ಭಾರತದಲ್ಲಿ ಇಳಿಕೆಯಾಗಿದೆ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಜೆ4 ಬೆಲೆ
ಸೌತ್ ಕೊರಿಯಾದ ಕಂಪೆನಿ ಸ್ಯಾಮ್ ಸಂಗ್ ಇತ್ತೀಚೆಗೆ ಬಿಡುಗಡೆಗೊಳಿಸಿರುವ ತನ್ನ ಬಜೆಟ್ ಸ್ಮಾರ್ಟ್ ಫೋನ್ ಗ್ಯಾಲಕ್ಸಿ ಜೆ4ನ ಬೆಲೆಯನ್ನು ಭಾರತದಲ್ಲಿ ಇಳಿಕೆ ಮಾಡಿದೆ. ಈ ವರ್ಷದ ಜೂನ್ ನಲ್ಲಿ 11,990 ರುಪಾಯಿ ಬೆಲೆಗೆ ಈ ಸ್ಮಾರ್ಟ್ ಫೋನ್ ನ್ನು ಕಂಪೆನಿಯು ಬಿಡುಗಡೆಗೊಳಿಸಿದ್ದು ಇದೀಗ ಈ ಸ್ಮಾರ್ಟ್ ಫೋನ್ ಬೆಲೆಯಲ್ಲಿ 1000 ರುಪಾಯಿ ಬೆಲೆ ಇಳಿಕೆಯಾಗಿದೆ. ಹೌದು 1000 ರುಪಾಯಿ ಇಳಿಕೆಯ ನಂತರ ಇದರ ಮಾರಾಟದ ಬೆಲೆ 10,990 ರುಪಾಯಿಗಳಾಗಿದ್ದು ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
ಮೇಕ್ ಇನ್ ಇಂಡಿಯಾದ ಭಾಗವಾಗಿ ಕಂಪೆನಿಯು ಈ ಸ್ಮಾರ್ಟ್ ಫೋನ್ ನ್ನು ಬಿಡುಗಡೆಗೊಳಿಸಿತ್ತು ಮತ್ತು ಇದರಲ್ಲಿ ಆಪ್ ಪೇರ್, ಅಡ್ವಾಸ್ಡ್ ಮೆಮೊರಿ ಮ್ಯಾನೇಜ್ಮೆಂಟ್ , ಅಡಾಪ್ಟೀವ್ ವೈ-ಫೈ ಮತ್ತು ಸ್ಯಾಮ್ ಸಂಗ್ ಮಾಲ್ ನಂತಹ ವೈಶಿಷ್ಟ್ಯತೆಗಳಿದ್ದವು.

ವೈಶಿಷ್ಟ್ಯತೆಗಳ ವಿಚಾರವನ್ನು ಮಾತನಾಡುವುದಾದರೆ ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ4 5.5 ಇಂಚಿನ ಹೆಚ್.ಡಿ ಡಿಸ್ಪ್ಲೇ ಜೊತೆಗೆ 720x1280 ಪಿಕ್ಸಲ್ ರೆಸಲ್ಯೂಷನ್ ಮತ್ತು 16:9 ಅನುಪಾತವನ್ನು ಇದು ಹೊಂದಿದೆ. ಕಂಪೆನಿಯ ಸ್ವಂತ Exynos 7570 ಪ್ರೊಸೆಸರ್ ನ್ನು ಹೊಂದಿದ್ದು ಆಂಡ್ರಾಯ್ಡ್ 8.0 ಓರಿಯೋ ಆಪರೇಟಿಂಗ್ ಸಿಸ್ಟಮ್ ಮುಖಾಂತರ ರನ್ ಆಗುತ್ತದೆ.

