Galaxy F36 5G: ಜುಲೈ 19 ರಂದು ಬಿಡುಗಡೆ, 20 ಸಾವಿರಕ್ಕಿಂತ ಕಡಿಮೆ ಬೆಲೆ!
ದಕ್ಷಿಣ ಕೋರಿಯಾದ ಟೆಕ್ ದೈತ್ಯ Samsung ಭಾರತದಲ್ಲಿ ತನ್ನ ಹೊಸ Galaxy F36 5G ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದೇ ಜುಲೈ 19, 2025 ರಂದು ತನ್ನ ಜನಪ್ರಿಯ Galaxy F ಸರಣಿಯಲ್ಲಿ Galaxy F36 5G ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ ಮತ್ತು ಇದರ ಬೆಲೆ ರೂ. 20,000 ಕ್ಕಿಂತ ಕಡಿಮೆ ಆಗಿರಲಿದೆ ಎಂದು Samsung ದೃಢಪಡಿಸಿದೆ. ಇಷ್ಟೇ ಅಲ್ಲದೆ, ಫ್ಲಿಪ್‌ಕಾರ್ಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬ್ಯಾನರ್ ಪ್ರಕಟವಾಗಿದ್ದು, ಈ ಫೋನ್ ಕುರಿತ ಕೆಲವು ಪ್ರಮುಖ ಮಾಹಿತಿಗಳನ್ನು ಬಹಿರಂಗಪಡಿಸಲಾಗಿದೆ.
ಭಾರತದಲ್ಲಿ Samsung Galaxy F36 5G ಲಭ್ಯತೆ
ಫ್ಲಿಪ್‌ಕಾರ್ಟ್‌ನ ವೆಬ್‌ಸೈಟ್‌ನಲ್ಲಿನ ಬ್ಯಾನರ್ ಜಾಹೀರಾತು Samsung Galaxy F36 5G ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ದೃಢಪಡಿಸಿದೆ. ಈ ಹೊಸ Galaxy F36 5G ಫೋನ್ ವೀಗನ್ ಸ್ಕಿನ್ ಫಿನಿಷ್, 50MP ಕ್ಯಾಮೆರಾ OIS (Optical Image Stabilization), ಹಾಗೂ ಇನ್ನೂ ಎರಡು ಹೆಚ್ಚುವರಿ ಕ್ಯಾಮೆರಾಗಳನ್ನು ಹೊಂದಿರುತ್ತದೆ. ಮತ್ತು ಕೇವಲ 7.7mm ದಪ್ಪವಾಗಿದೆ ಎಂದು ತಿಳಿಸಲಾಗಿದೆ. ಇನ್ನು ಮುಂದಿನ ಪೀಳಿಗೆಯ ಈ ಫೋನ್ ಕೆಲವು ಕೃತಕ ಬುದ್ಧಿಮತ್ತೆ (AI) ವೈಶಿಷ್ಟ್ಯಗಳೊಂದಿಗೆ ಬರಬಹುದು ಎಂಬ ಸುಳಿವು ಸಹ ದೊರೆತಿದೆ.
Galaxy F36 5G ಸ್ಮಾರ್ಟ್‌ಫೋನ್‌ಗಾಗಿ ರಚಿಸಿರುವ ಬ್ಯಾನರ್ ಜಾಹೀರಾತಿನಲ್ಲಿ "Flex HI-FAI" ಎಂಬ ಟ್ಯಾಗ್‌ಲೈನ್ ಇದೆ, ಅದರಲ್ಲಿ AI ಅಕ್ಷರಗಳನ್ನು ಬೇರೆ ಬಣ್ಣದಲ್ಲಿ ಹೈಲೈಟ್ ಮಾಡಲಾಗಿದೆ. ಬ್ಯಾನರ್ ಎಡಭಾಗದಲ್ಲಿ ಸಿಮ್ ಟ್ರೇನೊಂದಿಗೆ ಫೋನ್ ಬರುತ್ತದೆ ಎಂದು ತೋರಿಸುತ್ತದೆ. ಫೋನ್‌ನ ಒಂದು ನೋಟವು ತೆಳುವಾದ, ಲಂಬವಾಗಿ ಜೋಡಿಸಲಾದ ಹಿಂಭಾಗದ ಕ್ಯಾಮೆರಾ ಸೆಟಪ್ ಅನ್ನು ಸಹ ತೋರಿಸಿದೆ. ಸೆಲ್ಫಿ ಕ್ಯಾಮೆರಾವನ್ನು ಇರಿಸಲು Galaxy F36 5G ಫೋನ್ ಟಿಯರ್ ಡ್ರಾಪ್-ಶೈಲಿಯ ನಾಚ್ ಅನ್ನು ಹೊಂದಿರಬಹುದು ಎಂದು ಪಟ್ಟಿಯು ಸೂಚಿಸಿದೆ.
