Samsung Galaxy A36 vs Nothing Phone 3a Pro: ಯಾವುದು ಬೆಸ್ಟ್?
ನೀವು ನಿಮ್ಮ ದಿನಚರಿಯ ಎಲ್ಲಾ ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸಲು, ಉತ್ತಮ ಕ್ಯಾಮೆರಾ ಅನುಭವವನ್ನು ನೀಡಲು ಮತ್ತು ಇನ್ನಷ್ಟು ವೈಶಿಷ್ಟ್ಯಗಳನ್ನು ಹೊಂದಿರುವ ಒಂದು ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಹುಡುಕುತ್ತಿದ್ದೀರಾ? ಹಾಗಾದರೆ, ಇಂದಿನ ಲೇಖನ ನಿಮಗಾಗಿ. ಏಕೆಂದರೆ, ನಾವು ಇಂದಿನ ಲೇಖನದಲ್ಲಿ ಪ್ರಸ್ತುತ 30 ಸಾವಿರ ರೂ. ಬೆಲೆಯ ಆಸುಪಾಸಿನಲ್ಲಿ ಪ್ರಸ್ತುತ ಲಭ್ಯವಿರುವ ಎರಡು ಸ್ಮಾರ್ಟ್‌ಫೋನ್‌ಗಳನ್ನು ನಿಮಗಾಗಿ ಹೋಲಿಸಿ ನೋಡಿದ್ದೇವೆ. ದೇಶದ ಮಾರುಕಟ್ಟೆಗೆ ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ Samsung Galaxy A36 ಮತ್ತು Nothing Phone 3a Pro ಎರಡು ಸ್ಮಾರ್ಟ್‌ಫೋನ್‌ಗಳು ಮಿಡ್‌ರೇಂಜ್ ಸ್ಮಾರ್ಟ್‌ಫೋನ್‌ಗಳನ್ನು ಹುಡುಕುತ್ತಿರುವವರ ಬೆಸ್ಟ್ ಆಯ್ಕೆಯಾಗಿರಬಹುದು. ಇವು ಎರಡೂ ಉತ್ತಮ ಆಯ್ಕೆಗಳಾಗಿದ್ದರೂ ಸಹ ನಿಮ್ಮ ಅಗತ್ಯಗಳಿಗೆ ಸೂಕ್ತವಾದ ಸಾಧನವನ್ನು ಕಂಡುಹಿಡಿಯುವುದು ಕಷ್ಟವಾಗಬಹುದು. ಈ ಕಾರಣಕ್ಕಾಗಿ, Samsung Galaxy A36 ಮತ್ತು Nothing Phone 3a Pro. ಯಾವುದು ನಿಮ್ಮ ಅಗತ್ಯಗಳಿಗೆ ಉತ್ತಮವಾಗಿ ಹೊಂದಿಕೊಳ್ಳುತ್ತದೆ ಎಂಬುದನ್ನು ತಿಳಿಯಲು, ನಾವು ವಿವರವಾದ ವೈಶಿಷ್ಟ್ಯಗಳ ಹೋಲಿಕೆಯನ್ನು ಅತ್ಯಂತ ಸರಳವಾಗಿ ಒದಗಿಸುತ್ತಿದ್ದೇವೆ.
Samsung Galaxy A36 vs Nothing Phone 3a Pro: ಯಾವುದು ಬೆಸ್ಟ್?
Samsung Galaxy A36 ಕಂಪನಿಯ ಶ್ರೇಷ್ಠ ವಿನ್ಯಾಸವನ್ನು ಹೊಂದಿದ್ದು, ಇದು ಗಾಜು ಮತ್ತು ಪ್ಲಾಸ್ಟಿಕ್‌ನಿಂದ ನಿರ್ಮಿತವಾಗಿದೆ ಮತ್ತು IP67 ರೇಟಿಂಗ್‌ನೊಂದಿಗೆ ನೀರು ಮತ್ತು ಧೂಳಿಗೆ ಪ್ರತಿರೋಧವನ್ನು ಒದಗಿಸುತ್ತದೆ. ಮತ್ತೊಂದೆಡೆ, Nothing Phone 3a Pro ತನ್ನ ವಿಶಿಷ್ಟ ಪಾರದರ್ಶಕ ವಿನ್ಯಾಸ ಮತ್ತು ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್‌ಗಾಗಿ ಗಮನ ಸೆಳೆಯುತ್ತದೆ, ಇದು ಸಾಧನವನ್ನು ಹೆಚ್ಚು ಆಕರ್ಷಕವಾಗಿ ತೋರಿಸುತ್ತದೆ. ಆದರೆ, ಇದು Samsung Galaxy A36 ಗೆ ಹೋಲಿಸಿದರೆ ಕಡಿಮೆ ಜಲನಿರೋಧಕವಾಗಿದೆ, ಏಕೆಂದರೆ Nothing Phone 3a Pro IP64 ರೇಟಿಂಗ್ ಹೊಂದಿದೆ.
