ಗ್ಯಾಲಕ್ಸಿ ಎಂ40 ಎಫೆಕ್ಟ್!..ಗ್ಯಾಲಕ್ಸಿ A20 ಮತ್ತು A30 ಫೋನ್‌ಗಳ ಬೆಲೆ ಇಳಿಕೆ!
ಭಾರತದ ಮೊಬೈಲ್ ಮಾರುಕಟ್ಟೆಗೆ ಗ್ಯಾಲಕ್ಸಿ ಎಂ40 ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಗ್ಯಾಲಕ್ಸಿ ಎ ಸರಣಿಯ ಸ್ಮಾರ್ಟ್‌ಫೋನ್‌ಗಳ ಬೆಲೆಗಳು ಇಳಿಕೆಯಾಗಿವೆ. ಕಳೆದ ಏಪ್ರಿಲ್‌ನಲ್ಲಿ ಬಿಡುಗಡೆಯಾಗಿದ್ದ ಸ್ಯಾಮ್‌ಸಂಗ್ ಗ್ಯಾಲಕ್ಸಿ A20 ಮತ್ತು ಗ್ಯಾಲಕ್ಸಿ A30 ಎರಡೂ ಸ್ಮಾರ್ಟ್‌ಫೋನ್‌ಗಳ ಬೆಲೆ ಇಳಿಕೆಯಾಗಿದ್ದು, ಇದೀಗ ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿವೆ.

ಬಿಡುಗಡೆಯಾದಾಗ ಗ್ಯಾಲಕ್ಸಿ A20 ಫೋನ್ ಬೆಲೆ 12,490 ರೂ.ಗಳಾಗಿದ್ದರೆ, ಗ್ಯಾಲಕ್ಸಿ A30 16,990 ರೂ.ಬೆಲೆ ಹೊಂದಿತ್ತು. ಆದರೆ, ಇದೀಗ ಗ್ಯಾಲಕ್ಸಿ A20 ಬೆಲೆ 1,000 ರೂ. ಇಳಿಕೆಯಾಗಿ, 3 GB ಮತ್ತು 32 GB ಮಾದರಿ ಬೆಲೆ 11,490 ರೂ.ಗಳಾಗಿವೆ. ಇನ್ನು ಗ್ಯಾಲಕ್ಸಿ A30 4 GB RAM ಮತ್ತು 64 GB ಆವೃತ್ತಿ ಬೆಲೆ 1,500 ರೂ ಇಳಿಕೆಯಾಗಿ, ನೂತನ ದರ 15,490 ರೂ.ಗಳಾಗಿವೆ.

ಪ್ರಸ್ತುತ 11,490 ರೂ. ಬೆಲೆಯ ಗ್ಯಾಲಕ್ಸಿ A20 ಫೋನ್ 6.4-ಇಂಚಿನ HD+ (720x1560)ಸೂಪರ್ AMOLED ಪ್ಯಾನಲ್, ಇನ್ಫಿನಿಟಿ-ವಿ ಡಿಸ್ಪ್ಲೇ ಡಿಸೈನ್ ಲಾಂಗ್ವೇಜ್ ಮತ್ತು ಡುಯಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ಹೊಂದಿದ್ದು 4,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ ಹಾಗಾದರೆ, ಗ್ಯಾಲಕ್ಸಿ A20 ಫೋನ್ ಹೊಂದಿರುವ ವಿಶೇಷತೆಗಳ ಬಗ್ಗೆ ನೋಡೋಣ ಬನ್ನಿ.

ಗ್ಯಾಲಕ್ಸಿ ಎ20 ಡಿಸ್‌ಪ್ಲೇ
ಕೈಗೆಟುಕುವ ಬೆಲೆಯ ಸ್ಯಾಮ್ ಸಂಗ್ ಗ್ಯಾಲಕ್ಸಿ ಎ20ಯ ಡಿಸ್ಪ್ಲೇಯು 6.4-ಇಂಚಿನ HD+ (720x1560)ಸೂಪರ್ AMOLED ಪ್ಯಾನಲ್ ಅನ್ನು ಹೊಂದಿದೆ. ವಾಟರ್ ಡ್ರಾಪ್ ನೋಚ್ ಹೊಂದಿದ್ದು ಇನ್ಫಿನಿಟಿ-ವಿ ಡಿಸ್ಪ್ಲೇ ಡಿಸೈನ್ ಲಾಂಗ್ವೇಜ್ ಅನ್ನು ಒಳಗೊಂಡಿದೆ. ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ಇದ್ದು ನಿಮ್ಮ ದೃಢೀಕರಣಕ್ಕೆ ಸಹಾಯ ಮಾಡುತ್ತದೆ ಮತ್ತು ಭದ್ರತೆ ಒದಗಿಸುತ್ತದೆ.

ಗ್ಯಾಲಕ್ಸಿ ಎ20 ಪ್ರೊಸೆಸರ್
ಗ್ಯಾಲಕ್ಸಿ ಎ20 ಆಕ್ಟಾ-ಕೋರ್ Exynos 7884 ಸಾಕೆಟ್ ನ್ನು ಹೊಂದಿದ್ದು, ಅದರಲ್ಲಿ ಎರಡೂ ಹೆಚ್ಚು ಪವರ್‌ನ ಅಂದರೆ, 1.6GHz ಕ್ಲಾಕ್ ಸ್ಪೀಡ್ ಇದೆ. ಇದು ಏಕಮಾತ್ರ ಮೆಮೊರಿ ಕಾನ್ಫಿಗರೇಷನ್ ಹೊಂದಿದೆ ಜೊತೆಗೆ 3GB RAM ಮತ್ತು 32GB ಇನ್ ಬಿಲ್ಟ್ ಸ್ಟೋರೇಜ್ ವ್ಯವಸ್ಥೆ ಇದೆ. ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 512ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೂ ಸಹ ಅವಕಾಶವಿದೆ.

ಕ್ಯಾಮೆರಾ ಹೇಗಿದೆ?
ಗ್ಯಾಲಕ್ಸಿ ಎ20ನಲ್ಲಿ ಡುಯಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ಇದೆ. ಇದರಲ್ಲಿ ಪ್ರೈಮರಿ ಕ್ಯಾಮರಾವು 13 ಮೆಗಾಪಿಕ್ಸಲ್ ಸಾಮರ್ಥ್ಯವಿದ್ದು f/1.9 ಅಪರ್ಚರ್ ಮತ್ತು ಸೆಕೆಂಡರಿ 5-ಮೆಗಾಪಿಕ್ಸಲ್ ಕ್ಯಾಮರಾವು f/2.2 ಅಪರ್ಚರ್ ಹೊಂದಿದೆ. ಮುಂಭಾಗದ ಕ್ಯಾಮರಾವು 8-ಮೆಗಾಪಿಕ್ಸಲ್ ಕ್ಯಾಮರಾವಿದ್ದು f/2.0 ಅಪರ್ಚರ್ ನ್ನು ಹೊಂದಿದ್ದು ಸೆಲ್ಫೀ ತೆಗೆದುಕೊಳ್ಳಲು ಅನುಕೂಲಕರವಾಗಿದೆ.

ಗ್ಯಾಲಕ್ಸಿ ಎ20 ಬ್ಯಾಟರಿ
ಗ್ಯಾಲಕ್ಸಿ ಎ20 4,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ..ಇನ್ನು ಬೆಳಕಿನ ಸಂವೇದಕ, ಸಾಮೀಪ್ಯ ಸಂವೇದಕ, ಅಕ್ಸೆಲೆರೊಮೀಟರ್, ಗೈರೋಸ್ಕೋಪ್ ಫೀಚರ್ಸ್ ಅನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್ ಫಿಂಗರ್ಪ್ರಿಂಟ್ ಸಂವೇದಕವನ್ನು ಹೊಂದಿರುವುದನ್ನು ನೋಡಬಹುದು.

ಗ್ಯಾಲಕ್ಸಿ ಎ20 ಲಭ್ಯತೆ
ಎಕ್ಸನೋಸ್ 7884B ಪ್ರೊಸೆಸರ್ ಜೊತೆಗೆ 3 ಜಿಬಿ RAM ಮತ್ತು 32 ಜಿಬಿ ಆಂತರಿಕ ಮೆಮೊರಿ ಹೊಂದಿರುವ ಗ್ಯಾಲಕ್ಸಿ ಎ20 ಪೋನ್ ಬೆಲೆ ಮಧ್ಯಮ ವರ್ಗದ ಮೊಬೈಲ್ ಖರೀದಿದಾರರಿಗೆ ಕೈಗೆಟಕುವಂತಿದೆ. ದ ಫ್ಲಿಪ್‌ಕಾರ್ಟ್ ಸೇರಿದಂತೆ ಸ್ಯಾಮ್ಸಂಗ್ ಆನ್ಲೈನ್ ಮತ್ತು ಮೊಬೈಲ್ ಮಾರಾಟ ಮಳಿಗೆಗಳಲ್ಲಿ 11,490 ರೂ.ಗಳಿಗೆ ಈ ಸ್ಮಾರ್ಟ್‌ಫೋನನ್ನ ಖರೀದಿಸಬಹುದು.


Click it and Unblock the Notifications








