Home
ಮೊಬೈಲ್

Samsung Galaxy F56 vs Vivo V50e: ಯಾವುದು ಉತ್ತಮ ಆಯ್ಕೆ ನೋಡಿ!

ಟೆಕ್ ದೈತ್ಯ Samsung ಇತ್ತೀಚೆಗಷ್ಟೇ ಭಾರತದಲ್ಲಿ ತನ್ನ ಹೊಚ್ಚ ಹೊಸ Galaxy F56 5G ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆ ₹27,999 ಆಗಿದ್ದು, ಆಕರ್ಷಕ ವಿನ್ಯಾಸ ಮತ್ತು ಹಸಿರು ಹಾಗೂ ನೇರಳೆ ಬಣ್ಣಗಳ ಆಯ್ಕೆಯನ್ನು ಇದು ಹೊಂದಿದೆ. ಮತ್ತು Exynos 1480 ಚಿಪ್ ಮತ್ತು AI ವೈಶಿಷ್ಟ್ಯಗಳೊಂದಿಗೆ ಉತ್ತಮ ಕಾರ್ಯಕ್ಷಮತೆಯ ಭರವಸೆಯನ್ನು ನೀಡಿದೆ. ಇತ್ತ ಇದೇ ಬೆಲೆಯ (₹28,999) ವಿಭಾಗದಲ್ಲಿ ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ಮತ್ತೊಂದು ಫೋನ್ Vivo V50e ಕೂಡ ದೊಡ್ಡ ಬ್ಯಾಟರಿ, ವೇಗದ ಚಾರ್ಜಿಂಗ್ ಮತ್ತು ಉತ್ತಮ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಒಂದೇ ಬೆಲೆಯ ವಿಭಾಗದಲ್ಲಿರುವ Samsung Galaxy F56 ಮತ್ತು Vivo V50e ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದು ಬೆಸ್ಟ್ ಎಂಬುದನ್ನು ಕಂಡುಹಿಡಿಯೋಣ. ಈ ಎರಡು ಫೋನ್‌ಗಳ ಪ್ರಮುಖ ವೈಶಿಷ್ಟ್ಯಗಳ ಹೋಲಿಕೆ ಇಲ್ಲಿದೆ.

ವಿನ್ಯಾಸ
Samsung Galaxy F56 ಸ್ಮಾರ್ಟ್‌ಫೋನ್‌ ಕೇವಲ 7.2mm ದಪ್ಪವಿದ್ದು, ತೆಳುವಾದ ವಿನ್ಯಾಸವನ್ನು ಹೊಂದಿದೆ. ಗಾಜು ಮತ್ತು ಪ್ಲಾಸ್ಟಿಕ್‌ನಿಂದ ನಿರ್ಮಿಸಲಾಗಿರುವ ಈ ಫೋನ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್‌ನಿಂದ ರಕ್ಷಿಸಲ್ಪಟ್ಟಿದೆ. ಹಿಂಭಾಗದಲ್ಲಿ ಲಂಬವಾಗಿ ಜೋಡಿಸಲಾದ ಮೂರು ಕ್ಯಾಮೆರಾಗಳು ಫೋನ್‌ಗೆ ಸೊಗಸಾದ ನೋಟವನ್ನು ನೀಡುತ್ತವೆ. ಇತ್ತ Vivo V50e ಸ್ಮಾರ್ಟ್‌ಫೋನ್‌ ಸ್ವಲ್ಪ ದಪ್ಪವಾಗಿದ್ದು (7.4mm), ಹೊಳಪಿನ ಹಿಂಭಾಗವನ್ನು ಹೊಂದಿದೆ. ಇದು ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿದ್ದರೂ, ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ಮತ್ತು IP69 ರೇಟಿಂಗ್‌ಗಳನ್ನು ಪಡೆದುಕೊಂಡಿದೆ.

ಡಿಸ್‌ಪ್ಲೇ
ಡಿಸ್‌ಪ್ಲೇ ವಿಷಯಕ್ಕೆ ಬಂದರೆ, Samsung Galaxy F56 ಸ್ಮಾರ್ಟ್‌ಫೋನ್‌ 120Hz ರಿಫ್ರೆಶ್ ದರದೊಂದಿಗೆ 6.7-ಇಂಚಿನ ಪೂರ್ಣ HD+ ಸೂಪರ್ AMOLED+ ಡಿಸ್ಪ್ಲೇ, 1200 ನಿಟ್ಸ್ ವರೆಗಿನ ಗರಿಷ್ಠ ಬ್ರೈಟ್‌ನೆಸ್ ಮತ್ತು ವಿಷನ್ ಬೂಸ್ಟರ್ ತಂತ್ರಜ್ಞಾನವನ್ನು ಹೊಂದಿದೆ. ಇದಕ್ಕೆ ಹೋಲಿಸಿದರೆ, Vivo V50e ಸ್ಮಾರ್ಟ್‌ಫೋನ್‌ 120Hz ರಿಫ್ರೆಶ್ ದರ ಮತ್ತು 1800 ನಿಟ್ಸ್ ವರೆಗಿನ ಗರಿಷ್ಠ ಹೊಳಪಿನೊಂದಿಗೆ 6.77-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ.

