Home
ಮೊಬೈಲ್

ಶಿಯೋಮಿಯನ್ನು ಮನೆಗೆ ಕಳುಹಿಸಲು ಬರುತ್ತಿದೆ ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಜೆ7 ಡುಯೊ'!!

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಶಿಯೋಮಿ ಆರ್ಭಟದಿಂದ ತತ್ತರಿಸುವ ಸ್ಯಾಮ್‌ಸಂಗ್ ಕಂಪೆನಿ ತನ್ನ ನೂತನ ಬಜೆಟ್ ಸ್ಮಾರ್ಟ್‌ಫೋನ್ ಮೂಲಕ ಶಿಯೋಮಿಯನ್ನು ಮಣಿಸಲು ಮುಂದಾಗಿದೆ.

By Bhaskar N J

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಶಿಯೋಮಿ ಆರ್ಭಟದಿಂದ ತತ್ತರಿಸುವ ಸ್ಯಾಮ್‌ಸಂಗ್ ಕಂಪೆನಿ ತನ್ನ ನೂತನ ಬಜೆಟ್ ಸ್ಮಾರ್ಟ್‌ಫೋನ್ ಮೂಲಕ ಶಿಯೋಮಿಯನ್ನು ಮಣಿಸಲು ಮುಂದಾಗಿದೆ. ಭಾರತದಲ್ಲಿ ಸ್ಯಾಮ್‌ಸಂಗ್ ಕಂಪೆನಿ ಮೊಬೈಲ್ ಮಾರುಕಟ್ಟೆಯನ್ನು ಉಳಿಸಿಕೊಟ್ಟಿರುವ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಜೆ7 ಅಪ್‌ಡೇಟೆಡ್ ಸ್ಮಾರ್ಟ್‌ಫೋನ್ ಬಿಡುಗಡೆಗೆ ಮುಂದಾಗಿದೆ.

ಬಜೆಟ್ ಸ್ಮಾರ್ಟ್‌ಫೋನ್‌ಗಳ ಪ್ರಿಯರಾಗಿರುವ ಭಾರತೀಯರಿಗೆ ಬಜೆಟ್ ಬೆಲೆಯಲ್ಲಿ ಹೆಚ್ಚು ಫೀಚರ್ಸ್ ಒದಗಿರುವ ಸಲುವಾಗಿ ಸ್ಯಾಮ್‌ಸಂಗ್ ಕಂಪೆನಿ ತನ್ನ ನೂತನ ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಜೆ7 ಡುಯೊ' ಫೋನ್ ಅನ್ನು ಹೊರತರುತ್ತಿದೆ. ಇದೇ ಮೊದಲ ಬಾರಿಗೆ ಸ್ಯಾಮ್‌ಸಂಗ್ ಕಂಪೆನಿಯ ಬಜೆಟ್ ಸ್ಮಾರ್ಟ್‌ಪೋನ್ ಒಂದು ಡ್ಯುಯರ್ ರಿಯರ್ ಕ್ಯಾಮೆರಾ ಮೂಲಕ ಹೊರಬರುತ್ತಿದೆ.!

ಶಿಯೋಮಿಯನ್ನು ಮನೆಗೆ ಕಳುಹಿಸಲು ಬರುತ್ತಿದೆ ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಜೆ7 ಡುಯೊ'

ಸ್ಯಾಮ್‌ಸಂಗ್ ಕಂಪೆನಿಯ ಅಫಿಷಿಯಲ್ ವೆಬ್‌ಸೈಟ್‌ನಲ್ಲಿ ನೂತನ ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಜೆ7 ಡುಯೊ' ಸ್ಮಾರ್ಟ್‌ಫೋನ್ ಯೂಸರ್ ಮ್ಯಾನುವಲ್ ಈಗಾಗಲೇ ಪ್ರಕಟವಾಗಿದ್ದು, ಹಗಾದರೆ, ಬಜೆಟ್ ಬೆಲೆಯ 'ಗ್ಯಾಲಾಕ್ಸಿ ಜೆ7 ಡುಯೊ' ಸ್ಮಾರ್ಟ್‌ಫೋನ್ ಫೀಚರ್ಸ್ ಯಾವುವು? ಸ್ಮಾರ್ಟ್‌ಫೋನಿನ ವಿಶೇಷತೆಗಳೇನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಡಿಸ್‌ಪ್ಲೇ ಮತ್ತು ವಿನ್ಯಾಸ!

ಡಿಸ್‌ಪ್ಲೇ ಮತ್ತು ವಿನ್ಯಾಸ!

