Home
ಮೊಬೈಲ್

ಸ್ಯಾಮ್‌ಸಂಗ್ ನೀಡಿದ ಭರ್ಜರಿ ಸುದ್ದಿಗೆ ಬೆಚ್ಚಿಬಿದ್ದವು ಚೀನಾ ಮೊಬೈಲ್ ಕಂಪೆನಿಗಳು!

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಚೀನಾ ಮೊಬೈಲ್ ಕಂಪೆನಿಗಳ ಪರಾಕ್ರಮವನ್ನು ತಡೆಯಲು ಜನಪ್ರಿಯ ಮೊಬೈಲ್ ಕಂಪೆನಿ ಸ್ಯಾಮ್‌ಸಂಗ್ ಮುಂದಾಗಿದೆ. ಭಾರತೀಯರಿಗಾಗಿಯೇ ವಿಶೇಷ ಸೀರಿಸ್ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆ ಮಾಡಲು ತಯಾರಾಗಿರುವ ಸ್ಯಾಮ್‌ಸಂಗ್, ದೇಶದ ಇತರೆ ಮೊಬೈಲ್ ಕಂಪೆನಿಗಳನ್ನು ಬೆಚ್ಚಿಬೀಳಿಸುವ ಸುದ್ದಿಯೊಂದನ್ನು ನೀಡಿದೆ.

ಹೌದು, ಇತ್ತೀಚಿಗಷ್ಟೇ ಭಾರತಕ್ಕಾಗಿಯೇ ವಿಶೇಷ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಬಗ್ಗೆ ತಿಳಿಸಿದ್ದ ಸ್ಯಾಮ್‌ಸಂಗ್ ಕಂಪೆನಿ ಆ ಬಗ್ಗೆ ಕೆಲವು ವಿಶೇಷ ಮಾಹಿತಿಗಳನ್ನು ಬಿಟ್ಟುಕೊಟ್ಟಿದೆ. ಭಾರತೀಯರಿಗಾಗಿಯೇ ಲಾಂಚ್ ಆಗುತ್ತಿರುವ ನೂತನ ಸರಣಿಯ ಸ್ಮಾರ್ಟ್‌ಫೋನ್‌ಗಳ ಬೆಲೆ ಕೇವಲ 9,500 ರೂ.ಗಳಿಂದ ಆರಂಭವಾಗಲಿದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ.

ಸ್ಯಾಮ್‌ಸಂಗ್ ನೀಡಿದ ಭರ್ಜರಿ ಸುದ್ದಿಗೆ ಬೆಚ್ಚಿಬಿದ್ದವು ಚೀನಾ ಮೊಬೈಲ್ ಕಂಪೆನಿಗಳು!

ಭಾರತೀಯರಿಗಾಗಿಯೇ ವಿಶೇಷವಾಗಿ ನಿರ್ಮಿತವಾಗುತ್ತಿರುವ ಸ್ಯಾಮ್‌ಸಂಗ್‌ ಈ ನೂತನ ಸರಣಿ ಸ್ಮಾರ್ಟ್‌ಫೋನ್‌ಗಳನ್ನು 'ಗ್ಯಾಲಾಕ್ಸಿ M' ಎಂದು ಕರೆದಿದೆ. ಹಾಗಾದರೆ, ಭಾರತಕ್ಕೆ ಎಂಟ್ರಿ ನೀಡುತ್ತಿರುವ ನೂತನ 'ಗ್ಯಾಲಾಕ್ಸಿ M' ಸರಣಿ ಸ್ಮಾರ್ಟ್‌ಫೋನ್‌ಗಳು ಹೇಗಿವೆ?, ಈ ಸುದ್ದಿಗೆ ಚೀನಾ ಮೊಬೈಲ್ ಕಂಪೆನಿಗಳು ಬೆಚ್ಚಿಬಿದ್ದದ್ದು ಏಕೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಭಾರತೀಯರಿಗೆ 'ಗ್ಯಾಲಾಕ್ಸಿ M' ಸೀರಿಸ್!

ಭಾರತೀಯರಿಗೆ 'ಗ್ಯಾಲಾಕ್ಸಿ M' ಸೀರಿಸ್!

ಸ್ಯಾಮ್‌ಸಂಗ್ ಕಂಪೆನಿ ಇದೇ ಮೊದಲ ಬಾರಿಗೆ ದೇಶದಲ್ಲಿ ತನ್ನ ಹೊಸ ಸೀರಿಸ್ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುತ್ತಿದೆ. ಗ್ಯಾಲಾಕ್ಸಿ M' ಎಂದು ಕರೆಯಲಾಗಿರುವ ಈ ಸ್ಮಾರ್ಟ್‌ಪೋನ್‌ಗಳು ಭಾರತೀಯ ಮೊಬೈಲ್ ಮಾರುಕಟ್ಟೆಯ ದೃಷ್ಟಿಯಲ್ಲಿಟ್ಟುಕೊಂಡು ಜಾಗತಿಕವಾಗಿ ಬಿಡುಗಡೆಯಾಗುತ್ತಿವೆ ಎಂಬುದನ್ನು ಸ್ಯಾಮ್‌ಸಂಗ್ ಕಂಪೆನಿ ಬಹುತೇಕ ಖಚಿತಪಡಿಸಿದೆ.

ಚೀನೀ ಕಂಪೆನಿಗಳಿಗೆ ಬ್ರೇಕ್?!

ಚೀನೀ ಕಂಪೆನಿಗಳಿಗೆ ಬ್ರೇಕ್?!

ದೇಶದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್‌ಪೋನ್‌ಗಳನ್ನು ಬಿಡುಗಡೆ ಮಾಡಿ ಯಶಸ್ಸು ಕಂಡಿರುವ ಚೀನಾ ಕಂಪೆನಿಗಳಿಗೆ ಬ್ರೇಕ್ ಹಾಕಲು ಸ್ಯಾಮ್‌ಸಂಗ್ ಮುಂದಾಗಿದೆ. ಹಾಗಾಗಿ, ಚೀನಾ ಮೊಬೈಲ್ ಕಂಪೆನಿಗಳಿಗೆ ಸೆಡ್ಡು ಹೊಡೆಯುವಂತಹ ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲು ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ M' ಸರಣಿಯನ್ನು ಪರಿಚಯಿಸಿದೆ.

ಚೀನೀ ಕಂಪೆನಿಗಳಿಗೆ ಆಘಾತ!

ಚೀನೀ ಕಂಪೆನಿಗಳಿಗೆ ಆಘಾತ!

ಬಜೆಟ್ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲು ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ M' ಸರಣಿಯನ್ನು ಪರಿಚಯಿಸುತ್ತಿರುವುದು ಈಗಾಗಲೇ ಚೀನಾದ ಮೊಬೈಲ್ ಕಂಪೆನಿಗಳಿಗೆ ತಿಳಿದಿತ್ತು. ಆದರೆ, 'ಗ್ಯಾಲಾಕ್ಸಿ M'ಸರಣಿಯ ಫೋನ್‌ಗಳ ಬೆಲೆ ಕೇವಲ 9,500 ರೂ.ಗಳಿಂದ ಆರಂಭವಾಗಲಿದೆ ಎಂದು ಕಂಪೆನಿ ಮೂಲಗಳು ಹೇಳಿರುವುದು ಈಗ ಚೀನೀ ಕಂಪೆನಿಗಳಿಗೆ ಆಘಾತ ತಂದಿದೆ.

ಎರಡು ಸ್ಮಾರ್ಟ್‌ಫೋನ್‌ಗಳು!

ಎರಡು ಸ್ಮಾರ್ಟ್‌ಫೋನ್‌ಗಳು!

ಸ್ಯಾಮ್‌ಸಂಗ್ ಕಂಪೆನಿ ಹೊಸ 'ಗ್ಯಾಲಾಕ್ಸಿ M' ಸರಣಿಯಲ್ಲಿ ಎರಡು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಕಂಪೆನಿಯ ಮೂಲಗಳೇ ನೀಡಿರುವ ಖಚಿತ ಮಾಹಿತಿಯಂತೆ, ಗ್ಯಾಲಾಕ್ಸಿ M10' ಮತ್ತು ಗ್ಯಾಲಾಕ್ಸಿ M20 ಎಂಬ ಎರಡು ಸ್ಮಾರ್ಟ್‌ಫೋನ್‌ಗಳು ಕ್ರಮವಾಗಿ 9,500 ಮತ್ತು 15,000 ರೂ.ಬೆಲೆಗಳನ್ನು ಹೊಂದಿರಲಿವೆ ಎನ್ನಲಾಗಿದೆ.

5000mAH ಬ್ಯಾಟರಿ!

5000mAH ಬ್ಯಾಟರಿ!

