ಕೆಲವೇ ದಿನಗಳಲ್ಲಿ ಬರಲಿದೆ ಗ್ಯಾಲಕ್ಸಿ ಏಸ್ ಪ್ಲಸ್ ಮೊಬೈಲ್

Posted By: Staff
ಕೆಲವೇ ದಿನಗಳಲ್ಲಿ ಬರಲಿದೆ ಗ್ಯಾಲಕ್ಸಿ ಏಸ್ ಪ್ಲಸ್ ಮೊಬೈಲ್

ಇದೀಗ ಇಡೀ ಪ್ರಪಂಚದಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ಸರಣಿ ಮೊಬೈಲ್ ಗಳು ಅತಿ ಹೆಚ್ಚು ಮಾರಾಟವಾಗುತ್ತಿವೆ. ಹೋಲಿಸಕೆಗೆ ಮೀರಿದ ವಿನ್ಯಾಸ ಮತ್ತು ಹಲವು ಆಯ್ಕೆಗಳಿಂದ ಸ್ಯಾಮ್ ಸಂಗ್ ಮೊಬೈಲ್ ಗಳು ಗ್ರಾಹಕರ ಮೆಚ್ಚುಗೆ ಗಳಿಸಿರುವುದರಲ್ಲಿ ಸಂಶಯವೇ ಇಲ್ಲ.

ಇದೀಗ ಗ್ಯಾಲಕ್ಸಿ ಏಸ್ ಮೊಬೈಲನ್ನು ಪರಿಷ್ಕ್ರತಗೊಳಿಸಲಾಗುತ್ತಿದೆ ಎಂಬ ಸುದ್ದಿ ಇದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ಏಸ್ ಪ್ಲಸ್ ಎಂಬ ಹೆಸರಿನಿಂದ ಮೊಬೈಲ್ ಪರಿಷ್ಕ್ರತಗೊಳ್ಳುತ್ತಿದೆ. 1 GHz ವೇಗದ ಪ್ರೊಸೆಸರ್, 3ಜಿಬಿ ಸಾಮರ್ಥ್ಯ ಹಾಗೂ 512 ಎಂಬಿ RAM ನ ಪರಿಷ್ಕರಣೆಯೊಂದಿಗೆ ಇನ್ನಷ್ಟು ಕಾರ್ಯ ಕ್ಷಮತೆ ತೋರಲಿದೆ. ಅಷ್ಟೇ ಅಲ್ಲ, ಻ತ್ಯಾಧುನಿಕ ಆಂಡ್ರಾಯ್ಡ್ ಜಿಂಜರ್ ಬ್ರೆಡ್ 2.3 ಆಪರೇಟಿಂಗ್ ಸಿಸ್ಟಮ್ ಇರುವುದು ವಿಶೇಷವೆನಿಸಿದೆ.

ಮೊಬೈಲಿನಲ್ಲಿ ಅಕ್ಸೆಲೆರೊಮೀಟರ್, ಪ್ರಾಕ್ಸಿಮಿಟಿ ಮತ್ತು ಕಾಂಪಾಸ್ ಸೆನ್ಸಾರ್ ಗಳನ್ನು ಅಳವಡಿಸಲಾಗಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಏಸ್ ಪ್ಲಸ್ ಮೊಬೈಲ್:

* 115 ಗ್ರಾಂ ತೂಕ

* 114.5X62.5X 11.2 ಎಂಎಂ ಸುತ್ತಳತೆ

* 3.65 ಇಂಚಿನ ಸ್ಕ್ರೀನ್, 320 X 480 ಪಿಕ್ಸಲ್ ರೆಸೊಲ್ಯೂಷನ್

* ಟಚ್ ವಿಝ್ ಯೂಸರ್ ಇಂಟರ್ ಫೇಸ್

* 3.5 ಎಂಎಂ ಆಡಿಯೋ ಜ್ಯಾಕ್

* 3ಜಿಬಿ ಆಂತರಿಕ ಮೆಮೊರಿ, 32 ಜಿಬಿವರೆಗು ಮೆಮೊರಿ ವಿಸ್ತರಣೆಗೆ ಮೈಕ್ರೊSD

* 512 ಎಂಬಿ RAM

* GPRS, EDGE, HSDPA 7.2 Mbps, ಮೈಕ್ರೊUSB 2.0 ಆಯಾಮ

* 5 ಮೆಗಾ ಪಿಕ್ಸಲ್ ಕ್ಯಾಮೆರಾ, 2592 X 1944 ಪಿಕ್ಸಲ್ ರೆಸೊಲ್ಯೂಷನ್

* ಆಟೊ ಫೋಕಸ್, LED ಫ್ಲಾಶ್, ಫೇಸ್ ಡಿಟೆಕ್ಷನ್, ಜಿಯೋ ಟ್ಯಾಗಿಂಗ್, ಸ್ಮೈಲ್ ಡಿಟೆಕ್ಷನ್

ಈ ಮೊಬೈಲಿನಲ್ಲಿ ಇಂಟರ್ನೆಟ್ ಹೆಚ್ಚು ವೇಗದಲ್ಲಿ ಕೆಲಸ ನಿರ್ವಹಿಸುತ್ತದೆ. ಇದರಲ್ಲಿರುವ ಯೂಸರ್ ಇಂಟರ್ ಫೇಸ್ ತಂತ್ರಜ್ಞಾನದ ಕ್ಷಮತೆಯನ್ನು ನಿರೂಪಿಸುತ್ತದೆ. ಈ ಸ್ಯಾಮ್ ಸಂಗ್ ಗ್ಯಾಲಕ್ಸಿ ಏಸ್ ಪ್ಲಸ್ ಮೊಬೈಲ್ ಬಿಡುಗಡೆಗೊಳ್ಳುವ ದಿನಾಂಕ ಮತ್ತು ಬೆಲೆಯ ಬಗ್ಗೆ ಅಧೀಕೃತವಾಗಿ ತಿಳಿದುಬಂದಿಲ್ಲ. ಆದರೆ ಈ ಹಿಂದಿನ ಏಸ್ ಮೊಬೈಲಿನ ಬೆಲೆ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚಿನ ಬೆಲೆಯನ್ನು ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot