Home
ಮೊಬೈಲ್

ಶಿಯೋಮಿಗೆ ಭಯ ಹುಟ್ಟಿಸಿರುವ ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಜೆ8' ಮಾರಾಟ ನಾಳೆ ಆರಂಭ!

By Bhaskar N J

ಕಳೆದ ತಿಂಗಳು ಬಿಡುಗಡೆಯಾಗಿ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ನಿರೀಕ್ಷೆಯನ್ನು ಮೂಡಿಸಿರುವ ಸ್ಯಾಮ್‌ಸಂಗ್ ಕಂಪೆನಿಯ ಗ್ಯಾಲಾಕ್ಸಿ ಜೆ 8 ಸ್ಮಾರ್ಟ್‌ಫೋನ್ ಮಾರಾಟ ನಾಳೆಯಿಂದ ಆರಂಭವಾಗುತ್ತಿದೆ. ಈ ಬಗ್ಗೆ ಅಧಿಕೃತವಾಗಿ ಟ್ವೀಟ್​ ಮಾಡಿರುವ ಸ್ಯಾಂಮ್ಸಂಗ್​ ಇಂಡಿಯಾ, ಜೂನ್​ 28ರಂದು ಗ್ಯಾಲಾಕ್ಸಿ ಜೆ 8 ಮಾರಾಟವಾಗಲಿದೆ ಎಂದು ತಿಳಿಸಿದೆ.

ಭಾರತದಲ್ಲಿ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಸರಣಿಗಳಲ್ಲಿಯೇ ಅತಿ ಹೆಚ್ಚು ಮಾರಾಟವಾಗುತ್ತಿರುವ ಸರಣಿ ಸ್ಮಾರ್ಟ್‌ಫೋನ್‌ಗಳು ಎಂಬ ಹೆಗ್ಗಳಿಕೆ ಹೊಂದಿರುವ ಗ್ಯಾಲಾಕ್ಸಿ ಜೆ ಸರಣಿಗೆ ಇದು ಹೊಸ ಸೇರ್ಪಡೆ ಸ್ಮಾರ್ಟ್‌ಫೋನ್ ಆಗಿದ್ದು, ಡ್ಯುಯಲ್ ರಿಯರ್ ಕ್ಯಾಮೆರಾ, ಅಮೊಲೇಡ್ ಇನ್ಫಿನಿಟಿ ಡಿಸ್‌ಪ್ಲೇಯಂತಹ ಫೀಚರ್ಸ್ ಹೊಂದಿರುವ ಗ್ಯಾಲಾಕ್ಸಿ ಜೆ 8 ಕುತೋಹಲವನ್ನು ಮೂಡಿಸಿದೆ.

ಶಿಯೋಮಿಗೆ ಭಯ ಹುಟ್ಟಿಸಿರುವ ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಜೆ8' ಮಾರಾಟ ನಾಳೆ ಆರಂಭ!

18,990 ರೂಪಾಯಿಗಳಿಗೆ ನಾಳೆ ಮಾರುಕಟ್ಟೆಗೆ ಕಾಲಿಡುತ್ತಿರುವ ಸ್ಯಾಮ್‌ಸಂಗ್ ಕಂಪೆನಿಯ ಗ್ಯಾಲಾಕ್ಸಿ ಜೆ 8 ಸ್ಮಾರ್ಟ್‌ಫೋನ್ ಹೊಂದಿರುವ ಪೂರ್ತಿ ಫೀಚರ್ಸ್ ಯಾವುವು? ಸ್ಮಾರ್ಟ್‌ಫೋನ್ ಖರೀದಿಸಲು ಇರಬಹುದಾದ ಕಾರಣಗಳು ಏನು? ಗ್ಯಾಲಾಕ್ಸಿ ಜೆ 8 ಸ್ಮಾರ್ಟ್‌ಫೋನ್ ಜೊತೆಗೆ ಸ್ಯಾಮ್‌ಸಂಗ್ ನೀಡಿರುವ ಇನ್ನಿತರ ಆಫರ್‌ಗಳ ಬಗ್ಗೆ ಮುಂದೆ ಓದಿ ತಿಳಿಯಿರಿ.

