Home
ಮೊಬೈಲ್

ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭಾರೀ ಕಡಿತ...!

By Gizbot Bureau

ಮಾರುಕಟ್ಟೆಯಲ್ಲಿ ಮಧ್ಯಮ ಬೆಲೆಯ ಬಜೆಟ್ ಫೋನ್ ಗಳು ಎಂದು ಖ್ಯಾತಿಯನ್ನು ಪಡೆದುಕೊಂಡಿರುವ ಸ್ಯಾಮ್ ಸಂಗ್ ಗ್ಯಾಲೆಕ್ಸಿ J8, ಸ್ಯಾಮ್ ಸಂಗ್ ಗ್ಯಾಲೆಕ್ಸಿ J4 ಮತ್ತು ಸ್ಯಾಮ್ ಸಂಗ್ ಗ್ಯಾಲೆಕ್ಸಿ J4 ಪ್ರೈಮ್ ಸ್ಮಾರ್ಟ್ ಫೋನ್ ಗಳ ಬೆಲೆಯಲ್ಲಿ ಸ್ಯಾಮ್ ಸಂಗ್ ಭಾರೀ ಕಡಿತವನ್ನು ಮಾಡಿದೆ.

ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭಾರೀ ಕಡಿತ...!

ಆದರೆ ಹೊಸದಾಗಿ ಕಾಣಿಸಿಕೊಂಡಿರುವ ಬೆಲೆ ಕಡಿತವು ಕೇವಲ ಸಿಮೀತ ಅವಧಿ ಇಲ್ಲವೇ ಪರ್ವಮನೆಂಟ್ ಎನ್ನುವ ಬಗ್ಗೆ ಯಾವುದೇ ಮಾಹಿತಿಯೂ ದೊರೆತಿಲ್ಲ. ಈ ಹಿನ್ನಲೆಯಲ್ಲಿ ಶೀಘ್ರವೇ ಈ ಸ್ಮಾರ್ಟ್ ಫೋನ್ ಗಳನ್ನು ಖರೀದಿಸಿದರೆ ಹೆಚ್ಚಿನ ಲಾಭವಾಗಲಿದೆ. ಸದ್ಯ ಈ ಬೆಲೆ ಇಳಿಕೆಯೂ ಆಫ್ ಲೈನ್ ಮಾರುಕಟ್ಟೆಯಲ್ಲಿ ಮಾತ್ರವೇ ಲಭ್ಯವಿದೆ ಎನ್ನಲಾಗಿದೆ. ದೇಶ ಯಾವುದೇ ಮೂಲೆಯಲ್ಲಿರುವ ಸ್ಮಾರ್ಟ್ ಫೋನ್ ಮಾರಾಟಗಾರರ ಬಳಿ ಈ ಆಫರ್ ಪಡೆದುಕೊಳ್ಳಬಹುದಾಗಿದೆ.

ಸ್ಯಾಮ್ ಸಂಗ್ ಗ್ಯಾಲೆಕ್ಸಿ J8:

ಸ್ಯಾಮ್ ಸಂಗ್ ಗ್ಯಾಲೆಕ್ಸಿ J8:

ಸ್ಯಾಮ್ ಸಂಗ್ ಗ್ಯಾಲೆಕ್ಸಿ J8 ಸ್ಮಾರ್ಟ್ ಫೋನ್ ಲಾಂಚಿಂಗ್ ಸಂದರ್ಭದಲ್ಲಿ ರೂ.18,990 ಕ್ಕೆ ಮಾರಾಟವಾಗುತ್ತಿತು. ಆದರೆ ಸದ್ಯ ಬೆಲೆ ಕಡಿತಗೊಂಡ ಪರಿಣಾಮದಿಂದಾಗಿ ರೂ.17,990 ಕ್ಕೆ ಮಾರಾಟವಾಗಲಿದೆ. 6 ಇಂಚಿನ ಡಿಸ್ ಪ್ಲೇಯನ್ನು ಹೊಂದಿರುವ ಈ ಸ್ಮಾರ್ಟ್ ಫೋನ್ ಸ್ನಾಪ್ ಡ್ರಾಗನ್ 450 ಪ್ರೋಸೆಸರ್ ನೊಂದಿಗೆ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯೊಂದಿಗೆ ಮಾರಾಟವಾಗುತ್ತಿದೆ.

ಸ್ಯಾಮ್ ಸಂಗ್ ಗ್ಯಾಲೆಕ್ಸಿ J4:

ಸ್ಯಾಮ್ ಸಂಗ್ ಗ್ಯಾಲೆಕ್ಸಿ J4:

ಸ್ಯಾಮ್ ಸಂಗ್ ಗ್ಯಾಲೆಕ್ಸಿ J4 ಸ್ಮಾರ್ಟ್ ಫೋನ್ ಬೆಲೆಯಲ್ಲಿ ಸಹ ಇಳಿಕೆಯನ್ನು ಕಾಣಬಹುದಾಗಿದೆ. ಲಾಂಚಿಂಗ್ ಸಂದರ್ಭದಲ್ಲಿ ಈ ಸ್ಮಾರ್ಟ್ ಫೋನ್ ರೂ.9990ಕ್ಕೆ ಮಾರಾಟವಾಗುತ್ತಿತು. ಆದರೆ ಈ ಬಾರಿ ರೂ.8990ಕ್ಕೆ ದೊರೆಯುತ್ತಿದೆ. ಇದು 2 GB RAM ಮತ್ತು 16 GB ಇಂಟರ್ನಲ್ ಮೆಮೊರಿಯೊಂದಿಗೆ ಹಾಗೂ 3 GB RAM ಮತ್ತು 16 GB ಇಂಟರ್ನಲ್ ಮೆಮೊರಿಯೊಂದಿಗೆ ಮಾರಾಟವಾಗುತ್ತಿದೆ.

ಸ್ಯಾಮ್ ಸಂಗ್ ಗ್ಯಾಲೆಕ್ಸಿ J7 ಪ್ರೈಮ್:

ಸ್ಯಾಮ್ ಸಂಗ್ ಗ್ಯಾಲೆಕ್ಸಿ J7 ಪ್ರೈಮ್:

ಸ್ಯಾಮ್ ಸಂಗ್ ಗ್ಯಾಲೆಕ್ಸಿ J7 ಪ್ರೈಮ್ ಸ್ಮಾರ್ಟ್ ಫೋನ್ ಬೆಲೆ ಕಡಿತದ ನಂತರದಲ್ಲಿ ರೂ.9990ಕ್ಕೆ ಮಾರಾಟವಾಗುತ್ತಿದೆ. 5.5 ಇಂಚಿನ ಡಿಸ್ ಪ್ಲೇಯನ್ನು ಹೊಂದಿರುವ ಈ ಸ್ಮಾರ್ಟ್ ಫೋನ್ ನಲ್ಲಿ ಬಳಕೆದಾರರಿಗೆ ಉತ್ತಮ ಆಯ್ಕೆಗಳು ಬಳಕೆಗೆ ದೊರೆಯುತ್ತಿತು.

ಸ್ಯಾಮ್ ಸಂಗ್ ಗ್ಯಾಲೆಕ್ಸಿ A6 ಮತ್ತು A6+:

ಸ್ಯಾಮ್ ಸಂಗ್ ಗ್ಯಾಲೆಕ್ಸಿ A6 ಮತ್ತು A6+:

ಸ್ಯಾಮ್ ಸಂಗ್ ಗ್ಯಾಲೆಕ್ಸಿ A6 ಮತ್ತು A6+ ಸ್ಮಾರ್ಟ್ ಫೋನ್ ಗಳು 32 GB ಮತ್ತು 64 GB ಯೊಂದಿಗೆ ದೊರೆಯುತ್ತಿದೆ. ಸ್ಯಾಮ್ ಸಂಗ್ ಗ್ಯಾಲೆಕ್ಸಿ A6 ಕ್ರಮವಾಗಿ ರೂ.15490ಕ್ಕೆ ಹಾಗೂ ರೂ.16990ಕ್ಕೆ ಮಾರಾಟವಾಗುತ್ತಿದೆ. ಇದೇ ಮಾದರಿಯಲ್ಲಿ ಸ್ಯಾಮ್ ಸಂಗ್ ಗ್ಯಾಲೆಕ್ಸಿ A6+ ಸ್ಮಾರ್ಟ್ ಫೋನ್ ಕ್ರಮವಾಗಿ ರೂ.21,990ಕ್ಕೆ ದೊರೆಯುತ್ತಿದೆ.

Best Mobiles in India

English summary
Samsung Galaxy J8, Galaxy J4 and J7 Prime receive price cut in India, here are the new prices. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+