Samsung Galaxy A56 ಫೋನ್ ಖರೀದಿಗೂ ಮೊದಲು ಇಲ್ಲಿ ನೋಡಿ!
ಟೆಕ್ ದೈತ್ಯ Samsung ಭಾರತದಲ್ಲಿ ಇತ್ತೀಚೆಗೆ ಬಹುನಿರೀಕ್ಷಿತ Samsung Galaxy A56 ಸ್ಮಾರ್ಟ್ಫೋನನ್ನು 41,999 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನ್ ಗೊರಿಲ್ಲಾ ಗ್ಲಾಸ್ ವಿಕ್ಟಸ್+ ರಕ್ಷಣೆ, ಅಲ್ಯೂಮಿನಿಯಂ ಫ್ರೇಮ್ ಮತ್ತು IP67 ರೇಟಿಂಗ್ನಂತಹ ಗಟ್ಟಿಮುಟ್ಟಾದ ಪ್ರೀಮಿಯಂ ನಿರ್ಮಾಣದ ವೈಶಿಷ್ಟ್ಯಗಳನ್ನು ಹೊಂದಿದ್ದು, ಮೊಬೈಲ್ ಪ್ರಿಯರನ್ನು ಆಕರ್ಷಿಸುತ್ತಿದೆ. ನೀವು ಕೂಡ Samsung Galaxy A56 ಸ್ಮಾರ್ಟ್ಫೋನನ್ನು ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಾದರೆ, ಬನ್ನಿ ಈ ಹೊಸ Samsung Galaxy A56 ಸ್ಮಾರ್ಟ್ಫೋನ್ ಹೇಗಿದೆ ಎಂಬುದನ್ನು ಪರಿಶೀಲಿಸೋಣ.
Samsung Galaxy A56 ಸ್ಮಾರ್ಟ್ಫೋನಿನ ವೈಶಿಷ್ಟ್ಯಗಳು ಹೀಗಿವೆ,
ಹೊಸ Samsung Galaxy A56 ಸ್ಮಾರ್ಟ್ಫೋನ್ 1,080 x 2,340 ಪಿಕ್ಸೆಲ್ಗಳ 6.7 ಇಂಚಿನ ಸೂಪರ್ ಅಮೋಲೆಡ್ ಡಿಸ್ಪ್ಲೆಯನ್ನು ಹೊಂದಿದ್ದು, ಇದು 120Hz ರಿಫ್ರೆಶ್ ದರ ಮತ್ತು 1900 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಅನ್ನು ಬೆಂಬಲಿಸುತ್ತದೆ. ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ಮತ್ತು ಗೊರಿಲ್ಲಾ ಗ್ಲಾಸ್ ವಿಕ್ಟಸ್+ ರಕ್ಷಣೆ ಇದಕ್ಕಿದೆ. ಪ್ರೊಸೆಸರ್ ವಿಭಾಗದಲ್ಲಿ, 4 ನ್ಯಾನೋಮೀಟರ್ ತಂತ್ರಜ್ಞಾನದಲ್ಲಿ ತಯಾರಿಸಲಾದ Exynos 1580 ಆಕ್ಟಾಕೋರ್ ಪ್ರೊಸೆಸರ್ ಅನ್ನು ಹೊಂದಿರುವ ಈ ಫೋನ್ ಆಂಡ್ರಾಯ್ಡ್ 15 ಆಧಾರಿತ ಒನ್ಯುಐ 7 ಅನ್ನು ಕಾರ್ಯನಿರ್ವಹಿಸುತ್ತದೆ ಮತ್ತು ಗ್ರಾಫಿಕ್ಸ್ಗಾಗಿ AMD Xclipse 540 ಜಿಪಿಯು ಹೊಂದಿದೆ. ಕ್ಯಾಮೆರಾ ವಿಬಾಗದಲ್ಲಿ, 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾದೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು 12 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒದಗಿಸಲಾಗಿದೆ. 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿರುವ ಫೋನ್ 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇತರ ವೈಶಿಷ್ಟ್ಯಗಳಲ್ಲಿ ಐ ಕೇರ್ ಸ್ಕ್ರೀನ್, 3.5 ಎಂಎಂ ಹೆಡ್ಫೋನ್ ಜ್ಯಾಕ್, ಮತ್ತು ಯುಎಸ್ಬಿ ಟೈಪ್-ಸಿ ಆಡಿಯೋ ಮತ್ತು ಸ್ಟೀರಿಯೋ ಸ್ಪೀಕರ್ಗಳಿವೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಬ್ಲೂಟೂತ್ 5.3 ಮತ್ತು ಎನ್ಎಫ್ಸಿ ಮುಂತಾದ ವೈಶಿಷ್ಟ್ಯಗಳಿವೆ.