Samsung Galaxy F36 5G ವೈಶಿಷ್ಟ್ಯಗಳು (ನಿರೀಕ್ಷಿತ)
ಈ ಮೇಲೆ ತಿಳಿಸಿದ ವೈಶಿಷ್ಟ್ಯಗಳು ಅಧಿಕೃತವಾಗಿ ಹೊರಬಿದ್ದಿವೆ. ಆದರೆ, ಇತ್ತೀಚೆಗೆ Samsung F-ಸರಣಿಯ ಸ್ಮಾರ್ಟ್‌ಫೋನ್ ಅನ್ನು Google Play ಕನ್ಸೋಲ್ ಡೇಟಾಬೇಸ್‌ನಲ್ಲಿಯೂ ಗುರುತಿಸಲಾಗಿತ್ತು. ಇದರಲ್ಲಿ Galaxy F36 5Gಅನ್ನು ಕನಿಷ್ಠ 6Gb RAM ನೊಂದಿಗೆ ಜೋಡಿಸಲಾದ Exynos 1380 SoC ನಿಂದ ಚಾಲಿತಗೊಳಿಸಬಹುದು ಎಂದು ಸುಳಿವು ದೊರೆತಿದೆ. ಅಲ್ಲದೆ, ಈ Galaxy F36 5G ಫೋನ್ ಒನ್ UI 7 ನೊಂದಿಗೆ ಆಂಡ್ರಾಯ್ಡ್ 15 ನಲ್ಲಿ ಕಾರ್ಯನಿರ್ವಹಿಸಬಹುದು ಎಂದು ವರದಿಯಾಗಿದೆ.

ಡಿಸ್‌ಪ್ಲೇ ವಿಭಾಗದಲ್ಲಿ, Galaxy F36 5G ಫೋನ್ ಡಿಸ್‌ಪ್ಲೇಯು 1,080x2,340 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 450ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ ಎಂದು ಹೇಳಲಾಗಿದೆ. ಆದರೆ, ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಬ್ಯಾನರ್ ಜಾಹೀರಾತಿನಲ್ಲಿ ಇರುವ "Flex HI-FAI" ಎಂಬ ಟ್ಯಾಗ್‌ಲೈನ್ ನೋಡಿದಾಗ, ಈ "Hi-FAI" ಎಂಬ ಪದದ Samsung ಬಳಕೆಯು ಕ್ಯಾಮೆರಾ ಅಥವಾ ಒಟ್ಟಾರೆ ವ್ಯವಸ್ಥೆಗೆ AI- ಚಾಲಿತ ವರ್ಧನೆಗಳನ್ನು ಸೂಚಿಸಬಹುದು ಎಂದು ಕೆಲವು ವರದಿಗಳು ಅಭಿಪ್ರಾಯಪಟ್ಟಿವೆ.
ಗಮನಿಸುವುದಾದರೆ, Samsung ತನ್ನ Galaxy M36 5G ಸ್ಮಾರ್ಟ್‌ಫೋನ್ ಅ ನ್ನುಕಳೆದ ಜೂನ್ 27 ರಂದು ಭಾರತದಲ್ಲಿ ಬಿಡುಗಡೆ ಮಾಡಿತು. ಈ ಸ್ಮಾರ್ಟ್‌ಫೋನ್ Exynos 1380 SoC ಯೊಂದಿಗೆ 8GB ವರೆಗಿನ RAM ಮತ್ತು 256GB ವರೆಗಿನ ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ. ಇದು 120Hz ರಿಫ್ರೆಶ್ ದರ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ಲಸ್ ರಕ್ಷಣೆಯೊಂದಿಗೆ 6.7-ಇಂಚಿನ ಪೂರ್ಣ-HD+ ಸೂಪರ್ AMOLED ಡಿಸ್ಪ್ಲೇಯನ್ನು ಹೊಂದಿದೆ. ಈ ಕುರಿತ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications








