ಬಂತು ಶುಭ ದಿನ! ಇಂದೇ ಎರಡು Samsung ಫೋನ್ ಲಾಂಚ್; 12,500ಕ್ಕಿಂತ ಕಡಿಮೆ ಬೆಲೆ.. ಫೀಚರ್ಸ್ ಹೇಗಿವೆ ಗೊತ್ತಾ?
ಸ್ಯಾಮ್‌ಸಂಗ್ ತನ್ನ ಅಭಿಮಾನಿಗಳಿಗೆ ಇಂದು ಡಬಲ್ ಗುಡ್ ನ್ಯೂಸ್ ನೀಡಲಿದೆ. ಕಂಪನಿಯು ಎರಡು ಹೊಸ 5G ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ M16 5G (Samsung Galaxy M16) ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ F16 5G (Samsung Galaxy M06 5G) ಮೊಬೈಲ್ ಇಂದು ಅಧಿಕೃತವಾಗಿ ಅನಾವರಣಗೊಳ್ಳಲಿದೆ. ಈಗಾಗಲೇ ಎರಡೂ ಮೊಬೈಲ್‌ಗಳ ಬೆಲೆ ವಿವರಗಳು ಬಿಡುಗಡೆಗೂ ಮುನ್ನ ಬಹಿರಂಗಗೊಂಡಿವೆ. ಈ ಫೋನ್‌ಗಳು 12 ರಿಂದ 15 ಸಾವಿರ ರೂ. ಬಜೆಟ್ ವ್ಯಾಪ್ತಿಯಲ್ಲಿ ಲಾಂಚ್ ಆಗಬಹುದು. ಬನ್ನಿ, ಈ ಫೋನ್‌ಗಳ ನಿರೀಕ್ಷಿತ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ಸ್ಯಾಮ್‌ಸಂಗ್ ಗ್ಯಾಲಕ್ಸಿ M16 5G ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ F16 5G ಮೊಬೈಲ್ ಇಂದು (ಫೆಬ್ರವರಿ 27) ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಬಿಡುಗಡೆಯಾಗಲಿವೆ. ಈ ಬಗ್ಗೆ ಕಂಪನಿಯು ಮೊನ್ನೆಯಷ್ಟೇ ಘೋಷಿಸಿತ್ತು. ಇದೀಗ ಎರಡೂ ಫೋನ್‌ಗಳ ಬೆಲೆ ಮಾಹಿತಿಯು ಸಾಮಾಜಿಕ ಜಾಲತಾಣ ಎಕ್ಸ್ (X) ಮೂಲಕ ಟಿಪ್‌ಸ್ಟರ್ ಅಭಿಷೇಕ್ ಯಾದವ್ ಬಹಿರಂಗಪಡಿಸಿದ್ದಾರೆ. ವರದಿಯ ಪ್ರಕಾರ, ಸ್ಯಾಮ್‌ಸಂಗ್ ಗ್ಯಾಲಕ್ಸಿ M16 5G ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ F16 5G ಮೊಬೈಲ್ 4GB + 128GB, 6GB + 128GB ಮತ್ತು 8GB + 128GB ಸ್ಟೋರೇಜ್ ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿರುತ್ತವೆ. ಎರಡೂ ಮೊಬೈಲ್‌ಗಳ ಬೆಲೆ ಒಂದೇ ಆಗಿರುತ್ತದೆ.

4GB RAM + 128GB ಸ್ಟೋರೇಜ್ ಬೆಲೆ = 13,499 ರೂ.
6GB RAM + 128GB ಸ್ಟೋರೇಜ್ ಬೆಲೆ = 14,999 ರೂ.
8GB RAM + 128GB ಸ್ಟೋರೇಜ್ ಬೆಲೆ =16,499 ರೂ.
ಕಂಪನಿಯು ಲಾಂಚ್ ಆಫರ್ ಪ್ರಯುಕ್ತ ಎರಡೂ ಫೋನ್‌ಗಳ ಖರೀದಿ ಮೇಲೆ 1,000 ರೂ.ಗಳ ರಿಯಾಯಿತಿ ನೀಡುವ ಸಾಧ್ಯತೆಯಿದೆ. ನೀವು ರಿಯಾಯಿತಿ ಬಳಿಕ ಮತ್ತಷ್ಟು ಕಡಿಮೆ ಬೆಲೆಗೆ ಖರೀದಿಸಬಹುದು. ಈ ಫೋನ್ ನೀಲಿ, ಆಳವಾದ ನೀಲಿ, ತಿಳಿ ನೀಲಿ, ನೇರಳೆ, ತಿಳಿ ನೇರಳೆ, ಕಿತ್ತಳೆ ಮತ್ತು ಗಾಢ ಹಸಿರು ಬಣ್ಣಗಳಲ್ಲಿ ಲಭ್ಯವಿದೆ. ಈ ಮೊಬೈಲ್‌ಗಳ ಆಫರ್ ಬೆಲೆ ತಿಳಿಯಲು ಮುಂದೆ ಓದಿದೆ.
4GB RAM + 128GB ಸ್ಟೋರೇಜ್ ಬೆಲೆ = 12,499 ರೂ.
6GB RAM + 128GB ಸ್ಟೋರೇಜ್ ಬೆಲೆ = 13,999 ರೂ.
8GB RAM + 128GB ಸ್ಟೋರೇಜ್ ಬೆಲೆ = 15,499 ರೂ.
ಸ್ಯಾಮ್‌ಸಂಗ್ ಗ್ಯಾಲಕ್ಸಿ M16 5G ಮತ್ತು ಗ್ಯಾಲಕ್ಸಿ F16 5G ವೈಶಿಷ್ಟ್ಯಗಳು
ಸ್ಯಾಮ್‌ಸಂಗ್ ಗ್ಯಾಲಕ್ಸಿ M16 5G ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ F16 5G ಮೊಬೈಲ್‌ಗಳು ಈಗಾಗಲೇ BIS ಪ್ರಮಾಣೀಕರಣವನ್ನು ಪಡೆದಿವೆ. ವೈಫೈ ಅಲೈಯನ್ಸ್‌ನಲ್ಲಿಯೂ ಸಹ ಕಾಣಿಸಿಕೊಂಡಿವೆ. ಜೊತೆಗೆ ಗೀಕ್‌ಬೆಂಚ್ ಡೇಟಾಬೇಸ್‌ನಲ್ಲಿಯೂ ಈ ಮೊಬೈಲ್‌ಗಳು ಕಾಣಿಸಿಕೊಂಡಿವೆ. ಅದರಂತೆ ಈ ಎರಡೂ ಫೋನ್‌ಗಳು ಒಂದೇ ರೀತಿಯ ವೈಶಿಷ್ಟ್ಯಗಳನ್ನು ಹೊಂದಿವೆ.
ಡಿಸ್ಪ್ಲೇ ವಿವರ
ಸ್ಯಾಮ್‌ಸಂಗ್ ಗ್ಯಾಲಕ್ಸಿ M16 5G ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ F16 5G ಮೊಬೈಲ್‌ಗಳು 6.7 ಇಂಚಿನ ಸೂಪರ್ ಅಲೋಲೆಡ್ ಡಿಸ್ಪ್ಲೇ ಹೊಂದಿರುತ್ತವೆ. ಈ ಡಿಸ್ಪ್ಲೇಯು ಫುಲ್ ಎಚ್‌ಡಿ ಪ್ಲಸ್ ರೆಸಲ್ಯೂಶನ್ ಮತ್ತು 90Hz ರಿಫ್ರೆಶ್ ದರದ ಬೆಂಬಲದೊಂದಿಗೆ ಬರುತ್ತದೆ.
ಪ್ರೊಸೆಸರ್ ಯಾವುದು
ಸ್ಯಾಮ್‌ಸಂಗ್ ಗ್ಯಾಲಕ್ಸಿ M16 5G ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ F16 5G ಫೋನ್‌ಗಳು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ಹೊಂದಿರಲಿವೆ. ಗ್ರಾಫಿಕ್ಸ್‌ಗಾಗಿ ಎರಡೂ ಮೊಬೈಲ್‌ಗಳು, ARM ಮಾಲಿ G57 MC2 ಜಿಪಿಯು ಸಹ ಹೊಂದಿರುತ್ತವೆ.
ಕ್ಯಾಮೆರಾ ಸೆಟಪ್
ಸ್ಯಾಮ್‌ಸಂಗ್ ಗ್ಯಾಲಕ್ಸಿ M16 5G ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ F16 5G ಮೊಬೈಲ್‌ಗಳಲ್ಲಿ ಒಂದು ಟ್ರಿಪಲ್ ಸೆಟಪ್ ಮತ್ತು ಇನ್ನೊಂದು ಡ್ಯುಯಲ್ ಸೆಟಪ್ ಹೊಂದಿರುವ ನಿರೀಕ್ಷೆಯಿದೆ. ಎರಡೂ ಸಹ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿರುವ ನಿರೀಕ್ಷೆಯಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಸ್ಯಾಮ್‌ಸಂಗ್ ಗ್ಯಾಲಕ್ಸಿ M16 5G ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ F16 5G ಎರಡೂ ಫೋನ್‌ಗಳು 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿರುತ್ತವೆ. ಇದನ್ನು ಚಾರ್ಜ್ ಮಾಡಲು, 25W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುವುದು. ಈ ಸ್ಯಾಮ್‌ಸಂಗ್ ಫೋನ್‌ಗಳು 2.4GHz ಮತ್ತು 5GHz ಡ್ಯುಯಲ್ ಬ್ಯಾಂಡ್ ವೈ-ಫೈ, ವೈ-ಫೈ ಡೈರೆಕ್ಟ್, ಡ್ಯುಯಲ್ ಸಿಮ್ ಸೇರಿದಂತೆ ಹಲವು ಕನೆಕ್ಟಿವಿಟಿ ಸೌಲಭ್ಯಗಳೊಂದಿಗೆ ಬರುತ್ತವೆ.


Click it and Unblock the Notifications