ಗ್ಯಾಲಾಕ್ಸಿ ಜೆ 8 ಡಿಸ್‌ಪ್ಲೇ ಮತ್ತು ಪ್ರೊಸೆಸರ್!

ಗ್ಯಾಲಾಕ್ಸಿ ಜೆ 8 ಡಿಸ್‌ಪ್ಲೇ ಮತ್ತು ಪ್ರೊಸೆಸರ್!

ಮೊದಲೇ ಹೇಳಿದಂತೆ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಜೆ 8 ಸ್ಮಾರ್ಟ್‌ಫೋನ್ ಅತ್ಯುತ್ತಮ ಗುಣಮಟ್ಟದ ಸೂಪರ್ ಅಮೊಲೇಡ್ ಇನ್ಫಿನಿಟಿ ಡಿಸ್‌ಪ್ಲೇಯನ್ನು ಹೊಂದಿದೆ. 6 ಇಂಚಿನ ಫುಲ್ ಹೆಚ್‌‌ಡಿ ಪ್ಲಸ್ ಸೂಪರ್ ಅಮೊಲೇಡ್ ಇನ್ಫಿನಿಟಿ ಡಿಸ್‌ಪ್ಲೇ 18:5:9 ರ ಆಕಾರ ಅನುಪಾತದಲ್ಲಿದ್ದು, ಅತ್ಯುತ್ತಮ ಗುಣಮಟ್ಟದ ಡಿಸ್‌ಪ್ಲೇ ಸ್ಮಾರ್ಟ್‌ಫೋನ್ ಪ್ರಿಯರಿಗೆ ಇದು ಬೆಸ್ಟ್ ಸ್ಮಾರ್ಟ್‌ಫೋನ್.

ಪ್ರೊಸೆಸರ್ ಮತ್ತು RAM?

ಪ್ರೊಸೆಸರ್ ಮತ್ತು RAM?

ಎರಡು ಸಿಮ್​ನೊಂದಿಗೆ ಮಾರುಕಟ್ಟೆ ಪ್ರವೇಶಿಸಲಿರುವ J8 ಮೊಬೈಲ್​, ಸ್ನ್ಯಾಪ್​ಡ್ರಾಗನ್​ 450 ಪ್ರೊಸೆಸರ್ ಅನ್ನು ಹೊಂದಿದೆ. 4 GB RAM ಮತ್ತು 64 GB ಆಂತರಿಕ ಸಂಗ್ರಹಣಾ ವ್ಯವಸ್ಥೆಯಿರುವ ಈ ಸ್ಮಾರ್ಟ್‌ಫೋನಿನ ಸಂಗ್ರಹಣಾ ಸಾಮರ್ಥ್ಯವನ್ನು ಮೈಕ್ರೋ ಎಸ್​ಡಿ ಕಾರ್ಡ್​ ಮೂಲಕ 256 GBಗೆ ವರೆಗೂ ವಿಸ್ತರಿಸಬಹುದಾದ ಅವಕಾಶವನ್ನು ನೀಡಲಾಗಿದೆ.

ಕ್ಯಾಮೆರಾ ಫೀಚರ್ಸ್?

ಕ್ಯಾಮೆರಾ ಫೀಚರ್ಸ್?

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಜೆ 8 ಸ್ಮಾರ್ಟ್‌ಫೋನಿನ ಹಿಂಬದಿಯಲ್ಲಿ 16 + 5 MP ಶೂಟರ್ ಕ್ಯಾಮೆರಾವನ್ನು ಅಳವಡಿಸಲಾಗಿದ್ದು ಆಟೋ ಫೋಕಸ್​, ಫೇಸ್​ ಡಿಟೆಕ್ಷನ್​, ಹೆಚ್​ಡಿಆರ್​, ಸೇರಿದಂತೆ ಹಲವು ಫೀಚರ್​ಗಳನ್ನು ನೀಡಲಾಗಿದೆ. ಸೆಲ್ಫಿ ಪ್ರಿಯರಿಗಾಗಿ 16 MP ಸೆಲ್ಫೀ ಕ್ಯಾಮೆರಾವನ್ನು ಸಹ ಈ ಸ್ಮಾರ್ಟ್‌ಫೋನ್ ಹೊಂದಿರುವುದು ಇದರ ವಿಶೇಷತೆಗಳಲ್ಲಿ ಒಂದು.

ಬ್ಯಾಟರಿ ಮತ್ತು ಕನೆಕ್ಟಿವಿಟಿ!

ಬ್ಯಾಟರಿ ಮತ್ತು ಕನೆಕ್ಟಿವಿಟಿ!

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಜೆ 8 ಸ್ಮಾರ್ಟ್‌ಫೋನ್ 3500 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. 4ಜಿ ವೋಲ್ಟ್, ವೈ-ಫೈ, ಬ್ಲೂಟೂತ್, ಜಿಪಿಎಸ್ / ಎ-ಜಿಪಿಎಸ್, ಮೈಕ್ರೋ-ಯುಎಸ್‌ಬಿ ಪೋರ್ಟ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಹಾಗೂ ಡ್ಯೂಪ್ಲಿಕೇಟ್ ಚಿತ್ರಗಳನ್ನು ಡಿಲೀಟ್ ಮಾಡಬಹುದಾದ ಫೀಚರ್ ಅನ್ನು ಸ್ಮಾರ್ಟ್‌ಫೋನ್ ಹೊಂದಿದೆ.

ಇತರೆ ಏನೆಲ್ಲಾ ಫೀಚರ್ಸ್!!

ಇತರೆ ಏನೆಲ್ಲಾ ಫೀಚರ್ಸ್!!

ಮೇಲಿನ ಎಲ್ಲಾ ಫೀಚರ್ಸ್ ಸಮಾನ್ಯ ಎಂದು ನಿಮಗನಿಸಿದರೆ, ಕೃತಕ ಬುದ್ದಿಮತ್ತೆ ತಂತ್ರಜ್ಞಾನ, ಫೇಸ್‌ ಅನ್‌ಲಾಕ್ ಆಯ್ಕೆ ಮತ್ತು ಆಂಡ್ರಾಯ್ಡ್ ಓರಿಯೋ 8.0 ಫೀಚರ್ಸ್ ಈ ಸ್ಮಾರ್ಟ್‌ಫೋನಿನ ಇನ್ನಿತರ ವಿಶೇಷತೆಗಳಾಗಿವೆ. ಇನ್ನು ಈ ಫೋನಿನಲ್ಲಿ "ವೀಡಿಯೊ ಚಾಟ್" ಸೌಲಭ್ಯವಿದ್ದು, ವೀಡಿಯೊನೋಡುವಾಗಲೇ ವಾಟ್ಸ್‌ಆಪ್‌ನಲ್ಲಿ ಚಾಟ್ ಮಾಡಲು ಸಹಾಯ ಮಾಡುತ್ತದೆ.

ಮಾರಾಟ ಮತ್ತು ಆಫರ್ಸ್!

ಮಾರಾಟ ಮತ್ತು ಆಫರ್ಸ್!

ಜೂನ್ 28, ಅಂದರೆ, ನಾಳೆಯಿಂದಲೇ ಭಾರತದ ಸ್ಯಾಮ್‌ಸಂಗ್ ಸ್ಟೋರ್‌ಗಳಲ್ಲಿ ಮಾರಾಟವಾಗಲಿದೆ. 18,990 ರೂಪಾಯಿಗಳ ಬೆಲೆಯನ್ನು ಹೊಂದಿರುವ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಜೆ 8 ಸ್ಮಾರ್ಟ್‌ಫೋನ್ ಮೇಲೆ 1,500 ರೂಪಾಯಿಗಳ ಡಿಸ್ಕೌಂಟ್ಸ್ ಅನ್ನು ಪೇಟಿಎಂ ಮತ್ತು ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ನೀಡಲಾಗಿದೆ.

ಮೊಬೈಲ್‌ನಲ್ಲಿ ಪೋರ್ನ್ ವೀಕ್ಷಿಸುವವರಿಗೆ ಶಾಕಿಂಗ್ ಸುದ್ದಿ!..ಗಾಬರಿ ಹುಟ್ಟಿಸುತ್ತಿದೆ ವರದಿ!!

ಮೊಬೈಲ್‌ನಲ್ಲಿ ಪೋರ್ನ್ ವೀಕ್ಷಿಸುವವರಿಗೆ ಶಾಕಿಂಗ್ ಸುದ್ದಿ!..ಗಾಬರಿ ಹುಟ್ಟಿಸುತ್ತಿದೆ ವರದಿ!!

ಮೊಬೈಲ್ ನಲ್ಲಿಯೇ ಪೋರ್ನ್ ನೋಡುವವರಿಗೆ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಮೊಬೈಲ್‌ನಲ್ಲಿ ಪೋರ್ನ್ ನೋಡಿದ್ರೆ ಅಪಾಯವನ್ನು ನೀವೇ ಆಹ್ವಾನಿಸಿಕೊಂಡಂತೆ. ಪೋರ್ನ್ ಸೈಟ್ ಹ್ಯಾಕರ್ ಗಳ ಫೆವರೆಟ್ ಪ್ಲೇಸ್ ಆಗಿದ್ದು, ಈ ವೆಬ್‌ಸೈಟ್‌ಗಳಲ್ಲಿ ಪೋರ್ನ್ ನೋಡ್ತಿದ್ದಂತೆ ನಿಮಗೆ ಗೊತ್ತಿಲ್ಲದೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹ್ಯಾಕರ್ಸ್ ಕದಿಯುತ್ತಿದ್ದಾರೆ.
ಹೌದು, ಇದನ್ನು ನಾವು ಹೇಳಿದ್ದಲ್ಲ. ಬದಲಾಗಿ, ಮೊಬೈಲ್ ಸೆಕ್ಯೂರಿಟಿ ಟೆಕ್ನಾಲಜಿ ಕಂಪನಿ Wandera ಪೋರ್ನ್ ಸೈಟ್ ಹಾಗೂ ಮೊಬೈಲ್ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿದೆ. ಇದ್ರಲ್ಲಿ ಆಘಾತಕಾರಿ ಸಂಗತಿ ಗೊತ್ತಾಗಿದ್ದು, ಭದ್ರತಾ ಕಂಪೆನಿ ಕ್ಯಾಸ್ಪರ್ಸ್ಕಿ ಲ್ಯಾಬ್ ವರದಿಯ ಪ್ರಕಾರ, ಸುಮಾರು 12 ಮಿಲಿಯನ್ ಫೋನ್ ಬಳಕೆದಾರರು ಮಾಲ್ವೇರ್ ತೊಂದರೆಗೆ ಒಳಗಾಗಿದ್ದಾರಂತೆ.

ಇದೇ ವೇಳೆಯಲ್ಲಿ ಭಾರತವು ಅಶ್ಲೀಲ ವೆಬ್‌ಸೈಟ್‌ಗಳ ವೀಕ್ಷಣೆಯಲ್ಲಿ ಮೂರನೇ ಸ್ಥಾನದಲ್ಲಿರುವುದು ಸಹ ಗಾಬರಿ ಹುಟ್ಟಿಸುವಂತಿದೆ. ಇಂಟರ್ನೆಟ್ ಬಳಕೆ ದೇಶದಲ್ಲಿ ಮತ್ತು ಪ್ರಪಂಚದಲ್ಲಿ ಹೆಚ್ಚಿದಂತೆ ಇಂದು ಅಶ್ಲೀಲ ವೆಬ್‌ಸೈಟ್‌ಗಳ ಬಳಕೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಅಧ್ಯಯನ ಹೇಳಿರುವ ಎಚ್ಚರಿಕೆ ಮತ್ತು ಕುತೂಹಲ ಮಾಹಿತಿಗಳನ್ನು ತಿಳಿಯಲು ಮುಂದಿನ ಸ್ಲೈಡರ್‌ಗಳನ್ನು ಓದಿ.

ಹಣ ಪಡೆದು ಸಹಕರಿಸುತ್ತವೆ.

ಹಣ ಪಡೆದು ಸಹಕರಿಸುತ್ತವೆ.

ಹ್ಯಾಕರ್‌ಗಳಿಗೆ ಪೋರ್ನ್ ವೆಬ್ಸೈಟ್ ಅಥವಾ ಆಪ್ ಮೂಲಕ ಸ್ಮಾರ್ಟ್‌ಫೋನ್‌ಗೆ ಮಾಲ್ವೇರ್ ಕಳಿಸೋದು ಸುಲಭ, ಇದಕ್ಕೆ ಪೋರ್ನ್ ವೆಬ್‌ಸೈಟ್‌ಗಳು ಸಹ ಹಣ ಪಡೆದು ಸಹಕರಿಸುತ್ತವೆ. ಹಾಗಾಗಿಯೇ, ಸ್ಮಾರ್ಟ್‌ಫೋನ್ ಮೂಲಕ ಪೋರ್ನ್ ನೋಡುವವರು ಹೆಚ್ಚಿನ ಪ್ರಮಾಣದಲ್ಲಿ ಹ್ಯಾಕರ್ಸ್ ಗಾಳಕ್ಕೆ ಬೀಳುತ್ತಿದ್ದಾರೆ ಎಂದು ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಲಾಗಿದೆ.

ಅಶ್ಲೀಲ ವೆಬ್‌ಸೈಟ್‌ ವೀಕ್ಷಣೆಯಲ್ಲಿ ಭಾರತ 3ನೇ ಸ್ಥಾನ

ಅಶ್ಲೀಲ ವೆಬ್‌ಸೈಟ್‌ ವೀಕ್ಷಣೆಯಲ್ಲಿ ಭಾರತ 3ನೇ ಸ್ಥಾನ

2015 ನೇ ವರ್ಷದದಿಂದಲೂ ಅಧಿಕವಾಗಿ ಅಶ್ಲೀಲ ವೆಬ್‌ಸೈಟ್‌ಗಳನ್ನು ವೀಕ್ಷಿಸಿದ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಇನ್ನು ಅಮೆರಿಕಾ ಮೊದಲನೇ ಸ್ಥಾನದಲ್ಲಿ ಹಾಗೂ ಬ್ರಿಟನ್ ಎರಡನೇ ಸ್ಥಾನದಲ್ಲಿದೆ. ಕೆನಡಾ ಮತ್ತು ಜರ್ಮನ್‌ 4 ಮತ್ತು 5 ನೇ ಸ್ಥಾನದಲ್ಲಿವೆ ಅಧ್ಯಯನ ಮಾಹಿತಿಗಳು ತಿಳಿಸಿವೆ.

ಪೋರ್ನ್‌ ವೆಬ್‌ಸೈಟ್‌ ವೀಕ್ಷಿಸಿದ ಸರಾಸರಿ ಮಾಹಿತಿ

ಪೋರ್ನ್‌ ವೆಬ್‌ಸೈಟ್‌ ವೀಕ್ಷಿಸಿದ ಸರಾಸರಿ ಮಾಹಿತಿ

ಭಾರತದಲ್ಲಿ ಅಶ್ಲೀಲ ವೆಬ್‌ಸೈಟ್‌ಗಳನ್ನು ಸರಾಸರಿಯಾಗಿ 9 ನಿಮಿಷ ಮತ್ತು 30ಸೆಕೆಂಡ್ ವೀಕ್ಷಿಸಿದ್ದಾರೆ. ಅಮೇರಿಕಾದಲ್ಲಿ 9 ನಿಮಿಷ ಮತ್ತು 51 ಸೆಕೆಂಡ್‌, ಬ್ರಿಟನ್‌ನಲ್ಲಿ 9 ನಿಮಿಷ ಮತ್ತು 18 ಸೆಕೆಂಡ್‌ಗಳು ಪೋರ್ನ್‌ ವೆಬ್‌ಸೈಟ್‌ಗಳನ್ನು ವೀಕ್ಷಿಸಿದ್ದಾರೆ ಎಂದು ಅಧ್ಯಯನ ಹೇಳಿದೆ.

ಅಶ್ಲೀಲ ವೆಬ್‌ಸೈಟ್‌ ಸರಾಸರಿ ವೀಕ್ಷಣೆ

ಅಶ್ಲೀಲ ವೆಬ್‌ಸೈಟ್‌ ಸರಾಸರಿ ವೀಕ್ಷಣೆ

ಅಶ್ಲೀಲ ವೆಬ್‌ಸೈಟ್‌ನಿಂದಲೇ ನಡೆದ ಅಧ್ಯಯನದ ಪ್ರಕಾರ, ಭಾರತೀಯ ಪುರುಷರು ಅಶ್ಲೀಲ ವೆಬ್‌ಸೈಟ್‌ಗಳನ್ನು ಸರಾಸರಿ 9 ನಿಮಿಷ ಮತ್ತು 22 ಸೆಕೆಂಡ್‌ಗಳು ವೀಕ್ಷಿಸಿದ್ದಾರೆ. ಮಹಿಳೆಯರ ಪ್ರಮಾಣ 9 ನಿಮಿಷ ಮತ್ತು 36 ಸೆಕೆಂಡ್‌ಗಳಿವೆ. ಇನ್ನು ಪ್ರಪಂಚದಾದ್ಯಂತ ಸರಾಸರಿ ಮಹಿಳೆಯರು 10 ನಿಮಿಷ ಮತ್ತು 10 ಸೆಕೆಂಡ್‌ಗಳು ಅಶ್ಲೀಲ ವೆಬ್‌ಸೈಟ್‌ಗಳನ್ನು ವೀಕ್ಷಿಸಿದ್ದಾರೆ.

ರಜೆ ಇದ್ದರೆ ಟ್ರಾಫಿಕ್‌ ಹೆಚ್ಚು

ರಜೆ ಇದ್ದರೆ ಟ್ರಾಫಿಕ್‌ ಹೆಚ್ಚು

ಅಶ್ಲೀಲ ವೆಬ್‌ಸೈಟ್‌ಗಳನ್ನು ನೋಡುವವರ ಸಂಖ್ಯೆ ಪಬ್ಲಿಕ್‌ ರಜೆದಿನಗಳಲ್ಲಿ ಹೆಚ್ಚಾಗಿರುತ್ತದೆ. ಅಲ್ಲದೇ, ರಾತ್ರಿ 10 ಗಂಟೆಯಿಂದ 12 ಗಂಟೆ ವೇಳೆಯಲ್ಲಿ ಅಶ್ಲೀಲ ವೆಬ್‌ಸೈಟ್‌ ವೀಕ್ಷಣಾ ಟ್ರಾಫಿಕ್‌ ಹೆಚ್ಚಾಗಿರುತ್ತದೆ. ವೆಬ್‌ಸೈಟ್‌ಗಳೀಗೆ ಹೆಚ್ಚು ಟ್ರಾಫಿಕ್ ಇರುವ ಸಮಯದಲ್ಲಿ ಪ್ರತಿ ಸೆಕೆಂಡಿಗೆ 1000 GB ಸರ್ಫ್ ಅಗಿರುವ ಬಗ್ಗೆ ಅಧ್ಯಯನದ ಪ್ರಕಾರ ಮಾಹಿತಿ ಬೆಳಕಿಗೆ ಬಂದಿದೆ.

1,999 ರೂ.ಗಳ ಈ ಸ್ಪೀಕರ್ ನೀರಿನ ಒಳಗೂ ಹಾಡುತ್ತದೆ! Riversong Fusion Speaker
ಶೇಕಡ 30 ರಷ್ಟು ಮಹಿಳೆಯರು

ಶೇಕಡ 30 ರಷ್ಟು ಮಹಿಳೆಯರು

ಅಶ್ಲೀಲ ವೆಬ್‌ಸೈಟ್‌ಗಳನ್ನು ಹೆಚ್ಚು ವೀಕ್ಷಿಸುವ ದೇಶಗಳ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ಅಧ್ಯಯನ ನೀಡಿದ ಡಾಟಾ ಪ್ರಕಾರ 60 ದಶಲಕ್ಕಿಂತ ಹೆಚ್ಚು ಜನರು ಅಶ್ಲೀಲ ವೆಬ್‌ಸೈಟ್‌ ಬಳಕೆದಾರರು ಇದ್ದಾರೆ. ಇಂಟರ್‌ನೆಟ್ ಬಳಕೆದಾರರಲ್ಲಿ ಭಾರತದ ಶೇಕಡ 30 ರಷ್ಟು ಮಹಿಳೆಯರು ಸಹ ಅಶ್ಲೀಲ ವೆಬ್‌ಸೈಟ್‌ಗಳನ್ನು ನೋಡುತ್ತಾರೆ ಎಂದು ಅಧ್ಯಯನ ಹೇಳಿದೆ.

Best Mobiles in India

English summary
Samsung Galaxy J8 with AMOLED Infinity Display to go on sale in India from June 28. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+