Home
ಮೊಬೈಲ್

ಫ್ಲಿಪ್‌ಕಾರ್ಟ್‌ನಲ್ಲಿ Galaxy Days Sale: ಎರಡು ದಿನ ಬೆಸ್ಟ್ ಆಫರ್ಸ್!

ಟೆಕ್ ದೈತ್ಯ ಸ್ಯಾಮ್ಸಂಗ್ ತನ್ನ ಗ್ರಾಹಕರಿಗೆ ಫ್ಲಿಪ್‌ಕಾರ್ಟ್‌ನಲ್ಲಿ Galaxy Days Sale ಅನ್ನು ಆರಂಭಿಸಿದೆ. ಫೆಬ್ರವರಿ 3 ರಿಂದ ಫೆಬ್ರವರಿ 5 ರವರೆಗೆ ಈ ವಿಶೇಷ ಸೇಲ್ ನಡೆಯಲಿದ್ದು, ಈ ಮಾರಾಟ ಮೇಳದಲ್ಲಿ ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ವೇಯರಬಲ್ಸ್ ಸಾಧನಗಳ ಮೇಲೆ ಭಾರಿ ರಿಯಾಯಿತಿಗಳನ್ನು ಘೋಷಿಸಲಾಗಿದೆ. ಇದರ ಜೊತೆಗೆ Samsung Care+, ಬ್ಯಾಂಕ್ ಆಫರ್‌ಗಳು ಮತ್ತು ಅಚ್ಚರಿ ಬಹುಮಾನಗಳಂತಹ ಹೆಚ್ಚುವರಿ ಲಾಭಗಳೂ ಲಭ್ಯವಿವೆ. ಈ ಲೇಖನದಲ್ಲಿ ನಾವು ಸ್ಮಾರ್ಟ್‌ಫೋನ್‌ಗಳ ಮೇಲಿನ ಆಫರ್‌ಗಳನ್ನು ನೋಡೋಣ ಬನ್ನಿ.

ಈ Galaxy Days ಸೇಲ್‌ನಲ್ಲಿ ಬಜೆಟ್ ಮತ್ತು ಮಿಡ್‌ರೇಂಜ್ ಗ್ರಾಹಕರಿಗೆ ಆಕರ್ಷಕ ಆಫರ್‌ಗಳನ್ನು ನೀಡಲಾಗಿದೆ. Galaxy F ಸರಣಿ ಸ್ಮಾರ್ಟ್‌ಫೋನ್‌ಗಳು ಕೇವಲ ₹8,999 ಆರಂಭಿಕ ದರದಲ್ಲಿ ಲಭ್ಯವಾಗಲಿದ್ದು, Galaxy A ಸರಣಿ ಫೋನ್‌ಗಳು ₹19,999 ರಿಂದ ಮಾರಾಟಕ್ಕೆ ಬರುತ್ತಿವೆ. ಪ್ರೀಮಿಯಂ ಬಳಕೆದಾರರಿಗಾಗಿ Galaxy S ಸರಣಿ ಫೋನ್‌ಗಳು ₹42,999 ಪ್ರಾರಂಭಿಕ ಬೆಲೆಯಲ್ಲಿ ಲಭ್ಯವಿದ್ದು, ಫೋಲ್ಡಬಲ್ ವಿಭಾಗದ Galaxy Z ಸರಣಿ ಸ್ಮಾರ್ಟ್‌ಫೋನ್‌ಗಳು ₹99,999 ರಿಂದ ಆರಂಭವಾಗುತ್ತವೆ. ಆಯ್ದ ಮಾದರಿಗಳ ಮೇಲೆ ಗರಿಷ್ಠ ₹10,000 ವರೆಗೆ ಕ್ಯಾಶ್‌ಬ್ಯಾಕ್ ಕೂಡ ದೊರೆಯಲಿದೆ.

ಈ ಸೇಲ್ ಅವಧಿಯಲ್ಲಿ ಪ್ರಮುಖ ಫ್ಲ್ಯಾಗ್‌ಶಿಪ್ ಫೋನ್‌ಗಳ ಮೇಲೂ ದೊಡ್ಡ ರಿಯಾಯಿತಿಗಳು ಲಭ್ಯವಿವೆ. Samsung Galaxy S25 Ultra ಫೋನ್‌ನ್ನು ₹1,11,999 ದರದಲ್ಲಿ ಪಟ್ಟಿ ಮಾಡಲಾಗಿದ್ದು, ಬ್ಯಾಂಕ್ ಕಾರ್ಡ್ ಆಫರ್ ಮೂಲಕ ₹4,000 ರಿಯಾಯಿತಿಯೊಂದಿಗೆ ಇದರ ಪರಿಣಾಮಕಾರಿ ಬೆಲೆ ₹1,07,999 ಆಗುತ್ತದೆ. Galaxy S25 ಫೋನ್‌ನ್ನು ₹74,999 ದರದಲ್ಲಿ ಖರೀದಿಸಬಹುದು. ಫ್ಲಿಪ್‌ಕಾರ್ಟ್ ಆಕ್ಸಿಸ್ ಅಥವಾ ಎಸ್‌ಬಿಐ ಕಾರ್ಡ್ ಬಳಕೆದಾರರಿಗೆ ಹೆಚ್ಚುವರಿ ₹4,000 ಡಿಸ್ಕೌಂಟ್ ದೊರೆಯುವುದರಿಂದ ಅಂತಿಮ ಬೆಲೆ ₹70,999 ಆಗುತ್ತದೆ.

ಫ್ಲಿಪ್‌ಕಾರ್ಟ್‌ನಲ್ಲಿ Galaxy Days Sale: ಎರಡು ದಿನ ಬೆಸ್ಟ್ ಆಫರ್ಸ್!

ಹೆಚ್ಚು ಮೌಲ್ಯದ ಡೀಲ್ ಹುಡುಕುವವರಿಗೆ Galaxy S25 Plus ಉತ್ತಮ ಆಯ್ಕೆಯಾಗಿದೆ. 12GB RAM ಮತ್ತು 256GB ಸ್ಟೋರೇಜ್ ಹೊಂದಿರುವ ಈ ಮಾದರಿ ₹99,999 ಬದಲಾಗಿ ₹74,999 ದರದಲ್ಲಿ ಲಭ್ಯವಿದ್ದು, ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಇನ್ನಷ್ಟು ರಿಯಾಯಿತಿಯನ್ನು ಪಡೆಯಬಹುದು. ಇದು ಪ್ರೀಮಿಯಂ ಫೀಚರ್‌ಗಳೊಂದಿಗೆ ಕಡಿಮೆ ಬೆಲೆಯಲ್ಲಿ ದೊರೆಯುತ್ತಿರುವ ಪ್ರಮುಖ ಆಫರ್‌ಗಳಲ್ಲಿ ಒಂದಾಗಿದೆ. ICICI, Axis, SBI, Kotak ಮತ್ತು HDFC ಬ್ಯಾಂಕ್ ಕಾರ್ಡ್‌ಗಳ ಮೂಲಕ ಹೆಚ್ಚುವರಿ ಡಿಸ್ಕೌಂಟ್ ಆಯ್ಕೆ ಇದೆ.

ಫೋಲ್ಡಬಲ್ ಸ್ಮಾರ್ಟ್‌ಫೋನ್ ಅಭಿಮಾನಿಗಳಿಗಾಗಿ Galaxy Z Fold 7 ಕೂಡ Galaxy Days ಸೇಲ್‌ನಲ್ಲಿ ಲಭ್ಯವಿದೆ. ಈ ಫೋನ್ ₹1,74,999 ದರದಲ್ಲಿ ಪಟ್ಟಿ ಮಾಡಲಾಗಿದ್ದು, ಎಸ್‌ಬಿಐ ಮತ್ತು ಫ್ಲಿಪ್‌ಕಾರ್ಟ್ ಆಕ್ಸಿಸ್ ಕಾರ್ಡ್ ಬಳಕೆ ಮಾಡಿದರೆ ₹11,000 ರಿಯಾಯಿತಿಯೊಂದಿಗೆ ಪರಿಣಾಮಕಾರಿ ಬೆಲೆ ₹1,63,999 ಆಗುತ್ತದೆ. ಕಳೆದ ವರ್ಷದ ಜನಪ್ರಿಯ ಫ್ಲ್ಯಾಗ್‌ಶಿಪ್ ಮಾದರಿಯಾದ Galaxy S24 (Gen 3 ಪ್ರೊಸೆಸರ್) ಫೋನನ್ನು ₹42,999 ದರದಲ್ಲಿ ಖರೀದಿಸಬಹುದು. ಫ್ಲಿಪ್‌ಕಾರ್ಟ್ ಎಸ್‌ಬಿಐ ಅಥವಾ ಆಕ್ಸಿಸ್ ಕಾರ್ಡ್ ಬಳಕೆ ಮಾಡಿದರೆ ₹2,147 ವರೆಗೆ ಕ್ಯಾಶ್‌ಬ್ಯಾಕ್ ಪ್ರಯೋಜನವೂ ದೊರೆಯುತ್ತದೆ.

ಇದಿಷ್ಟೇ ಅಲ್ಲದೆ, ಫ್ಲಿಪ್‌ಕಾರ್ಟ್ ಮೂಲಕ Samsung ಸ್ಮಾರ್ಟ್‌ಫೋನ್ ಖರೀದಿ ಮಾಡುವ ಗ್ರಾಹಕರು Samsung Care+ ಆಯ್ಕೆಯನ್ನು ಕೂಡ ಬಳಸಿಕೊಳ್ಳಬಹುದು. ಇದು ಅರ್ಹ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳಿಗೆ ಅಪಘಾತದಿಂದ ಉಂಟಾಗುವ ಹಾನಿ ಮತ್ತು ನೀರಿನ ಹಾನಿಯಿಂದ ರಕ್ಷಣೆ ನೀಡುತ್ತದೆ. ಅಲ್ಲದೇ Galaxy Days ಪುಟಕ್ಕೆ ಭೇಟಿ ನೀಡುವ ಬಳಕೆದಾರರು SuperCoins ಗಳಿಸಬಹುದಾಗಿದ್ದು, ಕೆಲವರಿಗೆ ವಿಶೇಷ ಡಿಸ್ಕೌಂಟ್ ಕೂಪನ್‌ಗಳಿರುವ ಮಿಸ್ಟರಿ ಬಾಕ್ಸ್‌ಗಳನ್ನು ಅನ್ಲಾಕ್ ಮಾಡುವ ಅವಕಾಶವೂ ಸಿಗಲಿದೆ.

ಒಟ್ಟಾರೆಯಾಗಿ, ಫ್ಲಿಪ್‌ಕಾರ್ಟ್‌ನಲ್ಲಿ ನಡೆಯುತ್ತಿರುವ ಸ್ಯಾಮ್ಸಂಗ್ Galaxy Days Sale ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಉತ್ತಮ ಅವಕಾಶವನ್ನು ಒದಗಿಸಿದೆ. ಬಜೆಟ್ ಫೋನ್‌ನಿಂದ ಪ್ರೀಮಿಯಂ ಮತ್ತು ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳವರೆಗೆ ವಿವಿಧ ಆಯ್ಕೆಗಳು ಲಭ್ಯವಿರುವುದರಿಂದ, ಗ್ರಾಹಕರು ತಮ್ಮ ಅಗತ್ಯಕ್ಕೆ ತಕ್ಕಂತೆ ಉತ್ತಮ ಡೀಲ್ ಆಯ್ಕೆ ಮಾಡಿಕೊಳ್ಳಬಹುದು. ನೀವು ಹೊಸ Samsung ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸಿದ್ದರೆ, ಇದು ನಿಮಗೆ ಉತ್ತಮ ಸಮಯವಾಗಿದೆ ಎಂಬುದು ನಮ್ಮ ಅಭಿಪ್ರಾಯ.

Best Mobiles in India

English summary
Samsung has launched the Galaxy Days Sale on Flipkart from February 3 to February 5, offering big discounts on Galaxy smartphones across budget, mid-range, premium, and foldable segments, along with bank offers, cashback up to ₹10,000, and additional benefits like Samsung Care+.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+