Samsung: ಬಂತು ಹೊಸ 5G ಫೋನ್: ಕೇವಲ 7,999 ರೂ.! 5000mAh ಬ್ಯಾಟರಿ, 50MP ಕ್ಯಾಮೆರಾ ಇದೆ
ಸದ್ದಿಲ್ಲದೆ ಭಾರತಕ್ಕೆ ಬಂತು ಹೊಸ ಸ್ಯಾಮ್‌ಸಂಗ್ ಫೋನ್. ಅದೂ ಸಹ ಕೇವಲ 7999 ರೂ.ಗೆ ಬಿಡುಗಡೆ. ಹೌದು, ಟೆಕ್ ದೈತ್ಯ ಸ್ಯಾಮ್‌ಸಂಗ್ ಸೈಲೆಂಟ್ ಆಗಿಯೇ ಸ್ಯಾಮ್‌ಸಂಗ್ ಗ್ಯಾಲಕ್ಸಿ M05 (Samsung Galaxy M05) ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಇದು ಕಂಪನಿಯ ಗ್ಯಾಲಕ್ಸಿ M (Galaxy M) ಸರಣಿಗೆ ಹೊಸ ಸೇರ್ಪಡೆಯಾಗಿದೆ. ಈ ಫೋನ್ Samsung Galaxy M04 ನ ಉತ್ತರಾಧಿಕಾರಿಯಾಗಿ ಬಂದಿದೆ. ಬಹುತೇಕ ಒಂದೇ ವಿನ್ಯಾಸವನ್ನು ಹೊಂದಿದೆ. ಬನ್ನಿ, ನೂತನ ಸ್ಯಾಮ್‌ಸಂಗ್ ಗ್ಯಾಲಕ್ಸಿ M05 ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ಸ್ಯಾಮ್‌ಸಂಗ್ ಗ್ಯಾಲಕ್ಸಿ M05 ಅನ್ನು ಅತ್ಯುತ್ತಮ ಕ್ಯಾಮೆರಾ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಈ ಫೋನಿನಲ್ಲಿ MediaTek Helio G85 ಚಿಪ್‌ಸೆಟ್, ದೊಡ್ಡ 5000mAh ಬ್ಯಾಟರಿ ಮತ್ತು 50 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಈ ಫೋನ್ 6.7 ಇಂಚಿನ HD + ಡಿಸ್ಪ್ಲೇಯನ್ನು ಹೊಂದಿದೆ. 4GB RAM ಮತ್ತು 64GB ವರೆಗಿನ ಇಂಟರ್ನಲ್ ಸ್ಟೋರೇಜ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಅಗ್ಗದ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M05 ಬೆಲೆ ಮತ್ತು ಲಭ್ಯತೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ M05 ಫೋನನ್ನು 4GB + 64GB ಸ್ಟೋರೇಜ್ ರೂಪಾಂತರದಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಬೆಲೆ 7,999 ರೂ. ಇದೆ. ಈ ಸ್ಮಾರ್ಟ್‌ಫೋನ್ ಪುದೀನ ಹಸಿರು ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ. ನೀವು ಈ ಹೊಸ ಫೋನನ್ನು ಅಮೇಜಾನ್ (Amazon), Samsung.com ಮತ್ತು ಆಯ್ದ ಚಿಲ್ಲರೆ ಅಂಗಡಿಗಳಲ್ಲಿ ಖರೀದಿಸಬಹುದು.
ಸ್ಯಾಮ್‌ಸಂಗ್ ಗ್ಯಾಲಕ್ಸಿ M05 ಫೋನಿನ ವಿನ್ಯಾಸ
ಸ್ಯಾಮ್‌ಸಂಗ್ ಗ್ಯಾಲಕ್ಸಿ M05 ಫೋನಿನ ಮುಂಭಾಗದ ಫಲಕದಲ್ಲಿ U ಆಕಾರದ ನಾಚ್ ಇದೆ. ಇದರೊಂದಿಗೆ ಫ್ಲಾಟ್ ಡಿಸ್ಪ್ಲೇಯನ್ನು ನೀಡಲಾಗಿದೆ. ಇದಲ್ಲದೆ, ಫೋನಿನ ಕೆಳಭಾಗದಲ್ಲಿ ಹೆಚ್ಚಿನ ಬೆಜೆಲ್‌ಗಳು ಕಂಡುಬರುತ್ತವೆ. ಜೊತೆಗೆ, ಫೋನಿನ ಬಲಭಾಗದಲ್ಲಿ ಪವರ್ ಮತ್ತು ವಾಲ್ಯೂಮ್ ಬಟನ್‌ಗಳನ್ನು ನೀಡಲಾಗಿದೆ. ಹಿಂಭಾಗದ ಫಲಕದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು ಎಲ್ಇಡಿ ಫ್ಲ್ಯಾಷ್ ಇದೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ M05 ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ: ಕಂಪನಿಯು ಸ್ಯಾಮ್‌ಸಂಗ್ ಗ್ಯಾಲಕ್ಸಿ M05 ಫೋನಿನಲ್ಲಿ 6.7 ಇಂಚಿನ HD + ಡಿಸ್ಪ್ಲೇಯನ್ನು ನೀಡಿದೆ. ಇದು 720 × 1600 ಪಿಕ್ಸೆಲ್ ರೆಸಲ್ಯೂಶನ್ ಮತ್ತು 20: 9 ಆಕಾರ ಅನುಪಾತದ ಬೆಂಬಲವನ್ನು ಪಡೆದಿದೆ.
