ಭರ್ಜರಿ ಸಿಹಿಸುದ್ದಿ: ಅಭಿಷೇಕ್ ಯಾದವ್ ಅವರಿಂದ Galaxy A17 5G ಫೋನ್ ಬೆಲೆ ಲೀಕ್!
ಇತ್ತೀಚೆಗೆ, ಯುರೋಪಿಯನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದ Samsung Galaxy A17 5G ಸ್ಮಾರ್ಟ್‌ಫೋನ್ ಶೀಘ್ರವೇ ಭಾರತೀಯ ಮಾರುಕಟ್ಟೆಗೆ ಆಗಮಿಸಲಿದೆ ಎಂದು ಹಲವಾರು ಸೋರಿಕೆಯ ವರದಿಗಳು ಹೇಳಿವೆ. ಇದೀಗ ಈ ಸಾಧನದ ಬೆಲೆ ಮತ್ತು ವೈಶಿಷ್ಟ್ಯಗಳು ಆನ್‌ಲೈನ್‌ನಲ್ಲಿ ಬಹಿರಂಗಗೊಂಡಿದ್ದು, Samsung ಈ ತಿಂಗಳ ಅಂತ್ಯದ ವೇಳೆಗೆ ಅದನ್ನು ಅಧಿಕೃತವಾಗಿ ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಜನಪ್ರಿಯ ಟಿಪ್‌ಸ್ಟಾರ್ ಓರ್ವರ ಪ್ರಕಾರ, Galaxy A17 5G ಫೋನಿನ ಆರಂಭಿಕ ಮಾದರಿಯ ಬೆಲೆ 18,999 ರೂ. ಆಗಿರಬಹುದು.!
ಹೌದು, ಟಿಪ್‌ಸ್ಟರ್ ಅಭಿಷೇಕ್ ಯಾದವ್ ಅವರ ಮಾಹಿತಿಯ ಪ್ರಕಾರ, ಭಾರತದಲ್ಲಿ Galaxy A17 5G ಸ್ಮಾರ್ಟ್‌ಫೋನ್ ವಿಭಿನ್ನ ಆವೃತ್ತಿಗಳಲ್ಲಿ ಲಭ್ಯವಾಗಲಿದೆ. 6GB RAM ಮತ್ತು 128GB ಆಂತರಿಕ ಸಂಗ್ರಹಣೆಯ ಆರಂಭಿಕ ಮಾದರಿಯ ಬೆಲೆ ₹18,999 ಆಗಿರಬಹುದು. ಇನ್ನು 8GB RAM ಮತ್ತು 128GB ಸಂಗ್ರಹಣೆಯ ಆವೃತ್ತಿಯು ₹20,499 ಕ್ಕೆ ಲಭ್ಯವಾಗುವ ಸಾಧ್ಯತೆ ಇದೆ. ಇದರ ಟಾಪ್-ಎಂಡ್ ಮಾದರಿಯಾದ 8GB RAM ಮತ್ತು 256GB ಸಂಗ್ರಹಣೆಯ ಆವೃತ್ತಿಯ ಬೆಲೆ ಸುಮಾರು ₹23,499 ಇರಬಹುದೆಂದು ಹೇಳಿದ್ದು, ಈ ಕುರಿತು ಟ್ವೀಟ್ ಮಾಡಿ ತಿಳಿಸಿದ್ದಾರೆ.
ಭಾರತದಲ್ಲಿ Galaxy A17 5G ಸ್ಮಾರ್ಟ್‌ಫೋನ್ ಬಿಡುಗಡೆ ದಿನಾಂಕ ಅಥವಾ ಬೆಲೆಯನ್ನು ಇನ್ನೂ ಅಧಿಕೃತವಾಗಿ ತಿಳಿಸಲಾಗಿಲ್ಲ, ಆದರೆ ಈ ತಿಂಗಳ ಕೊನೆಯಲ್ಲಿ ಈ ಫೋನ್ ನಮ್ಮ ಮಾರುಕಟ್ಟೆಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಹಲವಾರು ಸೋರಿಕೆಗಳು ಈಗಾಗಲೇ Galaxy A17 5G ಸ್ಮಾರ್ಟ್‌ಫೋನಿನ ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸುತ್ತವೆ. ಈ ಸೋರಿಕೆಗಳು ಜಾಗತಿಕ ಮಾದರಿಯಲ್ಲೇ ದೇಶದಲ್ಲಿ Galaxy A17 5G ಫೋನಿನ ಫೀಚರ್ಸ್ ಇರುವುದನ್ನು ಸೂಚಿಸುತ್ತವೆ. ಹಾಗಾದರೆ, ಹೊಸ Galaxy A17 5G ಸ್ಮಾರ್ಟ್‌ಫೋನ್ ಯಾವ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ ಎಂಬುದನ್ನು ನೋಡೋಣ.!

