Home
ಮೊಬೈಲ್

Samsung Galaxy M17e 5G: ಮಾರ್ಚ್ 17 ರಂದು ಭಾರತಕ್ಕೆ, ಬೆಲೆ ₹13,999?!

ದಕ್ಷಿಣ ಕೊರಿಯಾದ ಟೆಕ್ ದೈತ್ಯ Samsung ತನ್ನ ಹೊಸ ಬಜೆಟ್ ಬೆಲೆಯ Galaxy M17e 5G ಫೋನ್ ಅನ್ನು ಇದೇ ತಿಂಗಳಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಅಧಿಕೃತ ಬಿಡುಗಡೆಗೂ ಮುನ್ನವೇ ಫೋನ್‌ನ ಪ್ರಮುಖ ವೈಶಿಷ್ಟ್ಯಗಳು ಮತ್ತು ಡಿಸೈನ್ ವಿವರಗಳು ಹೊರಬಂದಿದ್ದು, ಇದು ಕಡಿಮೆ ಬೆಲೆಯಲ್ಲೇ ಉತ್ತಮ ಸ್ಪೆಸಿಫಿಕೇಷನ್ ನೀಡುವ ಸಾಧನವಾಗಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ. ಇದೀಗ ಜನಪ್ರಿಯ ಟಿಪ್‌ಸ್ಟಾರ್ ಓರ್ವರು ಈ ಫೋನಿನ ನಿರೀಕ್ಷಿತ ಬೆಲೆಯನ್ನು ಸೋರಿಕೆ ಮಾಡಿದ್ದಾರೆ. !

ಸೋಶಿಯಲ್ ಮೀಡಿಯಾ X ನಲ್ಲಿ ಜನಪ್ರಿಯ ಟೆಕ್ ಟಿಪ್ಸ್ಟರ್ Sanju Choudhary ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, Samsung Galaxy M17e 5G ಭಾರತದಲ್ಲಿ ಸುಮಾರು ₹13,999 ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಫೋನ್ ಹಲವು RAM ಮತ್ತು ಸ್ಟೋರೇಜ್ ಆಯ್ಕೆಗಳಲ್ಲಿ ಬರಬಹುದೇ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆದಾಗ್ಯೂ, ಬಿಡುಗಡೆ ದಿನಾಂಕ ಸಮೀಪಿಸುತ್ತಿರುವುದರಿಂದ ಮುಂದಿನ ಕೆಲವು ದಿನಗಳಲ್ಲಿ ಇನ್ನಷ್ಟು ವಿವರಗಳು ಹೊರಬರುವ ಸಾಧ್ಯತೆ ಇದೆ.

ಕಂಪನಿ ಈಗಾಗಲೇ Samsung Galaxy M17e 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಮಾರ್ಚ್ 17 ರಂದು ಬಿಡುಗಡೆ ಆಗಲಿದೆ ಎಂದು ದೃಢಪಡಿಸಿದೆ. ಈ ಫೋನ್ Blitz Blue ಮತ್ತು Vibe Violet ಎಂಬ ಎರಡು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಜೊತೆಗೆ, ಫೋನ್‌ ಅನ್ನು Amazon ಮೂಲಕ ಖರೀದಿಸಲು ಸಾಧ್ಯವಾಗಲಿದೆ ಎಂಬುದನ್ನು ಕಂಪನಿ ಪ್ರಕಟಿಸಿದೆ. ಇಷ್ಟೇ ಅಲ್ಲದೆ, ಮುಂಬರುವ ಈ Samsung Galaxy M17e 5G ಫೋನ್ ಹೊಂದಿರುವ ಎಲ್ಲಾ ಪ್ರಮುಖ ಸ್ಪೆಸಿಫಿಕೇಷನ್‌ಗಳು ಸಹ ಬಹಿರಂಗವಾಗಿವೆ.

Samsung Galaxy M17e 5G: ಮಾರ್ಚ್ 17 ರಂದು ಭಾರತಕ್ಕೆ, ಬೆಲೆ ₹13,999?!

ದೊಡ್ಡ ಡಿಸ್ಪ್ಲೇ ಮತ್ತು 120Hz ರಿಫ್ರೆಶ್ ರೇಟ್
ಮುಂಬರುವ Samsung Galaxy M17e 5G ನಲ್ಲಿ 6.7 ಇಂಚಿನ HD+ ಡಿಸ್ಪ್ಲೇ ನೀಡಲಾಗಿದೆ. ಈ ಡಿಸ್‌ಪ್ಲೆಯು 120Hz ರಿಫ್ರೆಶ್ ರೇಟ್ ಬೆಂಬಲಿಸುವುದರಿಂದ ಸ್ಕ್ರೋಲಿಂಗ್, ಅಪ್ಲಿಕೇಶನ್‌ಗಳನ್ನು ಬಳಕೆ ಮಾಡುವಾಗ ಹಾಗೂ ಗೇಮಿಂಗ್ ವೇಳೆ ಹೆಚ್ಚು ಸ್ಮೂತ್ ಅನುಭವ ಸಿಗುತ್ತದೆ. ಜೊತೆಗೆ Adaptive Brightness ಮತ್ತು High Brightness Mode (HBM) ತಂತ್ರಜ್ಞಾನವೂ ಇದ್ದು, ಸುತ್ತಲಿನ ಬೆಳಕಿನ ಮಟ್ಟವನ್ನು ಗುರುತಿಸಿ ಪರದೆ ಪ್ರಕಾಶವನ್ನು ಸ್ವಯಂಚಾಲಿತವಾಗಿ ಹೊಂದಿಸುತ್ತದೆ ಎಂದು ಕಂಪೆನಿ ತಿಳಿಸಿದೆ. ವಿನ್ಯಾಸದಲ್ಲಿ, ಈ ಸ್ಮಾರ್ಟ್‌ಫೋನ್ ಸುಮಾರು 8.2 ಮಿಮೀ ದಪ್ಪ ಹೊಂದಿದೆ. ಹಿಂಭಾಗದಲ್ಲಿ Glass Fibre Reinforced Polymer (GFRP) ವಸ್ತುವನ್ನು ಬಳಸಲಾಗಿದೆ. ಜೊತೆಗೆ IP54 ರೇಟಿಂಗ್ ಇರುವುದರಿಂದ ಧೂಳು ಹಾಗೂ ಸಣ್ಣ ನೀರಿನ ಚಿಮುಕಿನಿಂದ ಸಾಧನಕ್ಕೆ ರಕ್ಷಣೆ ದೊರೆಯುತ್ತದೆ.

ಶಕ್ತಿಶಾಲಿ ಪ್ರೊಸೆಸರ್ ಮತ್ತು ಹೊಸ ಸಾಫ್ಟ್‌ವೇರ್
Galaxy M17e 5G ಅನ್ನು MediaTek Dimensity 6300 5G ಪ್ರೊಸೆಸರ್ ಶಕ್ತಿಗೊಳಿಸುತ್ತದೆ. ಇದರಲ್ಲಿ ಎರಡು Cortex-A76 (2.4GHz) ಪರ್ಫಾರ್ಮೆನ್ಸ್ ಕೋರ್‌ಗಳು ಹಾಗೂ ಆರು Cortex-A55 (2.0GHz) ಎಫಿಶಿಯನ್ಸಿ ಕೋರ್‌ಗಳು ಸೇರಿವೆ. ಗ್ರಾಫಿಕ್ಸ್ ಪ್ರಕ್ರಿಯೆಗಾಗಿ ARM Mali-G57 GPU ನೀಡಲಾಗಿದೆ, ಇದು ವಿಡಿಯೋ ವೀಕ್ಷಣೆ ಹಾಗೂ ಸಾಮಾನ್ಯ ಗೇಮಿಂಗ್ ಅನುಭವವನ್ನು ಸುಧಾರಿಸುತ್ತದೆ. ಸಾಫ್ಟ್‌ವೇರ್ ವಿಷಯದಲ್ಲಿ, ಈ ಫೋನ್ Android 16 ಆಧಾರಿತ One UI 8 ಮೇಲೆ ಕಾರ್ಯನಿರ್ವಹಿಸುತ್ತದೆ. ಕಂಪನಿಯ ಹೇಳಿಕೆಯ ಪ್ರಕಾರ, ಈ ಸಾಧನಕ್ಕೆ 6 ಪೀಳಿಗೆಯ Android ಅಪ್ಡೇಟ್‌ಗಳು ಮತ್ತು 6 ವರ್ಷಗಳ ಭದ್ರತಾ ಅಪ್ಡೇಟ್‌ಗಳು ಲಭ್ಯವಾಗಲಿವೆ.

Samsung Knox Vault ಮತ್ತು AI ಫೀಚರ್‌ಗಳು
ಭದ್ರತೆಗೆ, ಈ ಸ್ಮಾರ್ಟ್‌ಫೋನ್‌ನಲ್ಲಿ Samsung Knox Vault ವ್ಯವಸ್ಥೆ ನೀಡಲಾಗಿದೆ. ಇದಕ್ಕೆ EAL5+ ಸುರಕ್ಷತಾ ಪ್ರಮಾಣಪತ್ರ ದೊರೆತಿದ್ದು, ಬಳಕೆದಾರರ ಡೇಟಾ ರಕ್ಷಣೆಗಾಗಿ ಕಠಿಣ ಪರೀಕ್ಷೆಗಳನ್ನು ಪೂರೈಸಿದೆ ಎಂದು ಕಂಪನಿ ಹೇಳಿದೆ. ಫೋನ್‌ನಲ್ಲಿ ಕೆಲವು ಹೊಸ ಸ್ಮಾರ್ಟ್ ಫೀಚರ್‌ಗಳೂ ಸೇರಿವೆ. Now Bar ಮೂಲಕ ರಿಯಲ್-ಟೈಮ್ ಮಾಹಿತಿ ಅಪ್ಡೇಟ್‌ಗಳನ್ನು ನೋಡಬಹುದು. Live Notifications ಸಕ್ರಿಯ ಅಪ್ಲಿಕೇಶನ್‌ಗಳ ಮಾಹಿತಿ ತಕ್ಷಣವೇ ತೋರಿಸುತ್ತದೆ. ಹೋಮ್ ಸ್ಕ್ರೀನ್‌ನಲ್ಲಿ Large Folders ವ್ಯವಸ್ಥೆಯೂ ಇದೆ. ಜೊತೆಗೆ Google Gemini AI ಮತ್ತು Circle to Search ಫೀಚರ್‌ಗಳು ಕೂಡ ಈ ಸಾಧನದಲ್ಲಿ ಬೆಂಬಲಿತವಾಗಿವೆ.

50MP ಕ್ಯಾಮೆರಾ ಮತ್ತು ದೊಡ್ಡ ಬ್ಯಾಟರಿ
ಫೋಟೋಗ್ರಫಿಗಾಗಿ, Samsung Galaxy M17e 5G ನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜೊತೆಗೆ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ನೀಡಲಾಗಿದೆ. ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಳಿಗಾಗಿ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಇರಲಿದೆ. ಬ್ಯಾಟರಿ ವಿಷಯದಲ್ಲಿ, ಈ ಫೋನ್‌ನಲ್ಲಿ 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಇದೆ. ಕಂಪನಿ ಹೇಳುವಂತೆ, ಇದು ದೀರ್ಘ ಸಮಯದ ಸ್ಟ್ರೀಮಿಂಗ್, ವೆಬ್ ಬ್ರೌಸಿಂಗ್ ಮತ್ತು ಸೋಶಿಯಲ್ ಮೀಡಿಯಾ ಬಳಕೆಗೆ ಸಾಕಷ್ಟು ಬ್ಯಾಟರಿ ಬ್ಯಾಕಪ್ ನೀಡುತ್ತದೆ.

ದಿನನಿತ್ಯದ ಸಂವಹನ, ವಿಡಿಯೋ ವೀಕ್ಷಣೆ, ಸೋಶಿಯಲ್ ಮೀಡಿಯಾ ಬಳಕೆ ಹಾಗೂ ಸಾಮಾನ್ಯ ಉತ್ಪಾದಕತೆ ಕೆಲಸಗಳಿಗೆ ವಿಶ್ವಾಸಾರ್ಹ ಕಾರ್ಯಕ್ಷಮತೆ ನೀಡುವಂತೆ ಈ ಫೋನ್ ವಿನ್ಯಾಸಗೊಳಿಸಲಾಗಿದೆ ಎಂದು Samsung ತಿಳಿಸಿದೆ. ಒಟ್ಟಾರೆಯಾಗಿ, ದೊಡ್ಡ ಡಿಸ್ಪ್ಲೇ, 120Hz ರಿಫ್ರೆಶ್ ರೇಟ್, 6000mAh ಬ್ಯಾಟರಿ, ಹೊಸ AI ಫೀಚರ್‌ಗಳು ಹಾಗೂ ದೀರ್ಘಾವಧಿಯ ಸಾಫ್ಟ್‌ವೇರ್ ಅಪ್ಡೇಟ್ ಬೆಂಬಲದೊಂದಿಗೆ Samsung Galaxy M17e 5G ಬಜೆಟ್ 5G ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಗಮನ ಸೆಳೆಯುವ ಸಾಧನವಾಗುವ ಸಾಧ್ಯತೆ ಇದೆ. ಲಾಂಚ್ ಕಾರ್ಯಕ್ರಮದ ವೇಳೆ ಸಂಪೂರ್ಣ ಬೆಲೆ ಮತ್ತು ಮಾರಾಟ ವಿವರಗಳು ಬಹಿರಂಗವಾಗಲಿವೆ.

Best Mobiles in India

English summary
Samsung is gearing up to launch the Galaxy M17e 5G in India on March 17. Ahead of the official release, the phone’s expected ₹13,999 starting price and key details have leaked online.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+