ಇಂದಿನಿಂದ Galaxy M17 5G ಮಾರಾಟ ಆರಂಭ: ಆರಂಭಿಕ ಬೆಲೆ ಕೇವಲ ₹12,499!
ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ Samsung ತನ್ನ ಜನಪ್ರಿಯ 'M' ಸರಣಿಯ ಹೊಸ ಮಾದರಿಯನ್ನು ಇತ್ತೀಚಿಗಷ್ಟೇ ಬಿಡುಗಡೆ ಮಾಡಿತ್ತು. ಈ ಬಹುನಿರೀಕ್ಷಿತ Samsung Galaxy M17 5G ಸ್ಮಾರ್ಟ್‌ಫೋನ್ ಇಂದಿನಿಂದ, ಅಂದರೆ ಅಕ್ಟೋಬರ್ 13 ರಿಂದ ಮೊದಲ ಬಾರಿಗೆ ಮಾರಾಟಕ್ಕೆ ಬಂದಿದೆ. ದೇಶದ ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಭಾರಿ ಸ್ಪರ್ಧೆ ಸೃಷ್ಟಿಸುವ ನಿರೀಕ್ಷೆ ಇರುವ ಈ ಸ್ಮಾರ್ಟ್‌ಫೋನ್, ಶಕ್ತಿಯುತ ವೈಶಿಷ್ಟ್ಯಗಳು ಮತ್ತು ಆಕರ್ಷಕ ಬೆಲೆಯೊಂದಿಗೆ ಯುವ ಗ್ರಾಹಕರನ್ನು ಗುರಿಯಾಗಿಸಿಕೊಂಡಿದೆ. ಹಾಗಾದರೆ, ಹೊಸ Samsung Galaxy M17 5G ಸ್ಮಾರ್ಟ್‌ಫೋನ್ ಹೇಗಿದೆ?, ಬೆಲೆಗಳು ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
Samsung Galaxy M17 5G: ಪ್ರಮುಖ ವೈಶಿಷ್ಟ್ಯಗಳು
Galaxy M17 5G ಫೋನ್ 6.7-ಇಂಚಿನ ಸೂಪರ್ AMOLED ಡಿಸ್‌ಪ್ಲೆ ಹೊಂದಿದ್ದು, ಇದು ಪೂರ್ಣ-HD+ ರೆಸಲ್ಯೂಶನ್‌ನೊಂದಿಗೆ ಉತ್ಕೃಷ್ಟ ಬಣ್ಣ ಮತ್ತು ಸ್ಪಷ್ಟತೆಯನ್ನು ನೀಡುತ್ತದೆ. ಇದರಲ್ಲ 1,100 nits ಪೀಕ್ ಬ್ರೈಟ್‌ನೆಸ್ ಇರುವುದರಿಂದ ಬಿಸಿಲಿನಲ್ಲೂ ವೀಕ್ಷಣೆಗೆ ಯಾವುದೇ ತೊಂದರೆಯಾಗದು. ವಿಶೇಷವೆಂದರೆ, ಈ ವಿಭಾಗದಲ್ಲಿ ಅಪರೂಪವಾದ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯೊಂದಿಗೆ ಇದು ಬರುತ್ತದೆ. ಜೊತೆಗೆ, IP54 ರೇಟಿಂಗ್ ಧೂಳು ಮತ್ತು ನೀರಿನ ಸ್ಪ್ಲಾಶ್‌ಗಳಿಂದ ಫೋನ್‌ಗೆ ಹೆಚ್ಚುವರಿ ಭದ್ರತೆ ನೀಡುತ್ತದೆ.
ಕ್ಯಾಮೆರಾ ವಿಭಾಗದಲ್ಲಿ, ಇದು OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಬೆಂಬಲಿತ 50-ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಒಳಗೊಂಡ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. OIS ವೈಶಿಷ್ಟ್ಯವು ಕೈ ಅಲುಗಾಡಿದರೂ ಸಹ ಸ್ಪಷ್ಟ ಫೋಟೋಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ. ಇದು ಸ್ಯಾಮ್‌ಸಂಗ್‌ನ ದೊಡ್ಡ ಹೆಜ್ಜೆಯಾಗಿದ್ದು, ಬಜೆಟ್ ವಿಭಾಗದಲ್ಲಿ ಉತ್ತಮ ಕ್ಯಾಮೆರಾ ಅನುಭವವನ್ನು ನೀಡುತ್ತದೆ.

ಕಾರ್ಯಕ್ಷಮತೆ ವಿಬಾಗದಲ್ಲಿ, ಈ Galaxy M17 5G ಫೋನ್ ಸ್ಯಾಮ್‌ಸಂಗ್‌ನದೇ ಆದ ಶಕ್ತಿಯುತವಾದ ಎಕ್ಸಿನೋಸ್ 1330 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತದೆ. ಇದು ದೈನಂದಿನ ಕಾರ್ಯಗಳು ಮತ್ತು ಗೇಮಿಂಗ್‌ಗೆ ವೇಗದ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ಮಧ್ಯಮ ಶ್ರೇಣಿಯ ಫೋನ್‌ಗಳಲ್ಲಿ ಇತ್ತೀಚಿನ ಟ್ರೆಂಡ್‌ಗೆ ಅನುಗುಣವಾಗಿ, ಈ ಫೋನ್, Circle to Search with Google ಮತ್ತು Gemini Live ನಂತಹ ಹಲವಾರು AI-ಚಾಲಿತ ಪರಿಕರಗಳೊಂದಿಗೆ ಬಂದಿದೆ. ಇದು ಬಳಕೆದಾರರಿಗೆ ಹೊಸ ರೀತಿಯ ಅನುಭವ ನೀಡುತ್ತದೆ
ಬ್ಯಾಟರಿ ವಿಭಾಗದಲ್ಲಿ, Galaxy M17 5G ಫೋನ್ 5,000mAh ಬ್ಯಾಟರಿ ಮತ್ತು 25W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ದಿನವಿಡೀ ಬಾಳಿಕೆ ಬರುತ್ತದೆ. ಗಮನಿಸಬೇಕಾದ ಅಂಶವೆಂದರೆ, ಈ ಫೋನ್ ಇತ್ತೀಚಿನ Android 15-ಆಧಾರಿತ One UI 7 ನಲ್ಲಿ ಕಾರ್ಯನಿರ್ವಹಿಸಲಿದೆ ಮತ್ತು ಸ್ಯಾಮ್‌ಸಂಗ್ ಆರು ವರ್ಷಗಳ ಭದ್ರತಾ ನವೀಕರಣಗಳು ಮತ್ತು ಆರು OS ಅಪ್‌ಗ್ರೇಡ್‌ಗಳ ದೀರ್ಘಾವಧಿಯ ಭರವಸೆ ನೀಡಿದೆ.
Samsung Galaxy M17 5G: ಬೆಲೆ ಮತ್ತು ಲಭ್ಯತೆ
Galaxy M17 5G ಸ್ಮಾರ್ಟ್‌ಫೋನ್‌ನ ಬೆಲೆ ಹೀಗಿದೆ:
4GB RAM + 128GB ಸಂಗ್ರಹಣೆ: ₹12,499
6GB RAM + 128GB ಸಂಗ್ರಹಣೆ: ₹13,999
8GB RAM + 128GB ಸಂಗ್ರಹಣೆ: ₹15,499
ಗ್ರಾಹಕರು ಎಲ್ಲಾ ಪ್ರಮುಖ ಬ್ಯಾಂಕುಗಳು/NBFC ಪಾಲುದಾರರ ಮೂಲಕ 3 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ EMI (No Cost EMI) ಕೊಡುಗೆಗಳನ್ನು ಸಹ ಪಡೆಯಬಹುದು. ಈ ಫೋನ್ ಮೂನ್‌ಲೈಟ್ ಸಿಲ್ವರ್ ಮತ್ತು ಸಫೈರ್ ಬ್ಲ್ಯಾಕ್ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ Amazon, Samsung.com ಮತ್ತು ಆಯ್ದ ಚಿಲ್ಲರೆ ಅಂಗಡಿಗಳಲ್ಲಿ ಲಭ್ಯವಿದೆ. ಸ್ಯಾಮ್‌ಸಂಗ್‌ನ ಈ ಹೊಸ 'ಮಾನ್ಸ್ಟರ್' ಫೋನ್ ಉತ್ತಮ ಡಿಸ್‌ಪ್ಲೇ, OIS ಕ್ಯಾಮೆರಾ ಮತ್ತು ಬಲಿಷ್ಠ ಸಾಫ್ಟ್‌ವೇರ್ ಬೆಂಬಲದೊಂದಿಗೆ ₹15,000 ರೊಳಗಿನ ವಿಭಾಗದಲ್ಲಿ ಒಂದು ಬಲಿಷ್ಠ ಆಯ್ಕೆಯಾಗಿದೆ.


Click it and Unblock the Notifications