3ಜಿಬಿ ಮೆಮೊರಿ ಮತ್ತು 32ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇದ್ದು ಅದನ್ನು 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಹಿಗ್ಗಿಸಿಕೊಳ್ಳುವ ಅವಕಾಶ ಈ ಫೋನ್ ನಲ್ಲಿದೆ. ಹಿಂಭಾಗದಲ್ಲಿ LED ಫ್ಲ್ಯಾಶ್ ಸೌಲಭ್ಯವಿರುವ13ಎಂಪಿ5 ಸಾಮರ್ಥ್ಯದ ಕ್ಯಾಮರಾವಿದ್ದು, ಸೆಲ್ಫೀಗಾಗಿ ಮುಂಭಾಗದಲ್ಲಿ LED ಫ್ಲ್ಯಾಶ್ ಇರುವ 5ಎಂಪಿ ಕ್ಯಾಮರಾವಿದೆ.
ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ 4 3000mAh ಬ್ಯಾಟರಿ ವ್ಯವಸ್ಥೆಯನ್ನು ಹೊಂದಿದೆ ಮತ್ತು ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 20 ತಾಸುಗಳವರೆಗೆ ಬಳಕೆ ಮಾಡಬಹುದು ಎಂದು ಹೇಳಲಾಗುತ್ತದೆ. ಕನೆಕ್ಟಿವಿಟಿ ವಿಚಾರದಲ್ಲಿ ಸ್ಮಾರ್ಟ್ ಫೋನ್ 4G, VoLTE, 3G, ವೈ-ಫೈ, ಬ್ಲೂಟೂತ್, ಜಿಪಿಎಸ್ ಮತ್ತು USB ಟೈಪ್ ಸಿಯನ್ನು ಬೆಂಬಲಿಸುತ್ತದೆ,
ಕಳೆದ ವಾರ ಸ್ಯಾಮ್ ಸಂಗ್ ಮಧ್ಯಮ ಸೆಗ್ಮೆಂಟ್ ನ ಸ್ಮಾರ್ಟ್ ಫೋನ್ ಗ್ಯಾಲಕ್ಸಿ ಎ8 ಸ್ಟಾರ್ ನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಇದರ ಬೆಲೆ 34,999 ರುಪಾಯಿಗಳಾಗಿದ್ದು ಅಮೇಜಾನ್ ನಲ್ಲಿ ಎಕ್ಸ್ ಕ್ಲೂಸಿವ್ ಆಗಿ ಮಾರಾಟಕ್ಕೆ ಲಭ್ಯವಿದೆ. ಈ ಡಿವೈಸ್ 6.3 ಇಂಚಿನ FHD+ ಡಿಸ್ಪ್ಲೇ ಜೊತೆಗೆ 18:9 ಅನುಪಾತವನ್ನು ಹೊಂದಿದೆ. ಡಿಸ್ಪ್ಲೇಯು ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ನಿಂದ ಸುರಕ್ಷಿತಗೊಳಿಸಲಾಗಿದ್ದು ಯಾವುದು ಸ್ಕ್ರ್ಯಾಚ್ ಆಗುವ ಸಮಸ್ಯೆಯನ್ನು ಇದು ಎದುರಿಸುವುದಿಲ್ಲ.
ಈ ಸ್ಮಾರ್ಟ್ ಫೋನ್ ಆಂಡರ್ಯಾಡ್ 8.0 ಓರಿಯೋ ಆಪರೇಟಿಂಗ್ ಸಿಸ್ಟಮ್ ಮೂಲಕ ರನ್ ಆಗುತ್ತದೆ ಮತ್ತು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 660 ಪ್ರೊಸೆಸರ್ ನಿಂದ ಪವರ್ಡ್ ಆಗಿದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ಎ8 ನಲ್ಲಿ 6ಜಿಬಿ ಮೆಮೊರಿ ಮತ್ತು 64ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇದ್ದು ಅದನ್ನು ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಹಿಗ್ಗಿಸಿಕೊಳ್ಳಲು ಗ್ರಾಹಕರಿಗೆ ಅವಕಾಶವಿರುತ್ತದೆ.


Click it and Unblock the Notifications