ಪ್ರೊಸೆಸರ್: ಸ್ಯಾಮ್‌ಸಂಗ್ ಗ್ಯಾಲಕ್ಸಿ M05 ಮೊಬೈಲ್ MediaTek Helio G85 ಚಿಪ್‌ಸೆಟ್ ಅನ್ನು ಹೊಂದಿದೆ. ಈ ಅಗ್ಗದ ಫೋನ್ ಬಳಕೆದಾರರಿಗೆ ಸುಗಮ ಅನುಭವವನ್ನು ನೀಡುತ್ತದೆ. ಈ ಮೊಬೈಲ್ ಇತ್ತೀಚಿನ ಆಂಡ್ರಾಯ್ಡ್ 14 ಆಧಾರಿತ OneUI6 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ.
ಸ್ಟೋರೇಜ್: ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ M05 ಮೊಬೈಲ್ 4GB RAM ಮತ್ತು 64GB ವರೆಗಿನ ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಇದು 4GB ವರ್ಚುವಲ್ RAM ಅನ್ನು ಸಹ ಹೊಂದಿದೆ. ಇದರ ಸಹಾಯದಿಂದ 8GB ವರೆಗಿನ ಶಕ್ತಿಯನ್ನು ಬಳಸಬಹುದು. ಇದಲ್ಲದೆ, ಸ್ಟೋರೇಜ್ ಹೆಚ್ಚಿಸಿಕೊಳ್ಳಲು ಮೈಕ್ರೋ ಎಸ್ ಡಿ ಕಾರ್ಡ್ ಸೌಲಭ್ಯವೂ ಲಭ್ಯವಿದೆ. ಇದರೊಂದಿಗೆ ಸ್ಟೋರೇಜ್ ಅನ್ನು 1 TB ವರೆಗೆ ವಿಸ್ತರಿಸಬಹುದು.
ಈ ಸುದ್ದಿ ಓದಿದ್ದೀರಾ?: Samsung Galaxy A06 vs Samsung Galaxy A15: ಜನ ಮೆಚ್ಚಿದ ಫೋನ್‌ಗಳು.. ನಿಮ್ಮ ಆಯ್ಕೆ ಯಾವುದು?
ಕ್ಯಾಮೆರಾ: ಕಂಪನಿಯು ಸ್ಯಾಮ್‌ಸಂಗ್ ಗ್ಯಾಲಕ್ಸಿ M05 ಫೋನನ್ನು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬಿಡುಗಡೆ ಮಾಡಿದೆ. ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ ಮತ್ತು 2 ಮೆಗಾಪಿಕ್ಸೆಲ್ ಆಳ ಸಂವೇದಕವನ್ನು ಹೊಂದಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ: ನೂತನ ಸ್ಯಾಮ್‌ಸಂಗ್ ಗ್ಯಾಲಕ್ಸಿ M05 ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ದೊಡ್ಡ ಬ್ಯಾಟರಿಯನ್ನು ಚಾರ್ಜ್ ಮಾಡಲು, 25W ವೇಗದ ಚಾರ್ಜಿಂಗ್ ಬೆಂಬಲ ಲಭ್ಯವಿದೆ.
ಇತರೆ ವೈಶಿಷ್ಟ್ಯಗಳು: ಸ್ಯಾಮ್‌ಸಂಗ್ ಗ್ಯಾಲಕ್ಸಿ M05 ಫೋನಿನ ಇತರೆ ವೈಶಿಷ್ಟ್ಯಗಳೆಂದರೆ, ಇದು ಫೇಸ್ ಅನ್‌ಲಾಕ್ ವೈಶಿಷ್ಟ್ಯ ಹೊಂದಿದೆ. ಜೊತೆಗೆ, ಡ್ಯುಯಲ್ ಸಿಮ್ 4G, ವೈ-ಫೈ, ಬ್ಲೂಟೂತ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್‌ನಂತಹ ಆಯ್ಕೆಗಳನ್ನು ಈ ಫೋನಿನಲ್ಲಿ ನೀಡಲಾಗಿದೆ.


Click it and Unblock the Notifications