Samsung Galaxy A56 ಸ್ಮಾರ್ಟ್ಫೋನ್ ಹೇಗಿದೆ?
Samsung Galaxy A56 ಸ್ಮಾರ್ಟ್ಫೋನ್ ಗೊರಿಲ್ಲಾ ಗ್ಲಾಸ್ ವಿಕ್ಟಸ್+, ಅಲ್ಯೂಮಿನಿಯಂ ಫ್ರೇಮ್, IP67 ರೇಟಿಂಗ್ನೊಂದಿಗೆ ಗಟ್ಟಿಮುಟ್ಟಾದ, ಪ್ರೀಮಿಯಂ ನಿರ್ಮಾಣದಿಂದ ಅತ್ಯುತ್ತಮವಾಗಿ ಕಾಣುತ್ತದೆ. ಇದರ ಒಡ್ಡದಾದ ಡಿಸ್ಪ್ಲೇಯು HDR10+ ಬೆಂಬಲದೊಂದಿಗೆ ಪ್ರಕಾಶಮಾನವಾಗಿರುವುದರಿಂದ ಗ್ರಾಹಕರಿಗೆ ಅತ್ಯತ್ತಮ ಡಿಸ್ಪ್ಲೇ ಅನುಭವ ದೊರೆಯಲಿದೆ. ಗೇಮಿಂಗ್ ನಲ್ಲಿ ಯೋಗ್ಯ ಕಾರ್ಯಕ್ಷಮತೆ, ಉತ್ತಮ ಉಷ್ಣ ನಿರ್ವಹಣೆ ಇರುವುದನ್ನು ನಾವು ನೋಡಬಹುದು. ಇದರ ಜೊತೆಗೆ ಅತ್ಯುತ್ತಮ ವೀಡಿಯೊಗಳು, ಉತ್ತಮ ಸೆಲ್ಫಿಗಳು, ಉತ್ತಮ ಸ್ಪೀಕರ್ಗಳು, ಪಾಲಿಶ್ ಮಾಡಿದ ಒನ್ UI 7, ಕನಿಷ್ಠ 6 ತಲೆಮಾರುಗಳ OS ಅಪ್ಗ್ರೇಡ್ಗಳಿಗೆ ಅರ್ಹವಾಗಿರುವ ಈ ಸ್ಮಾರ್ಟ್ಫೋನ್ ಈ ಎಲ್ಲಾ ಅಂಶಗಳಲ್ಲಿ ಉತ್ತಮವಾಗಿ ಕಾಣುತ್ತಿದೆ.

ಆದರೆ, ಈ Samsung Galaxy A56 ಸ್ಮಾರ್ಟ್ಫೋನಿನ ಕ್ಯಾಮೆರಾ ಹಾರ್ಡ್ವೇರ್ ನಿರೀಕ್ಷಿತ ಮಟ್ಟದಲ್ಲಿಲ್ಲ. ಸೆಲ್ಫಿಗಳು ಮತ್ತು ವೀಡಿಯೊಗಳು ಉತ್ತಮವಾಗಿದ್ದರೂ, ಸ್ಟಿಲ್ಗಳು ಅಷ್ಟೊಂದು ಪ್ರಭಾವಶಾಲಿಯಾಗಿಲ್ಲ. ಇದೇ ಬೆಲೆಯ Xiaomi 14T ಮೀಸಲಾದ ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿದ್ದು, ಉತ್ತಮ ಫೋಟೋಗಳನ್ನು ನೀಡುತ್ತದೆ. Nothing Phone (3a) Pro ಸಹ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ನೊಂದಿಗೆ ಉತ್ತಮ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ. Samsung Galaxy A56 ಕಳೆದ ವರ್ಷದ ಮಾದರಿಯಂತೆ 41,999 ರೂಪಾಯಿಗಳ ಬೆಲೆಯಲ್ಲಿ ಬಿಡುಗಡೆಯಾಗಿದೆ. ಆದರೆ, Samsung Galaxy A56 ಸ್ಮಾರ್ಟ್ಫೋನ್ಉತ್ತಮ ಸೆಲ್ಫಿಗಳು, ವೀಡಿಯೊ ರೆಕಾರ್ಡಿಂಗ್, ಪ್ರೀಮಿಯಂ ವಿನ್ಯಾಸ ಮತ್ತು ಉತ್ತಮ ಡಿಸ್ಪ್ಲೇಯನ್ನು ಹೊಂದಿದ್ದರೂ, ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಇದು ಎದ್ದು ಕಾಣಲು ವಿಫಲವಾಗಿದೆ ಎನ್ನಬಹುದು. ಇದೇ ಬೆಲೆಯಲ್ಲಿ ಉತ್ತಮ ಕ್ಯಾಮೆರಾ, ಕಾರ್ಯಕ್ಷಮತೆ ಮತ್ತು ಬ್ಯಾಟರಿ ಬಾಳಿಕೆಯನ್ನು ನೀಡುವ ಹಲವಾರು ಫೋನ್ಗಳು ಲಭ್ಯವಿವೆ. ಬೆಲೆ ಕಡಿಮೆಯಾದಲ್ಲಿ A56 ಉತ್ತಮ ಆಯ್ಕೆಯಾಗಬಹುದು.
Samsung Galaxy A56 ಸ್ಮಾರ್ಟ್ಫೋನಿನ ಸಾಧಕಗಳು
ಗೊರಿಲ್ಲಾ ಗ್ಲಾಸ್ ವಿಕ್ಟಸ್+, ಅಲ್ಯೂಮಿನಿಯಂ ಫ್ರೇಮ್, IP67 ರೇಟಿಂಗ್ನೊಂದಿಗೆ ಗಟ್ಟಿಮುಟ್ಟಾದ, ಪ್ರೀಮಿಯಂ ನಿರ್ಮಾಣ.
HDR10+ ಬೆಂಬಲದೊಂದಿಗೆ ಪ್ರಕಾಶಮಾನವಾದ ಮತ್ತು ದೊಡ್ಡ ಪ್ರದರ್ಶನ.
ಯೋಗ್ಯ ಕಾರ್ಯಕ್ಷಮತೆ, ಉತ್ತಮ ಉಷ್ಣ ನಿರ್ವಹಣೆ
ಅತ್ಯುತ್ತಮ ವೀಡಿಯೊಗಳು, ಉತ್ತಮ ಸೆಲ್ಫಿಗಳು.
ಉತ್ತಮ ಸ್ಪೀಕರ್ಗಳು.
ಪಾಲಿಶ್ ಮಾಡಿದ ಒನ್ UI 7, ಕನಿಷ್ಠ 6 ತಲೆಮಾರುಗಳ OS ಅಪ್ಗ್ರೇಡ್ಗಳಿಗೆ ಅರ್ಹವಾಗಿದೆ.
Samsung Galaxy A56 ಸ್ಮಾರ್ಟ್ಫೋನಿನ ಬಾಧಕಗಳು
ಬಾಕ್ಸ್ನಲ್ಲಿ ಚಾರ್ಜರ್ ಇಲ್ಲ, ಮತ್ತು ಚಾರ್ಜ್ ಮಾಡಲು ತುಂಬಾ ವೇಗವಾಗಿಲ್ಲ.
ಫಿಂಗರ್ಪ್ರಿಂಟ್ ರೀಡರ್ ತುಂಬಾ ವೇಗವಾಗಿಲ್ಲ.
ಕ್ಯಾಮೆರಾ ಕಾರ್ಯಕ್ಷಮತೆ ಉತ್ತಮ ಎನಿಸುವುದಿಲ್ಲ (ವೀಡಿಯೊಗಳು ಮತ್ತು ಸೆಲ್ಫಿಗಳನ್ನು ಹೊರತುಪಡಿಸಿ), ಟೆಲಿಫೋಟೋ ಇಲ್ಲ.
ಕರೆಗಳ ಸಮಯದಲ್ಲಿ ಡಿಸ್ಪ್ಲೇ ಆಫ್ ಮಾಡಲು ಭೌತಿಕ ಅಂಶವಿಲ್ಲ.
ಮುಂದೆ ಮೈಕ್ರೊ SD ಕಾರ್ಡ್ ಬೆಂಬಲವಿಲ್ಲ.
ಈ ಸ್ಪರ್ಥಾತ್ಮಕ ಸಮಯದಲ್ಲಿ ದುಬಾರಿ ಎಂದೆನಿಸುತ್ತಿದೆ.


Click it and Unblock the Notifications








