Home
ಮೊಬೈಲ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ4 ಸ್ಮಾರ್ಟ್‌ಫೋನ್‌ ಈಗ 9,490 ರೂ.ಗೆ ಲಭ್ಯ..!

By Gizbot Bureau

ಬಿಡುಗಡೆಯಾಗಿ ಕೇವಲ ಒಂದು ತಿಂಗಳೂ ಕೂಡ ಕಳೆದಿಲ್ಲ. ಆಗಲೇ ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ4 ಫೋನಿನ ಬೆಲೆಯಲ್ಲಿ ಬಾರೀ ಇಳಿಕೆ ಕಂಡುಬಂದಿದೆ. ಇದು ನಿಜಕ್ಕೂ ಸ್ಯಾಮ್ ಸಂಗ್ ಫೋನ್ ಇಷ್ಟ ಪಡುವ ಗ್ರಾಹಕರ ಪಾಲಿಗೆ ಸಿಹಿಸುದ್ದಿಯೇ ಸರಿ. ಸ್ಯಾಮ್ ಸಂಗ್ ಕಂಪೆನಿ ಕಳೆದ ತಿಂಗಳು ಎರಡು ಮಾಡೆಲ್ ನ ಫೋನ್ ಗಳನ್ನು ಬಿಡುಗಡೆಗೊಳಿಸಿತ್ತು. 2ಜಿಬಿ ಮೆಮೊರಿ/16ಜಿಬಿ ಸ್ಟೋರೇಜ್ ಮತ್ತು 3ಜಿಬಿ ಮೆಮೊರಿ/ 32ಜಿಬಿ ಸ್ಟೋರೇಜ್ ಕ್ರಮವಾಗಿ ಇದರ ಬೆಲೆ 9,990 ರುಪಾಯಿ ಮತ್ತು 11,990 ರುಪಾಯಿ ಆಗಿತ್ತು.

ಮೊಬೈಲ್ ರೀಟೈಲರ್ ಆಗಿರುವ ಮಹೇಶ್ ಟೆಲಿಕಾಂ ತಿಳಿಸುವಂತೆ, ಈಗ ಬೇಸಿಕ್ ಮಾಡೆಲ್ ಅಂದರೆ 2ಜಿಬಿ ಮೆಮೊರಿ ಮತ್ತು 16 ಜಿಬಿ ಮೆಮೊರಿ ಇರುವ ವೇರಿಯಂಟ್ ನ ಮೊಬೈಲ್ ನ ಬೆಲೆಯಲ್ಲಿ 500 ರುಪಾಯಿ ಕಡಿತಗೊಳಿಸಲಾಗಿದೆ. ಅಂದರೆ ಇದರ ಬೆಲೆ 9,450ಗೆ ಇಳಿಕೆ ಮಾಡಲಾಗಿದೆ. ಅಂದರೆ ಒಟ್ಟು ಶೇಕಡಾ 5 ರಷ್ಟು ಬೆಲೆಯಲ್ಲಿ ಇಳಿಕೆಯನ್ನು ಕಂಪೆನಿ ಮಾಡಿದೆ.

 ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ4 ಸ್ಮಾರ್ಟ್‌ಫೋನ್‌ ಈಗ 9,490 ರೂ.ಗೆ ಲಭ್ಯ..!

ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ4 ನ ಈ ಹೊಸ ಬೆಲೆಯು ಕಂಪೆನಿಯ ಅಧಿಕೃತ ವೆಬ್ ಸೈಟ್ ನಲ್ಲೂ ನಮೂದಿಸಲಾಗಿದೆ. ಆದರೆ ಈ ಬೆಲೆ ಇಳಿಕೆ ಶಾಶ್ವತವಾಗಿ ದೊರೆಯಲಿದೆಯಾ ಅಥವಾ ಕೆಲವೇ ದಿನಗಳವರೆಗೆ ಮಾತ್ರ ಇರಲಿದೆಯಾ ಎಂಬ ಬಗ್ಗೆ ಇನ್ನೂ ಸ್ವಷ್ಟನೆ ಸಿಕ್ಕಿಲ್ಲ. ಅಮೇಜಾನ್ ಇಂಡಿಯಾ ಕೂಡ ಈ ಬಗ್ಗೆ ಏನೂ ಹೇಳಿಲ್ಲ. ಆದರೆ 3ಜಿಬಿ ವೇರಿಯಂಟ್ ನ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಗ್ಯಾಲಕ್ಸಿ ಜೆ4 ಭಾರತದಲ್ಲಿ ಜೂನ್ ತಿಂಗಳಲ್ಲಿ ಬಿಡುಗಡೆಗೊಂಡಿತ್ತು. ಈ ಸ್ಮಾರ್ಟ್ ಫೋನ್ 5.5- ಇಂಚಿನ ಹೆಚ್ ಡಿ ಸೂಪರ್ AMOLED ಡಿಸ್ಪ್ಲೇ ಹೊಂದಿದ್ದು ಅದರ ಅನುಪಾತ 16:9 ಆಗಿದೆ ಮತ್ತು 720x1280 ಪಿಕ್ಸಲ್ ರೆಸಲ್ಯೂಷನ್ ನ್ನು ಹೊಂದಿದೆ.ಡಿಸ್ಪ್ಲೇಯು ಮೇಲ್ಬಾಗದಲ್ಲಿ 2.5ಡಿ ಗೋರಿಲ್ಲಾ ಗ್ಲಾಸ್ ಮೂಲಕ ರಕ್ಷಣೆ ಮಾಡಲಾಗಿದೆ .ಈ ಡಿವೈಸ್ ನಲ್ಲಿ 1.4GHz Exynos ಪ್ರೊಸೆಸರ್ ಇದ್ದು ಇದು 2ಜಿಬಿ/3ಜಿಬಿ ಮೆಮೊರಿಯೊಂದಿಗೆ ಕಪಲ್ಡ್ ಆಗಿರುತ್ತದೆ. ಇದು ಆಂಡ್ರಾಯ್ಡ್ ಓರಿಯೋ 8.0 out-of-the-box ಮೂಲಕ ರನ್ ಆಗುತ್ತದೆ.

