Home
ಮೊಬೈಲ್

ಹೊಸ Samsung Galaxy F06 ಸೇಲ್ ಶುರು; ಅತ್ಯಂತ ಅಗ್ಗದ ಬೆಲೆ.. ಆಫರ್‌ ಕೂಡ ಲಭ್ಯ.. ಸೂಪರ್ ಫೀಚರ್ಸ್‌

ಸ್ಯಾಮ್‌ಸಂಗ್ ಇತ್ತೀಚೆಗೆ ಹೊಸ 5G ಫೋನನ್ನು ಬಿಡುಗಡೆ ಮಾಡಿದೆ. ಇದು ಸ್ಯಾಮ್‌ಸಂಗ್ ಗ್ಯಾಲಕ್ಸಿ F06 5G (Samsung Galaxy F06 5G) ಹೆಸರಿನೊಂದಿಗೆ ದೇಶೀಯ ಮಾರುಕಟ್ಟೆಗೆ ಬಂದಿದೆ. ಹೌದು, ಸ್ಯಾಮ್‌ಸಂಗ್ ತನ್ನ 'F' ಸರಣಿಯಲ್ಲಿ ಈ ಹೊಸ ಫೋನನ್ನು ಬಿಡುಗಡೆ ಮಾಡಿದೆ. ಇದು 10,000 ರೂ.ಗಳ ಬಜೆಟ್‌ನಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್ ಆಗಿದೆ. ಅಂದಹಾಗೆ, ಪ್ರಸ್ತುತ ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ F06 5G ಮಾರಾಟ ಪ್ರಾರಂಭವಾಗಿದೆ. ಬನ್ನಿ, ಈ ಫೋನಿನ ಬೆಲೆ, ಆಫರ್‌ಗಳು ಮತ್ತು ವಿಶೇಷತೆಗಳನ್ನು ತಿಳಿಯೋಣ.

ಸ್ಯಾಮ್‌ಸಂಗ್ ತನ್ನ ಗ್ರಾಹಕರಿಗಾಗಿ ಅಗ್ಗದ ಬೆಲೆಯಲ್ಲಿ ಗ್ಯಾಲಕ್ಸಿ F06 ಫೋನನ್ನು ಪರಿಚಯಿಸಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಈ ಮೊಬೈಲ್ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಈ ಫೋನಿನಲ್ಲಿ 6.74 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಜೊತೆಗೆ 6GB RAM + 128GB ಸ್ಟೋರೇಜ್, 5000mAh ಬ್ಯಾಟರಿ ಮತ್ತು 25W ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಮಾರಾಟವಾಗುತ್ತಿದೆ.

ಹೊಸ Samsung Galaxy F06 ಸೇಲ್ ಶುರು; ಅತ್ಯಂತ ಅಗ್ಗದ ಬೆಲೆ.. ಆಫರ್ ಏನಿದೆ?

ಸ್ಯಾಮ್‌ಸಂಗ್ ಗ್ಯಾಲಕ್ಸಿ F06 5G ಬೆಲೆ ಮತ್ತು ಲಭ್ಯತೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ F06 5G ಮೊಬೈಲ್ ನ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ. ಈ ಫೋನಿನ 4GB RAM + 128GB ಸ್ಟೋರೇಜ್ ಆಯ್ಕೆಯು 9,999 ರೂ.ಗಳ ಆರಂಭಿಕ ಬೆಲೆಗೆ ಲಭ್ಯವಿದೆ. ಹಾಗೆಯೇ 6GB RAM + 128GB ಸ್ಟೋರೇಜ್ ವೇರಿಯಂಟ್ 11,499 ರೂ.ಗೆ ಮಾರಾಟವಾಗುತ್ತಿದ. ಕಂಪನಿಯು, ತನ್ನ ಮೊದಲ ಮಾರಾಟದ ಪ್ರಯುಕ್ತ 500 ರೂ. ರಿಯಾಯಿತಿ ನೀಡುತ್ತಿದೆ. ಈ ಡಿಸ್ಕೌಂಟ್ ಬಳಿಕ ಎರಡು ರೂಪಾಂತರಗಳ ಬೆಲೆ ಕ್ರಮವಾಗಿ 9,499 ರೂ. ಮತ್ತು 10,999 ರೂ.ಗೆ ಲಭ್ಯವಿದೆ. ನೀವು ಬಹಾಮಾ ನೀಲಿ ಮತ್ತು ಲಿಟ್ ವೈಲೆಟ್ ಬಣ್ಣಗಳ ಆಯ್ಕೆಯಲ್ಲಿ ಫೋನನ್ನು ಖರೀದಿಸಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ F06 5G ಫೀಚರ್ಸ್‌

ಡಿಸ್ಪ್ಲೇ ಹೇಗಿದೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ F06 5G ಮೊಬೈಲ್ 6.74 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು ವಾಟರ್‌ಡ್ರಾಪ್ ನಾಚ್ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 900 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ.

ಪ್ರೊಸೆಸರ್ ಯಾವುದು

ಸ್ಯಾಮ್‌ಸಂಗ್ ಗ್ಯಾಲಕ್ಸಿ F06 5G ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ನ ಡೈಮೆನ್ಸಿಟಿ 6300 ಆಕ್ಟಾಕೋರ್ ಪ್ರೊಸೆಸರ್‌ ಹೊಂದಿದೆ. ಇದನ್ನು 6 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್‌ 14 ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ.

RAM ಮತ್ತು ಸ್ಟೋರೇಜ್

ಸ್ಯಾಮ್‌ಸಂಗ್ ಗ್ಯಾಲಕ್ಸಿ F06 5G ಮೊಬೈಲ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ. ಈ ಫೋನ್ 4GB ಮತ್ತು 6GB RAM ಹೊಂದಿದೆ. ಈ ಫೋನಿನ ಮೂಲ ರೂಪಾಂತರವು 4GB RAM ನೊಂದಿಗೆ ಬರುತ್ತದೆ. 4GB RAM ಮಾದರಿಯು 4GB ವರ್ಚುವಲ್ RAM ಮತ್ತು 6GB RAM ಮಾದರಿಯು 6GB ವರ್ಚುವಲ್ RAM ಹೊಂದಿದೆ. ಹಾಗೆಯೇ ಈ ಫೋನಿನಲ್ಲಿ 128GB ಸ್ಟೋರೇಜ್ ಆಯ್ಕೆ ಲಭ್ಯವಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್

ಸ್ಯಾಮ್‌ಸಂಗ್ ಗ್ಯಾಲಕ್ಸಿ F06 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್‌ಇಡಿ ಫ್ಲ್ಯಾಷ್ ಲೈಟ್‌ನೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಜೊತೆಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ.

ಸೂಪರ್ ಬ್ಯಾಟರಿ ಬ್ಯಾಕಪ್

ಸ್ಯಾಮ್‌ಸಂಗ್ ಗ್ಯಾಲಕ್ಸಿ F06 5G ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 25W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಮೊಬೈಲ್‌ನಲ್ಲಿ ಯುಎಸ್‌ಬಿ ಟೈಪ್ ಸಿ ಪೋರ್ಟ್ ಸಹ ಲಭ್ಯವಿದೆ.

Best Mobiles in India

English summary
Samsung Galaxy F06 5G now available for purchase: check price, offer, specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+