Home
ಮೊಬೈಲ್

Samsung: 6 ವರ್ಷ ಓಎಸ್ ಅಪ್ಡೇಟ್, ಮಸ್ತ್ ಫೀಚರ್ಸ್.. ಬಜೆಟ್ ಬೆಲೆ! ಯಾವ ಫೋನ್?

ಸ್ಯಾಮ್‌ಸಂಗ್ (Samsung) ಸೈಲೆಂಟ್‌ ಆಗಿಯೇ ಹೊಸ ಮೊಬೈಲ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಮೂಲಕ ತನ್ನ ಗ್ರಾಹಕರಿಗೆ ದೀಪಾವಳಿ ಉಡುಗೊರೆ ನೀಡಿದೆ. ಇದು ಸ್ಯಾಮ್‌ಸಂಗ್ ಗ್ಯಾಲಕ್ಸಿ A16 5G (Samsung Galaxy A16 5G) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಕಂಪನಿಯು ಈ ಫೋನನ್ನು ತನ್ನ Galaxy A ಸರಣಿಯ ಅಡಿಯಲ್ಲಿ ಪರಿಚಯಿಸಿದೆ. ಈ ಮೊಬೈಲ್‌ನ ವಿಶೇಷತೆಯೆಂದರೆ 6 ವರ್ಷಗಳ ಓಎಸ್‌ ನವೀಕರಣಗಳನ್ನು ಹೊಂದಿದೆ. ಹೊಸ ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯಲು ಮುಂದೆ ಓದಿ.

ಸ್ಯಾಮ್‌ಸಂಗ್ ತನ್ನ ಹೊಸ 5G ಫೋನ್ ಗ್ಯಾಲಕ್ಸಿ A16 ಅನ್ನು ಈಗಾಗಲೇ ಯುರೋಪಿಯನ್ ಮಾರುಕಟ್ಟೆಗೆ ಪರಿಚಯಿಸಿತ್ತು. ಇದೀಗ, ಭಾರತದಲ್ಲಿ ಈ ಮೊಬೈಲ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ಅನ್ನು ಹೊಂದಿದೆ. ಈ ಫೋನಿನಲ್ಲಿ 6.7 ಇಂಚಿನ ಅಮೋಲೆಡ್ ಡಿಸ್ಪ್ಲೇ ಇದೆ. ಈ ಫೋನ್ 50 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ನೀವು, ಈ ಫೋನನ್ನು ಎರಡು ಸ್ಟೋರೇಜ್ ಆಯ್ಕೆಗಳು ಮತ್ತು 4 ಬಣ್ಣಗಳಲ್ಲಿ ಖರೀದಿಸಬಹುದು.

Samsung Galaxy A16 5G ಲಾಂಚ್; ಡಿಸೈನ್, ಫೀಚರ್ಸ್ ಸೂಪರ್.. ಬಜೆಟ್ ಬೆಲೆ!

ಸ್ಯಾಮ್‌ಸಂಗ್ ಗ್ಯಾಲಕ್ಸಿ A16 5G ಫೋನಿನ ಬೆಲೆ

8GB + 256GB ಸ್ಟೋರೇಜ್ ಬೆಲೆ = 21,999 ರೂ.
ಆಫರ್‌ ಬೆಲೆ = 20,999 ರೂ.

8GB + 128GB ಸ್ಟೋರೇಜ್ ಬೆಲೆ = 18,999 ರೂ.
ಆಫರ್‌ ಬೆಲೆ = 17,999 ರೂ.

ಕಂಪನಿಯು ಇಂದಿನಿಂದ ಫೋನನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದೆ. ನೀವು, ನೀಲಿ ಕಪ್ಪು, ಗೋಲ್ಡ್ (ಚಿನ್ನ) ಮತ್ತು ತಿಳಿ ಹಸಿರು ಬಣ್ಣದ ಆಯ್ಕೆಗಳಲ್ಲಿ ಗ್ಯಾಲಕ್ಸಿ A16 5G ಅನ್ನು ಕೊಳ್ಳಬಹುದು. ಕಂಪನಿಯು ಲಾಂಚ್ ಆಫರ್‌ನ ಭಾಗವಾಗಿ, ಫೋನಿನ ಟ್ಯಾಪ್ ಮತ್ತು ಪೇ ವೈಶಿಷ್ಟ್ಯಕ್ಕಾಗಿ ವಿಶೇಷ ಪ್ರಚಾರದ ಆಫರ್‌ ನೀಡುತ್ತಿದೆ. ಸ್ಯಾಮ್‌ಸಂಗ್ ವಾಲೆಟ್ (Samsung Wallet) ಮೂಲಕ ಐದು ಟ್ಯಾಪ್ ಮತ್ತು ಪಾವತಿ ಮೇಲೆ ನೀವು 500 ರೂ. ಮೌಲ್ಯದ ವೋಚರ್ ಪಡೆಯಬಹುದು. ಈ ಆಫರ್‌ ಡಿಸೆಂಬರ್ 31 ರವರೆಗೆ ಲಭ್ಯವಿರುತ್ತದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A16 5G ವಿನ್ಯಾಸ

ಸ್ಯಾಮ್‌ಸಂಗ್ ಗ್ಯಾಲಕ್ಸಿ A16 5G ಮೊಬೈಲ್ ಹಿಂದಿನ ಫಲಕದಲ್ಲಿ ಮೂರು ಕ್ಯಾಮೆರಾ ಸಂವೇದಕಗಳನ್ನು ಹೊಂದಿದೆ. ಈ ಸಂವೇದಕಗಳಿಗೆ ಸಮಾನವಾದ ಎಲ್ಇಡಿ ಫ್ಲ್ಯಾಷ್ ಇದೆ. ಅಲ್ಲದೆ, ಫೋನಿನ ಹಿಂಭಾಗದ ಫಲಕವು ಹೆಚ್ಚಿನ ಬ್ರೈಟ್‌ನೆಸ್ ಮತ್ತು ಪ್ರೀಮಿಯಂ ಗಾಜಿನ ವಿನ್ಯಾಸದ ಅನುಭವವನ್ನು ನೀಡುತ್ತದೆ. ಮುಂಭಾಗದಲ್ಲಿ ವಾಟರ್‌ಡ್ರಾಪ್ ನಾಚ್ ಅನ್ನು ಹೊಂದಿದೆ. ಇದರಲ್ಲಿ ಸೆಲ್ಫಿ ಕ್ಯಾಮೆರಾವನ್ನು ಇರಿಸಲಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A16 5G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A16 5G ಫೋನ್ 6.7 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಸೂಪರ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 1080 x 2340 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಮತ್ತು 90Hz ರಿಫ್ರೆಶ್ ದರದ ಬೆಂಬಲ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ಈ 5G ಫೋನನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಆದರೆ, ಜಾಗತಿಕ ಮಾರುಕಟ್ಟೆಯಲ್ಲಿ ಈ ಫೋನನ್ನು Exynos 1330 ಚಿಪ್‌ಸೆಟ್‌ನೊಂದಿಗೆ ಪರಿಚಯಿಸಲಾಗಿದೆ.

ಸ್ಟೋರೇಜ್ ಆಯ್ಕೆ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A16 5G ಮೊಬೈಲ್‌ 8GB RAM ಜೊತೆಗೆ 128GB ಮತ್ತು 256GB ಸ್ಟೋರೇಜ್ ಅನ್ನು ಹೊಂದಿದೆ. ಇದು ಮೈಕ್ರೋ SD ಕಾರ್ಡ್ ಸ್ಲಾಟ್‌ನ ಸೌಲಭ್ಯವನ್ನು ಸಹ ಹೊಂದಿದೆ. ಇದರ ಮೂಲಕ ಮೆಮೊರಿಯನ್ನು 1.5TB ವರೆಗೆ ವಿಸ್ತರಿಸಬಹುದು.

ಕ್ಯಾಮೆರಾ ಸೆಟಪ್

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A16 5G ಸ್ಮಾರ್ಟ್‌ಫೋನ್ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ, 5 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಫೋನಿನಲ್ಲಿ 13 ಮೆಗಾಪಿಕ್ಸೆಲ್ ಫ್ರಂಟ್‌ ಕ್ಯಾಮೆರಾ ಲಭ್ಯವಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಕಂಪನಿಯು ಸ್ಯಾಮ್‌ಸಂಗ್‌ ಗ್ಯಾಲಕ್ಸಿ A16 5G ಅನ್ನು 5,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಇದನ್ನು ತ್ವರಿತವಾಗಿ ಚಾರ್ಜ್ ಮಾಡಲು, 25W ವೇಗದ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ.

ಇತರೆ ವೈಶಿಷ್ಟ್ಯಗಳು

ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ ಡ್ಯುಯಲ್ ಸಿಮ್ 4G ಮತ್ತು 5G ಯೊಂದಿಗೆ ಬರುತ್ತದೆ. ಇದು ವೈ-ಫೈ 5, ವೈ-ಫೈ ಡೈರೆಕ್ಟ್, ಬ್ಲೂಟೂತ್ v5.3, ಎನ್‌ಎಫ್‌ಸಿ (NFC), ಜಿಪಿಎಸ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ನೀರು ಮತ್ತು ಧೂಳಿನಿಂದ ರಕ್ಷಣೆಗೆ IP54 ರೇಟಿಂಗ್ ಮತ್ತು ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿದೆ.

Best Mobiles in India

English summary
Samsung Galaxy A16 5G Launched in India for Rs 18,999. Offers 90Hz Display and 6 Years of OS Updates : know price specifications details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+