ಸ್ಯಾಮ್‌ಸಂಗ್‌ನಿಂದ 3GB ರ್‍ಯಾಮ್‌‌ ಸ್ಮಾರ್ಟ್‌ಫೋನ್‌ ಬಿಡುಗಡೆ

Posted By:

ಸ್ಯಾಮ್‌ಸಂಗ್‌ನ ಹೊಸ 3GB ರ್‍ಯಾಮ್‌‌ ಹೊಂದಿರುವ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿದೆ.ಸ್ಯಾಮ್‌ಸಂಗ್‌ ಗೆಲಾಕ್ಸಿ ಜೆ ಹೆಸರಿನ ಸ್ಮಾರ್ಟ್‌ಫೋನ್‌ ತೈವಾನ್‌ಲ್ಲಿ ಬಿಡುಗಡೆಯಾಗಿದ್ದು ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

ಈ ಸ್ಮಾರ್ಟ್‌ಫೋನಿಗೆ 21,900 ತೈವಾನ್‌ ಡಾಲರ್‌( ಅಂದಾಜು 45 ಸಾವಿರ ರೂ.) ಸ್ಯಾಮ್‌ಸಂಗ್‌ ನಿಗದಿ ಮಾಡಿದೆ.ಸ್ಮಾರ್ಟ್‌ಫೋನ್‌ 137.00x70.00x8.60 ಮಿಲಿ ಮೀಟರ್‍ ಗಾತ್ರ, ಬಿಎಸ್‌ಐ ಸಿಮೋಸ್‌ ಸೆನ್ಸರ್‌‌ ಮತ್ತು ಎಲ್‌ಇಡಿ ಫ್ಲ್ಯಾಶ್‌ ಹೊಂದಿರುವ 13.2 ಎಂಪಿ ಹಿಂದುಗಡೆ ಕ್ಯಾಮೆರಾವನ್ನು ಹೊಂದಿದೆ.ಮುಂದುಗಡೆ 2.1 ಎಂಪಿ ಕ್ಯಾಮೆರಾ,2600mAh ಬ್ಯಾಟರಿಯನ್ನು ಹೊಂದಿದೆ.

ಸ್ಯಾಮ್‌ಸಂಗ್‌ 3GB ರ್‍ಯಾಮ್‌‌ ಹೊಂದಿರುವ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವುದು ಇದು ಮೊದಲಲ್ಲ.ಈ ಹಿಂದೆ ಬಿಡುಗಡೆಯಾದ ಗೆಲಾಕ್ಸಿ ನೋಟ್‌3 ಫ್ಯಾಬ್ಲೆಟ್‌ಗೆ ಸ್ಯಾಮ್‌ಸಂಗ್‌ 3GB ರ್‍ಯಾಮ್‌‌ ನೀಡಿತ್ತು.

ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ :ಗ್ಯಾಲರಿ

 ಸ್ಯಾಮ್‌ಸಂಗ್‌ನಿಂದ 3GB ರ್‍ಯಾಮ್‌‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ಜೆ
ವಿಶೇಷತೆ:
ಸಿಂಗಲ್‌ ಸಿಮ್‌
5 ಇಂಚಿನ ಫುಲ್‌ ಎಚ್‌ಡಿ ಸೂಪರ್‌ ಅಮೋಲೆಡ್‌ ಸ್ಕ್ರೀನ್‌(1920x1080)
ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್‌ ಓಎಸ್‌
2.3GHz ಕ್ವಾಡ್‌ ಕೋರ್‌ ಸ್ನಾಪ್‌ಡ್ರಾಗನ್‌ MSM8974 ಪ್ರೊಸೆಸರ್‌
3GB ರ್‍ಯಾಮ್‌‌
ಎಲ್‌ಇಡಿ ಫ್ಲ್ಯಾಶ್‌ ಹೊಂದಿರುವ 13.2 ಎಂಪಿ ಹಿಂದುಗಡೆ ಕ್ಯಾಮೆರಾ
2.1 ಎಂಪಿ ಮುಂದುಗಡೆ ಕ್ಯಾಮೆರಾ
32GB ಆಂತರಿಕ ಮೆಮೊರಿ
64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2600mAh ಬ್ಯಾಟರಿ

ಇದನ್ನೂ ಓದಿ: ಕ್ರಿಯೇಟಿವ್‌ ಫೋಟೋಗ್ರಾಫಿ ಗ್ಯಾಜೆಟ್‌‌ಗಳು

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot