Samsung Galaxy F14: ಕೇವಲ 9 ಸಾವಿರಕ್ಕೆ 5G ಫೋನ್.. ಅದೂ ಸ್ಯಾಮ್‌ಸಂಗ್‌ನಿಂದ!
ಸ್ಯಾಮ್‌ಸಂಗ್ ಮೊಬೈಲ್ ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿ ಇದೆ. ಸದ್ದಿಲ್ಲದೇ, ಹೊಸ ಸ್ಯಾಮ್‌ಸಂಗ್ ಫೋನ್ ಭಾರತಕ್ಕೆ ಎಂಟ್ರಿ ಕೊಟ್ಟಿದೆ. ಈ ಹೊಸ ಸ್ಮಾರ್ಟ್‌ಫೋನಿನ ಬೆಲೆ 9 ಸಾವಿರಕ್ಕಿಂತ ಕಡಿಮೆ! ಹೌದು, ಪ್ರಮುಖ ಟೆಕ್ ಬ್ರ್ಯಾಂಡ್ ಸ್ಯಾಮ್‌ಸಂಗ್ ಇಂದು ಭಾರತದಲ್ಲಿ 'ಎಫ್' ಸರಣಿಯಲ್ಲಿ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಮೊಬೈಲ್ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್14 (Samsung Galaxy F14) ಹೆಸರಿನೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಈ ಹೊಸ ಫೋನ್, ಕಡಿಮೆ ಬೆಲೆಯಲ್ಲಿ ಆಕರ್ಷಕ ಫೀಚರ್ಸ್‌ಗಳೊಂದಿಗೆ ಬರುತ್ತದೆ.
ಸ್ಯಾಮ್‌ಸಂಗ್‌ನ ಈ ಹೊಸ ಗ್ಯಾಲಕ್ಸಿ ಎಫ್14 (Samsung Galaxy F14) ಮೊಬೈಲ್ ಪೂರ್ಣ HD+ ಡಿಸ್ಪ್ಲೇ, 90 Hz ರಿಫ್ರೆಶ್ ರೇಟ್ ಹೊಂದಿದೆ. 5000mAh ಬ್ಯಾಟರಿ, ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಮತ್ತು 50MP ಪ್ರಾಥಮಿಕ ಕ್ಯಾಮೆರಾ, 4GB RAM ಮತ್ತು 64GB ಸ್ಟೋರೇಜ್ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹಾಗಿದ್ರೆ, ಈ ಫೋನಿನ ಬೆಲೆ, ಲಭ್ಯತೆ, ಆಫರ್‌ಗಳು ಮತ್ತು ಇನ್ನಿತರ ಫೀಚರ್ಸ್‌ಗಳನ್ನು ಸಂಪೂರ್ಣವಾಗಿ ತಿಳಿಯೋಣ ಬನ್ನಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್14 ಫೋನಿನ ಬೆಲೆ ಮತ್ತು ಲಭ್ಯತೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್14 ಬಜೆಟ್ ಸ್ನೇಹಿ 4G ಸ್ಮಾರ್ಟ್‌ಫೋನ್ ಆಗಿದೆ. ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್14 ಸ್ಮಾರ್ಟ್‌ಫೋನ್ ಬೆಲೆ 8,999 ರೂ.ಗೆ ನಿಗದಿಪಡಿಸಲಾಗಿದೆ. ಇದು ಕೇವಲ 4GB RAM ಮತ್ತು 64GB ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ. ಈ ಫೋನನ್ನು ಸ್ಯಾಮ್‌ಸಂಗ್‌ನ ವೆಬ್‌ಸೈಟ್, ಇ ಕಾಮರ್ಸ್ ಸೈಟ್‌ಗಳಾದ ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ನೀವು ಖರೀದಿಸಬಹುದು. ಈ ಮೊಬೈಲ್ ಮೂನ್‌ಲೈಟ್ ಸಿಲ್ವರ್ ಮತ್ತು ಪೆಪ್ಪರ್‌ಮಿಂಟ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್14 ಫೀಚರ್ಸ್
ಡಿಸ್ಲ್ಪೇ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್14 ಫೋನ್ 6.7 ಇಂಚಿನ ಪೂರ್ಣ HD+ ಡಿಸ್ಲ್ಪೇಯನ್ನು ಹೊಂದಿದೆ. IPS LCD ಪ್ಯಾನೆಲ್, 90 Hz ರಿಫ್ರೆಶ್ ದರವನ್ನು ಒಳಗೊಂಡಿದೆ.
ಪ್ರೊಸೆಸರ್: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್14 ಸ್ಮಾರ್ಟ್‌ಫೋನ್ Qualcomm Snapdragon 680 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಗ್ರಾಫಿಕ್ಸ್‌ಗಾಗಿ Adreno 610 GPU ಅನ್ನು ಒದಗಿಸಲಾಗಿದೆ.
ಸಾಫ್ಟ್‌ವೇರ್: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್14 ಸ್ಮಾರ್ಟ್‌ಫೋನ್ Android 14 OS ಆಧಾರಿತ OneUI 6.1 ಕಸ್ಟಮ್ ಸ್ಕಿನ್‌ನಲ್ಲಿ ಕೆಲಸ ನಿರ್ವಹಿಸುತ್ತದೆ.
ಸ್ಟೋರೇಜ್: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್14 ಮೊಬೈಲ್ 4GB RAM ಮತ್ತು 64GB ಸ್ಟೋರೇಜ್ ಆಯ್ಕೆಯನ್ನು ಒಳಗೊಂಡಿದೆ. ಮೈಕ್ರೊ SD ಜೊತೆಗೆ 1TB ವರೆಗೆ ವಿಸ್ತರಿಸಬಹುದಾದ ಮೆಮೊರಿ ಹೊಂದಿದೆ.

ಕ್ಯಾಮೆರಾ: ಈ ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್14 ಫೋನ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ರಚನೆಯನ್ನು ಹೊಂದಿದೆ. ಇದು 50MP ಪ್ರಾಥಮಿಕ ಕ್ಯಾಮೆರಾ, 2MP ಡೆಪ್ತ್ ಸೆನ್ಸರ್ ಮತ್ತು 2MP ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಇವುಗಳ ಜೊತೆಗೆ ಎಲ್ ಇಡಿ ಫ್ಲ್ಯಾಶ್ ಸಹ ಒದಗಿಸಲಾಗಿದೆ. ಇದು ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 13MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್14 ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಇದು 25W ವೇಗದ ಚಾರ್ಜಿಂಗ್ ಸಪೋರ್ಟ್ ಪಡೆದಿದೆ. ಇದು 168 x 78 x 9mm ಅಳತೆ ಮತ್ತು 194 ಗ್ರಾಂ ತೂಕ ಹೊಂದಿದೆ.
ಕನೆಕ್ಟಿವಿಟಿ ಆಯ್ಕೆಗಳು: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್14 ಫೋನ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೊ ಎಸ್‌ಡಿ), 4G LTE, Wi-Fi 5, ಬ್ಲೂಟೂತ್ 5.1, GPS, 3.5mm ಆಡಿಯೋ ಜ್ಯಾಕ್, ಕೆಳಗೆ ಪೋರ್ಟ್ ಮಾಡಿದ ಸ್ಪೀಕರ್ ನಂತಹ ಸೌಲಭ್ಯಗಳನ್ನು ಹೊಂದಿದೆ.


Click it and Unblock the Notifications








