Home
ಮೊಬೈಲ್

9,000 ರೂ. ಒಳಗೆ ಲಭ್ಯವಾಗುವ Samsung ಫೋನ್ ಶೀಘ್ರದಲ್ಲೇ ಮಾರುಕಟ್ಟೆಗೆ!

ಟೆಕ್ ದೈತ್ಯ Samsung ಭಾರತದಲ್ಲಿ ತನ್ನ ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್‌ಗಳ ಸರಣಿಯನ್ನು ವಿಸ್ತರಿಸಲು ಸಜ್ಜಾಗಿದೆ. ಮಾರ್ಚ್ 2025ರಲ್ಲಿ ಬಿಡುಗಡೆಯಾದ Galaxy M06 5G ಯಶಸ್ವಿಯಾಗಿದ ನಂತರ, ಕಂಪನಿಯು ಶೀಘ್ರವೇ Galaxy M07 4G ಬಿಡುಗಡೆಗೆ ತಯಾರಿ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹೊಸ ಮಾದರಿಯು ಭಾರತದಲ್ಲಿ ಬಜೆಟ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಬಲಪಡಿಸುವ ಗುರಿ ಹೊಂದಿದೆ. ಆನ್‌ಲೈನ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಫೋನ್ ನಿರೀಕ್ಷಿತ ಬೆಲೆ ಮತ್ತು ಪ್ರಮುಖ ವೈಶಿಷ್ಟ್ಯಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಆನ್‌ಲೈನ್ ವರದಿಗಳ ಪ್ರಕಾರ, Galaxy M07 4G ಬೆಲೆ ₹8,000 ರಿಂದ ₹9,000 ರ ನಡುವೆ ಇರಬಹುದೆಂದು (ಸ್ಮಾರ್ಟ್‌ಪ್ರಿಕ್ಸ್ ವರದಿ) ತಿಳಿದುಬಂದಿದೆ. ಇದು Galaxy M06 5G ಯ ಪ್ರಾರಂಭಿಕ ಬೆಲೆ (₹9,499)ಗಿಂತ ಸ್ವಲ್ಪ ಕಡಿಮೆ. ಈ ಫೋನ್‌ನಲ್ಲಿ 4GB RAM ಮತ್ತು 64GB ಆಂತರಿಕ ಸ್ಟೋರೇಜ್ ಲಭ್ಯವಿರಲಿದೆ ಎಂದು ನಿರೀಕ್ಷಿಸಲಾಗಿದೆ. ಭಾರತದಲ್ಲಿ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮೇಲೆ ಇರುವ ಹೆಚ್ಚಿನ ಬೇಡಿಕೆಯನ್ನು ಗಮನಿಸಿ, Samsung ತನ್ನ ಈ 4G ಆವೃತ್ತಿಯ Galaxy M07 ಮಾದರಿಯನ್ನು ಪರಿಚಯಿಸುತ್ತಿದೆ ಎಂದು ವರದಿಗಳು ಸೂಚಿಸುತ್ತವೆ.

ಸೋರಿಕೆಯ ಹಲವು ವರದಿಗಳನ್ನು ನಂಬುವುದಾದರೆ, Galaxy M07 4G, 6.7-ಇಂಚಿನ LCD ಡಿಸ್‌ಪ್ಲೇಯನ್ನು ಒಳಗೊಂಡಿರಲಿದ್ದು, ಇದು HD+ (720x1,600 ಪಿಕ್ಸೆಲ್‌ಗಳು) ರೆಸಲ್ಯೂಶನ್, 260ppi ಪಿಕ್ಸೆಲ್ ಸಾಂದ್ರತೆ ಮತ್ತು 90Hz ರಿಫ್ರೆಶ್ ರೇಟ್ ಹೊಂದಿದೆ. ಫೋನ್ MediaTek Helio G99 ಚಿಪ್‌ಸೆಟ್‌ನಿಂದ ಚಾಲಿತವಾಗಲಿದ್ದು, ದೈನಂದಿನ ಕಾರ್ಯಕ್ಷಮತೆಗೆ ಇದು ಉತ್ತಮ ಬೆಂಬಲ ನೀಡುತ್ತದೆ. ಇದು ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದ್ದು, Samsung ಆರು ವರ್ಷಗಳವರೆಗೆ ಆಂಡ್ರಾಯ್ಡ್ ಅಪ್‌ಡೇಟ್‌ಗಳನ್ನು ಒದಗಿಸುವ ಸಾಧ್ಯತೆಯಿದೆ.

