Home
ಮೊಬೈಲ್

₹12,999ಕ್ಕೆ ಹೊಸ Samsung ಫೋನ್ ಲಾಂಚ್: 6,000mAh ಬ್ಯಾಟರಿ, 6 ವರ್ಷ ಅಪ್‌ಡೇಟ್ಸ್!

ಟೆಕ್ ದೈತ್ಯ Samsung ತನ್ನ ಹೊಸ Galaxy F70 ಸರಣಿಯ ಮೊದಲ ಸ್ಮಾರ್ಟ್‌ಫೋನ್ ಆಗಿ Samsung Galaxy F70e 5G ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇಂದು (ಫೆ.9) ಅಧಿಕೃತವಾಗಿ ಬಿಡುಗಡೆ ಮಾಡಿದೆ. ದೇಶದ ಬಜೆಟ್ 5G ವಿಭಾಗವನ್ನು ಗುರಿಯಾಗಿಸಿಕೊಂಡಿರುವ ಈ ಫೋನ್, ದೊಡ್ಡ ಬ್ಯಾಟರಿ, ಸ್ಮೂತ್ ಡಿಸ್ಪ್ಲೇ ಮತ್ತು ದೀರ್ಘಕಾಲದ ಸಾಫ್ಟ್‌ವೇರ್ ಬೆಂಬಲದೊಂದಿಗೆ ಗ್ರಾಹಕರ ಗಮನ ಸೆಳೆಯುವಂತಿದ್ದು, ಜೊತೆಗೆ ಆಕರ್ಷಕ ವಿನ್ಯಾಸ ಮತ್ತು ನಂಬಿಕಸ್ಥ ಕಾರ್ಯಕ್ಷಮತೆಯ ಸಮತೋಲನವನ್ನು ನೀಡುವ ಪ್ರಯತ್ನವಾಗಿದೆ. ಈ ಕುರಿತಂತೆ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.

Samsung Galaxy F70e 5G: ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Samsung Galaxy F70e 5G ಅನ್ನು ಎರಡು ವೇರಿಯಂಟ್‌ಗಳಲ್ಲಿ ಬಿಡುಗಡೆ ಮಾಡಲಾಗಿದೆ. 4GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಮೂಲ ಮಾದರಿಯ ಬೆಲೆ ₹12,999 ಆಗಿದ್ದು, 6GB RAM ಮತ್ತು 128GB ಸ್ಟೋರೇಜ್ ಇರುವ ಮೇಲ್ದರ್ಜೆ ಮಾದರಿಯ ಬೆಲೆ ₹14,999 ಎಂದು ನಿಗದಿಯಾಗಿದೆ. ಈ ಸ್ಮಾರ್ಟ್‌ಫೋನ್ ಫೆಬ್ರವರಿ 17ರಿಂದ Flipkart ಹಾಗೂ Samsung ಅಧಿಕೃತ ಆನ್‌ಲೈನ್ ಸ್ಟೋರ್‌ನಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ಮತ್ತು ಫೋನ್ ಲೈಮ್‌ಲೈಟ್ ಗ್ರೀನ್ ಮತ್ತು ಸ್ಪಾಟ್‌ಲೈಟ್ ಬ್ಲೂ ಎಂಬ ಎರಡು ಆಕರ್ಷಕ ಬಣ್ಣ ಆಯ್ಕೆಗಳು ಗ್ರಾಹಕರಿಗೆ ದೊರೆಯುತ್ತವೆ.

₹12,999ಕ್ಕೆ ಹೊಸ Samsung ಫೋನ್ ಲಾಂಚ್: 6,000mAh ಬ್ಯಾಟರಿ, 6ವರ್ಷ ಅಪ್‌ಡೇಟ್ಸ್

Samsung Galaxy F70e 5G: ಪ್ರಮುಖ ವೈಶಿಷ್ಟ್ಯಗಳು
ಹೊಸ Samsung Galaxy F70e 5G ಫೋನ್ ಪ್ರೀಮಿಯಂ ಲುಕ್ ನೀಡುವ ಲೆದರ್ ಫಿನಿಷ್ ಹಿಂಭಾಗವನ್ನು ಹೊಂದಿದ್ದು, ಪಿಲ್ ಆಕಾರದ ಕ್ಯಾಮೆರಾ ಮಾಡ್ಯೂಲ್‌ ಮೂಲಕ ವಿಭಿನ್ನ ಶೈಲಿಯನ್ನು ತೋರಿಸುತ್ತದೆ. ಮುಂಭಾಗದಲ್ಲಿ ವಾಟರ್‌ಡ್ರಾಪ್ ನಾಚ್ ಹೊಂದಿರುವ ದೊಡ್ಡ ಪರದೆ ನೀಡಲಾಗಿದೆ. ಈ ಫೋನ್‌ನಲ್ಲಿ 6.7 ಇಂಚಿನ HD+ LCD ಡಿಸ್ಪ್ಲೇ(720x1,600 ಪಿಕ್ಸೆಲ್‌ಗಳು) ಇದ್ದು, 120Hz ರಿಫ್ರೆಶ್ ರೇಟ್, 800 ನಿಟ್ಸ್ ಪೀಕ್ ಬ್ರೈಟ್ನೆಸ್ ಮತ್ತು ಉತ್ತಮ ವೀಕ್ಷಣಾ ಅನುಭವವನ್ನು ಒದಗಿಸುತ್ತದೆ. ದಿನನಿತ್ಯದ ಬಳಕೆ, ವೀಡಿಯೊ ಸ್ಟ್ರೀಮಿಂಗ್ ಮತ್ತು ಸಾಮಾಜಿಕ ಮಾಧ್ಯಮಕ್ಕೆ ಇದು ಸೂಕ್ತವಾಗಿದೆ ಎಂದು ಕಂಪೆನಿ ತಿಳಿಸಿದೆ.

