Home
ಮೊಬೈಲ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆಲ್ಫಾ ಖರೀದಿಯೇ ಇಲ್ಲಿದೆ ಬೆಸ್ಟ್ ಇಎಮ್‌ಐ

By Shwetha

ಸ್ಮಾರ್ಟ್‌ಫೋನ್ ವಿಚಾರಕ್ಕೆ ಬಂದಾಗ ಸ್ಯಾಮ್‌ಸಂಗ್ ಹೆಸರು ಹೆಚ್ಚು ಸಮೀಪವಾಗಿದೆ ಮತ್ತು ಆತ್ಮೀಯವಾಗಿದೆ. ಇನ್ನು ಮಾರುಕಟ್ಟೆಯಲ್ಲಿ ಈ ಫೋನ್ ಮಾಡಿರುವ ಜಾದೂ ಮಾತ್ರ ಮರೆಯಲಾಗದೇ ಇರುವಂಥದ್ದಾಗಿದೆ. ತನ್ನ ಹಿರಿಮೆಗೆ ಇನ್ನೊಂದು ಗರಿ ಎಂಬಂತೆ ಗ್ಯಾಲಕ್ಸಿ ಹ್ಯಾಂಡ್‌ಸೆಟ್ ಅನ್ನು ಬಿಡುಗಡೆ ಮಾಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಇನ್ನು ಮಾರುಕಟ್ಟೆಗೆ ಭರ್ಜರಿಯಾಗಿ ಅಡಿ ಇಟ್ಟು ತನ್ನ ರಾಜ್ಯಭಾರವನ್ನು ಮಾಡುತ್ತಿರುವ ಹ್ಯಾಂಡ್‌ಸೆಟ್ ಗ್ಯಾಲಕ್ಸಿ ಆಲ್ಫಾ. ಇದರ ಮೆಟಾಲಿಕ್ ವಿನ್ಯಾಸದಿಂದ ನಿಜಕ್ಕೂ ಈ ಫೋನ್ ಅತ್ಯದ್ಭುತವಾಗಿದ್ದು ಭರ್ಜರಿಯಾಗಿದೆ.

ಇದನ್ನೂ ಓದಿ: ಖರೀದಿಯ ವ್ಯಾಮೋಹವನ್ನು ಹೆಚ್ಚಿಸಲಿರುವ ಸೂಪರ್ ಫೋನ್ಸ್

ಇನ್ನು ಫೋನ್‌ನ ವಿಶೇಷತೆಗಳತ್ತ ನೋಡಹೊರಟರೆ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಆಲ್ಫಾ, 4.7 ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಇದು 1280x720 ಪಿಕ್ಸೆಲ್‌ಗಳೊಂದಿಗೆ ಬಂದಿದೆ. ಇದು ಓಕ್ಟಾ ಕೋರ್ ಎಕ್ಸೋನಸ್ (1.8 GHz Quad + 1.3GHz ಕ್ವಾಡ್) ಪ್ರೊಸೆಸರ್‌ನೊಂದಿಗೆ ಬಂದಿದ್ದು ಇದು 2 ಜಿಬಿ RAM ಅನ್ನು ಪಡೆದುಕೊಂಡಿದೆ. ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4.4 ಇದರಲ್ಲಿ ಚಾಲನೆಯಲ್ಲಿದೆ.

ಇನ್ನು ಫೋನ್‌ನ ಛಾಯಾಗ್ರಹಣ ಸಾಮರ್ಥ್ಯವಂತೂ ನಿಜಕ್ಕೂ ದಂಗುಬಡಿಸುವಂತಿದ್ದು ಇದು 12 ಎಮ್‌ಪಿ ರಿಯರ್ ಕ್ಯಾಮೆರಾ ಹಾಗೂ ಎಲ್‌ಇಡಿ ಫ್ಲ್ಯಾಶ್‌ನೊಂದಿಗೆ ಬಂದಿದೆ. ಇದು 4ಕೆ ವೀಡಿಯೊ ಗುಣಮಟ್ಟವನ್ನು ಪಡೆದುಕೊಂಡಿದ್ದು ನೀವು ಮುಂಭಾಗದಲ್ಲಿ 2.1 ಎಮ್‌ಪಿ ಕ್ಯಾಮೆರಾವನ್ನು ಪಡೆದುಕೊಳ್ಳುತ್ತೀರಿ. ಇದು 32 ಜಿಬಿ ಆಂತರಿಕ ಸಂಗ್ರಹವನ್ನು ಪಡೆದುಕೊಂಡಿದ್ದು ಇದು ಎಸ್‌ಡಿ ಕಾರ್ಡ್ ಸ್ಲಾಟ್ ಅನ್ನು ಪಡೆದುಕೊಳ್ಳುವಲ್ಲಿ ವಿಫಲಗೊಂಡಿದೆ.

ಇನ್ನು ಫೋನ್‌ನ ಸಂಪರ್ಕ ಅಂಶಗಳೆಂದರೆ 4G LTE-A Cat.6 / 3G HSPA+, Wi-Fi 802.11ac (2X2 MIMO), ಬ್ಲ್ಯೂಟೂತ್ v4.0 LE, GPS ಹಾಗೂ NFC ಯಾಗಿದೆ. ಗ್ಯಾಲಕ್ಸಿ ಆಲ್ಫಾ 5 ಎಸ್ ಎಸ್ ಹೆಲ್ತ್ 3.0 ಸಾಫ್ಟ್‌ವೇರ್ ಜೊತೆಗೆ ಬಂದಿದ್ದು ಇದು ಹಾರ್ಟ್ ರೇಟ್ ಸೆನ್ಸಾರ್ ಅನ್ನು ಹೊಂದಿದೆ. 6.7 ಎಮ್‌ಎಮ್ ದಪ್ಪನೆಯ ಸ್ಮಾರ್ಟ್‌ಫೋನ್, 115 ತೂಕವನ್ನು ಹೊಂದಿದೆ. ಇದು 1860mAh ಬ್ಯಾಟರಿಯನ್ನು ಪಡೆದುಕೊಂಡಿದೆ.

ಇನ್ನು ಫೋನ್‌ನ ವಿಶೇಷತೆಗಳತ್ತ ಗಮನಿಸಿದಾಗ ಇದನ್ನು ಖರೀದಿಸುವ ಬಯಕೆ ಮನದಲ್ಲಿ ಮೂಡುವುದು ಖಂಡಿತ. ನಿಮ್ಮ ಬಯಕೆಯನ್ನು ಈಡೇರಿಸುವುದಕ್ಕಾಗಿಯೇ ನಾವು ಟಾಪ್ ಹತ್ತು ಡೀಲ್‌ಗಳೊಂದಿಗೆ ಬಂದಿದ್ದು ಫೋನ್ ಖರೀದಿಗೆ ಸುವರ್ಣವಕಾಶವಾಗಿದೆ.

Best Mobiles in India

English summary
This article tells about Samsung Galaxy Alpha Looks Absolutely Gorgeous: Top 10 Best EMI Offers to Buy in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+