ಸ್ಯಾಮ್ ಸಂಗ್ ನಲ್ಲಿ ಬರಲಿದೆ ಎಕ್ಸಿನೊಸ್ 4412 ಪ್ರೊಸೆಸರ್

|
ಸ್ಯಾಮ್ ಸಂಗ್ ನಲ್ಲಿ ಬರಲಿದೆ ಎಕ್ಸಿನೊಸ್ 4412 ಪ್ರೊಸೆಸರ್

ಸ್ಯಾಮ್ ಸಂಗ್ ಗೆಲಾಕ್ಸಿ S III ಸ್ಯಾಮ್ ಸಂಗ್ ನ ಹೊಸ ಎಕ್ಸಿನೊಸ್ 4412 ಪ್ರೊಸೆಸರ್ ಜೊತೆ ಬರಲಿದೆ ಎಂದು ವರದಿ ಮೂಲಗಳು ತಿಳಿಸಿವೆ. 32nm ಎಕ್ಸಿನೊಸ್ ಕ್ಯೊಡ್ ಕೋರ್ ಪ್ರೊಸೆಸರ್ ನಿಂದಾಗಿ ಇದರ ಸ್ಪೀಡ್ 1.5GHz ಆಗಿದೆ. ಆದರೆ ಈ ಪ್ರೊಸೆಸರ್ ಸಧ್ಯದಲ್ಲಿ ಪರೀಕ್ಷೆಯ ಘಟ್ಟದಲ್ಲಿದೆ. ಒಂದು ವೇಳೆ ಇದು ಬಿಡುಗಡೆ ಆದರೆ ಈ ಫೋನ್ ಶೀಘ್ರವೆ ಸಾಕಷ್ಟು ಜನಪ್ರಿಯತೆಯನ್ನು ಗಳಸಲಿದೆ.

ಸ್ಯಾಮ್ ಸಂಗ್ ಗೆಲಾಕ್ಸಿ S III ನ ಪ್ರೊಸೆಸರ್ ಮಾಲಿ-TS04 ಗ್ರಾಫಿಕ್ ಪ್ರೊಸೆಸರ್ ಗೆ ಹೋಲಿಕೆ ಆಗುತ್ತಿದ್ದು , ಹಿಂದಿನ ಪ್ರೊಸೆಸರ್ ಕ್ಕಿಂತ 5 ಪಟ್ಟು ಅಧಿಕ ವೇಗವಾಗಿ ಕಾರ್ಯ ನಿರ್ವಹಿಸಲಿದೆ ಎಂದು ತಿಳಿದು ಬಂದಿದೆ. ಇದರ ಬಿಡುಗಡೆಯು ಫೆಬ್ರವರಿಯಲ್ಲಿ ಆಗಲಿದೆ ಎಂದು ಹೇಳಲಾಗುತ್ತಿದೆ.ಬರಲಿರುವ ಈ ಮೊಬೈಲ್ ನಲ್ಲಿ ಬಳಸಿರುವ ಪ್ರೊಸೆಸರ್ ಬಗ್ಗೆಯೆ ಜನರು ಮಾತನಾಡುತ್ತಿದ್ದು, ಇದು ಕೋರ್ ಕೋಡ್ ಡಿಸೈನ್ ಹೊಂದಿದೆ ಎಂದು ಸಹ ಹೇಳಲಾಗುತ್ತಿದೆ.

ಈ ಸ್ಯಾಮ್ ಸಂಗ್ ಮೊಬೈಲ್ ಬಂದರೆ ನಾವಿಡಿಯಾದ ಟೆಗ್ರಾ 3 ಕೋಡ್ ಕೋರ್ ಗೆ ಸ್ಪರ್ಧಿಯಾಗಲಿದೆ. ಈ ಮೊಬೈಲ್ ಅಧಿಕ ಸಾಮರ್ಥ್ಯವನ್ನು ಹೊಂದಿದ್ದು ಜನರ ನಿರೀಕ್ಷೆಯನ್ನು ಹುಸಿ ಮಾಡುವುದಿಲ್ಲ ಎಂಬ ಭರವಸೆ ಗ್ರಾಹಕರಿಗೆ ಇದೆ. ಇದನ್ನು ಎಷ್ಟರ ಮಟ್ಟಿಗೆ ಸ್ಯಾಮ್ ಸಂಗ್ ಈ ಮೊಬೈಲ್ ತುಂಬಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X