Home
ಮೊಬೈಲ್

Samsung: ಶೀಘ್ರವೇ 2 ಹೊಸ ಫೋನ್ ಲಾಂಚ್: ಫೀಚರ್ಸ್‌ ಲೀಕ್, ಅಗ್ಗದ ಬೆಲೆ!

ಟೆಕ್ ದೈತ್ಯ ಸ್ಯಾಮ್‌ಸಂಗ್ ಶೀಘ್ರದಲ್ಲೇ ತನ್ನ 'A' ಸರಣಿಯಲ್ಲಿ ಎರಡು ಫೋನ್‌ಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಈ ಫೋನ್‌ಗಳು ಸ್ಯಾಮ್‌ಸಂಗ್ ಗ್ಯಾಲಕ್ಸಿ A16 5G (Samsung Galaxy A16 5G) ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ A16 4G (Samsung Galaxy A16 4G) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಆದರೆ, ಬಿಡುಗಡೆಗೂ ಮುನ್ನವೇ ಈ ಫೋನ್‌ಗಳ ವೈಶಿಷ್ಟ್ಯಗಳು ಸೋರಿಕೆಯಾಗಿವೆ. ಬನ್ನಿ, ಈ ಹೊಸ ಮೊಬೈಲ್ ಯಾವೆಲ್ಲಾ ವಿಶೇಷತೆಗಳೊಂದಿಗೆ ಬರಲಿದೆ ಎನ್ನುವುದನ್ನು ತಿಳಿಯೋಣ.

ಎರಡೂ ಫೋನ್‌ಗಳು 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿರಲಿವೆ. ಇದು ಆಕ್ಟಾ-ಕೋರ್ Exynos 1330 ಪ್ರೊಸೆಸರ್ ಅನ್ನು ಒಳಗೊಂಡಿರಲಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಮತ್ತು 13 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇರಲಿದೆ. ಜೊತೆಗ, 4GB RAM + 128GB ಸ್ಟೋರೇಜ್, 5,000mAh ಬ್ಯಾಟರಿ ಮತ್ತು 25W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

Samsung: ಶೀಘ್ರವೇ 2 ಹೊಸ ಫೋನ್ ಲಾಂಚ್: ಫೀಚರ್ಸ್‌ ಲೀಕ್, ಅಗ್ಗದ ಬೆಲೆ!

ಸ್ಯಾಮ್‌ಸಂಗ್ ಗ್ಯಾಲಕ್ಸಿ A16 5G ಮತ್ತು ಗ್ಯಾಲಕ್ಸಿ A16 4G ಬೆಲೆ (ನಿರೀಕ್ಷಿತ)

ಸ್ಯಾಮ್‌ಸಂಗ್ ಗ್ಯಾಲಕ್ಸಿ A16 5G ಫೋನ್‌ನ ಬೆಂಬಲ ಪುಟವನ್ನು ಸ್ಯಾಮ್‌ಸಂಗ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಲೈವ್ ಮಾಡಲಾಗಿದೆ. ಈ ಮೂಲಕ ಶೀಘ್ರದಲ್ಲೇ ಈ ಫೋನ್ ಭಾರತೀಯ ಮಾರುಕಟ್ಟೆಗೆ ಬರಲಿದೆ ಎಂಬ ಸುಳಿವು ನೀಡಲಾಗಿದೆ. ಭಾರತದಲ್ಲಿ ಗ್ಯಾಲಕ್ಸಿ A16 5G ಫೋನಿನ ಬೆಲೆ ಸುಮಾರು 13,499 ರೂ. ಇರಬಹುದು. ಆದರೆ, ಗ್ಯಾಲಕ್ಸಿ A16 4G ಫೋನನ್ನು 9,999 ರೂ. ಬೆಲೆಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A16 5G ಮತ್ತು ಗ್ಯಾಲಕ್ಸಿ A16 4G ವೈಶಿಷ್ಟ್ಯಗಳು

ಡಿಸ್ಪ್ಲೇ: ಸ್ಯಾಮ್‌ಸಂಗ್ ಗ್ಯಾಲಕ್ಸಿ A16 5G ಮತ್ತು ಗ್ಯಾಲಕ್ಸಿ A16 4G ಫೋನ್‌ 6.7 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು ಸೂಪರ್ ಅಮೋಲೆಡ್ ಪ್ಯಾನೆಲ್, 90Hz ರಿಫ್ರೆಶ್ ದರ, ಪಂಚ್ ಹೋಲ್ ಕಟೌಟ್ ಹೊಂದಿವೆ.

ಪ್ರೊಸೆಸರ್: ಸ್ಯಾಮ್‌ಸಂಗ್ ಗ್ಯಾಲಕ್ಸಿ A16 5G ಸ್ಮಾರ್ಟ್‌ಫೋನ್ Exynos 1330 ಚಿಪ್‌ಸೆಟ್ ಅನ್ನು ಹೊಂದಿದೆ. ಇದು ಆಕ್ಟಾ-ಕೋರ್ ಪ್ರೊಸೆಸರ್ ಆಗಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ A16 4G ಫೋನಿನ ಚಿಪ್‌ಸೆಟ್‌ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.

ಸ್ಟೋರೇಜ್: ಸ್ಯಾಮ್‌ಸಂಗ್ ಗ್ಯಾಲಕ್ಸಿ A16 5G ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ A16 4G ಫೋನ್‌ಗಳು 4GB RAM ನೊಂದಿಗೆ ಬರುತ್ತವೆ. ಕಂಪನಿಯು 6GB+8GB RAM ರೂಪಾಂತರಗಳನ್ನು ಪರಿಚಯಿಸುವ ಸಾಧ್ಯತೆಯಿದೆ. ಈ ಫೋನ್‌ಗಳು 128GB ಸ್ಟೋರೇಜ್‌ನೊಂದಿಗೆ ಬರುತ್ತವೆ. 4G ರೂಪಾಂತರವು 1TB ಮೆಮೊರಿ ಕಾರ್ಡ್ ಅನ್ನು ಬೆಂಬಲಿಸುತ್ತದೆ. 5G ರೂಪಾಂತರವು 1.5TB ಮೆಮೊರಿ ಕಾರ್ಡ್ ಬೆಂಬಲಿಸುತ್ತದೆ.

ಈ ಸುದ್ದಿ ಓದಿದ್ದೀರಾ?: Samsung: ಹೊಸ 5G ಫೋನ್ ಬೆಲೆ ಇಳಿಕೆ: ಜೊತೆಗೆ, 2000 ರಿಯಾಯಿತಿ.. ಹೊಸ ಬೆಲೆ ನೋಡಿ

ಕ್ಯಾಮೆರಾ: ಸ್ಯಾಮ್‌ಸಂಗ್ ಗ್ಯಾಲಕ್ಸಿ A16 5G ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ A16 4G ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿರಲಿದೆ. ಈ ಫೋನ್‌ಗಳಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 13 ಮೆಗಾಪಿಕ್ಸೆಲ್ ಕ್ಯಾಮೆರಾ ಇರಲಿದೆ.

ಬ್ಯಾಟರಿ: ಈ ಎರಡೂ ಫೋನ್‌ಗಳು 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿವೆ. ಇದು 25 ವ್ಯಾಟ್ ವೇಗದ ಚಾರ್ಜಿಂಗ್ ಸಪೋರ್ಟ್‌ ಅನ್ನು ಪಡೆದಿರುತ್ತದೆ.

ಇತರೆ ವೈಶಿಷ್ಟ್ಯಗಳು: ಈ ಎರಡೂ ಮೊಬೈಲ್‌ಗಳು ಬ್ಲೂಟೂತ್ 5.3, Wi-Fi 5 GHz, NFC, IP54 ರೇಟಿಂಗ್ ಅನ್ನು ಒಳಗೊಂಡಿವೆ. ಈ ಫೋನ್‌ಗಳ ತೂಕ 200 ಗ್ರಾಂ ಎಂದು ಹೇಳಲಾಗಿದೆ.

Best Mobiles in India

English summary
Samsung Galaxy A16 5G and Samsung GalaxyA16 4G specs leaked before launch: what to expect
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+