ಸ್ಯಾಮ್‌ಸಂಗ್‌ನಿಂದ 5.2ಇಂಚಿನ ಸ್ಮಾರ್ಟ್‌ಫೋನ್ ಬಿಡುಗಡೆ
ಸ್ಯಾಮ್‌ಸಂಗ್ ಗೆಲಾಕ್ಸಿ ಗ್ರ್ಯಾಂಡ್ ಡ್ಯುಯೊಸ್ ಯಶಸ್ಸಿನ ನಂತರ ಈಗ ಹೊಸ ಸ್ಮಾರ್ಟ್‌ಫೋನ್‌ನ್ನು ಬಿಡುಗಡೆ ಮಾಡಿದೆ. ಸ್ಯಾಮ್‌ಸಂಗ್ ಗೆಲಾಕ್ಸಿ ಗ್ರ್ಯಾಂಡ್ 2 ಹೆಸರಿನ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು ಸದ್ಯದಲ್ಲೇ ವಿಶ್ವದ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.
ಹೊಸ ಸ್ಮಾರ್ಟ್‌ಫೋನ್ ಹೆಚ್‌ಡಿ ಸ್ಕ್ರೀನ್ ಹೊಂದಿದ್ದು, ಗೆಲಾಕ್ಸಿ ಎಸ್4 ಮಿನಿಯಲ್ಲಿರುವಂತೆ 1.5GB ರ್‍ಯಾಮ್‌ನ್ನು ಹೊಂದಿದೆ. ಈ ಸ್ಮಾರ್ಟ್‌ಫೋನನ್ನು ಭಾರತದಲ್ಲಿ ಯಾವಾಗ ಬಿಡುಗಡೆ ಮಾಡುತ್ತದೆ ಎನ್ನುವ ಮಾಹಿತಿಯನ್ನು ಪ್ರಕಟಿಸಿದಿದ್ದರೂ, ಮೂವತ್ತು ಸಾವಿರದೊಳಗೆ ಈ ಸ್ಮಾರ್ಟ್‌ಫೋನ್ ಬೆಲೆಯನ್ನು ನಿಗದಿಪಡಿಸಬಹುದು ಎಂದು ಅಂದಾಜಿಸಲಾಗಿದೆ.
ಮುಂದಿನ ಪುಟದಲ್ಲಿ ಹೊಸ ಸ್ಮಾರ್ಟ್‌ಫೋನಿನ ವಿಶೇಷತೆಯನ್ನು ವಿವರಿಸಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.
ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ
ಇದನ್ನೂ ಓದಿ: ಗುಣಮಟ್ಟದ ಕ್ಯಾಮೆರಾವಿರುವ ಎಂಟು ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು

ಸ್ಯಾಮ್‌ಸಂಗ್ ಗೆಲಾಕ್ಸಿ ಗ್ರ್ಯಾಂಡ್ 2 ಬಿಡುಗಡೆ
ಹೊಸ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಜೆಲ್ಲಿಬೀನ್ 4.3ಆಪ್‌ಡೇಟ್ ಆವೃತ್ತಿಯನ್ನು ಹೊಂದಿದೆ.146.8x75.3x8.9 ಮಿ.ಮೀ ಗಾತ್ರ,163 ಗ್ರಾಂ ತೂಕವನ್ನು ಹೊಂದಿದೆ.

ಸ್ಯಾಮ್‌ಸಂಗ್ ಗೆಲಾಕ್ಸಿ ಗ್ರ್ಯಾಂಡ್ 2 ಬಿಡುಗಡೆ
ಸ್ಮಾರ್ಟ್‌ಫೋನ್ 1.2GHz ಕ್ವಾಡ್ ಕೋರ್ ಪ್ರೊಸೆಸರ್,1.5GB ರ್‍ಯಾಮ್,8GB ಆಂತರಿಕ ಮೆಮೊರಿ, 64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ವನ್ನು ಗೆಲಾಕ್ಸಿ ಗ್ರ್ಯಾಂಡ್2 ಹೊಂದಿದೆ.

ಸ್ಯಾಮ್‌ಸಂಗ್ ಗೆಲಾಕ್ಸಿ ಗ್ರ್ಯಾಂಡ್ 2 ಬಿಡುಗಡೆ
ಹಿಂದುಗಡೆ ಎಲ್‌ಇಡಿ ಫ್ಲ್ಯಾಶ್ ಹೊಂದಿರುವ 8 ಎಂಪಿ, ಮುಂದುಗಡೆ 1.9 ಎಂಪಿ ಕ್ಯಾಮೆರಾ ಸ್ಮಾರ್ಟ್‌ಫೋನಲ್ಲಿದೆ. ಗೆಲಾಕ್ಸಿ ಗ್ರ್ಯಾಂಡ್2 2600mAh ಬ್ಯಾಟರಿ ಹೊಂದಿದೆ.

ಸ್ಯಾಮ್‌ಸಂಗ್ ಗೆಲಾಕ್ಸಿ ಗ್ರ್ಯಾಂಡ್ 2 ಬಿಡುಗಡೆ
ಸ್ಟೋರಿ ಆಲ್ಬಂ,ಎಸ್ ಟ್ರಾನ್ಸ್ಲೇಟರ್,ಎಸ್ ಟ್ರಾವೆಲ್,ಸೌಂಡ್ ಆಂಡ್ ಶಾಟ್, ಸ್ಯಾಮ್‌ಸಂಗ್ ಹಬ್,ಗ್ರೂಪ್ ಪ್ಲೇ,ಸ್ಯಾಮ್‌ಸಂಗ್ ಲಿಂಕ್‌ನಂತಹ ವಿಶೇಷತೆಗಳನ್ನು ಹೊಸ ಸ್ಮಾರ್ಟ್‌ಫೋನ್ ಹೊಂದಿದೆ.

ಸ್ಯಾಮ್‌ಸಂಗ್ ಗೆಲಾಕ್ಸಿ ಗ್ರ್ಯಾಂಡ್ 2 ಬಿಡುಗಡೆ
ವಿಶೇಷತೆ:
ಡ್ಯುಯಲ್ ಸಿಮ್ (ಜಿಎಸ್‌ಎಂ+ಜಿಎಸ್‌ಎಂ)
5.2 ಇಂಚಿನ ಎಚ್‌ಡಿ ಟಿಎಫ್‌ಟಿ ಸ್ಕ್ರೀನ್(720x1280 ಪಿಕ್ಸೆಲ್)
4.3 ಜೆಲ್ಲಿ ಬೀನ್ ಓಎಸ್
1.2GHz ಕ್ವಾಡ್ ಕೋರ್ ಪ್ರೊಸೆಸರ್
1.5GB ರ್‍ಯಾಮ್
8 ಎಂಪಿ ಹಿಂದುಗಡೆ ಕ್ಯಾಮೆರಾ
1.9 ಎಂಪಿ ಮುಂದುಗಡೆ ಕ್ಯಾಮೆರಾ
8GB ಆಂತರಿಕ ಮೆಮೊರಿ
64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್/ಎಜಿಪಿಎಸ್,ಮೈಕ್ರೋ ಯುಎಸ್‌ಬಿ,
2600mAh ಬ್ಯಾಟರಿ


Click it and Unblock the Notifications