9,000 ರೂ. ಒಳಗೆ ಲಭ್ಯವಾಗುವ Samsung ಫೋನ್ ಶೀಘ್ರದಲ್ಲೇ ಮಾರುಕಟ್ಟೆಗೆ!

ಕ್ಯಾಮರಾ ವಿಭಾಗದಲ್ಲಿ, Galaxy M07 4G ಡ್ಯುಯಲ್-ರಿಯರ್ ಕ್ಯಾಮರಾ ಸೆಟಪ್ ಅನ್ನು ಹೊಂದಿರಲಿದೆ. ಇದರಲ್ಲಿ 50-ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಮತ್ತು 2-ಮೆಗಾಪಿಕ್ಸೆಲ್ ಸೆಕೆಂಡರಿ ಲೆನ್ಸ್ ಇರಲಿದೆ. ಸೆಲ್ಫಿಗಾಗಿ, 8-ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮರಾ ಇರಲಿದೆ. ಈ ಫೋನ್ 1080p ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ. ಬ್ಯಾಟರಿಯ ವಿಷಯದಲ್ಲಿ, ಇದು 25W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡಬಹುದು, ಇದು ದೀರ್ಘಕಾಲದ ಬಳಕೆಯನ್ನು ಖಚಿತಪಡಿಸುತ್ತದೆ.

Galaxy M07 4G ಯಲ್ಲಿ IP54 ರೇಟಿಂಗ್ ಇರುವುದರಿಂದ ಇದು ಧೂಳು ಮತ್ತು ನೀರಿನ ಸ್ಪ್ಲಾಷ್‌ಗಳಿಂದ ಸುರಕ್ಷಿತವಾಗಿರುತ್ತದೆ. ಸುರಕ್ಷತೆಗಾಗಿ, ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೊಂದಿರಲಿದೆ. ಈ ಹ್ಯಾಂಡ್‌ಸೆಟ್ ಸ್ಟೀರಿಯೋ ಸ್ಪೀಕರ್‌ಗಳು ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿರಲಿದ್ದು, ಇದರ ದಪ್ಪ 7.6mm ಆಗಿರುತ್ತದೆ ಎಂದು ಹೇಳಲಾಗಿದೆ. ಆದರೆ, Samsung ಕಂಪೆನಿಯು ಈ ಯಾವುದೇ ಮಾಹಿತಿಯನ್ನು ಖಚಿತಪಡಿಸಿಲ್ಲ ಎಂಬುದನ್ನು ನಾವಿಲ್ಲ ಗಮನಿಸಬೇಕು.

ಒಟ್ಟಾರೆಯಾಗಿ, Samsung Galaxy M07 4G ಪೋನಿನ ಫೀಚರ್ಸ್ Galaxy M06 5G ಯ ಹಲವು ವೈಶಿಷ್ಟ್ಯಗಳಿಗೆ ಹೋಲಿಕೆಯಾಗಬಹುದು ಎಂದು ಕಾಣುತ್ತಿದೆ. ಆದಾಗ್ಯೂ, Galaxy M06 5G ಗಿಂತ ಪ್ರೊಸೆಸರ್ (MediaTek Dimensity 6300), RAM (8GB ವರೆಗೆ) ಮತ್ತು ಸ್ಟೋರೇಜ್ (128GB ವರೆಗೆ) ವಿಷಯದಲ್ಲಿ ಸ್ವಲ್ಪ ಭಿನ್ನವಾಗಿರಬಹುದು. Galaxy M07 4G ಯ ಈ ನಿರೀಕ್ಷಿತ ಫೀಚರ್ಸ್ ಬಜೆಟ್ ವಿಭಾಗದಲ್ಲಿ ಉತ್ತಮ ಆಯ್ಕೆಯಾಗುವ ಸಾಧ್ಯತೆ ಇದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
The upcoming Samsung Galaxy M07 4G is tipped to feature a 5,000mAh battery along with other leaked entry-level specifications ahead of its launch in india.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+