Subscribe to Gizbot

ಸ್ಯಾಮ್‌ಸಂಗ್ ಗ್ಯಾಲಕ್ಸಿ K zoom ಹಣಾಹಣಿಗೆ ತಯಾರು

Written By:

ಮಾರುಕಟ್ಟೆಯಲ್ಲಿ ಧೀಮಂತವಾಗಿ ಮುಂದುವರೆಯುತ್ತಿರುವ ಕಂಪೆನಿ ಸ್ಯಾಮ್‌ಸಂಗ್ ಹೊಸ ಮಾದರಿಯ ಕ್ಯಾಮೆರಾ ಸೆಂಟ್ರಿಕ್ ಫೋನ್ ಅನ್ನು ಸಿಂಗಾಪುರಲ್ಲಿ ಬಿಡುಗಡೆ ಮಾಡಿದೆ.

ಕಳೆದ ವರ್ಷ ಹೆಚ್ಚು ಪ್ರಸಿದ್ಧಿಯನ್ನು ಪಡೆದ ಗ್ಯಾಲಕ್ಸಿ S4 ಝೂಮ್ ನ ಯಶಸ್ಸಿನ ಇನ್ನೊಂದು ಮುಖವೆಂದು ಈ ಫೋನ್ ಅನ್ನು ನಿಮಗೆ ಕರೆಯಬಹುದು. ಈ ಫೋನ್ ಕೂಡ ಅತ್ಯಾಧುನಿಕ ಕ್ಯಾಮೆರಾ ತಂತ್ರಜ್ಞಾನವನ್ನು ಹೊಂದಿದ್ದರೂ ವಿನ್ಯಾಸ ಹಾಗೂ ಬಣ್ಣ ಮನಸೆಳೆಯುವಂತಿದೆ. ಕ್ಯಾರೊಕಲ್ ಬ್ಲಾಕ್, ಶಿಮ್ಮರಿ ವೈಟ್ ಹಾಗೂ ಎಲೆಕ್ಟ್ರಿಕ್ ಬ್ಲೂ ಬಣ್ಣದಲ್ಲಿ ಹ್ಯಾಂಡ್‌ಸೆಟ್ ಲಭ್ಯವಿದೆ.

ಗ್ರಾಹಕರ ಮೆಚ್ಚುಗೆಯನ್ನು ಗಳಿಸಲಿರುವ ಸ್ಯಾಮ್‌ಸಂಗ್ K zoom ಚಾಲ್ತಿಗೆ

ಇದುವರೆಗೂ ಕಂಪೆನಿ ಇದರ ಬೆಲೆಯನ್ನು ನಿಗದಿಪಡಿಸಿಲ್ಲ ಮತ್ತು ಈ ವರ್ಷದಲ್ಲಿ ಇದು ಮಾರುಕಟ್ಟೆಗೆ ಪ್ರವೇಶಿಸಲಿದೆ. ನೀವು ಈ ಫೋನ್‌ನಲ್ಲಿ ತೆಗೆದ ಚಿತ್ರಗಳನ್ನು ವರ್ಗಾಯಿಸುವ ಸುಲಭ ವಿಧಾನವನ್ನು ಈ ಪೋನ್ ನಿಮಗೆ ಒದಗಿಸಲಿದ್ದು ಅಸಾಧ್ಯ ಎಂಬ ಮಾತನ್ನು ಸಾಧ್ಯ ಎಂಬಲ್ಲಿಗೆ ನಿಲ್ಲಿಸುವ ಸಾಧನೆಯನ್ನು ಮಾಡಲಿದೆ.

ಗ್ಯಾಲಕ್ಸಿ ಕೆ ಝೂಮ್ 4.8 ಇಂಚಿನ ಸೂಪರ್ AMOLED ಡಿಸ್‌ಪ್ಲೇಯನ್ನು ಹೊಂದಿದೆ. 1280 x 720 ಪಿಕ್ಸೆಲ್ ಎಚ್‌ಡಿ ರೆಸಲ್ಯೂಶನ್ ಅನ್ನು ಇದು ಒದಗಿಸುತ್ತದೆ. ಇದು ಹೆಕ್ಸಾ ಕೋರ್ (1.7 GHz ಡ್ಯುಯೆಲ್ ಕೋರ್ + 1.3 GHz ಕ್ವಾಡ್ ಕೋರ್) ಎಕ್ಸಿನೋಸ್ (5260) ಪ್ರೊಸೆಸರ್ ಹಾಗೂ 2ಜಿಬಿ ರ್‌ಯಾಮ್‌ನೊಂದಿಗೆ ಇದು ಸಂಯೋಜನೆಗೊಂಡಿದೆ. ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್) ಓಎಸ್ ಇದರಲ್ಲಿದ್ದು ಇತ್ತೀಚಿನ ಸ್ಮಾಮ್‌ಸಂಗ್ ಟಚ್‌ವಿಝ್ ಯುಎಕ್ಸ್ ಇದರಲ್ಲಿದೆ. ಇದು 1080 ಪಿ ವೀಡಿಯೊವನ್ನು ಶೂಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

2MP ಫ್ರಂಟ್ ಕ್ಯಾಮೆರಾ ಶೂಟಿಂಗ್ ಅನ್ನು ಮೊಬೈಲ್ ಹೊಂದಿದ್ದು ಇದು ಸೆಲ್ಫಿ ಫೋಟೋ ತೆಗೆಯುವ ಆಯ್ಕೆಯನ್ನು ಒಳಗೊಂಡಿದೆ. 8 ಜಿಬಿ ಸಂಗ್ರಹಣಾ ಸಾಮರ್ಥ್ಯ ಇದರಲ್ಲಿದ್ದು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಇದನ್ನು 64ಜಿಬಿವರೆಗೆ ವಿಸ್ತರಿಸಬಹುದಾಗಿದೆ. ಸ್ಯಾಮ್‌ಸಂಗ್‌ನ ಅಲ್ಟ್ರಾ ಪವರ್ ಸೇವಿಂಗ್ ಮೋಡ್ ಅಪ್ಲಿಕೇಶನ್ ಅನ್ನು ಮೊಬೈಲ್ ಹೊಂದಿದೆ. ಗ್ಯಾಲಕ್ಸಿ S4 ಝೂಮ್‌ನಿಂದ ಪ್ರತ್ಯೇಕವಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ K zoom ಅನ್ನು ರಚಿಸಲಾಗಿದೆ.

ಈ ಫೋನ್ ನಿಜವಾಗಿಯೂ ಮಾರುಕಟ್ಟೆಯಲ್ಲಿ ಈಗ ಚಾಲ್ತಿಯಲ್ಲಿರುವ ಎಕ್ಸ್‌ಪೀರಿಯಾ Z1 ಕಾಂಪ್ಯಾಕ್ಟ್, ನೋಕಿಯಾ ಲೂಮಿಯಾ 1520 ಹಾಗೂ ಇತರ ಕ್ಯಾಮೆರಾ ಯೋಜಿತ ಫೋನ್‌ಗಳಿಗೆ ನಿಜವಾಗಿಯೂ ಸ್ಪರ್ಧೆಯನ್ನು ಒಡ್ಡುತ್ತದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot