ಸ್ಯಾಮ್‌ಸಂಗ್ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಅಧಿಕೃತವಾಗಿ ಬಿಡುಗಡೆ
ಸ್ಯಾಮ್‌ಸಂಗ್‌ನ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಗೆಲಾಕ್ಸಿ ಗ್ರ್ಯಾಂಡ್ ನಿಯೋ ಅಧಿಕೃತವಾಗಿ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನಿಗೆ ಸ್ಯಾಮ್‌ಸಂಗ್ 17,901ರೂಪಾಯಿ ಬೆಲೆಯನ್ನು ನಿಗದಿ ಮಾಡಿದೆ.
ಈ ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗುವ ಮೊದಲೇ ಆನ್‌ಲೈನ್ ಶಾಪಿಂಗ್ ತಾಣದಲ್ಲಿ ಲಭ್ಯವಾಗಿತ್ತು.themobilestoreನಲ್ಲಿ ಈ ಸ್ಮಾರ್ಟ್‌ಫೋನಿಗೆ 18,299 ರೂಪಾಯಿ ಬೆಲೆಯನ್ನು ನಿಗದಿ ಮಾಡಿತ್ತು.
43.7x77.1x9.6 ಮಿ.ಮೀ ಗಾತ್ರ,163 ಗ್ರಾಂ ತೂಕದ ಸ್ಮಾರ್ಟ್‌ಫೋನ್ ಎಕ್ಸಲರೋಮೀಟರ್,ಕಂಪಾಸ್,ಪ್ರಾಕ್ಸಿಮಿಟಿ ಸೆನ್ಸರ್ ಒಳಗೊಂಡಿದೆ. 5 ಇಂಚಿನ ಟಿಎಫ್‌ಟಿ WVGA ಸ್ಕ್ರೀನ್, ಕ್ವಾಡ್ ಕೋರ್ ಪ್ರೊಸೆಸರ್ 1GB RAM,16ಜಿಬಿ ಆಂತರಿಕ ಮೆಮೊರಿಯನ್ನು ಸ್ಮಾರ್ಟ್‌ಫೋನ್ ಒಳಗೊಂಡಿದೆ.

ಸ್ಯಾಮ್‌ಸಂಗ್ ಗೆಲಾಕ್ಸಿ ಗ್ರ್ಯಾಂಡ್ ನಿಯೋ
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಟಿಎಫ್‌ಟಿ WVGA ಸ್ಕ್ರೀನ್(480 x 800 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.2GHz ಕ್ವಾಡ್ ಕೋರ್ ಪ್ರೊಸೆಸರ್
1GB RAM
8/16ಜಿಬಿ ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
64ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್
2,100mAh ಬ್ಯಾಟರಿ





Click it and Unblock the Notifications








