Home
ಮೊಬೈಲ್

ಭಾರತದಲ್ಲಿ Samsung Galaxy A26 5G ಫೋನ್ ಬೆಲೆ 24,999 ರೂ.ಗಳಿಂದ ಆರಂಭ!

ಭಾರತದ ಮೊಬೈಲ್ ಮಾರುಕಟ್ಟೆಯ ನಿರೀಕ್ಷೆಯಂತೆ, ಬಹುನಿರೀಕ್ಷಿತ Samsung Galaxy A26 5G ಸ್ಮಾರ್ಟ್‌ಫೋನಿನ ಬೆಲೆ 24,999 ರೂ.ಗಳಿಂದ ಆರಂಭವಾಗಿದ್ದು, ಇದೀಗ ಖರೀದಿಗೆ ಲಭ್ಯವಿದೆ. ಈ ತಿಂಗಳ ಆರಂಭದಲ್ಲಿ, Galaxy A56 5G ಮತ್ತು Galaxy A36 5G ಎಂಬ ಎರಡು ಸ್ಮಾರ್ಟ್‌ಫೋನ್‌ಗಳನ್ನು ಭಾರತ ಸೇರಿದಂತೆ ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ ಪರಿಚಯಿಸಲಾಗಿತ್ತು. ಈಗ, ಈ Samsung Galaxy A26 5G ಸ್ಮಾರ್ಟ್‌ಫೋನ್ ಅಧಿಕೃತ ಬೆಲೆಗಳಲ್ಲಿ ಮಾರಾಟಕ್ಕೆ ಬಂದಿದೆ.

ದೇಶದಲ್ಲಿ, Samsung Galaxy A26 5G ಸ್ಮಾರ್ಟ್‌ಫೋನಿನ 8GB + 128GB ಆಯ್ಕೆಯ ಮಾದರಿಯ ಫೋನ್ ಬೆಲೆ 24,999 ರೂ.ರಿಂದ ಪ್ರಾರಂಭವಾಗುತ್ತದೆ, ಮತ್ತು 8GB + 256GB ರೂಪಾಂತರವು 27,999 ರೂ.ಗಳಿಗೆ ಲಭ್ಯವಿದೆ. ಅಲ್ಲದೆ, ಈ ಹ್ಯಾಂಡ್‌ಸೆಟ್ ಕಪ್ಪು, ಪುದೀನ, ಪೀಚ್ ಪಿಂಕ್ ಮತ್ತು ಬಿಳಿ ಬಣ್ಣಗಳಲ್ಲಿ ದೊರಕುತ್ತದೆ. ಪ್ರಸ್ತುತ, ಇದನ್ನು ಫ್ಲಿಪ್‌ಕಾರ್ಟ್ ಮತ್ತು ಸ್ಯಾಮ್‌ಸಂಗ್ ಇಂಡಿಯಾ ಇ-ಸ್ಟೋರ್ ಮೂಲಕ ಖರೀದಿಸಲು ಅವಕಾಶವನ್ನು ಕಲ್ಪಿಸಲಾಗಿದೆ.

Samsung Galaxy A26 5G ಸ್ಮಾರ್ಟ್‌ಫೋನ್ ಇನ್-ಹೌಸ್ ಆಕ್ಟಾ-ಕೋರ್ Exynos 1380 SoC ನಿಂದ ಚಾಲಿತವಾಗಿದೆ. ಇದರಲ್ಲಿ 6.7-ಇಂಚಿನ ಪೂರ್ಣ-HD+ (1,080x2,340 ಪಿಕ್ಸೆಲ್‌ಗಳು) AMOLED ಡಿಸ್‌ಪ್ಲೇ, ಹಿಂಭಾಗದ ಎರಡೂ ಪ್ಯಾನಲ್‌ಗಳಿಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್+ ರಕ್ಷಣೆ ಮತ್ತು 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳು ಇವೆ. ಹಾಗಾದರೆ, Samsung Galaxy A26 5G ಸ್ಮಾರ್ಟ್‌ಫೋನ್ ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

Samsung Galaxy A26 5G ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು

Samsung Galaxy A26 5G ಸ್ಮಾರ್ಟ್‌ಫೋನ್ ಡಿಸ್‌ಪ್ಲೇ : Samsung Galaxy A26 5G ಸ್ಮಾರ್ಟ್‌ಫೋನ್ 6.7 ಇಂಚಿನ AMOLED ಡಿಸ್‌ಪ್ಲೇ ಹೊಂದಿದ್ದು, ಇದು 1,080 x 2,340 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ಬೆಂಬಲಿಸುತ್ತದೆ. ಈ ಡಿಸ್ಪ್ಲೇ 120Hz ರಿಫ್ರೆಶ್ ರೇಟ್ ಮತ್ತು 1900 ನಿಟ್ಸ್ ಗರಿಷ್ಠ ಬೆಳಕು ಒದಗಿಸುತ್ತದೆ. ಫೋನ್‌ನಲ್ಲಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನವಿದೆ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್+ ರಕ್ಷಣೆ ನೀಡಲಾಗಿದೆ.

Samsung Galaxy A26 5G ಸ್ಮಾರ್ಟ್‌ಫೋನ್ ಪ್ರೊಸೆಸರ್ : Samsung Galaxy A26 5G ಸ್ಮಾರ್ಟ್‌ಫೋನ್ 5 ನ್ಯಾನೋಮೀಟರ್ ತಂತ್ರಜ್ಞಾನದಲ್ಲಿ ತಯಾರಿಸಲಾಗಿರುವ ಎಕ್ಸಿನೋಸ್ 1380 ಪ್ರೊಸೆಸರ್ ಅನ್ನು ಬಳಸಿ ಆಂಡ್ರಾಯ್ಡ್ 15 ಆಧಾರಿತ ಒನ್ ಯುಐ 7 ಓಎಸ್‌ ಅನ್ನು ಕಾರ್ಯನಿರ್ವಹಿಸುತ್ತದೆ. ಗ್ರಾಫಿಕ್ಸ್‌ಗಾಗಿ, ಇದು ಮಾಲಿ 568 ಎಂಪಿ5 ಜಿಪಿಯು ಹೊಂದಿದೆ. ಹಾಗೂ8GB RAM + 128GB ಮತ್ತು 8GB RAM + 256GB ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿರುವ ಈ ಫೋನ್ ಆರು ವರ್ಷಗಳ ಕಾಲ ಆಂಡ್ರಾಯ್ಡ್ OS ಅಪ್‌ಗ್ರೇಡ್‌ಗಳು ಮತ್ತು ಭದ್ರತಾ ನವೀಕರಣಗಳನ್ನು ಪಡೆಯುತ್ತದೆ.

ಭಾರತದಲ್ಲಿ Samsung Galaxy A26 5G ಫೋನ್ ಬೆಲೆ 24,999 ರೂ.ಗಳಿಂದ ಆರಂಭ!

Samsung Galaxy A26 5G ಸ್ಮಾರ್ಟ್‌ಫೋನ್ ಕ್ಯಾಮೆರಾ : Samsung Galaxy A26 5G ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದರಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಹೊಂದಿರುವ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ, 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಶೂಟರ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಸೇರಿವೆ. ಹ್ಯಾಂಡ್‌ಸೆಟ್ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 13-ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ.

Samsung Galaxy A26 5G ಸ್ಮಾರ್ಟ್‌ಫೋನ್ ಬ್ಯಾಟರಿ : Samsung Galaxy A26 5G ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಂದಿದೆ ಮತ್ತು 25W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುತ್ತದೆ. ಈ ಮೊಬೈಲ್‌ನಲ್ಲಿ ಸ್ಯಾಮ್‌ಸಂಗ್ ನಾಕ್ಸ್, ಯುಎಸ್‌ಬಿ ಟೈಪ್-ಸಿ ಆಡಿಯೋ ಮತ್ತು ಸ್ಟೀರಿಯೊ ಸ್ಪೀಕರ್‌ಗಳನ್ನು ಒಳಗೊಂಡಿದೆ. ಸಂಪರ್ಕ ಆಯ್ಕೆಗಳಲ್ಲಿ 5GHz ವೈ-ಫೈ, ಬ್ಲೂಟೂತ್ 5.3 ಮತ್ತು ಎನ್‌ಎಫ್‌ಸಿ ಸೇರಿದಂತೆ ಹಲವಾರು ಆಯ್ಕೆಗಳು ಲಭ್ಯವಿವೆ. ಇದಲ್ಲದೆ, IP67 ಪ್ರಮಾಣಿತ ಧೂಳು ಮತ್ತು ನೀರಿನ ನಿರೋಧಕ ನಿರ್ಮಾಣವನ್ನು ಹೊಂದಿದೆ.

Best Mobiles in India

English summary
The Samsung Galaxy A26 5G features a triple rear camera system, which includes a 50-megapixel primary sensor with optical image stabilization (OIS), an 8-megapixel ultrawide lens, and a 2-megapixel macro camera.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+