16 ಮಿಲಿಯನ್ ಬಣ್ಣಗಳನ್ನು ಸಪೋರ್ಟ್ ಮಾಡುವ ಸೂಪರ್ AMOLED ಕೆಪ್ಯಾಸಿಟಿವ್ ಟಚ್ಸ್ಕ್ರೀನ್ ಮೂಲಕ ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಜೆ7 ಡುಯೊ' ಸ್ಮಾರ್ಟ್‌ಫೋನ್ ಹೊರಬರುತ್ತಿದೆ. ಸ್ಮಾರ್ಟ್‌ಫೋನ್ 16:9 ಅನುಪಾತದಲ್ಲಿ 5.5 ಇಂಚುಗಳು ಗಾತ್ರವನ್ನು ಹಾಗೂ 720 x 1280 ಪಿಕ್ಸೆಲ್ ರೆಸಲ್ಯೂಶನ್ ಮಲ್ಟಿಟಚ್ ಸ್ಕ್ರೀನ್ ಅನ್ನು ಸ್ಮಾರ್ಟ್‌ಫೋನ್ ಹೊಂದಿರಲಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಚಿಪ್ಸೆಟ್ ಎಕ್ಸಿನಾಸ್ 7885 ಆಕ್ಟಾ ಕೋರ್ ಚಿಪ್ಸೆಟ್ ಹಾಗೂ 2x2.2 GHz ಕಾರ್ಟೆಕ್ಸ್- A73 & 6x1.6 GHz ಕಾರ್ಟೆಕ್ಸ್- A53 CPU ಅನ್ನು 'ಗ್ಯಾಲಾಕ್ಸಿ ಜೆ7 ಡುಯೊ' ಸ್ಮಾರ್ಟ್‌ಫೋನ್ ಹೊಂದಿದೆ. 2GB ಮತ್ತು 3GB RAM ಹಾಗೂ 32GB ಆಂತರಿಕ ಮೆಮೊರಿ ಹೊಂದಿರುವ ಫೋನಿನ ಮೆಮೊರಿಯನ್ನು 256GB ವರೆಗೆ ವಿಸ್ತರಿಸಿಕೊಳ್ಳ ಆಯ್ಕೆ ಕೂಡ ಲಭ್ಯವಿದೆ.

ಡ್ಯುಯಲ್ ರಿಯರ್ ಕ್ಯಾಮೆರಾ!!

ಡ್ಯುಯಲ್ ರಿಯರ್ ಕ್ಯಾಮೆರಾ!!

ಮೊದಲೇ ಹೇಳಿದಂತೆ ಇದೇ ಮೊದಲ ಬಾರಿಗೆ ಸ್ಯಾಮ್‌ಸಂಗ್ ಕಂಪೆನಿಯ ಬಜೆಟ್ ಸ್ಮಾರ್ಟ್‌ಪೋನ್ ಒಂದು ಡ್ಯುಯರ್ ರಿಯರ್ ಕ್ಯಾಮೆರಾ ಮೂಲಕ ಹೊರಬರುತ್ತಿದೆ.! 13 ಎಂಪಿ + 2 ಎಂಪಿ ಡ್ಯುಯಲ್ ಕ್ಯಾಮೆರಾ ಮತ್ತು 5 ಎಂಪಿ ಸೆಲ್ಫಿ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್ ಎರಡೂ ಕಡೆ ಎಲ್ಇಡಿ ಫ್ಲಾಶ್, ಆಟೋಫೋಕಸ್, ಫೇಸ್ ಡಿಟೆಕ್ಷನ್, ಪನೋರಮಾ, HDRನಂತಹ ವೈಶಿಷ್ಟ್ಯಗಳನ್ನು ಹೊಂದಿವೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್!!

ಬ್ಯಾಟರಿ ಮತ್ತು ಇತರೆ ಫೀಚರ್ಸ್!!

ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಜೆ7 ಡುಯೊ' ಸ್ಮಾರ್ಟ್‌ಫೋನಿನಲ್ಲಿ ತೆರೆಯಬಹುದಾದ 3300 mAh ಲಿ-ಇಯಾನ್ ಬ್ಯಾಟರಿಯನ್ನು ನೀಡಲಾಗಿದೆ. 3.5 ಎಂಎಂ ಹೆಡ್ಫೋನ್ ಜ್ಯಾಕ್ ಮತ್ತು ಮೈಕ್ರೋ-ಯುಎಸ್ಬಿ ಪೋರ್ಟ್, ಫಾಸ್ಟ್ ಚಾರ್ಜಿಂಗ್ 2.0 ತಂತ್ರಜ್ಞಾನ, ಮಲ್ಟಿಪರ್ಪೋಸ್ ಜಾಕ್, ಫೀಂಗರ್‌ಪ್ರಿಂಟ್ ಸೆನ್ಸಾರ್ ಹಾಗೂ ಆಂಡ್ರಾಯ್ಡ್ 8.0 (ಓರಿಯೊ) ಫೀಚರ್ಸ್ ಪೋನಿನಲ್ಲಿವೆ

ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿರುವ Truvison TX4075 40' Smart LED TV ಹೇಗಿದೆ..?
ಬೆಲೆ ಮತ್ತು ಬಿಡುಗಡೆ!!

ಬೆಲೆ ಮತ್ತು ಬಿಡುಗಡೆ!!

ಸ್ಯಾಮ್‌ಸಂಗ್ ಕಂಪೆನಿಯ ಅಫಿಷಿಯಲ್ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿರುವ ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಜೆ7 ಡುಯೊ' ಸ್ಮಾರ್ಟ್‌ಫೋನ್ ಬಿಡುಗಡೆ ಬಗ್ಗೆ ಈ ವರೆಗೂ ಯಾವುದೇ ಮಾಹಿತಿಯನ್ನು ಕಂಪೆನಿ ಹೊರಹಾಕಿಲ್ಲ. ಆದರೆ, ಟೆಕ್ ವೆಬ್‌ಸೈಟ್‌ಗಳ ವರದಿಯಂತೆ ಫೋನ್ ಬೆಲೆ 15 ಸಾವಿರ ಒಳಗಿರಲಿದ್ದು, ಮೇ ತಿಂಗಳಿನಲ್ಲಿ ಫೋನ್ ಬಿಡಗಡೆಯಾಗಲಿದೆಯಂತೆ.

Best Mobiles in India

English summary
Samsung Galaxy J7 Duo gets official confirmation through a user manual. to know more visi to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+