ಭಾರತಕ್ಕೆ Galaxy F17 ಎಂಟ್ರಿ: ಈ ಹೊಸ Samsung 5G ಪೋನ್ ಬೆಲೆ ₹13,999!
ಭಾರತದ ಮೊಬೈಲ್ ಮಾರುಕಟ್ಟೆಯು ಬಹುದಿನಗಳಿಂದ ಎದುರುನೋಡುತ್ತಿದ್ದ ಬಹುನಿರೀಕ್ಷಿತ Galaxy F17 5G ಸ್ಮಾರ್ಟ್‌ಫೋನ್ ದೇಶದಲ್ಲಿಂದು ಬಿಡುಗಡೆಯಾಗಿದೆ. ಕಳೆದ ವರ್ಷದ F16 5G ಉತ್ತರಾಧಿಕಾರಿಯಾಗಿ ಭಾರತದಲ್ಲಿ Galaxy F17 5G ಫೋನ್ ಅನ್ನು ಪರಿಚಯಿಸಲಾಗಿದ್ದು, ಈ ಫೋನ್ ಆಕರ್ಷಕ ವಿನ್ಯಾಸ, ಶಕ್ತಿಯುತ ವೈಶಿಷ್ಟ್ಯಗಳು ಮತ್ತು ದೀರ್ಘಕಾಲಿನ ಸಾಫ್ಟ್‌ವೇರ್ ಬೆಂಬಲವನ್ನು ಒದಗಿಸುವ ಭರವಸೆಯನ್ನು ನೀಡಿದೆ. ಗ್ಯಾಲಕ್ಸಿ AI ವೈಶಿಷ್ಟ್ಯಗಳು, ಗೂಗಲ್ ಜಿಮಿನಿ ಹಾಗೂ "ಸರ್ಕಲ್ ಟು ಸರ್ಚ್" ಇವುಗಳನ್ನು ಒಳಗೊಂಡಿರುವುದರಿಂದ, ತಂತ್ರಜ್ಞಾನ ಪ್ರಿಯರಿಗೆ ಇದು ಒಳ್ಳೆಯ ಆಯ್ಕೆಯಾಗಲಿದೆ. ಹಾಗಾದರೆ, ಹೊಸ Galaxy F17 5G ಸ್ಮಾರ್ಟ್‌ಫೋನ್ ಹೇಗಿದೆ?, ಫೀಚರ್ಸ್ ಯಾವುವು ಮತ್ತು ಬೆಲೆ ಎಷ್ಟು ಎಂಬುದನ್ನು ನೋಡೋಣ ಬನ್ನಿ.
ಡಿಸ್ಪ್ಲೇ ಮತ್ತು ವಿನ್ಯಾಸ
ಹೊಸ Galaxy F17 5G ಫೋನ್‌ನಲ್ಲಿ 6.7 ಇಂಚಿನ FHD+ Super AMOLED ಇನ್ಫಿನಿಟಿ-U ಡಿಸ್ಪ್ಲೇ ಇದೆ. ಇದು 90Hz ರಿಫ್ರೆಶ್ ರೇಟ್ ಮತ್ತು 800 ನಿಟ್ಸ್ ಪೀಕ್ ಬ್ರೈಟ್ನೆಸ್ ಒದಗಿಸುತ್ತದೆ. ಡಿಸ್ಪ್ಲೇ ಮೇಲೆ Corning Gorilla Glass Victus ರಕ್ಷಣೆ ನೀಡಲಾಗಿದ್ದು, ದೈನಂದಿನ ಬಳಕೆಯಲ್ಲಿ ಉತ್ತಮ ಸುರಕ್ಷತೆಯನ್ನು ಒದಗಿಸುತ್ತದೆ. ಕೇವಲ 7.5 ಮಿಮೀ ದಪ್ಪ ಹೊಂದಿರುವ ಈ ಫೋನ್ ಕೈಯಲ್ಲಿ ಹಿಡಿದಾಗ ತೂಕವಾಗದೇ ಸುಲಭ ಅನುಭವ ನೀಡುತ್ತದೆ. ಇದಕ್ಕೆ IP54 ಪ್ರಮಾಣೀಕರಣ ಇರುವುದರಿಂದ ಧೂಳು ಹಾಗೂ ನೀರಿನ ಸಿಂಚನದಿಂದ ರಕ್ಷಣೆ ದೊರೆಯುತ್ತದೆ.

