ಶಿಯೋಮಿ ಎಫೆಕ್ಟ್!!..ಸ್ಯಾಮ್‌ಸಂಗ್ 'ಗ್ಯಾಲಕ್ಸಿ ಜೆ7 ನೆಕ್ಸ್ಟ್' ಬೆಲೆಯಲ್ಲಿ ಭಾರಿ ಇಳಿಕೆ!!
ಭಾರತದ ನಂಬರ್ ಒನ್ ಮೊಬೈಲ್ ಕಂಪೆನಿ ಎಂಬ ಕಿರೀಟ ಕಳೆದುಕೊಂಡಿರುವ ಸ್ಯಾಮ್‌ಸಂಗ್ ಇದೀಗ ಚೀನಾ ಮೊಬೈಲ್ ಕಂಪೆನಿಗಳೊಂದಿಗೆ ದರಸಮರಕ್ಕೆ ಇಳಿದಿದೆ.!
ಭಾರತದ ನಂಬರ್ ಒನ್ ಮೊಬೈಲ್ ಕಂಪೆನಿ ಎಂಬ ಕಿರೀಟ ಕಳೆದುಕೊಂಡಿರುವ ಸ್ಯಾಮ್‌ಸಂಗ್ ಇದೀಗ ಚೀನಾ ಮೊಬೈಲ್ ಕಂಪೆನಿಗಳೊಂದಿಗೆ ದರಸಮರಕ್ಕೆ ಇಳಿದಿದೆ.! ಸ್ಮಾರ್ಟ್‌ಪೋನ್ ಮಾರಾಟದಲ್ಲಿ ಕುಸಿತವಾದ ನಂತರ ತನ್ನ ಫೋನ್‌ಗಳ ಬೆಲೆಯನ್ನು ಭಾರಿ ಇಳಿಕೆ ಮಾಡಿ ಮಾರುಕಟ್ಟೆಯಲ್ಲಿ ಮತ್ತೆ ಸಾಮ್ರಾಜ್ಯ ವಿಸ್ತರಿಸಿಕೊಳ್ಳಲು ಮುಂದಾಗಿದೆ.!!
ಇಲ್ಲಿಯವರೆಗೂ ಹಲವು ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ಇಳಿಕೆ ಮಾಡಿರುವ ಸ್ಯಾಮ್‌ಸಂಗ್ ಇದೀಗ ಹೆಚ್ಚು ಸೇಲ್ ಆಗಿದ್ದ್ ಫೋನ್ ಬ್ರಾಂಡ್ "ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7 ನೆಕ್ಸ್ಟ್" ಬೆಲೆಯನ್ನು ಇಳಿಕೆ ಮಾಡಿದೆ.! ಹಾಗಾಗಿ, ಗ್ಯಾಲಕ್ಸಿ ಜೆ7 ನೆಕ್ಸ್ಟ್ ಇದೀಗ ಕೇವಲ 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.!!

ಹಾಗಾದರೆ, 5.5 ಇಂಚಿನ ಡಿಸ್‌ಪ್ಲೇ, 3000 mAh ಬ್ಯಾಟರಿ ಹಾಗೂ 4G ವೋಲ್ಟ್ ಸಪೋರ್ಟ್‌ನಂತಹ ಎಲ್ಲಾ ಫೀಚರ್ಸ್ ಹೊಂದಿರುವ "ಗ್ಯಾಲಕ್ಸಿ ಜೆ7 ನೆಕ್ಸ್ಟ್" ಫೋನ್ ಮೇಲ್ ಎಷ್ಟು ಡಿಸ್ಕೌಂಟ್ಸ್ ನೀಡಲಾಗಿದೆ? ಮತ್ತು ಸ್ಮಾರ್ಟ್‌ಪೊನಿನ ಇತರೆ ಫೀಚರ್ಸ್ ಮತ್ತು ವಿಶೇಷತೆಗಳೇನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಪ್ರಸ್ತುತ ಸ್ಮಾರ್ಟ್‌ಫೋನ್ ಬೆಲೆ ಎಷ್ಟು?
ಕ್ರಮವಾಗಿ 10,490 ಮತ್ತು 12,990 ರೂ. ಬೆಲೆಯನ್ನು ಹೊಂದಿದ್ದ 2GB RAM ಮತ್ತು 16 ಜಿಬಿ ಮೆಮೊರಿ ಹಾಗೂ 3 ಜಿಬಿ RAM ಮತ್ತು 32 ಜಿಬಿ ಮೆಮೊರಿ ಫೋನ್‌ಗಳು ಇದೀಗ ಕೇವಲ 9,990 ರೂ. ಮತ್ತು 11,990 ರೂ.ಗಳಿಗೆ ಲಭ್ಯವಿವೆ.!!

ಡಿಸ್‌ಪ್ಲೇ ಹೇಗಿದೆ!?
5.5 ಇಂಚಿನ (720×1280 pixels) ಡಿಸ್‌ಪ್ಲೇ ಹೊಂದಿರುವ ಗ್ಯಾಲಕ್ಸಿ ಜೆ7 ನೆಕ್ಸ್ಟ್ ಅಮೋಲೆಡ್ ಗೋರಿಲ್ಲಾ ಗ್ಲಾಸ್ 5 ಹೊದಿಕೆಯನ್ನು ಹೊಂದಿದೆ.

ಪ್ರೊಸೆಸರ್ ಯಾವುದು?
1. GHz ಆಕ್ಟಾ-ಕೋರ್ Exynos 8895 ಪ್ರೊಸೆಸರ್ (4x2.3 GHz & 4x1.7 GHz) ಹೊಂದಿರುವ ಈ ಫೋನ್ ಆಂಡ್ರಾಯ್ಡ್ ನ್ಯೂಗಾ ಮೂಲಕ ಕಾರ್ಯನಿರ್ವಹಣೆ ನೀಡಲಿದೆ.!!

ಕ್ಯಾಮೆರಾ!
13 ಎಮ್‌ಪಿ ರಿಯರ್ ಕ್ಯಾಮೆರಾ ಹಾಗೂ 5 ಎಮ್‌ಪಿ ಫ್ರಂಟ್ ಕ್ಯಾಮೆರಾ ಹೊಂದಿರುವ ಫೋನ್ ಎರಡೂ ಬದಿಯಲ್ಲಿ ಎಲ್‌ಇಡಿ ಫ್ಲ್ಯಾಶ್ ಲೈಟ್ ಅನ್ನು ಹೊಂದಿದೆ.!!

ಬ್ಯಾಟರಿ ಶಕ್ತಿ ಎಷ್ಟು?
"ಗ್ಯಾಲಕ್ಸಿ ಜೆ7 ನೆಕ್ಸ್ಟ್" ಫೋನ್ 3000mAh ಲೀ ಐಯಾನ್ ಬ್ಯಾಟರಿ ಶಕ್ತಿಯನ್ನು ಹೊಂದಿದೆ.!!


ಇತರೆ ಫೀಚರ್ಸ್?
4ಜಿ ವೋಲ್ಟ್, ವೈಬ್ 802.11, ಬ್ಲೂಟೂತ್, 4 ಜಿಪಿಎಸ್, ಯುಎಸ್ಬಿ ಟೈಪ್-ಸಿ, ಎನ್ಎಫ್ಸಿ, ಮೈಕ್ರೋ ಯುಎಸ್ಬಿ, ಡ್ಯುಯಲ್ ಸಿಮ್‌ನಂತಹ ಫೀಚರ್‌ಗಳು ಫೋನಿನಲ್ಲಿವೆ.!!


Click it and Unblock the Notifications