ಕಾರ್ಯಕ್ಷಮತೆಗಾಗಿ Samsung Galaxy F70e 5G ನಲ್ಲಿ MediaTek Dimensity 6300 ಆಕ್ಟಾ-ಕೋರ್ ಪ್ರೊಸೆಸರ್ ಬಳಕೆ ಮಾಡಲಾಗಿದೆ. ಗರಿಷ್ಠ 2.4GHz ಕ್ಲಾಕ್ ಸ್ಪೀಡ್ ಹೊಂದಿರುವ ಈ ಚಿಪ್‌ಸೆಟ್, ARM Mali G57 GPU ಜೊತೆಗೆ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಗರಿಷ್ಠ 6GB LPDDR4x RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಇದೆ. ಸಾಫ್ಟ್‌ವೇರ್ ವಿಬಾಗದಲ್ಲಿ, Android 16 ಆಧಾರಿತ One UI 8 ಮೇಲೆ ಕಾರ್ಯನಿರ್ವಹಿಸುವ ಫೋನ್, ಆರು ವರ್ಷಗಳ OS ಅಪ್‌ಡೇಟ್‌ಗಳು ಮತ್ತು ಭದ್ರತಾ ಅಪ್‌ಡೇಟ್‌ಗಳ ಭರವಸೆಯನ್ನು ನೀಡಿರುವುದು ವಿಶೇಷವಾಗಿದೆ.

₹12,999ಕ್ಕೆ ಹೊಸ Samsung ಫೋನ್ ಲಾಂಚ್: 6,000mAh ಬ್ಯಾಟರಿ, 6ವರ್ಷ ಅಪ್‌ಡೇಟ್ಸ್

ಕ್ಯಾಮೆರಾ ವಿಭಾಗದಲ್ಲಿ Samsung Galaxy F70e 5G ಹಿಂಭಾಗದಲ್ಲಿ 50MP ಪ್ರೈಮರಿ ಕ್ಯಾಮೆರಾ ಮತ್ತು 2MP ಡೆಪ್ತ್ ಸೆನ್ಸರ್ ಹೊಂದಿರುವ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ನೀಡುತ್ತದೆ. ಸೆಲ್ಫಿ ಮತ್ತು ವೀಡಿಯೊ ಕಾಲ್‌ಗಳಿಗಾಗಿ ಮುಂಭಾಗದಲ್ಲಿ 8MP ಕ್ಯಾಮೆರಾ ನೀಡಲಾಗಿದೆ. ಬ್ಯಾಟರಿ ವಿಭಾಗದಲ್ಲಿ, ಈ ಸ್ಮಾರ್ಟ್‌ಫೋನ್‌ 6,000mAh ದೊಡ್ಡ ಬ್ಯಾಟರಿಯನ್ನು ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ ದೀರ್ಘಕಾಲ ಬಳಕೆಯ ಶಕ್ತಿ ಹೊಂದಿದೆ. ಇತ್ತೀಚಿನ ಸಂಪರ್ಕ ವೈಶಿಷ್ಟ್ಯಗಳನ್ನು ಹೊಂದಿರುವ ಈ ಫೋನ್ 167.4x77.4x8.2mm ಅಳತೆಯನ್ನು ಹೊಂದಿದ್ದು, ಸುಮಾರು 199g ತೂಗುತ್ತದೆ.

ಇನ್ನು ಗಮನಿಸಬೇಕಾದ ಮತ್ತೊಂದು ವಿಷಯವೆಂದರೆ, AnTuTu ಬೆಂಚ್‌ಮಾರ್ಕಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಈ ಫೋನ್ ಸುಮಾರು 6,23,000 ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಒಟ್ಟಾರೆಯಾಗಿ, ಹೊಸ Samsung Galaxy F70e 5G ಫೋನ್ ದೊಡ್ಡ ಬ್ಯಾಟರಿ, ಸ್ಮೂತ್ 120Hz ಡಿಸ್ಪ್ಲೇ, ನಂಬಿಕಸ್ಥ ಪ್ರೊಸೆಸರ್ ಮತ್ತು ದೀರ್ಘಕಾಲದ ಸಾಫ್ಟ್‌ವೇರ್ ಬೆಂಬಲದೊಂದಿಗೆ ಬಜೆಟ್ 5G ಸ್ಮಾರ್ಟ್‌ಫೋನ್ ಹುಡುಕುತ್ತಿರುವ ಭಾರತೀಯ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿ ಕಾಣಿಸುತ್ತದೆ. ವಿಶೇಷವಾಗಿ, ಕಡಿಮೆ ಬೆಲೆಯಲ್ಲಿ Samsung ಬ್ರ್ಯಾಂಡ್‌ನ ವಿಶ್ವಾಸಾರ್ಹತೆ ಮತ್ತು ಮುಂದಿನ ವರ್ಷಗಳ ಅಪ್‌ಡೇಟ್ ಭರವಸೆ ಬೇಕಾದವರಿಗೆ ಈ ಫೋನ್ ಗಮನ ಸೆಳೆಯುವ ಸಾಧ್ಯತೆ ಹೆಚ್ಚು.

Best Mobiles in India

English summary
Samsung has launched the Galaxy F70e 5G in India starting at ₹12,999, targeting the budget 5G segment. The smartphone features a large 6,000mAh battery, smooth display performance, and promises up to six years of software and security updates, making it a strong long-term option for budget buyers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+