Samsung , ಇಂದೇ ಲಾಂಚ್ ಆಗಲಿದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ F55: ಏನಿರಲಿವೆ ಫೀಚರ್ಸ್, ಬೆಲೆ?
ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋನ್‌ಗಳು (Samsung Galaxy Phone) ವಿಶೇಷವಾದ ಬೇಡಿಕೆ ಹೊಂದಿವೆ. ಈ ನಡುವೆ ಸ್ಯಾಮ್‌ಸಂಗ್ ಗ್ಯಾಲಕ್ಸಿ F55 ಸ್ಮಾರ್ಟ್‌ಫೋನ್ (Samsung Galaxy F55 Smartphone) ಅನ್ನು ಇದೀಗ ಇಂದೇ ಭಾರತದಲ್ಲಿ ಲಾಂಚ್ ಮಾಡಲು ಸಂಸ್ಥೆ ಮುಂದಾಗಿದೆ.
ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ ತನ್ನ ಬಹುನಿರೀಕ್ಷಿತ F55 5Gಯನ್ನು ಇಂದು ಭಾರತದಲ್ಲಿ ಲಾಂಚ್ ಮಾಡಲು ಸಿದ್ಧವಾಗಿದೆ. ಈ ಮೊಬೈಲ್ ಅನ್ನು ಈ ತಿಂಗಳ ಆರಂಭದಲ್ಲಿಯೇ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು ಆದರೆ ಸ್ವಲ್ಪ ವಿಳಂಬ ಮಾಡಿ ತಿಂಗಳಾಂತ್ಯದಲ್ಲಿ ಬಿಡುಗಡೆ ಮಾಡಲು ಸಿದ್ದ ಮಾಡಿಕೊಂಡಿದೆ. ಈ ಮೊಬೈಲ್ ಕುರಿತಾಗಿ ಇನ್ನೂ ಹೆಚ್ಚಿನ ವಿವರಗಳನ್ನ ತಿಳಿಯಲು ಈ ಲೆಖನವನ್ನು ಸಂಪೂರ್ಣ ಓದಿ.

ಗ್ಯಾಲಕ್ಸಿ F55 5G ಮೊಬೈಲ್‌ನ ದೊಡ್ಡ ಹೈಲೈಟ್ ಅಂದರೆ ಅದರ ವೇಗನ್ ಲೆದರ್ ಬ್ಯಾಕ್ ಪ್ಯಾನೆಲ್. ಈ ಮೊಬೈಲ್ ಅನ್ನು 2024ರ ಅತ್ಯಂತ ಹಗುರವಾದ ವೇಗನ್ ಲೆದರ್ ಸ್ಮಾರ್ಟ್‌ಫೋನ್ ಎಂದು ಕೂಡ ಕರೆಯಲಾಗಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ F55 5G ಕಳೆದ ತಿಂಗಳು ಚೀನಾದಲ್ಲಿ ಬಿಡುಗಡೆಯಾಗಿರುವ ಗ್ಯಾಲಕ್ಸಿ C55 5Gಯ ಮುಂದುವರೆದ ವರ್ಶನ್ ನಂತೆ ಕಂಡು ಬಂದಿದೆ.
ಸ್ಯಾಮ್‌ಸಂಗ್ F55 5G ಲಾಂಚ್ ಸಮಯ ಹಾಗೂ ಭಾರತದಲ್ಲಿನ ಬೆಲೆ:
ಸ್ಯಾಮ್‌ಸಂಗ್ ಗ್ಯಾಲಕ್ಸಿ F55 5G ಇಂದು (27-05-2024) ರ ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಬಿಡುಗಡೆಯಾಗುತ್ತಿದ್ದು, ಜನಪ್ಇರಿಯ ಇ-ಮಾರ್ಕೆಟ್ ಸಂಸ್ಥೆಯಾಗಿರುವ ಫ್ಲಿಪ್‌ಕಾರ್ಟ್ ಮೂಲಕ ಮಾರಾಟ ಆರಂಭಿಸಲಿದೆ. ಇನ್ನೂ ಈ ಮೊಬೈಲ್‌ನ ಮಾರಾಟ ಇಂದು ಸಂಜೆ 7.00 ಗಂಟೆಯಿಂದ ಪ್ರಾರಂಭವಾಗಲಿದೆ.