Galaxy A17 5G: ಪ್ರಮುಖ ವೈಶಿಷ್ಟ್ಯಗಳು ಮತ್ತು ವಿವರಗಳು
ಸೋರಿಕೆಯ ಮಾಹಿತಿಗಳಂತೆ, ಮುಂಬರುವ Galaxy A17 5G ಫೋನ್‌ನ 90Hz ರಿಫ್ರೆಶ್ ರೇಟ್ ಮತ್ತು 1,100 nits ಗರಿಷ್ಠ ಬ್ರೈಟ್‌ನೆಸ್ ಹೊಂದಿರುವ 6.7-ಇಂಚಿನ ಸೂಪರ್ AMOLED ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಭದ್ರತೆಗಾಗಿ ಡಿಸ್‌ಪ್ಲೇ ಅಡಿಯಲ್ಲಿ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಸಹ ಅಳವಡಿಸಲಾಗಿದೆ. ಕಾರ್ಯಕ್ಷಮತೆಯ ವಿಷಯದಲ್ಲಿ, ಇದು Samsung ನ ಸ್ವಂತ Exynos 1330 SoC ಪ್ರೊಸೆಸರ್‌ನಿಂದ ಶಕ್ತಿ ಪಡೆಯುತ್ತದೆ. ಇದು 8GB RAM ಮತ್ತು 256GB ಆಂತರಿಕ ಸಂಗ್ರಹಣೆಯನ್ನು ಬೆಂಬಲಿಸುತ್ತದೆ. ಇದರ ಜೊತೆಗೆ, ಮೈಕ್ರೋ SD ಕಾರ್ಡ್ ಮೂಲಕ ಸಂಗ್ರಹಣೆಯನ್ನು ಹೆಚ್ಚಿಸಿಕೊಳ್ಳಲು ಸಹ ಅವಕಾಶವಿದೆ. ಸ್ಮಾರ್ಟ್‌ಫೋನ್ 25W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ ಎನ್ನಲಾಗಿದೆ.
ಕ್ಯಾಮೆರಾದ ವಿಷಯದಲ್ಲಿ, Galaxy A17 5G ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದೆ. ಇದರಲ್ಲಿ OIS ಮತ್ತು ಆಟೋಫೋಕಸ್ ವೈಶಿಷ್ಟ್ಯಗಳೊಂದಿಗೆ 50MP ಮುಖ್ಯ ಸೆನ್ಸಾರ್, 5MP ಅಲ್ಟ್ರಾವೈಡ್ ಲೆನ್ಸ್ ಮತ್ತು 2MP ಮ್ಯಾಕ್ರೋ ಕ್ಯಾಮೆರಾವನ್ನು ಒಳಗೊಂಡಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ, ಇದು 13MP ಮುಂಭಾಗದ ಕ್ಯಾಮೆರಾವನ್ನು ಹೊಂದಿರಲಿದೆ. ಸಾಫ್ಟ್‌ವೇರ್ ಬಗ್ಗೆ ಹೇಳುವುದಾದರೆ, ಈ ಸಾಧನವು Android 16 ಆಪರೇಟಿಂಗ್ ಸಿಸ್ಟಮ್ ಮತ್ತು Samsung ನ One UI 7 ನಲ್ಲಿ ಕಾರ್ಯನಿರ್ವಹಿಸಲಿದೆ. ಸ್ಯಾಮ್‌ಸಂಗ್ ಈ ಫೋನ್‌ಗೆ ಆರು ವರ್ಷಗಳ ಆಂಡ್ರಾಯ್ಡ್ OS ಅಪ್‌ಗ್ರೇಡ್‌ಗಳು ಮತ್ತು ಭದ್ರತಾ ನವೀಕರಣಗಳನ್ನು ನೀಡುವ ಸಾಧ್ಯತೆಯಿದೆ.
ಈ ವೈಶಿಷ್ಟ್ಯಗಳು ಈ Galaxy A17 5G ಫೋನ್ ಅನ್ನು ಮಧ್ಯಮ ಬೆಲೆಯ ವಿಭಾಗದಲ್ಲಿ ಸ್ಪರ್ಧಾತ್ಮಕವನ್ನಾಗಿ ಮಾಡಬಹುದು. ಆದರೆ, Samsung ಅಧಿಕೃತವಾಗಿ ದೃಢೀಕರಿಸುವವರೆಗೆ, ಈ ಮಾಹಿತಿಗಳು ಕೇವಲ ವದಂತಿಗಳಾಗಿ ಮಾತ್ರ ಉಳಿಯುತ್ತವೆ. ಈ ನಿರೀಕ್ಷಿತ ವೈಶಿಷ್ಟ್ಯಗಳು ಮತ್ತು ಬೆಲೆಗಳು ಗ್ರಾಹಕರಲ್ಲಿ ಕುತೂಹಲ ಮೂಡಿಸಿವೆ. ಸದ್ಯ, ಸ್ಯಾಮ್‌ಸಂಗ್‌ನ ಅಧಿಕೃತ ಪ್ರಕಟಣೆಗಾಗಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








