ಸ್ಯಾಮ್ ಸಂಗ್ ಪ್ರೊಜೆಕ್ಟರ್ ಫೋನ್ ಗ್ಯಾಲಕ್ಸಿ ಬೀಮ್ ಬರಲಿದೆ

Posted By: Varun
ಸ್ಯಾಮ್ ಸಂಗ್ ಪ್ರೊಜೆಕ್ಟರ್ ಫೋನ್ ಗ್ಯಾಲಕ್ಸಿ ಬೀಮ್ ಬರಲಿದೆ

ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಇಂದಿನಿಂದ ಶುರುವಾಗಲಿದೆ. ಸ್ಯಾಮ್ಸಂಗ್ ಅಂತೂ ಇದಕ್ಕೆಂದೇ ಸಿದ್ಧತೆ ಮಾಡಿಕೊಂಡಿರುವಂತೆ ಒಂದರ ಹಿಂದೊಂತೆ ಹೊಸ ಮಾಡೆಲ್ ಗಳನ್ನು ಪರಿಚಯಿಸಲು ಹಾತೊರೆಯುತ್ತಿದೆ. ಈಗ ಮತ್ತೊಂದು ವಿಭಿನ್ನವಾದ ಪ್ರೊಜೆಕ್ಟರ್ ಮೊಬೈಲ್ , ಗ್ಯಾಲಕ್ಸಿ ಬೀಮ್ ಅನ್ನು ಹೊರತಂದಿದೆ.

ಆಂಡ್ರಾಯ್ಡ್ 2.3 ಚಾಲಿತ ಈ ಪ್ರೊಜೆಕ್ಟರ್ ಫೋನ್ ನಿಂದ ಬಳಕೆದಾರರು ಮಲ್ಟಿಮೀಡಿಯಾ ಸಂಬಂಧೀ ಮಾಹಿತಿಯನ್ನು ಪ್ರದರ್ಶಿಸಲು ಮತ್ತು ಹಂಚಿಕೊಳ್ಳಲು ಗೋಡೆ, ಸೀಲಿಂಗ್ ಇಲ್ಲವೆ ಯಾವುದೇ ನುಣುಪಾದ ಗೋಡೆಯ ಮೇಲೆ ಪ್ರದರ್ಶಿಸಬಹುದು. ಇದರ ಹೈ-ಡೆಫಿನಿಷನ್ ಪ್ರೊಜೆಕ್ಷನ್ 50-ಇಂಚಿನ ಅಗಲದ ಪರದೆವರೆಗೂ ವಿಸ್ತರಿಸಬಹುದು.

ಇದರ ಇತರ ಫೀಚರ್ಗಳು ಈ ರೀತಿ ಇವೆ:

  • 1GHz ಡ್ಯುಯಲ್ ಕೋರ್ ಪ್ರೊಸೆಸರ್

  • 4.0-ಇಂಚಿನ (480x800) ಟಿಎಫ್ಟಿ ಡಿಸ್ಪ್ಲೇ

  • 5 ಮೆಗಾಪಿಕ್ಸೆಲ್ ಆಟೋಫೋಕಸ್ ಕ್ಯಾಮೆರಾ

  • 8GB ಆಂತರಿಕ ಮೆಮೊರಿ ಹೊಂದಿದ್ದು 32GB ವರೆಗೆ ವಿಸ್ತರಿಸಬಹುದು

  • ಮೈಕ್ರೊ ಕಾರ್ಡ

  • 768 MB ರಾಮ್

  • 12.5mm ಅಳತೆಯ, 2000mAh ಬ್ಯಾಟರಿ
ಕ್ವಾಡ್-ಬ್ಯಾಂಡ್ ನಿಂದಾಗಿ GSM ಜಾಲದಲ್ಲೇ ಕೆಲಸಮಾಡುವ ಸಾಮರ್ಥ್ಯ ಹೊಂದಿದ್ದು, ವಿಡಿಯೋಗಳು, ನಕ್ಷೆಗಳು, ವ್ಯವಹಾರ ಮಾಹಿತಿಯನ್ನು ಕೂಡ ಪ್ರೊಜೆಕ್ಟ್ ಮಾಡಬಹುದು.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot