Home
ಮೊಬೈಲ್

ಸ್ಯಾಮ್‌ಸಂಗ್‌ನಿಂದ ಮೊದಲ 3 ಕ್ಯಾಮೆರಾ ಫೋನ್ ಲಾಂಚ್: ಬೆಲೆ ಕೇಳಿ ಬೆಚ್ಚಿಬಿದ್ದ ಚೀನಾ ಕಂಪನಿಗಳು..!

ಚೀನಾ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆಯುವ ಸಲುವಾಗಿ ಮತ್ತ ಭಾರತ ಮಾರುಕಟ್ಟೆಯಲ್ಲಿ ತನ್ನ ಉಳಿವಿಗಾಗಿ ಇದೇ ಮೊದಲ ಬಾರಿಗೆ ಮಾರುಕಟ್ಟೆಗೆ ಹಿಂಭಾಗದಲ್ಲಿ ಮೂರು ಕ್ಯಾಮೆರಾ ಹೊಂದಿರುವ ಸ್ಯಾಮ್‌ಸಂಗ್ ಗ್ಯಾಲೆಕ್ಸಿ A7 ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ತ್ರಿಪಲ್ ಕ್ಯಾಮೆರಾ ಹೊಂದಿರುವ ಸ್ಯಾಮ್‍ಸಂಗ್‌ನ ಮೊದಲ ಸ್ಮಾರ್ಟ್‌ಫೋನ್ ಎನ್ನಲಾಗಿದೆ.

ಸ್ಯಾಮ್‌ಸಂಗ್‌ನಿಂದ ಮೊದಲ 3 ಕ್ಯಾಮೆರಾ ಫೋನ್ ಲಾಂಚ್: ಬೆಚ್ಚಿಬಿದ್ದ ಚೀನಾ ಕಂಪನಿಗಳು

ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದ ಸ್ಯಾಮ್‌ಸಂಗ್ ಗ್ಯಾಲೆಕ್ಸಿ A7 ಸ್ಮಾರ್ಟ್‌ಫೋನ್, ಇಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಗೊಂಡಿದೆ. ಈ ಸ್ಮಾರ್ಟ್‌ಫೋನ್ ಕೇಲವ ತ್ರಿಪಲ್ ಕ್ಯಾಮೆರಾ ಮಾತ್ರವಲ್ಲದೇ ಇನ್ನು ಹಲವು ವಿಶೇಷತೆಗಳನ್ನ ಹೊಂದಿದ್ದು, ಈ ಕುರಿತ ಮಾಹಿತಿಯೂ ಮುಂದಿದೆ.

ಡಿಸ್‌ಪ್ಲೇ:

ಡಿಸ್‌ಪ್ಲೇ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ A7 ಸ್ಮಾರ್ಟ್‌ಫೋನ್ 18.5:9 ಅನುಪಾತದ 6 ಇಂಚಿನ FHD+ (1080x2280) ಗುಣಮಟ್ಟದ ಸೂಪರ್ AMOLED ಇನ್ಫಿನಿಟಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಮಲ್ಟಿಮೀಡಿಯಾ ಹಾಗೂ ಗೇಮಿಂಗ್‌ಗಾಗಿಯೇ ನೀಡಲಾಗಿದ್ದು, ಸಿನಿಮಾ ನೋಡುವ ಮತ್ತು ಗೇಮ್ ಆಡುವ ಅನುಭವ ಉತ್ತಮವಾಗಿರಲಿದೆ.

ಪ್ರೋಸೆಸರ್:

ಪ್ರೋಸೆಸರ್:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ A7 ಸ್ಮಾರ್ಟ್‌ಫೋನಿನಲ್ಲಿ ಆಕ್ಟಾ ಕೋರ್ SoC 2.2GHz ಪ್ರೊಸೆಸರ್ ಅನ್ನು ಹೊಂದಿದೆ. ಆದರೆ, ಪ್ರೊಸೆಸರ್ ಯಾವುದು ಎಂಬ ಯಾವುದೇ ಮಾಹಿತಿ ಲಭ್ಯವಿಲ್ಲ. ಸ್ಯಾಮ್‌ಸಂಗ್ ಗ್ಯಾಲೆಕ್ಸಿ A7 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 8.0 ಓರಿಯೋದಲ್ಲಿ ಕಾರ್ಯನಿರ್ವಹಿಸಲಿದೆ. ಫಿಂಗರ್ ಪ್ರಿಂಟ್ ಸೆನ್ಸಾರ್ ಹೊಂದಿದೆ.

ತ್ರಿಪಲ್ ಕ್ಯಾಮೆರಾ:

ತ್ರಿಪಲ್ ಕ್ಯಾಮೆರಾ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ A7 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಮೂರು ಕ್ಯಾಮೆರಾಗಳನ್ನು ಕಾಣಬಹುದಾಗಿದೆ. 24 MP ಆಟೋಫೋಕಸ್ ಸೆನ್ಸಾರ್ (f/1.7) + 8 MP ಅಲ್ಟ್ರಾ ವೈಡ್ ಸೆನ್ಸಾರ್ (f/2.4) + 5 MP ಡೆಪ್ತ್ ಸೆನ್ಸಾರ್ ಜತೆ ಫಿಕ್ಸೆಡ್ ಫೋಕಸ್ (f/2.2) ವನ್ನು ಕಾಣಬಹುದಾಗಿದ್ದು, ಮಾರುಕಟ್ಟೆಯಲ್ಲಿಯೇ ಇದು ವಿಭಿನ್ನ ಎನ್ನಲಾಗಿದೆ.

24 MP ಸೆಲ್ಫಿ ಕ್ಯಾಮೆರಾ:

24 MP ಸೆಲ್ಫಿ ಕ್ಯಾಮೆರಾ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ A7 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ತ್ರಿಪಲ್ ಕ್ಯಾಮೆರಾ ಇರುವ ಮಾದರಿಯಲ್ಲಿ ಮುಂಭಾಗದಲ್ಲಿ 24 MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇದರೊಂದಿಗೆ LED ಫ್ಲ್ಯಾಶ್, ಸೆಲ್ಫಿ ಫೋಕಸ್, ಪ್ರೊ ಲೈಟಿಂಗ್ ಮೋಡ್ ಅನ್ನು ನೀಡಲಾಗಿದೆ. 3,300mAh ಬ್ಯಾಟರಿಯಲ್ಲಿ ಇದರಲ್ಲಿ ನೀಡಲಾಗಿದೆ.

ಎರಡು ಆವೃತ್ತಿಯಲ್ಲಿ ಲಭ್ಯ:

ಎರಡು ಆವೃತ್ತಿಯಲ್ಲಿ ಲಭ್ಯ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ A7 ಸ್ಮಾರ್ಟ್‌ಫೋನ್ ಎರಡು ಆವೃತ್ತಿಯಲ್ಲಿ ಮಾರಾಟವಾಗಲಿದೆ. 4 GB RAM ಮತ್ತು 64 GB ಇಂಟರ್ನಲ್ ಮೆಮೊರಿಯೊಂದಿಗೆ ಒಂದು ಆವೃತ್ತಿಯಲ್ಲಿ ಹಾಗೂ 6 GB RAM ಮತ್ತು 128 GB ಇಂಟರ್ನಲ್ ಮೆಮೊರಿಯೊಂದಿಗೆ ಮತ್ತೊಂದು ಆವೃತ್ತಿಯಲ್ಲಿ ಈ ಸ್ಮಾರ್ಟ್‌ಫೋನ್ ಮಾರಾಟವಾಗಲಿದೆ.

ಇತರೆ:

ಇತರೆ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ A7 ಸ್ಮಾರ್ಟ್‌ಫೋನ್ 4G VoLTE, ಡ್ಯುಯಲ್ ಬ್ಯಾಂಡ್ Wi-Fi 802.11ac, ಬ್ಲೂಟೂತ್ v5.0, ANT+, NFC ಜತೆಗೆ ಸ್ಯಾಮ್‌ಸಂಗ್ ಪೇ ಬೆಂಬಲ, GPS, GLONASS, Beidou ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿದೆ.

ಬೆಲೆ:

ಬೆಲೆ:

4 GB RAM ಮತ್ತು 64 GB ಇಂಟರ್ನಲ್ ಮೆಮೊರಿ ಹೊಂದಿರುವ ಸ್ಯಾಮ್‌ಸಂಗ್ ಗ್ಯಾಲೆಕ್ಸಿ A7 ಸ್ಮಾರ್ಟ್‌ಫೋನ್ ಬೆಲೆ ರೂ.23900 ಆಗಿದ್ದು ಇದೇ ಮಾದರಿಯಲ್ಲಿ 6 GB RAM ಮತ್ತು 128 GB ಇಂಟರ್ನಲ್ ಮೆಮೊರಿಯ ಸ್ಮಾರ್ಟ್‌ಫೋನ್ ಬೆಲೆ ರೂ.28990 ಆಗಿದೆ. ಫ್ಲಿಪ್‌ಕಾರ್ಟ್ನಲ್ಲಿ ಸೆಪ್ಟೆಂಬರ್ 26 ಮತ್ತು 27 ರಂದು ಫ್ಲಾಷ್ ಸೇಲ್‌ನಲ್ಲಿ ಕಾಣಿಸಿಕೊಳ್ಳಲಿದೆ.

Best Mobiles in India

English summary
Samsung Galaxy A7 (2018) Launched in India, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+