Home
ಮೊಬೈಲ್

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಜೆ6+, ಜೆ4+ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಸಿದ್ಧ

ಸ್ಯಾಮ್ ಸಂಗ್ ಮೂಲದ ಒಂದು ವರದಿಯ ಪ್ರಕಾರ ಜೆ ಸಿರೀಸ್ ಗಳ ಬದಲಾಗಿ ಸ್ಯಾಮ್ ಸಂಗ್ ಗ್ಯಾಲಕ್ಸಿ ಎ ಲೈನ್ ಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿದೆ ಮತ್ತು ಜೆ ಸಿರೀಸ್ ಫೋನ್ ಗಳ ತಯಾರಿಕೆಯನ್ನು ನಿಲ್ಲಿಸುತ್ತದೆ ಎಂದು ಹೇಳಲಾಗಿತ್ತು.

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಜೆ6+, ಜೆ4+ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಸಿದ್ಧ

ಆದರೆ ಇದು ಸತ್ಯಕ್ಕೆ ದೂರವಾದದ್ದು ಎಂದು ಅನ್ನಿಸುತ್ತದೆ. ಯಾಕೆಂದರೆ ಸದ್ಯ ಸೌತ್ ಕೊರಿಯನ್ ಸಂಸ್ಥೆ ಸದ್ದಿಲ್ಲದೆ ಗ್ಯಾಲಕ್ಸಿ ಜೆ4+ ಮತ್ತು ಗ್ಯಾಲಕ್ಸಿ ಜೆ6+ ಫೋನ್ ಗಳ ಬಗ್ಗೆ ಪ್ರಕಟಣೆಯನ್ನು ನೀಡಿದೆ.

ಬಿಡುಗಡೆಯ ದಿನಾಂಕ?

ಬಿಡುಗಡೆಯ ದಿನಾಂಕ?

ಹೊಸದಾದ ಕೆಳಶ್ರೇಣಿಯ ಗ್ಯಾಲಕ್ಸಿ ಜೆ ಫೋನ್ ಗಳು ಭಾರತೀಯ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 25 ಕ್ಕೆ ಬಿಡುಗಡೆಗೊಳ್ಳಲಿದೆ. ಆದರೆ ಅವುಗಳ ಪಟ್ಟಿಯನ್ನು ಈಗಾಗಲೇ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟ ಮಾಡಿಯಾಗಿದೆ. ಎರಡೂ ಫೋನ್ ಗಳು ನೋಡುವುದಕ್ಕೆ ಹೆಚ್ಚು ಕಡಿಮೆ ಒಂದೇ ರೀತಿ ಇದೆ. ಪ್ರಮುಖ ವೈಶಿಷ್ಟ್ಯತೆ ಎಂದರೆ ಇನ್ಫಿನಿಟಿ ಡಿಸ್ಪ್ಲೇ ಮತ್ತು ಆಂಡ್ರಾಯ್ಡ್ 8.1 ಓರಿಯೋ ದಲ್ಲಿ ರನ್ ಆಗುತ್ತದೆ.

ಜೆ4+ ಮತ್ತು ಜೆ6+ ಬೆಲೆ ಎಷ್ಟು?

ಜೆ4+ ಮತ್ತು ಜೆ6+ ಬೆಲೆ ಎಷ್ಟು?

ಗ್ಯಾಲಕ್ಸಿ ಜೆ4+ ಮತ್ತು ಗ್ಯಾಲಕ್ಸಿ ಜೆ6+ ಫೋನ್ ಗಳ ಭಾರತೀಯ ಮಾರುಕಟ್ಟೆಯ ಬೆಲೆಯನ್ನು ಸ್ಯಾಮ್ ಸಂಗ್ ಇನ್ನಷ್ಟೇ ಪ್ರಕಟಿಸಬೇಕಿದೆ. ಒಂದು ಅಂದಾಜು ಮೂಲದ ಪ್ರಕಾರವೇ ಹೇಳುವುದಾದರೆ ಹೆಚ್ಚು ಕಡಿಮೆ ಎರಡೂ ಫೋನ್ ಗಳ ಬೆಲೆಯು 10,000 ರುಪಾಯಿ ಆಸುಪಾಸಿನಲ್ಲಿ ಇರಲಿದೆ.

ಪ್ರಮುಖ ವೈಶಿಷ್ಟ್ಯತೆಗಳು:

ಪ್ರಮುಖ ವೈಶಿಷ್ಟ್ಯತೆಗಳು:

ಎರಡೂ ಫೋನ್ ಗಳು 6.0 ಇಂಚಿನ HD+ (720x1480) ಇನ್ಫಿನಿಟಿ ಡಿಸ್ಪ್ಲೇಯನ್ನು ಹೊಂದಿದೆ. ಡಿಸೈನ್ ವಿಚಾರಕ್ಕೆ ಬಂದರೆ ಪ್ಲಾಸ್ಟಿಕ್ ಹಿಂಭಾಗದ ಪೆನಲ್ ಮತ್ತು ರೌಂಡೆಡ್ ಎಡ್ಜ್ ನ್ನು ಹೊಂದಿದೆ. ಮುಂಭಾಗ ಅಥವಾ ಹಿಂಭಾಗದ ಬದಲಾಗಿ ಗ್ಯಾಲಕ್ಸಿ ಜೆ6+ ನಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ನ್ನು ಫೋನಿನ ಬಲಭಾಗದಲ್ಲಿ ಅಳವಡಿಸಲಾಗಿದೆ. ಆದರೆ ಗ್ಯಾಲಕ್ಸಿ ಜೆ4+ ಫಿಸಿಕಲ್ ಫಿಂಗರ್ ಪ್ರಿಂಟ್ ಸೆನ್ಸರ್ ನ್ನು ಒಳಗೊಂಡಂತೆ ಕಾಣಿಸುವುದಿಲ್ಲ. ಬಹುಶ್ಯಃ ಫೇಸ್ ಅನ್ ಲಾಕ್ ವೈಶಿಷ್ಟ್ಯತೆ ಇರಲೂ ಬಹುದು.
ಎರಡೂ ಫೋನ್ ಗಳು 1.4GHz quad-core ಪ್ರೊಸೆಸರ್ ನ್ನು ಹೊಂದಿದೆ. ಆದರೆ ಸ್ನ್ಯಾಪ್ ಡ್ರ್ಯಾಗನ್ ಅಥವಾ Exynos ನಲ್ಲಿ ಯಾವ ಚಿಪ್ ಸೆಟ್ ಇರಲಿದೆ ಎಂಬ ಬಗ್ಗೆ ಇನ್ನೂ ಖಚಿತತೆ ಸಿಕ್ಕಿಲ್ಲ. ವೆಬ್ ಸೈಟ್ ನಲ್ಲಿ ಲಿಸ್ಟ್ ಮಾಡಿರುವ ಪ್ರಕಾರ ಗ್ಯಾಲಕ್ಸಿ ಜೆ4+ ನಲ್ಲಿ 2GB ಮತ್ತು 3GB RAM ಜೊತೆಗೆ 16GB ಮತ್ತು 32GB ಇನ್ ಬಿಲ್ಟ್ ಸ್ಟೋರೇಜ್ ವ್ಯವಸ್ಥೆ ಕ್ರಮವಾಗಿ ಇರಲಿದೆ. ಇನ್ನು ಗ್ಯಾಲಕ್ಸಿ ಜೆ6+ ನಲ್ಲಿ 3GB ಮತ್ತು 4GB RAM ಜೊತೆಗೆ 32GB ಮತ್ತು 64GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಕ್ರಮವಾಗಿ ಇರಲಿದೆ. ಯಾವ ವೇರಿಯಂಟ್ ನ ಫೋನ್ ಗಳು ಭಾರತದಲ್ಲಿ ಲಭ್ಯವಾಗಲಿದೆ ಎಂಬ ಬಗ್ಗೆ ಯಾವುದೇ ಪ್ರಕಟಣೆಯನ್ನು ನೀಡಲಾಗಿಲ್ಲ.

ಕ್ಯಾಮರಾ ಸಾಮರ್ಥ್ಯ:

ಕ್ಯಾಮರಾ ಸಾಮರ್ಥ್ಯ:

ಗ್ಯಾಲಕ್ಸಿ ಜೆ4+ ನಲ್ಲಿ ಹಿಂಭಾಗದಲ್ಲಿ ಏಕೈಕ 13-ಮೆಗಾಪಿಕ್ಸಲ್ ಸೆನ್ಸರ್ ಇರಲಿದ್ದು ಅದರ ಎಪರ್ಚರ್ f/1.9 ಆಗಿರಲಿದೆ ಮತ್ತು ಮುಂಭಾಗದಲ್ಲಿ 5- ಮೆಗಾಪಿಕ್ಸಲ್ ನ ಸೆನ್ಸರ್ ನ್ನು ಒಳಗೊಂಡಿದ್ದು ಅದರ ಎಪರ್ಚರ್ f/2.2 ಆಗಿರುತ್ತದೆ. J7+ ನಲ್ಲಿ ಡುಯಲ್ ಕ್ಯಾಮರಾ ಸೆಟ್ ಅಪ್ ಹಿಂಭಾಗದಲ್ಲಿ ಇರಲಿದ್ದು ಅದರ ಸಾಮರ್ಥ್ಯ 13MP + 5MP ಆಗಿದೆ. ಇನ್ನು ಮುಂಭಾಗದಲ್ಲಿ ಸೆಲ್ಫೀಗಾಗಿ 8- ಮೆಗಾಪಿಕ್ಸಲ್ ನ ಕ್ಯಾಮರಾವಿರಲಿದೆ. ಎರಡೂ ಡಿವೈಸ್ ಗಳು ಆಂಡ್ರಾಯ್ಡ್ 8.1 ಓರಿಯೋ ಔಟ್-ಆಫ್-ದಿ-ಬಾಕ್ಸ್ ನಲ್ಲಿದ್ದು ಅದರ ಬ್ಯಾಟರಿ ಸಾಮರ್ಥ್ಯ 3,100mAh ಆಗಿರುತ್ತದೆ.ಕನೆಕ್ಟಿವಿಟಿ ವಿಚಾರಕ್ಕೆ ಬಂದರೆ ಎರಡೂ ಫೋನ್ ಗಳಲ್ಲಿ 4G VoLTE, ವೈ-ಫೈ 802.11 b/g/n, ಬ್ಲೂಟೂತ್ v4.2, USB ಟೈಪ್-Bಯನ್ನು ಒಳಗೊಂಡಿರುತ್ತದೆ.

Best Mobiles in India

English summary
Samsung Galaxy J4+, Galaxy J6+ with 6-inch Infinity Displays announced. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+