ಇದೇ ಮೊದಲ ಬಾರಿಗೆ ಸ್ಯಾಮ್‌ಸಂಗ್ ಕಂಪೆನಿ 5000mAH ಬ್ಯಾಟರಿ ಸಾಮರ್ಥ್ಯದ ಬಜೆಟ್ ಫೋನ್‌ ಅನ್ನು ಪರಿಚಯಿಸುತ್ತಿದೆ. ಗ್ಯಾಲಾಕ್ಸಿ M20 3,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದರೆ, ಗ್ಯಾಲಾಕ್ಸಿ M30 5000 ಎಂಎಎಚ್ ಬ್ಯಾಟರಿ ಹೊಂದಿರಲಿವೆ. ಇದು ಹೆಚ್ಚು ಭಾರತೀಯರನ್ನು ಸೆಳೆಯಲು ಸಹಾಯವಾಗುತ್ತದೆ ಎಂಬುದು ಸ್ಯಾಮ್‌ಸಂಗ್ ಕಂಪೆನಿಯ ಉದ್ದೇಶವಾಗಿದೆ.

ಕ್ಯಾಮೆರಾಗಳೇ ವಿಶೇಷ!

ಕ್ಯಾಮೆರಾಗಳೇ ವಿಶೇಷ!

ಕ್ಯಾಮೆರಾ ಪ್ರಿಯ ಭಾರತೀಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಗ್ಯಾಲಾಕ್ಸಿ M20 ಹಾಗೂ M30 ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಂದಿವೆ. ಗ್ಯಾಲಕ್ಸಿ M20 ಯಲ್ಲಿ 13MP + 5MP ಪಿಕ್ಸೆಲ್ ಸಾಮರ್ಥ್ಯದ ಎರಡು ರಿಯರ್ ಕ್ಯಾಮೆರಾಗಳು ಹಾಗೂ ಗ್ಯಾಲಾಕ್ಸಿ M30 ಫೋನಿನಲ್ಲಿ 5MP + 5MP + 5MP ಸಾಮರ್ಥ್ಯದ ಮೂರು ರಿಯರ್ ಕ್ಯಾಮೆರಾಗಳನ್ನು ಹೊಂದಿವೆ ಎನ್ನಲಾಗಿದೆ.

16ಎಂಪಿ ಸೆಲ್ಫಿ ಕ್ಯಾಮೆರಾ

16ಎಂಪಿ ಸೆಲ್ಫಿ ಕ್ಯಾಮೆರಾ

ಡ್ಯುಯಲ್ ಮತ್ತು ಟ್ರಿಪಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿರುವ ಎರಡೂ ಸ್ಮಾರ್ಟ್‌ಫೋನ್‌ಗಳು 16ಎಂಪಿ ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿರಲಿವೆ ಎಂದು ಹೇಳಲಾಗಿದೆ. 9,500 ರೂ.ಗಳಿಂದ 15,000 ರೂ.ಬೆಲೆಯಲ್ಲಿ 16ಎಂಪಿ ಸೆಲ್ಫಿ ಕ್ಯಾಮೆರಾಗಳನ್ನು ಪರಿಚಯಿಸುವ ಮೂಲಕ ಭಾರತದಲ್ಲಿ ಸೆಲ್ಫೀ ಆಧಾರಿತ ಮಾರುಕಟ್ಟೆಯನ್ನು ಸಹ ತನ್ನ ತೆಕ್ಕೆಗೆ ಹಾಕಿಕೊಳ್ಳಲು ಮುಂದಾಗಿದೆ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

'ಗ್ಯಾಲಾಕ್ಸಿ M' ಸ್ಮಾರ್ಟ್‌ಫೋನ್‌ಗಳ ಬಗ್ಗೆ ಸ್ಯಾಮ್‌ಸಂಗ್ ಕಂಪೆನಿಯ ಮೂಲಗಳು ಅಷ್ಟೇನು ಮಾಹಿತಿಯನ್ನು ಹೊರಹಾಕಿಲ್ಲ. ಬ್ಯಾಟರಿ ಮತ್ತು ಕ್ಯಾಮೆರಾ ವಿಶೇಷತೆಗಳ ಜೊತೆಗೆ ಬೆಲೆಗಳು ಹೊರಬಿದ್ದಿವೆ. ಫೆಬ್ರವರಿ ತಿಂಗಳಾಂತ್ಯದ ವೇಳೆಗೆ ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ M' ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡುವುದು ಪಕ್ಕಾ ಎನ್ನುತ್ತಿವೆ ವರದಿಗಳು.

Best Mobiles in India

English summary
Samsung’s new Galaxy M series will feature two new smartphones with the company’s new Infinity-V display. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+