ಇದರ ಜೊತೆಗೆ ಕೆಲವು ಆಫರ್‌ಗಳನ್ನು ಸಂಸ್ಥೆ ನೀಡಿದ್ದು, ಇಂದು ಸಂಜೆ 7 ಗಂಟೆಗೆ ಆರಂಭಿಕ ಮಾರಾಟದ ಸಮಯದಲ್ಲಿ ಈ ಮೊಬೈಲ್ ಅನ್ನು ಖರೀದಿಸುವ ಗ್ರಾಹಕರು ಕೇವಲ 1,999 ರೂಗಳಿಗೆ ಗ್ಯಾಲಕ್ಸಿ Fit 3 ಹಾಗೂ 45W ಟ್ರಾವೆಲ್ ಅಡಾಪ್ಟರ್ ಅನ್ನು 499 ರೂ. ಗಳಿಗೆ ಖರೀದಿಸಬಹುದಾಗಿದೆ ಎಂದು ಸ್ಯಾಮ್‌ಸಂಗ್ ಸಂಸ್ಥೆ ಧೃಡಪಡಿಸಿದೆ. ಭಾರತದಲ್ಲಿ ಈ ಮೊಬೈಲ್‌ನ ಬೆಲೆ 30,000 ರೂ. ಆರಂಭಿಕ ಬೆಲೆಯಲ್ಲಿ ಪ್ರಾರಂಭವಾಗಲಿದೆ.
ಸ್ಯಾಮ್ಸ್‌ಸಂಗ್ ಗ್ಯಾಲಕ್ಸಿ F55 5G ಫೀಚರ್ಸ್:
ಸ್ಯಾಮ್ಸ್‌ಸಂಗ್ ಗ್ಯಾಲಕ್ಸಿ F55 5G ಮೊಬೈಲ್ ಸ್ನಾಪ್‌ಡ್ರಾಗನ್ 7 Gen 1 SoC ಜೊತೆಗೆ 8GB RAM ಮತ್ತು 256GB ಸ್ಟೋರೆಜ್ ಸಾಮರ್ಥ್ಯ ಹೊಂದಿದ್ದು. ಮೈಕ್ರೋ SD ಕಾರ್ಡ್ ಮೂಲಕ ವಿಸ್ತರಿಸಬಹುದಾದ ಅವಕಾಶವನ್ನು ಕೂಡ ನೀಡಲಾಗಿದೆ. ಇನ್ನು ಈ ಮೊಬೈಲ್ 120Hz ರಿಫ್ರೆಶ್ ದರದೊಂದಿಗೆ 6.7-ಇಂಚಿನ ಫುಲ್ ಹೆಚ್‌ಡಿ + ಅಮೋಲ್ಡ್ (AMOLED) ಡಿಸ್‌ಪ್ಲೇ ಹೊಂದಿರಲಿದೆ.
ಇದರ ಜೊತೆಗೆ ಇತ್ತೀಚೆಗೆ ಚೀನಾದಲ್ಲಿ ಬಿಡುಗಡೆ ಹೊಂದಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ C55 ಮೊಬೈಲ್ 5,000 mAh ಬ್ಯಾಟರಿ ಜೊತೆಗೆ 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದುಕೊಂದಿದೆ. ಗ್ಯಾಲಕ್ಸಿ C55 5G OIS ಜೊತೆಗೆ 50 MP ಪ್ರಾಥಮಿಕ ಸೆನ್ಸಾರ್ ಕ್ಯಾಮೆರಾ, 5 MP ಅಲ್ಟ್ರಾವೈಡ್ ಲೆನ್ಸ್ ಮತ್ತು 2 MP ಮ್ಯಾಕ್ರೋ ಘಟಕವನ್ನು ಹೊಂದಿದೆ. ಮುಂಭಾಗದಲ್ಲಿ 50MP ಸೆಳ್ಫಿ ಕ್ಯಾಮೆರಾ ವ್ಯವಸ್ಥೆಯನ್ನು ಈ ಮೊಬೈಲ್ ಪಡೆದುಕೊಂಡಿದೆ.
ಕನೆಕ್ಟಿವಿಟಿ ಆಯ್ಕೆಗಳನ್ನು ನೋಡುವುದಾದರೆ ಈ ಮೊಬೈಲ್ Wi-Fi, ಬ್ಲೂಟೂತ್, 4G LTE ಆಯ್ಕೆ ಹೊಂದಿದೆ, ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೌಲಭ್ಯ ಪಡೆದುಕೊಂಡಿದೆ, USB ಟೈಪ್-C ಪೋರ್ಟ್ ಸೇರಿದಂತೆ ಇನ್ನೂ ಅನೇಕ ಅಂಶಗಳನ್ನು ಒಳಗೊಂಡಿದೆ. ಈ ಫೋನ್ ಆಂಡ್ರಾಯ್ಡ್-14 ಆಧಾರಿತ One UI 6.1ನಲ್ಲಿ ಚಾಲನೆ ಪಡೆದುಕೊಳ್ಳಲಿದೆ. ಸ್ಯಾಮ್‌ಸಂಗ್ 4 ವರ್ಷಗಳ ಆಂಡ್ರಾಯ್ಡ್ ಓಎಸ್ ನವೀಕರಣಗಳು ಮತ್ತು 5 ವರ್ಷಗಳ ನಿಯಮಿತ ಸೆಕ್ಯೂರಿಟಿ ಪ್ಯಾಚ್‌ಗಳನ್ನು ಹೊಂದಿದೆ.


Click it and Unblock the Notifications








