Home
ಮೊಬೈಲ್

ಚೀನಾ ಸ್ಮಾರ್ಟ್‌ಫೋನ್ ಬೇಟೆಗೆ ಸ್ಯಾಮ್‌ಸಂಗ್‌ನಿಂದ ಹೊಸ ಅಸ್ತ್ರ..!

ಸ್ಮಾರ್ಟ್‌ಫೋನ್ ಮಾರುಕಟ್ಟೆಯ ದೈತ್ಯ ಸ್ಯಾಮ್‌ಸಂಗ್ ದೇಶಿಯ ಮಾರುಕಟ್ಟೆಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿದೆ. ಇದೇ ಮಾದರಿಯಲ್ಲಿ ದೇಶದಲ್ಲಿ ಗ್ಯಾಲಕ್ಸಿ ಶ್ರೇಣಿಯಲ್ಲಿ ಅತಿ ನೂತನ ಗ್ಯಾಲಕ್ಸಿ J6 ಪ್ಲಸ್ ಮತ್ತು ಗ್ಯಾಲಕ್ಸಿ J4 ಪ್ಲಸ್ ಸ್ಮಾರ್ಟ್‌ಫೋನ್‌ ಗಳನ್ನು ಲಾಂಚ್ ಮಾಡಿದೆ. ಬಜೆಟ್ ಬೆಲೆಯಲ್ಲಿ ಮಾರಾಟವಾಗುವ ಈ ಸ್ಮಾರ್ಟ್‌ಫೋನ್‌ಗಳು ಚೀನಾ ಕಂಪನಿಯ ಸ್ಮಾರ್ಟ್‌ಪೋನ್‌ಗಳಗೆ ಸೆಡ್ಡು ಹೊಡೆಯಲಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಚೀನಾ ಸ್ಮಾರ್ಟ್‌ಫೋನ್‌ಗಳ ಹಾವಳಿಯೂ ಹೆಚ್ಚಾಗಿದ್ದು, ಬಳಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಈ ಕಂಪನಿಗಳ ಕಡೆಗೆ ವಾಲುತ್ತಿರುವುದರಿಂದಾಗಿ ಸ್ಯಾಮ್‌ಸಂಗ್ ಮಾರುಕಟ್ಟೆಯಲ್ಲಿ ತನ್ನ ಇರುವಿಕೆಯನ್ನು ತೋರಿಸಿಕೊಳ್ಳೂವ ಸಲುವಾಗಿ ಬಜೆಟ್ ಬೆಲೆಯಲ್ಲಿ ಸ್ಮಾರ್ಟ್‌ಪೋನ್‌ಗಳನ್ನು ಲಾಂಚ್ ಮಾಡಿದೆ. ಈ ಹಿನ್ನಲೆಯಲ್ಲಿ ಗ್ಯಾಲಕ್ಸಿ J6 ಪ್ಲಸ್ ಮತ್ತು ಗ್ಯಾಲಕ್ಸಿ J4 ಪ್ಲಸ್ ಸ್ಮಾರ್ಟ್‌ಫೋನ್‌ ಕುರಿತ ಮಾಹಿತಿ ಇಲ್ಲಿದೆ.

ಬೆಲೆ:

ಬೆಲೆ:

ಗ್ಯಾಲಕ್ಸಿ J6 ಪ್ಲಸ್ ಮತ್ತು ಗ್ಯಾಲಕ್ಸಿ J4 ಪ್ಲಸ್ ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆ ತೋರಿಸಿಕೊಡಲಿದೆ. ಗ್ಯಾಲಕ್ಸಿ J6 ಪ್ಲಸ್ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯೊಂದಿಗೆ ಹಾಗೂ ಗ್ಯಾಲಕ್ಸಿ J4 ಪ್ಲಸ್ 2GB RAM ಮತ್ತು 32GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ. ಗ್ಯಾಲಕ್ಸಿ J6 ಪ್ಲಸ್ ರೂ.15,990ಕ್ಕೆ ಮತ್ತು ಗ್ಯಾಲಕ್ಸಿ J4 ಪ್ಲಸ್ ರೂ,10,990ಕ್ಕೆ ಮಾರಾಟವಾಗಲಿದೆ.

ಕ್ಯಾಮೆರಾ:

ಕ್ಯಾಮೆರಾ:

ಗ್ಯಾಲಕ್ಸಿ J4+ ನಲ್ಲಿ ಹಿಂಭಾಗದಲ್ಲಿ 13MP ಸೆನ್ಸರ್ ಇರಲಿದ್ದು ಅದರ ಎಪರ್ಚರ್ f/1.9 ಆಗಿರಲಿದೆ ಮತ್ತು ಮುಂಭಾಗದಲ್ಲಿ 5MPನ ಸೆನ್ಸರ್ ನ್ನು ಒಳಗೊಂಡಿದೆ. ಗ್ಯಾಲೆಕ್ಸಿ J6 ಪ್ಲಸ್ ನಲ್ಲಿ ಡುಯಲ್ ಕ್ಯಾಮರಾ ಸೆಟ್ ಅಪ್ ಹಿಂಭಾಗದಲ್ಲಿ ಇರಲಿದ್ದು, 13MP + 5MP ಆಗಿದೆ. ಇನ್ನು ಮುಂಭಾಗದಲ್ಲಿ ಸೆಲ್ಫೀಗಾಗಿ 8 ಮೆಗಾಪಿಕ್ಸಲ್ ನ ಕ್ಯಾಮೆರಾವಿರಲಿದೆ.

ಡಿಸ್‌ಪ್ಲೇ:

ಡಿಸ್‌ಪ್ಲೇ:

ಎರಡೂ ಫೋನ್ ಗಳು 6.0 ಇಂಚಿನ HD+ (720x1480) ಇನ್ಫಿನಿಟಿ ಡಿಸ್ಪ್ಲೇಯನ್ನು ಹೊಂದಿದೆ. ಡಿಸೈನ್ ವಿಚಾರಕ್ಕೆ ಬಂದರೆ ಪ್ಲಾಸ್ಟಿಕ್ ಹಿಂಭಾಗದ ಪೆನಲ್ ಮತ್ತು ರೌಂಡೆಡ್ ಎಡ್ಜ್ ನ್ನು ಹೊಂದಿದೆ. ಮುಂಭಾಗ ಅಥವಾ ಹಿಂಭಾಗದ ಬದಲಾಗಿ ಗ್ಯಾಲಕ್ಸಿ J6+ ನಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ನ್ನು ಫೋನಿನ ಬಲಭಾಗದಲ್ಲಿ ಅಳವಡಿಸಲಾಗಿದೆ.

ಪ್ರೋಸೆಸರ್:

ಪ್ರೋಸೆಸರ್:

ಎರಡೂ ಫೋನ್ ಗಳು 1.4GHz quad-core ಪ್ರೊಸೆಸರ್ ನ್ನು ಹೊಂದಿದೆ. ಎರಡೂ ಡಿವೈಸ್ ಗಳು ಆಂಡ್ರಾಯ್ಡ್ 8.1 ಓರಿಯೋ ಕಾರ್ಯನಿರ್ವಹಿಸಲಿದ್ದು, ಬ್ಯಾಟರಿ ಸಾಮರ್ಥ್ಯ 3,100mAh ಆಗಿರುತ್ತದೆ. ಕನೆಕ್ಟಿವಿಟಿ ವಿಚಾರಕ್ಕೆ ಬಂದರೆ ಎರಡೂ ಫೋನ್ ಗಳಲ್ಲಿ 4G VoLTE, ವೈ-ಫೈ 802.11 b/g/n, ಬ್ಲೂಟೂತ್ v4.2, USB ಟೈಪ್-Bಯನ್ನು ಒಳಗೊಂಡಿರುತ್ತದೆ.

Best Mobiles in India

English summary
Samsung Galaxy J4+, Galaxy J6+ with 6-inch Infinity display launched, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+