ಜಿಯೋ ಭರ್ಜರಿ ಆಫರ್‌ನಲ್ಲಿ 'ಗ್ಯಾಲಾಕ್ಸಿ ಜೆ2' ಪರಿಷ್ಕೃತ ಆವೃತ್ತಿ ಸ್ಮಾರ್ಟ್‌ಪೋನ್ ಬಿಡುಗಡೆ!!
ಒಂದು ಕಾಲದಲ್ಲಿ ಸ್ಯಾಮ್‌ಸಂಗ್ ಕಂಪೆನಿಯನ್ನು ಉತ್ತುಂಗಕ್ಕೇರಿಸಿದ್ದ ಗ್ಯಾಲಾಕ್ಸಿ ಜೆ2 ಸ್ಮಾರ್ಟ್‌ಫೋನಿನ ಪರಿಷ್ಕೃತ ಆವೃತ್ತಿ ಸ್ಮಾರ್ಟ್‌ಪೋನ್ ''ಗ್ಯಾಲಾಕ್ಸಿ ಜೆ2 2018'' ಅನ್ನು ಸ್ಯಾಮ್‌ಸಂಗ್ ಕಂಪೆನಿ ಮತ್ತೆ ಮಾರುಕಟ್ಟೆಗೆ ಪರಿಚಯಿಸಿದೆ. ನೂತನವಾಗಿ ಮತ್ತೊಮ್ಮೆ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಗ್ಯಾಲಾಕ್ಸಿ ಜೆ2 ಫೋನ್ ಇದೀಗ ಮತ್ತಷ್ಟು ಅಪ್‌ಡೆಟ್ ಆಗ ಬಿಡುಗಡೆಯಾಗಿದೆ.
ಜೆ2 2018 ಮಾದರಿಯ ಸ್ಮಾರ್ಟ್‌ಪೋನಿನಲ್ಲಿ ಸ್ಯಾಮ್‌ಸಂಗ್ ಮಾಲ್ ಆಪ್ ಮತ್ತು ಉಪಕರಣ ನಿರ್ವಹಣೆ (ಡಿವೈಸ್ ಮೇಂಟೆನೆನ್ಸ್ ಮೀಡಿಯಾ ಫೈಲ್‌ಗಳನ್ನು ನೇರವಾಗಿ ಮೆಮೊರಿ ಕಾರ್ಡ್‌ಗೆ ಸೇವ್ ಮಾಡುತ್ತದೆ) ಆಯ್ಕೆ ಸೇರಿದಂತೆ ಹಲವು ಅಪ್‌ಡೇಟ್‌ಗಳನ್ನು ಸ್ಯಾಮ್‌ಸಂಗ್ ಪರಿಚಯಿಸಿದ್ದು, ಫೋನಿನ ಬೆಲೆಯನ್ನು ಸಹ ಪೈಪೋಟಿಗೆ ತಕ್ಕಂತೆ ಕಡಿತಗೊಳಿಸಿದೆ.

ಮೂವ್ ಟು ಮೆಮೊರಿ ಕಾರ್ಡ್ ಆಯ್ಕೆಯಿಂದ ಸ್ಮಾರ್ಟ್ ಫೋನ್‌ನ ಆಂತರಿಕ ಮೆಮೊರಿಯಲ್ಲಿ ಸಂಗ್ರಹವಾಗುವ ಫೈಲ್‌ಗಳನ್ನು ಸುಲಭದಲ್ಲಿ ಮೆಮೊರಿ ಕಾರ್ಡ್‌ಗೆ ವರ್ಗಾಯಿಸಬಹುದಾಗಿದಾ ಆಯ್ಕೆಯನ್ನು ಗ್ಯಾಲಾಕ್ಸಿ ಜೆ2 ಫೋನ್ ಹೊಂದಿದ್ದು, ಹಾಗಾದರೆ, ಪರಿಷ್ಕೃತ ಆವೃತ್ತಿ ''ಗ್ಯಾಲಾಕ್ಸಿ ಜೆ2 2018'' ಸ್ಮಾರ್ಟ್‌ಪೋನ್ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

ಡಿಸ್‌ಪ್ಲೇ ಮತ್ತು ವಿನ್ಯಾಸ!
ಪರಿಷ್ಕೃತ ಆವೃತ್ತಿ ''ಗ್ಯಾಲಾಕ್ಸಿ ಜೆ2 2018'' ಸ್ಮಾರ್ಟ್‌ಪೋನ್ 5 ಇಂಚಿನ ಕ್ಯೂಎಚ್‌ಡಿ ಸೂಪರ್ ಅಮೋಲೆಡ್ (qHD Super AMOLED) ಡಿಸ್‌ಪ್ಲೇಯನ್ನು ಹೊಂದಿದೆ. 960x540 ಪಿಕ್ಸೆಲ್ ರೆಸೊಲ್ಯೂಷನ್ ಸಾಮರ್ಥ್ಯವನ್ನು ಹೊಂದಿರುವ ಸ್ಮಾರ್ಟ್‌ಪೋನ್ ಈ ಮೊದಲಿನ ಜೆ2 ಸ್ಮಾರ್ಟ್‌ಫೋನಿನ ವಿನ್ಯಾಸದಲ್ಲಿಯೇ ಮತ್ತೆ ಮಾರುಕಟ್ಟೆಗೆ ಕಾಲಿಟ್ಟಿದೆ.

ಪ್ರೊಸೆಸರ್ ಮತ್ತು RAM!
1.4 GHz ಕ್ವಾಡ್-ಕೋರ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್ 425 ಪ್ರೊಸೆಸರ್ ಅನ್ನು ಪರಿಷ್ಕೃತ ಆವೃತ್ತಿ 2018 ಜೆ2''ಗ್ಯಾಲಾಕ್ಸಿ ಜೆ2 2018'' ಸ್ಮಾರ್ಟ್‌ಪೋನ್ ಹೊಂದಿದೆ. ಆಂಡ್ರಾಯ್ಡ್ ನ್ಯೂಗಾ 7.1 ಮೂಲಕ ಕಾರ್ಯನಿರ್ವಹಣೆ ನೀಡುವ ಈ ಸ್ಮಾರ್ಟ್‌ಫೋನ್ 2 ಜಿಬಿ RAM, 16 ಜಿಬಿ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ.(128 ಜಿಬಿವರೆಗೆ ವಿಸ್ತರಿಸಬಹುದು)

ಕ್ಯಾಮೆರಾ ಮತ್ತು ಬ್ಯಾಟರಿ ಶಕ್ತಿ!
ಪರಿಷ್ಕೃತ ಆವೃತ್ತಿ ''ಗ್ಯಾಲಾಕ್ಸಿ ಜೆ2 2018'' ಸ್ಮಾರ್ಟ್‌ಪೋನ್ 8 ಎಂಪಿ ಹಿಂಬದಿ ಕ್ಯಾಮರಾ ಹಾಗೂ 5 ಎಂಪಿ ಸೆಲ್ಫಿ ಕ್ಯಾಮರಾಗಳನ್ನು ಹೊಂದಿದೆ. ಎರಡೂ ಬದಿಯಲ್ಲಿಯೂ ಎಲ್‌ಇಡಿ ಫ್ಲ್ಯಾಶ್ ಅನ್ನು ಅಳವಡಿಸಲಾಗಿದೆ. ಇನ್ನು ಬ್ಯಾಟರಿ ವಿಷಯದಲ್ಲಿಯೂ ಅತ್ಯುತ್ತಮವಾಗಿರುವ ಈ ಫೋನ್ 2600mAh ಶಕ್ತಿಯ ಬ್ಯಾಟರಿಯನ್ನು ಹೊಂದಿದೆ.


ಇತರೆ ಫೀಚರ್ಸ್ ಮತ್ತು ಬೆಲೆ!
Wi-Fi ಡೈರೆಕ್ಟ್, ಮೊಬೈಲ್ ಹಾಟ್ಸ್ಪಾಟ್, ಯುಎಸ್‌ಬಿ ಕನೆಕ್ಟಿವಿಟಿ, 4 ಜಿ (ಭಾರತೀಯ ಬ್ಯಾಂಡ್‌ಳನ್ನು ಬೆಂಬಲಿಸುತ್ತದೆ), 3 ಜಿ, 2 ಜಿ ಮತ್ತು ಜಿಪಿಎಸ್ ನಂತಹ ಫೀಚರ್ಸ್‌ಗಳನ್ನು ಪರಿಷ್ಕೃತ ಆವೃತ್ತಿ ''ಗ್ಯಾಲಾಕ್ಸಿ ಜೆ2 2018'' ಸ್ಮಾರ್ಟ್‌ಪೋನ್ ಹೊಂದಿದೆ. ಮೂಲ ಫೋನಿಗಿಂತ ಸ್ವಲ್ಪ ಅಪ್‌ಡೇಟ್ ಆಗಿರುವ ಈ ಪೋನಿನ ಬೆಲೆ 8,190 ರೂ.ಗಳಾಗಿವೆ.

ರಿಲಯನ್ಸ್ ಜಿಯೋ ಆಫರ್!
ರಿಲಯನ್ಸ್ ಜಿಯೋ ಜತೆ ಸ್ಯಾಮ್‌ಸಂಗ್ ಆಫರ್ ನೀಡುತ್ತಿದ್ದು, ಮೈಜಿಯೋ ಆಪ್ ಮೂಲಕ 198 ರೂ. ಅಥವಾ 299 ರೂ. ರೀಚಾರ್ಜ್ ಮಾಡುವ ಬಳಕೆದಾರರಿಗೆ 2,750 ರೂ. ಕ್ಯಾಶ್‌ಬ್ಯಾಕ್ ದೊರೆಯಲಿದೆ. ಜತೆಗೆ ಜಿಯೋ ಆಫರ್ ಮೂಲಕ ಮುಂದಿನ 10 ರೀಚಾರ್ಜ್‌ವರೆಗೆ ಪ್ರತಿಬಾರಿ 10 ಜಿಬಿ ಡೇಟಾ ದೊರೆಯಲಿದೆ.


Click it and Unblock the Notifications