ಕಾರ್ಯಕ್ಷಮತೆ ಮತ್ತು ಸಾಫ್ಟ್‌ವೇರ್
5nm ಆಧಾರಿತ Exynos 1330 ಚಿಪ್‌ಸೆಟ್ ಅನ್ನು ಈ ಫೋನ್‌ನಲ್ಲಿ ಬಳಸಲಾಗಿದೆ. ಇದರೊಂದಿಗೆ 4GB, 6GB ಮತ್ತು 8GB RAM ಆಯ್ಕೆಗಳು ಹಾಗೂ 128GB ಇನ್‌ಬಿಲ್ಟ್ ಸ್ಟೋರೇಜ್ ಲಭ್ಯ. ಮೆಮೋರಿ ಕಾರ್ಡ್ ಮೂಲಕ 2TB ವರೆಗೆ ವಿಸ್ತರಿಸಬಹುದು. ಫೋನ್ Android 15 ಆಧಾರಿತ One UI 7.0 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 6 ವರ್ಷಗಳವರೆಗೆ ಆಂಡ್ರಾಯ್ಡ್ ಅಪ್‌ಗ್ರೇಡ್‌ಗಳು ಹಾಗೂ ಭದ್ರತಾ ಅಪ್‌ಡೇಟ್‌ಗಳು ಸಿಗಲಿವೆ ಎಂದು ಸ್ಯಾಮ್‌ಸಂಗ್ ಭರವಸೆ ನೀಡಿದೆ.
ಕ್ಯಾಮೆರಾ ಮತ್ತು ಬ್ಯಾಟರಿ ಸಾಮರ್ಥ್ಯ
Galaxy F17 5G ಫೋನಿನ ಹಿಂಭಾಗದಲ್ಲಿ 50MP OIS ಬೆಂಬಲಿತ ಪ್ರಾಥಮಿಕ ಲೆನ್ಸ್, 5MP ಅಲ್ಟ್ರಾ-ವೈಡ್ ಹಾಗೂ 2MP ಮ್ಯಾಕ್ರೋ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಮುಂಭಾಗದಲ್ಲಿ 13MP ಸೆಲ್ಫಿ ಕ್ಯಾಮೆರಾ ಇದೆ. ಚಿತ್ರಗಳು ಮತ್ತು ವಿಡಿಯೋಗಳನ್ನು ಸ್ಪಷ್ಟವಾಗಿ ಸೆರೆಹಿಡಿಯಲು ಈ ಕ್ಯಾಮೆರಾ ವ್ಯವಸ್ಥೆ ಸಾಕಷ್ಟು ಉಪಯುಕ್ತವಾಗಿದೆ. ಬ್ಯಾಟರಿ ವಿಭಾಗದಲ್ಲಿ, ಈ ಪೋನ್ 25W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ.
ಇತರೆ ವೈಶಿಷ್ಟ್ಯಗಳು
ಈ ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್, NFC, ಬ್ಲೂಟೂತ್ 5.3, ಡ್ಯುಯಲ್ 5G ಬೆಂಬಲ, ಯುಎಸ್‌ಬಿ ಟೈಪ್-C ಪೋರ್ಟ್ ಸೇರಿದಂತೆ ಎಲ್ಲಾ ಅವಶ್ಯಕ ಸಂಪರ್ಕ ಆಯ್ಕೆಗಳನ್ನು ಹೊಂದಿದೆ. ಧೂಳು ಮತ್ತು ಸ್ಪ್ಲಾಶ್ ಇಂಗ್ರಿಗೇಷನ್ ವಿರುದ್ಧ ರಕ್ಷಣೆಗಾಗಿ, IP54 ರೇಟಿಂಗ್‌ನೊಂದಿಗೆ ಬರುತ್ತದೆ. ಇದು 164.4×77.9×7.5mm ಗಾತ್ರ ಮತ್ತು 192g ತೂಗುತ್ತದೆ. ಹಾಗೂ, ಈ ಫೋನಿನ ತೂಕ ಕೇವಲ 192 ಗ್ರಾಂ ಆಗಿರುವುದರಿಂದ ದೈನಂದಿನ ಬಳಕೆಗೆ ಅನುಕೂಲಕರವಾಗಿದೆ.

ಬೆಲೆ ಮತ್ತು ಲಭ್ಯತೆ
Galaxy F17 5G ಫೋನಿನ 4GB + 128GB ಮಾದರಿಯ ಪರಿಚಯಾತ್ಮಕವಾಗಿ ₹13,999 (MRP 14,999) ಬೆಲೆಗೆ ಬಿಡುಗಡೆಯಾಗಿದ್ದರೆ, ಇದರ 6GB + 128GB ಮಾದರಿಯ ಬೆಲೆ ₹15,499 ರೂ. ಆಗಿದೆ. ಆದರೆ, HDFC ಬ್ಯಾಂಕ್ ಕಾರ್ಡ್‌ಗಳು ಮತ್ತು UPI ವಹಿವಾಟುಗಳ ಮೇಲೆ ರೂ. 500 ಕ್ಯಾಶ್‌ಬ್ಯಾಕ್ ಪಡೆಯಬಹುದು ಎಂದು ಕಂಪನಿಯು ಪತ್ರಿಕಾ ಪ್ರಕಟಣೆಯಲ್ಲಿ ಬಹಿರಂಗಪಡಿಸಿದ್ದು, ಗ್ರಾಹಕರು Galaxy F17 5G ಖರೀದಿಯ ಮೇಲೆ ಆರು ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ EMI ಪ್ರಯೋಜನಗಳನ್ನು ಸಹ ಪಡೆಯಬಹುದು.
ಇನ್ನು ನಿಯೋ ಬ್ಲಾಕ್ ಮತ್ತು ವೈಲೆಟ್ ಪಾಪ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿರುವ ಈ Galaxy F17 5G ಫೋನ್ ಅನ್ನು ಸ್ಯಾಮ್‌ಸಂಗ್ ಇಂಡಿಯಾ ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಮತ್ತು ಆಯ್ದ ಚಿಲ್ಲರೆ ಅಂಗಡಿಗಳ ಮೂಲಕ ಖರೀದಿಸಬಹುದು. ಒಟ್ಟಾರೆಯಾಗಿ, ಹೊಸ Galaxy F17 5G ಫೋನ್ ಬಜೆಟ್ ವಿಭಾಗದಲ್ಲಿ ಉತ್ತಮ ಫೀಚರ್‌ಗಳೊಂದಿಗೆ ಬಂದು, ದೀರ್ಘಕಾಲದ ಅಪ್‌ಡೇಟ್‌ಗಳು ಹಾಗೂ ಆಕರ್ಷಕ ವಿನ್ಯಾಸದಿಂದ ಗಮನ ಸೆಳೆಯುವ ಸಾಧ್ಯತೆ ಇದೆ.


Click it and Unblock the Notifications