Samsung Galaxy F56 vs Vivo V50e: ಯಾವುದು ಉತ್ತಮ ಆಯ್ಕೆ ನೋಡಿ!

ಕಾರ್ಯಕ್ಷಮತೆ
Samsung Galaxy F56 ಸ್ಮಾರ್ಟ್‌ಫೋನ್‌ 8GB LPDDR5X RAM ನೊಂದಿಗೆ Exynos 1480 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಉತ್ತಮ ಕಾರ್ಯಕ್ಷಮತೆಗಾಗಿ ವೇಪರ್ ಚೇಂಬರ್ ಕೂಲಿಂಗ್ ವ್ಯವಸ್ಥೆಯನ್ನು ಸಹ ಇದು ಒಳಗೊಂಡಿದೆ. ಇತ್ತ Vivo V50e ಸ್ಮಾರ್ಟ್‌ಫೋನ್‌ 8GB RAM ಮತ್ತು MediaTek Dimensity 7300 ಚಿಪ್‌ಸೆಟ್‌ನೊಂದಿಗೆ ಬರುತ್ತದೆ. ಎರಡೂ ಫೋನ್‌ಗಳು AI-ಚಾಲಿತ ಇಮೇಜ್ ಎಡಿಟಿಂಗ್ ಪರಿಕರಗಳನ್ನು ಹೊಂದಿವೆ.

ಬ್ಯಾಟರಿ
ಬ್ಯಾಟರಿ ವಿಷಯದಲ್ಲಿ, Samsung Galaxy F56 ಸ್ಮಾರ್ಟ್‌ಫೋನ್‌ ಸ್ಮಾರ್ಟ್‌ಫೋನ್‌ 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5000mAh ಬ್ಯಾಟರಿಯನ್ನು ಹೊಂದಿದೆ. ಆದರೆ, Vivo V50e ಸ್ಮಾರ್ಟ್‌ಫೋನ್‌ ದೊಡ್ಡದಾದ 5600 mAh ಬ್ಯಾಟರಿಯನ್ನು ಹೊಂದಿದ್ದು, 90W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಕ್ಯಾಮೆರಾ
Samsung Galaxy F56 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ನೊಂದಿಗೆ 50MP ಮುಖ್ಯ ಕ್ಯಾಮೆರಾ, 8MP ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಲೆನ್ಸ್ ಸೇರಿದಂತೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ. ಸೆಲ್ಫಿಗಳಿಗಾಗಿ ಇದು 12MP ಮುಂಭಾಗದ ಕ್ಯಾಮೆರಾವನ್ನು ಒಳಗೊಂಡಿದೆ.Vivo V50e ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ Sony ಸೆನ್ಸರ್‌ನೊಂದಿಗೆ 50MP ಮುಖ್ಯ ಕ್ಯಾಮೆರಾ ಮತ್ತು 8MP ಅಲ್ಟ್ರಾವೈಡ್ ಕ್ಯಾಮೆರಾವನ್ನು ಒಳಗೊಂಡಿರುವ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ವಿಶೇಷವಾಗಿ, ಇದು 50MP ಆಟೋಫೋಕಸ್ (AF) ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಒಟ್ಟಾರೆ ತೀರ್ಮಾನ
ಈ ಮೇಲಿನ ಪ್ರಮುಖ ವೈಶಿಷ್ಟ್ಯಗಳನ್ನು ಹೋಲಿಸಿದ ನಂತರ, Samsung Galaxy F56 ಸ್ಮಾರ್ಟ್‌ಫೋನ್‌ ಉತ್ತಮ ಪ್ರೊಸೆಸರ್ ಮತ್ತು ತೆಳುವಾದ ವಿನ್ಯಾಸವನ್ನು ಹೊಂದಿದೆ. ಆದರೆ, Vivo V50e ಸ್ಮಾರ್ಟ್‌ಫೋನ್‌ದೊಡ್ಡ ಬ್ಯಾಟರಿ, ವೇಗದ ಚಾರ್ಜಿಂಗ್ ಮತ್ತು ಉತ್ತಮ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ನಿಮ್ಮ ಆದ್ಯತೆಗಳು ಮತ್ತು ಅಗತ್ಯಗಳಿಗೆ ಅನುಗುಣವಾಗಿ ಈ ಎರಡೂ ಫೋನ್‌ಗಳು ವಿಭಿನ್ನ ಅನುಕೂಲಗಳನ್ನು ಹೊಂದಿವೆ. ಕ್ಯಾಮೆರಾ ಮತ್ತು ವೇಗದ ಚಾರ್ಜಿಂಗ್ ಮುಖ್ಯವಾಗಿದ್ದರೆ Vivo V50e ಉತ್ತಮ ಆಯ್ಕೆಯಾಗಬಹುದು, ಆದರೆ ಉತ್ತಮ ಕಾರ್ಯಕ್ಷಮತೆ ಮತ್ತು ವಿಶಿಷ್ಟ ವಿನ್ಯಾಸವನ್ನು ಬಯಸಿದರೆ Samsung Galaxy F56 ಪರಿಗಣಿಸಬಹುದು. ಈ ಕುರಿತಂತೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Samsung Galaxy F56 is backed by a 5000mAh battery that supports 45W fast charging. Whereas, the Vivo V50e is backed by a 5600 mAh battery, and it comes with 90W fast charging support.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+