ಕ್ಯಾಮರಾ ವಿಚಾರವನ್ನು ಪ್ರಸ್ತಾಪಿಸುವುದಾದರೆ 13ಎಂಪಿ ಹಿಂಭಾಗದ ಕ್ಯಾಮರಾವಿದ್ದು ಎಲ್ಇಡಿ ಫ್ಲ್ಯಾಶ್ ಹೊಂದಿದೆ ಮತ್ತು f/1.9 ದ್ಯುತಿರಂಧ್ರವನ್ನು ಒಳಗೊಂಡಿದೆ.ಮುಂಭಾಗದಲ್ಲಿ 5MP ಸಾಮರ್ಥ್ಯದ ಸೆಲ್ಫೀ ಕ್ಯಾಮರಾವಿದ್ದು ಇದೂ ಕೂಡ ಎಲ್ಇಡಿ ಫ್ಲ್ಯಾಶ್ ಹೊಂದಿದೆ.

 ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ4 ಸ್ಮಾರ್ಟ್‌ಫೋನ್‌ ಈಗ 9,490 ರೂ.ಗೆ ಲಭ್ಯ..!

ಅಡ್ವಾಸ್ಡ್ ಮೆಮೊರಿ ಮ್ಯಾನೇಜ್ ಮೆಂಟ್ ವೈಶಿಷ್ಟ್ಯವನ್ನು ಗ್ಯಾಲಕ್ಸಿ ಜೆ4 ಹೊಂದಿದೆ.ಬಳಕೆದಾರ ಮೊಬೈಲ್ ನ್ನು ಹೇಗೆ ಬಳಸುತ್ತಿದ್ದಾನೆ ಎಂಬುದರ ಆಧಾರದಲ್ಲಿ ಮೆಮೊರಿಯನ್ನು ಅಟೋಮ್ಯಾಟಿಕ್ ಆಗಿ ಮ್ಯಾನೇಜ್ ಮಾಡುವ ತಂತ್ರಗಾರಿಕೆ ಇದರಲ್ಲಿ ಇದೆ. ಹೆಚ್ಚಿನ ಸ್ಯಾಮ್ ಸಂಗ್ ಫೋನ್ ಗಳಂತೆ ಇದರಲ್ಲೂ ಕೂಡ ಸ್ಯಾಮ್ ಸಂಗ್ ಮಾಲ್ ಆಪ್ ಮೊದಲೇ ಇನ್ಸ್ಟಾಲ್ ಆಗಿ ಬರುತ್ತದೆ.

ಈ ಫೋನ್ ನಲ್ಲಿ ಇನ್ನೊಂದು ವೈಶಿಷ್ಟ್ಯವೂ ಇದೆ ಅದುವೇ ಆಪ್ ಪೇರ್. ಸ್ಯಾಮ್ ಸಂಗ್ ನ ಹೈ ಎಂಡ್ ಫೋನ್ ಗಳಲ್ಲಿರುವಂತೆ ಇದರಲ್ಲೂ ಈ ಆಪ್ ಪೇರ್ ಆಯ್ಕೆ ಇದೆ. ಅಂದರೆ ಪ್ರೀ- ಕಂಬೈನ್ಡ್ ಆಪ್ ಗಳನ್ನು ತೆರೆಯಲು ಸ್ಪಿಟ್ ಸ್ಕ್ರೀನ್ ಮೂಲಕ ಬೆಂಬಲ ನೀಡುತ್ತದೆ ಮತ್ತು ಮಲ್ಟಿ ಟಾಸ್ಕಿಂಗ್ ಗೆ ನೆರವು ನೀಡುತ್ತದೆ. ಈ ಫೋನ್ ನೀಲಿ, ಕಪ್ಪು ಮತ್ತು ಚಿನ್ನದ ವರ್ಣದ ವೇರಿಯಂಟ್ ಗಳಲ್ಲಿ ಮಾರ್ಕೆಟ್ ನಲ್ಲಿ ಲಭ್ಯವಿದೆ.

ನಿಮಗೂ ಏನಾದರೂ ಈ ಫೋನ್ ಖರೀದಿಸಬೇಕು ಎಂಬ ಆಸೆ ಇದ್ದರೆ ಕಾಲ ಕೂಡಿಯಾಗಿದೆ. 500 ರುಪಾಯಿಯ ರಿಯಾಯಿತಿ ನಿಮಗೆ ಲಾಭದಾಯಕ ಅನ್ನಿಸಿದರೆ ಖಂಡಿತ ಖರೀದಿಸಬಹುದು.

Best Mobiles in India

English summary
Samsung Galaxy J4 2GB RAM variant receives price cut, now selling at Rs 9,490. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+