ಸ್ಯಾಮ್‌ಸಂಗ್‌ ಗೆಲಾಕ್ಸಿ ಗ್ರ್ಯಾಂಡ್ 2 ದೇಶೀಯ ಮಾರುಕಟ್ಟೆಯಲ್ಲಿ ಲಭ್ಯ

Written By:

ಸ್ಯಾಮ್‌ಸಂಗ್‌ ತನ್ನ ಗೆಲಾಕ್ಸಿ ಗ್ರ್ಯಾಂಡ್ ಸ್ಮಾರ್ಟ್‌ಫೋನಿನ ಯಶಸ್ಸಿನ ಬಳಿಕ ಬಿಡುಗಡೆ ಮಾಡಿದ ಗ್ರ್ಯಾಂಡ್ 2 ಸ್ಮಾರ್ಟ್‌ಫೋನ್‌ ಈಗ ಭಾರತದ ಆನ್‌ಲೈನ್‌ ಮಾರುಕಟ್ಟೆಯಲ್ಲಿ 22,999 ಬೆಲೆಯಲ್ಲಿ ಲಭ್ಯವಿದೆ.ಡ್ಯುಯಲ್‌ ಸಿಮ್‌ ಹಾಕಬಹುದಾದ ಸ್ಮಾರ್ಟ್‌ಫೋನ್‌ ಇದಾಗಿದ್ದು ಜನವರಿಯಲ್ಲಿ ಆನ್‌ಲೈನ್ ಶಾಪಿಂಗ್‌ ಮತ್ತು ರಿಟೇಲ್‌ ಅಂಗಡಿಯಲ್ಲಿ ದೊರೆಯಲಿದೆ ಎಂದು ಸ್ಯಾಮ್‌ಸಂಗ್‌ ಈ ಸ್ಮಾರ್ಟ್‌‌ಫೋನನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಹೇಳಿತ್ತು.

ಈ ಸ್ಮಾರ್ಟ್‌ಫೋನ್‌ ಜೆಲ್ಲಿಬೀನ್‌ ಅಪ್‌ಡೇಟ್‌ ಆವೃತ್ತಿ ಓಎಸ್‌ ಹೊಂದಿದ್ದರೂ ಸದ್ಯದಲ್ಲೇ ಕಿಟ್‌ಕ್ಯಾಟ್‌ ಓಎಸ್‌ಗೆ ಅಪ್‌ಡೇಟ್‌ ಮಾಡಬಹುದು ಎಂದು ಸ್ಯಾಮ್‌ಸಂಗ್‌ ಹೇಳಿದೆ. ಮುಂದಿನ ಪುಟದಲ್ಲಿ ಫೋನಿನ ವಿಶೇಷತೆಗಳ ಮಾಹಿತಿ ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.


ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ :ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
   ಸ್ಕ್ರೀನ್‌, ಓಎಸ್‌, ಗಾತ್ರ:
  

ಸ್ಕ್ರೀನ್‌, ಓಎಸ್‌, ಗಾತ್ರ:


5.25 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಎಚ್‌ಡಿ ಸ್ಕ್ರೀನ್‌(1280x720 ಪಿಕ್ಸೆಲ್‌,280 ಪಿಪಿಐ), ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್‌ ಓಎಸ್‌ ಸ್ಮಾರ್ಟ್‌ಫೋನ್‌ ಒಳಗೊಂಡಿದೆ.146.8x75.3x8.9 ಮಿ.ಮೀಟರ್‌ ಗಾತ್ರ, 163 ಗ್ರಾಂ ತೂಕವನ್ನು ಸ್ಮಾರ್ಟ್‌ಫೋನ್‌ ಹೊಂದಿದೆ.

  ಕ್ಯಾಮೆರಾ ಮತ್ತು ಸೆನ್ಸರ್‌:
  

ಕ್ಯಾಮೆರಾ ಮತ್ತು ಸೆನ್ಸರ್‌:


ಎಲ್‌ಇಡಿ ಫ್ಲ್ಯಾಶ್‌ ಹೊಂದಿರುವ 8 ಎಂಪಿ ಹಿಂದುಗಡೆ ಕ್ಯಾಮೆರಾ,1.9 ಎಂಪಿ ಮುಂದುಗಡೆ ಕ್ಯಾಮೆರಾವನ್ನು ಸ್ಮಾರ್ಟ್‌ಫೋನ್‌‌ ಹೊಂದಿದ್ದು, ಎಕ್ಸಲರೋಮೀಟರ್‌, ಗೈರೋಸ್ಕೋಪ್‌,ಪ್ರಾಕ್ಸಿಮಿಟಿ,ಕಂಪಾಸ್‌ ಸೆನ್ಸರ್‌ಗಳನ್ನು ಸ್ಮಾರ್ಟ್‌‌ಫೋನ್‌ ಒಳಗೊಂಡಿದೆ.

  ಪ್ರೊಸೆಸರ್‌,RAM ಮತ್ತು ಮೆಮೊರಿ:
  

ಪ್ರೊಸೆಸರ್‌,RAM ಮತ್ತು ಮೆಮೊರಿ:


1.2GHz ಕ್ವಾಡ್‌ ಕೋರ್‌ ಪ್ರೊಸೆಸರ್‌,1.5 ಜಿಬಿ RAM‌ ಒಳಗೊಂಡಿರುವ ಸ್ಮಾರ್ಟ್‌ಫೋನ್‌ 8 ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿದ್ದು,64 ಜಿಬಿವರೆಗೆ ಹೆಚ್ಚುವರಿ ಮೆಮೊರಿಯನ್ನು ಸೇರಿಸಬಹುದಾಗಿದೆ.

  ಬ್ಯಾಟರಿ ಮತ್ತು ಕನೆಕ್ಟಿವಿಟಿ ವಿಶೇಷತೆ:
  

ಬ್ಯಾಟರಿ ಮತ್ತು ಕನೆಕ್ಟಿವಿಟಿ ವಿಶೇಷತೆ:


2600 mAh ಬ್ಯಾಟರಿಯನ್ನು ಹೊಂದಿದ್ದು,3ಜಿ ವೈಫೈ,ಬ್ಲೂಟೂತ್‌,ಜಿಪಿಎಸ್‌,ಎ-ಜಿಪಿಎಸ್‌, ಗ್ಲೋನಾಸ್‌ ಕನೆಕ್ಟಿವಿಟಿ ವಿಶೇಷತೆಯನ್ನು ಸ್ಮಾರ್ಟ್‌ಫೋನ್‌ ಒಳಗೊಂಡಿದೆ.

 ಸ್ಯಾಮ್‌ಸಂಗ್‌ ಗೆಲಾಕ್ಸಿ ಗ್ರ್ಯಾಂಡ್ 2 ದೇಶೀಯ ಮಾರುಕಟ್ಟೆಯಲ್ಲಿ ಲಭ್ಯ
  

ಸ್ಯಾಮ್‌ಸಂಗ್‌ ಗೆಲಾಕ್ಸಿ ಗ್ರ್ಯಾಂಡ್ 2 ದೇಶೀಯ ಮಾರುಕಟ್ಟೆಯಲ್ಲಿ ಲಭ್ಯ


ಸ್ಯಾಮ್‌ಸಂಗ್‌ ಗೆಲಾಕ್ಸಿ ಗ್ರ್ಯಾಂಡ್ 2 

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot