್‌ಪ್ಲೇ ನೀಡಲಾಗಿದೆ. 720x1520 ಪಿಕ್ಸೆಲ್‌ಗಳ ಸಾಮರ್ಥ್ಯದಲ್ಲಿರವುವ ಡಿಸ್ಪ್ಲೇ 19:9 ಆಕಾರ ಅನುಪಾತವನ್ನು ಹೊಂದಿದೆ. ಬಜೆಟ್ ಬೆಲೆಯಲ್ಲಿ ಮಲ್ಟಿಮೀಡಿಯಾದ ಅತ್ಯುತ್ತಮ ಅನುಭವ ಮತ್ತು ಸುರಕ್ಷತೆಯನ್ನು ಕಲ್ಪಿಸಲು ಸ್ಯಾಮ್‌ಸಂಗ್ ಇನ್ಫಿನಿಟಿ ವಿ ಡಿಸ್‌ಪ್ಲೇ ತಂದಿದೆ.

ಗ್ಯಾಲಕ್ಸಿ ಎ10 ಎಸ್ ಪ್ರೊಸೆಸರ್
'ಗ್ಯಾಲಕ್ಸಿ ಎ10 ಎಸ್' ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ SoC ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಆಂಡ್ರಾಯ್ಡ್ 9.0 ಪೈ ಆಧಾರಿತ OneUI ಮೂಲಕ ಚಾಲನೆಯಾಗುತ್ತದೆ ಎಂದು ಕಂಪೆನಿ ಹೇಳಿದೆ. ಇನ್ನು 2GB RAM ಮತ್ತು 32 GB ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆಯಾಗುತ್ತಿರುವ ಸ್ಮಾರ್ಟ್‌ಫೋನ್ ಮೆಮೊರಿಯನ್ನು ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಬಹುದು ಎಂದು ತಿಳಿಸಿದೆ.

ಗ್ಯಾಲಕ್ಸಿ ಎ10 ಎಸ್ ಕ್ಯಾಮೆರಾ
ಗ್ಯಾಲಕ್ಸಿ ಎ 10 ಎಸ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದು ಎಫ್ / 1.8 ಲೆನ್ಸ್ ಸೆನ್ಸಾರ್ ಸಾಮರ್ಥ್ಯದಲ್ಲಿ 13 ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು ಎಫ್ / 2.4 ಲೆನ್ಸ್ನ 2 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾವನ್ನು ಒಳಗೊಂಡಿದೆ.ಮುಂಭಾಗದಲ್ಲಿ ಎಫ್ / 2.0 ಲೆನ್ಸ್ ಸೆನ್ಸಾರ್ ಜೊತೆಗೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನಾವು ನೋಡಬಹುದು.

ಗ್ಯಾಲಕ್ಸಿ ಎ10 ಎಸ್ ಇತರೆ ಪೀಚರ್ಸ್
ಗ್ಯಾಲಕ್ಸಿ ಎ10 ಎಸ್ ಸ್ಮಾರ್ಟ್‌ಫೋನಿನಲ್ಲಿ 4ಜಿ ಎಲ್ ಟಿಇ, ವೈ-ಫೈ, ಬ್ಲೂಟೂತ್ ಮತ್ತು ಜಿಪಿಎಸ್ / ಎ-ಜಿಪಿಎಸ್ ನಂತರ ಕನೆಕ್ಟಿವಿಟಿ ಆಯ್ಕೆಗಳು ಸೇರಿವೆ. ಹಿಂಭಾಗದಲ್ಲಿ ಜೋಡಿಸಲಾದ ಫಿಂಗರ್‌ಪ್ರಿಂಟ್ ಮತ್ತು 4,000mAh ಬ್ಯಾಟರಿಯನ್ನು ಪ್ಯಾಕ್ ಹೊಂದಿರುವ ಸ್ಮಾರ್ಟ್‌ಪೋನಿನ ಮೆಮೊರಿಯನ್ನು ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 512 ಜಿಬಿ ವರೆಗೆ ವಿಸ್ತರಿಸುವ ಅವಕಾಶವಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470