Home
ಮೊಬೈಲ್

Samsung ಪ್ರಿಯರಿಗೆ ಶುಭ ಸುದ್ದಿ.. ಅಗ್ಗದ Galaxy 5G ಫೋನ್ ಮೇಲೆ ಮಸ್ತ್ ಡಿಸ್ಕೌಂಟ್

ನೀವು ಸ್ಯಾಮ್‌ಸಂಗ್ ಮೊಬೈಲ್ ಪ್ರಿಯರೇ..? 12,000 ಕ್ಕಿಂತ ಒಳಗಿನ ಮೊಬೈಲ್‌ ಖರೀದಿಸುವ ಬಯಕೆ ಹೊಂದಿದ್ದೀರಾ..? ಹಾಗಿದ್ರೆ, ಸ್ಯಾಮ್‌ಸಂಗ್ ನಿಮಗಾಗಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಸ್ಯಾಮ್‌ಸಂಗ್ ಮತ್ತು ಅಮೆಜಾನ್ ಬಜೆಟ್ 5G ಸ್ಮಾರ್ಟ್‌ಫೋನ್ ಪ್ರಿಯರಿಗೆ ಕೆಲವು ಮೊಬೈಲ್‌ಗಳನ್ನು ಡಿಸ್ಕೌಂಟ್‌ ಮೇಲೆ ಲಭ್ಯಗೊಳಿಸಿದೆ. ಈ ಪೈಕಿ Samsung Galaxy M15 5G ಕೂಡ ಒಂದಾಗಿದೆ. ಇದು ಬಜೆಟ್ ಬೆಲೆಯಲ್ಲಿ ಬಿಡುಗಡೆ ಮಾಡಿದ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಈ ಫೋನ್‌ ಮೇಲೆ ಅಮೆಜಾನ್ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. 12,000 ರೂ.ಗಿಂತ ಕಡಿಮೆ ದರದ 5G ಸ್ಮಾರ್ಟ್‌ಫೋನ್‌ಗಾಗಿ ಹುಡುಕುತ್ತಿರುವವರಿಗೆ ಇದು ಪರ್ಫೆಕ್ಟ್ ಆಯ್ಕೆಯಾಗಿದೆ.

ಸಾಕಷ್ಟು ಹೊಸ ಫೀಚರ್ಸ್‌, ದೀರ್ಘಾವದಿ ಬಾಳಿಕೆಯ ಭರವಸೆಯೊಂದಿಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ15 5ಜಿ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲಾಯಿತು. ಈ ಫೋನ್ ಬೆಲೆ, ಡಿಸೈನ್‌ ಹಾಗೂ ಅದ್ಭುತ ಫೀಚರ್ಸ್‌ಗಳಿಂದ ಮೊಬೈಲ್ ಪ್ರಿಯರನ್ನ ಆಕರ್ಷಿಸಿತ್ತು. ಇತ್ತೀಚಿಗೆ ಬಿಡುಗಡೆಯಾದ ಹೊಸ 5G ಸ್ಮಾರ್ಟ್‌ಫೋನ್ ಆಗಿರುವುದರಿಂದ, ಇದು ಈ ಬೆಲೆಯ ವ್ಯಾಪ್ತಿಯಲ್ಲಿ ಹೊಸ ಅತ್ಯಾಕರ್ಷಕ ಫೀಚರ್ಸ್‌ಗಳನ್ನು ಹೊಂದಿದೆ. ಭಾರೀ ರಿಯಾಯಿತಿಯೊಂದಿಗೆ ಲಭ್ಯವಿರುವ ಈ ಫೋನ್ ಖರೀದಿಸಲು ಸ್ಯಾಮ್‌ಸಂಗ್ ಪ್ರಿಯರು ಮುಗಿಬಿದ್ದಿದ್ದಾರೆ.

Samsung ಪ್ರಿಯರಿಗೆ ಶುಭ ಸುದ್ದಿ.. Galaxy 5G ಫೋನ್ ಮೇಲೆ ಮಸ್ತ್ ಡಿಸ್ಕೌಂಟ್

ಇಷ್ಟೆಲ್ಲಾ ವಿಶೇಷತೆ ಹೊಂದಿರುವ ಈ ಮೊಬೈಲ್‌ನಬೆಲೆ ಎಷ್ಟು ಎಂಬ ಕುತೂಹಲ, ಪ್ರಶ್ನೆ ಖಂಡಿತಾ ನಿಮಲ್ಲಿ ಎಲ್ಲರಿಗೂ ಇರುತ್ತದೆ. ಸ್ಯಾಮ್‌ಸಂಗ್ ಈ ಸ್ಮಾರ್ಟ್‌ಫೋನ್ ಅನ್ನು ಏಪ್ರಿಲ್‌ನಲ್ಲಿ 6000mAh ಬ್ಯಾಟರಿ, ಡೈಮೆನ್ಸಿಟಿ ಚಿಪ್‌ಸೆಟ್, 50MP ಕ್ಯಾಮೆರಾದಂತಹ ಅನೇಕ ಬೊಂಬಾಟ್ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಿತು. ಬಿಡುಗಡೆಯ ಸಮಯದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ15 5ಜಿ 4GB RAM + 128GB ಇಂಟರ್ನಲ್ ಸ್ಟೋರೇಜ್‌ನ ಬೆಲೆ 13,299 ರೂ. ಮತ್ತು 128GB ರೂಪಾಂತರವು 14,799 ರೂ. ಇತ್ತು.

1,000 ರೂ.ಗಳ ಬ್ಯಾಂಕ್ ಡಿಸ್ಕೌಂಟ್

ಆದರೆ, ಅಮೆಜಾನ್‌ನಲ್ಲಿ ಪ್ರಸ್ತುತ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ15 5ಜಿ ಮೂಲ ಬೆಲೆಯಲ್ಲಿ ರಿಯಾಯಿತಿಯೊಂದಿಗೆ 12,999 ರೂ.ಗಳಲ್ಲಿ ಪಟ್ಟಿಮಾಡಲಾಗಿದೆ. ಇದಲ್ಲದೆ, ಗ್ಯಾಲಕ್ಸಿ ಎಂ15 5ಜಿನಲ್ಲಿ 1,000 ರೂ.ಗಳ ಬ್ಯಾಂಕ್ ಡಿಸ್ಕೌಂಟ್ ಸಹ ಅಮೆಜಾನ್ ನೀಡುತ್ತಿದೆ. ಹೀಗಾಗಿ, ಈ ಫೋನ್‌ನ ಬೆಲೆ ಮತ್ತಷ್ಟು ಇಳಿಕೆಯಾಗಿದೆ. ಅಮೆಜಾನ್‌ ಹಾಗೂ ಸ್ಯಾಮ್‌ಸಂಗ್‌ ವೆಬ್‌ಸೈಟ್‌ ಮೂಲಕ ಖರೀದಿಸಬಹುದು.

11,999 ರೂ.ಗೆ ಈ ಫೋನ್‌ ನಿಮ್ಮದಾಗಿಸಿಕೊಳ್ಳಿ

ಅಂದರೆ ನೀವು ಬ್ಯಾಂಕ್ ಕೊಡುಗೆಯ ಲಾಭವನ್ನು ಪಡೆದರೆ, ನೀವು ಗ್ಯಾಲಕ್ಸಿ ಎಂ15 5ಜಿ ಫೋನ್‌ ಅನ್ನು 11,999 ರೂ. ಬೆಲೆಯಲ್ಲಿ ಖರೀದಿಸಬಹುದು. Amazon ನಲ್ಲಿನ ರಿಯಾಯಿತಿಯು ಬಜೆಟ್ ಸ್ಮಾರ್ಟ್‌ಫೋನ್ ಪ್ರಿಯರಿಗೆ ಈ ಸ್ಯಾಮ್‌ಸಂಗ್ ಫೋನ್‌ನೊಂದಿಗೆ ಹೆಚ್ಚು ಆಕರ್ಷಿಸಲು ಸಹಾಯ ಮಾಡುತ್ತದೆ. ಸ್ಯಾಮ್‌ಸಂಗ್‌ನ ಜನಪ್ರಿಯತೆಯು ಗ್ಯಾಲಕ್ಸಿ ಎಂ15 5ಜಿಯ ​​ಶಕ್ತಿಯಾಗಿದೆ ಎನ್ನಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ M15 5G ಫೀಚರ್ಸ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ15 5ಜಿ ಫೀಚರ್ಸ್‌ ಬಗ್ಗೆ ಹೇಳುವುದಾದರೆ, ಇದು ಸ್ಯಾಮ್‌ಸಂಗ್‌ನ ಅತ್ಯುತ್ತಮ 5G ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಈ ಮೊಬೈಲ್ 6.5 ಇಂಚಿನ FHD+ ಇನ್ಫಿನಿಟಿ-V ಸೂಪರ್ AMOLED ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇಯು 1080 × 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಇದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಹೊಂದಿದ್ದು, 1000 nits ವಾಟರ್‌ಡ್ರಾಪ್-ಶೈಲಿಯ ನಾಚ್ ಅನ್ನು ಪಡೆದಿದೆ.

ಗ್ಯಾಲಕ್ಸಿ M15 5G ಪ್ರೊಸೆಸರ್ ಏನು?

ಸ್ಯಾಮ್‌ಸಂಗ್ ಗ್ಯಾಲಕ್ಸಿ M15 5G ಮೊಬೈಲ್‌ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ 6nm ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದರ ಜೊತೆಗೆ ಆಂಡ್ರಾಯ್ಡ್‌ 14 ಸಓಎಸ್‌ ಸಪೋರ್ಟ್‌ ಇದೆ. ಇನ್ನು ಈ ಫೋನ್ 4GB RAM + 128GB ಹಾಗೂ 6GB RAM + 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದ್ದು, ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿಯನ್ನು 1 TB ವರೆಗೂ ವಿಸ್ತರಿಸುವ ಆಯ್ಕೆ ಇದೆ.

Samsung ಪ್ರಿಯರಿಗೆ ಶುಭ ಸುದ್ದಿ.. Galaxy 5G ಫೋನ್ ಮೇಲೆ ಮಸ್ತ್ ಡಿಸ್ಕೌಂಟ್

ಕಣ್ಣು ಕುಕ್ಕುವ ಕ್ಯಾಮೆರಾ ಸೆಟಪ್

ಈ ಗ್ಯಾಲಕ್ಸಿ M15 5G ಮೊಬೈಲ್‌ನ ಕ್ಯಾಮೆರಾ ಸೆಟಪ್‌ ಬಗ್ಗೆ ಹೇಳುವುದಾದರೆ, ಟ್ರಿಪಲ್‌ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಮೊದಲ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೆನ್ಸಾರ್‌ ಪಡೆದಿದೆ. ಎರಡನೇ ಕ್ಯಾಮೆರಾವು 5 ಮೆಗಾಪಿಕ್ಸಲ್‌ ಹಾಗೂ ತೃತೀಯ ಕ್ಯಾಮೆರಾವು 2 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯ ಪಡೆದಿದೆ. ಇನ್ನು ಸೆಲ್ಫಿ ಕ್ಯಾಮೆರಾವು 13 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿ ಇದೆ.

ಸುಧೀರ್ಘ ಬಾಳಿಕೆಯ ಬ್ಯಾಟರಿ ಬ್ಯಾಕಪ್

ಸ್ಯಾಮ್‌ಸಂಗ್ ಗ್ಯಾಲಕ್ಸಿ M15 5G ಮೊಬೈಲ್‌ 6000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದೆ. ಇದಕ್ಕೆ ಪೂರಕವಾಗಿ 25W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಸಹ ಹೊಂದಿದೆ. ಇದರೊಂದಿಗೆ ಯುಎಸ್‌ಬಿ ಟೈಪ್-ಸಿ ಆಡಿಯೋ, ಸ್ಟಿರಿಯೊ ಸ್ಪೀಕರ್‌ ಆಯ್ಕೆಗಳ ಜೊತೆಗೆ ಬ್ಲೂಟೂತ್ 5.3, ಎನ್‌ಎಫ್‌ಸಿ ಆಯ್ಕೆಗಳು ಹಾಗೂ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಆಯ್ಕೆ ಸಹ ಇವೆ.

ಡ್ಯುಯಲ್ ಸಿಮ್, 3.5 ಎಂಎಂ ಆಡಿಯೊ ಜ್ಯಾಕ್

ಇನ್ನೂ, 5G SA / NSA, ಡ್ಯುಯಲ್ 4G VoLTE, GPS+ ಗ್ಲೋನಾಸ್ ಆಯ್ಕೆಗಳಿವೆ. ರಕ್ಷಣೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಒದಗಿಸಲಾಗಿದೆ. ಇದು ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ+ ನ್ಯಾನೋ/ ಮೈಕ್ರೊ ಎಸ್‌ಡಿ) ಮತ್ತು 3.5 ಎಂಎಂ ಆಡಿಯೊ ಜ್ಯಾಕ್ ಅನ್ನು ಸಹ ಹೊಂದಿದೆ. ಒಟ್ನಲ್ಲಿ, 2,000 ಕ್ಕಿಂತ ಕಡಿಮೆ ಬೆಲೆಯ 5G ಸ್ಮಾರ್ಟ್‌ಫೋನ್‌ ಹುಡುಕುತ್ತಿರುವ ಮೊಬೈಲ್‌ ಪ್ರಿಯರನ್ನು ಈ Samsung Galaxy M15 5G ಫೋನ್ ತನ್ನತ್ತ ಸೆಳೆದಿದೆ.

Best Mobiles in India

English summary
Samsung Galaxy M15 5G gets huge discount on amazon Check Price, discount and Specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+