ಕೇವಲ 12,499 ರೂ.ಗೆ ಹೊಸ Samsung Galaxy M17 5G ಫೋನ್ ಲಾಂಚ್!
ಟೆಕ್ ದೈತ್ಯ Samsung ತನ್ನ ಬಹುನಿರೀಕ್ಷಿತ Galaxy M17 5G ಸ್ಮಾರ್ಟ್‌ಫೋನ್ ಅನ್ನು ಶುಕ್ರವಾರ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಫೋನ್ ಶಕ್ತಿಯುತ ಎಕ್ಸಿನೋಸ್ 1330 ಚಿಪ್‌ಸೆಟ್ ಮತ್ತು 6.7-ಇಂಚಿನ ಸೂಪರ್ AMOLED ಡಿಸ್ಪ್ಲೇ ಮತ್ತು OIS ಬೆಂಬಲಿತ 50MP ಟ್ರಿಪಲ್ ರಿಯರ್ ಕ್ಯಾಮೆರಾ ಸೇರಿದಂತೆ ಹಲವಾರು ಪ್ರಮುಖ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಗಮನಾರ್ಹ ಬ್ಯಾಟರಿ ಸಾಮರ್ಥ್ಯದೊಂದಿಗೆ ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆ ಇದೆ. ಹಾಗಾದರೆ, ಹೊಸ Galaxy M17 5G ಸ್ಮಾರ್ಟ್‌ಫೋನ್ ಹೇಗಿದೆ?, ಬೆಲೆ ಎಷ್ಟು? ಎಂಬುದನ್ನು ನೋಡೋಣ ಬನ್ನಿ.
Galaxy M17 5G: ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Galaxy M17 5G ಯ ಆರಂಭಿಕ ಬೆಲೆ 12,499 ರೂ. (4GB RAM + 128GB ಸಂಗ್ರಹಣೆ)ಆಗಿದೆ. ಇದರ 6GB RAM ಮತ್ತು 8GB RAM ಮಾದರಿಗಳು ಕ್ರಮವಾಗಿ ರೂ. 13,999 ಮತ್ತು ರೂ. 15,499 ಬೆಲೆಯನ್ನು ಹೊಂದಿವೆ.ಈ ಫೋನ್ ಅಕ್ಟೋಬರ್ 13 ರಂದು ಅಮೆಜಾನ್, ಸ್ಯಾಮ್‌ಸಂಗ್‌ನ ಆನ್‌ಲೈನ್ ಸ್ಟೋರ್ ಮತ್ತು ಆಯ್ದ ಚಿಲ್ಲರೆ ಅಂಗಡಿಗಳ ಮೂಲಕ ಮಾರಾಟಕ್ಕೆ ಬರಲಿದೆ. ಈ ಫೋನ್ ಮೂನ್‌ಲೈಟ್ ಸಿಲ್ವರ್ ಮತ್ತು ಸಫೈರ್ ಬ್ಲ್ಯಾಕ್ ಎಂಬ ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.
Galaxy M17 5G: ಪ್ರಮುಖ ವೈಶಿಷ್ಟ್ಯಗಳು
ಈ ಹೊಸ Galaxy M17 5G ಸ್ಮಾರ್ಟ್‌ಫೋನ್ ಕಂಪೆನಿಯ ಸ್ವಂತ ಶಕ್ತಿಯುತ ಎಕ್ಸಿನೋಸ್ 1330 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತದೆ. ಇದು ವೇಗವಾದ CPU ಕಾರ್ಯಕ್ಷಮತೆಯನ್ನು ಒದಗಿಸುವುದರಿಂದ ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್‌ಗೆ ಸೂಕ್ತವಾಗಿದೆ. ಈ ಫೋನ್ ಇತ್ತೀಚಿನ Android 15-ಆಧಾರಿತ One UI 7 ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಸ್ಯಾಮ್‌ಸಂಗ್ ಈ ಹೊಸ ಫೋನ್‌ಗೆ ಆರು ವರ್ಷಗಳ ಭದ್ರತಾ ನವೀಕರಣಗಳು ಮತ್ತು ಆರು OS ಅಪ್‌ಗ್ರೇಡ್‌ಗಳ ಭರವಸೆ ನೀಡಿದೆ. ಇದು ಸಾಧನದ ದೀರ್ಘಾಯುಷ್ಯವನ್ನು ಸೂಚಿಸುತ್ತದೆ.

ಈ Galaxy M17 5G ಸ್ಮಾರ್ಟ್‌ಫೋನಿನ ಪ್ರಮುಖ ಆಕರ್ಷಣೆ ಎಂದರೆ, ಇದರಲ್ಲಿರುವ 6.7-ಇಂಚಿನ ಸೂಪರ್ AMOLED ಡಿಸ್ಪ್ಲೇ, ಇದು ಪೂರ್ಣ-HD+ ರೆಸಲ್ಯೂಶನ್ ಹೊಂದಿದೆ. 1,100 nits ಪೀಕ್ ಬ್ರೈಟ್‌ನೆಸ್‌ನೊಂದಿಗೆ ಬಿಸಿಲಿನಲ್ಲೂ ಅತ್ಯುತ್ತಮ ವೀಕ್ಷಣೆಯ ಅನುಭವ ನೀಡುತ್ತದೆ. ಹೆಚ್ಚುವರಿ ರಕ್ಷಣೆಗಾಗಿ, ಸ್ಕ್ರೀನ್‌ಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆ ಒದಗಿಸಲಾಗಿದೆ. ಈ ಫೋನ್ IP54 ರೇಟಿಂಗ್ ಹೊಂದಿದ್ದು, ಧೂಳು ಮತ್ತು ನೀರಿನ ಸ್ಪ್ಲಾಶ್‌ಗಳಿಂದ ರಕ್ಷಣೆ ನೀಡುತ್ತದೆ.
ಫೋಟೋಗ್ರಫಿ ವಿಭಾಗದಲ್ಲಿ, Galaxy M17 5G ಟ್ರಿಪಲ್-ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಪ್ರಮುಖವಾಗಿದೆ. OIS ವೈಶಿಷ್ಟ್ಯವು ಅಲುಗಾಡುವಿಕೆ ಇಲ್ಲದೆ ಸ್ಪಷ್ಟ ಫೋಟೋಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ. ಇದರೊಂದಿಗೆ, 5-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ಗಳು ಸೇರಿವೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 13-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಬ್ಯಾಟರಿ ವಿಷಯದಲ್ಲಿ, ಈ Galaxy M17 5G ಫೋನ್ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡಿದ್ದು, 25W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರ ಹಿಂದಿನ ಮಾದರಿಗಿಂತ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಇದು ಬಳಕೆದಾರರಿಗೆ ದೀರ್ಘಾವಧಿಯ ಬಳಕೆಯನ್ನು ಖಾತ್ರಿಪಡಿಸುತ್ತದೆ. ಜೊತೆಗೆ Circle to Search with Google and Gemini Live ನಂತಹ ಹಲವಾರು AI-ಚಾಲಿತ ಪರಿಕರಗಳೊಂದಿಗೆ ಬಂದಿರುವ ಈ ಸಾಧನವು Samsung Wallet ಮೂಲಕ "ಟ್ಯಾಪ್ & ಪೇ" ಸೌಲಭ್ಯವನ್ನು ಸಹ ಒದಗಿಸಲಿದೆ.


Click it and Unblock the Notifications