ಡಿಸ್‌ಪ್ಲೇ ನೋಡುವುದಾದರೆ, Samsung Galaxy A36 ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್ ಮತ್ತು 1200nits ವರೆಗೆ ಗರಿಷ್ಠ ಹೊಳಪಿನೊಂದಿಗೆ 6.7-ಇಂಚಿನ FHD+ ಸೂಪರ್ AMOLED ಡಿಸ್ಪ್ಲೇ ಹೊಂದಿದೆ. ಇತ್ತ Nothing Phone 3a Pro ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ದರ ಮತ್ತು 3000nits ಗರಿಷ್ಠ ಹೊಳಪಿನೊಂದಿಗೆ 6.77-ಇಂಚಿನ AMOLED ಡಿಸ್ಪ್ಲೇ ಹೊಂದಿದೆ. ಇವುಗಳಲ್ಲಿ Nothing Phone 3a Pro ಸ್ಮಾರ್ಟ್‌ಫೋನ್ ಹೆಚ್ಚು ಪ್ರಕಾಶಮಾನವಾದ ಪ್ರದರ್ಶನವನ್ನು ನೀಡುತ್ತದೆಯಾದರೂ, Samsung Galaxy A36 ಸ್ಮಾರ್ಟ್‌ಫೋನಿನ ಡಿಸ್‌ಪ್ಲೇ ಹೆಚ್ಚು ಸ್ಮೂತ್ ಅನುಭವವನ್ನು ನೀಡುತ್ತಿದೆ.

ಪ್ರೊಸೆಸರ್ ವಿಭಾಗದಲ್ಲಿ, Samsung Galaxy A36 8GB RAM ನೊಂದಿಗೆ ಸ್ನಾಪ್‌ಡ್ರಾಗನ್ 6 Gen 3 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ, ಆದರೆ Nothing Phone 3a Pro ಸ್ನಾಪ್‌ಡ್ರಾಗನ್ 7s Gen 3 ಪ್ರೊಸೆಸರ್ ಅನ್ನು ಬಳಸುತ್ತದೆ. ಇವುಗಳಲ್ಲಿ ಸ್ನಾಪ್‌ಡ್ರಾಗನ್ 7s Gen 3 ಕ್ವಾಲ್ಕಾಮ್ ಹೆಕ್ಸಾಗನ್ NPU ಮತ್ತು ಕ್ವಾಲ್ಕಾಮ್ AI ಎಂಜಿನ್‌ನೊಂದಿಗೆ ಸಜ್ಜುಗೊಂಡಿದ್ದು, ಹೆಚ್ಚು ಶಕ್ತಿಶಾಲಿ ಮತ್ತು ಪರಿಣಾಮಕಾರಿಯಾಗಿದೆ. ಹಾಗಾಗಿ, ನೀವು ನಿಮ್ಮ ದಿನಚರಿಯ ಎಲ್ಲಾ ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸಲು Nothing Phone 3a Pro ಸ್ಮಾರ್ಟ್‌ಫೋನ್ ಹೆಚ್ಚು ಸೂಕ್ತವಾಗಿರಲಿದೆ.
ಬ್ಯಾಟರಿ ವಿಭಾಗದಲ್ಲಿ, Samsung Galaxy A36 ಸ್ಮಾರ್ಟ್‌ಫೋನ್ 5000mAh ಬ್ಯಾಟರಿಯಿಂದ ಬೆಂಬಲಿತವಾಗಿದ್ದು, 45W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಮತ್ತೊಂದೆಡೆ, Nothing Phone 3a Pro ಕೂಡ 5000mAh ಬ್ಯಾಟರಿ ಹೊಂದಿದೆ. ಆದರೆ, ಇದು 50W ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ಒಂದೇ ಶಕ್ತಿಯ ಬ್ಯಾಟರಿ ಬಾಳಿಕೆಯನ್ನು ಹೊಂದಿದ್ದರೂ ಸಹ, Nothing Phone 3a Pro ಸ್ಮಾರ್ಟ್‌ಫೋನ್ ಸ್ವಲ್ಪ ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.
ಕ್ಯಾಮೆರಾ ವಿಭಾಗದಲ್ಲಿ, Samsung Galaxy A36 ಸ್ಮಾರ್ಟ್‌ಫೋನ್ ಟ್ರಿಪಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದರಲ್ಲಿ 50MP ಮುಖ್ಯ ಕ್ಯಾಮೆರಾ, 8MP ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 5MP ಮ್ಯಾಕ್ರೋ ಲೆನ್ಸ್ ಸೇರಿವೆ. ಇತ್ತ Nothing Phone 3a Pro 50MP ಮುಖ್ಯ ಕ್ಯಾಮೆರಾ, 3x ಆಪ್ಟಿಕಲ್ ಜೂಮ್ ಹೊಂದಿರುವ 50MP ಪೆರಿಸ್ಕೋಪ್ ಲೆನ್ಸ್ ಮತ್ತು 8MP ಅಲ್ಟ್ರಾವೈಡ್ ಕ್ಯಾಮೆರಾವನ್ನು ಹೊಂದಿದೆ. ಕ್ಯಾಮೆರಾ ವಿಭಾಗದಲ್ಲಿ ಎರಡೂ ಸ್ಮಾರ್ಟ್‌ಫೋನ್‌ಗಳು ಉತ್ತಮವಾಗಿ ಕಾಣುತ್ತಿವೆ.
ಬೆಲೆ ವಿಬಾಗದಲ್ಲಿ, Samsung Galaxy A36 ಸ್ಮಾರ್ಟ್‌ಫೋನ್ 8GB RAM + 128GB ಸಂಗ್ರಹಣೆಗೆ ರೂ. 32,999 ಆರಂಭಿಕ ಬೆಲೆಯೊಂದಿಗೆ ಲಭ್ಯವಿದೆ. ಇತ್ತ Nothing Phone 3a Pro ಇದೇ 8GB RAM + 128GB ಸಂಗ್ರಹಣೆಗೆ ರೂ. 29,999 ಬೆಲೆಯಲ್ಲಿ ಲಭ್ಯವಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ನಿಮ್ಮ ಆಯ್ಕೆಯ ಸ್ಮಾರ್ಟ್‌ಫೋನ್ ಯಾವುವು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ.


Click it and Unblock the Notifications








