ಭಾರತದಲ್ಲಿ ಇಂದು ಗ್ಯಾಲಾಕ್ಸಿ ಎಂ 30' ಲಾಂಚ್!..ಹೆದರಿ ಕುಳಿತ ಚೀನಾ ಕಂಪೆನಿಗಳು!!
ಶಿಯೋಮಿ ಕಂಪೆನಿಯನ್ನು ಹೇಗಾದರೂ ಮಾಡಿ ಹಣಿಯಲೇಬೇಕು ಎಂದು ಪಣತೊಟ್ಟಿರುವ ಸ್ಯಾಮ್‌ಸಂಗ್ ಕಂಪೆನಿಯು ಇಂದು ತನ್ನ ಬಹುನಿರೀಕ್ಷಿತ 'ಗ್ಯಾಲ್ಯಾಕ್ಸಿ M30' ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುತ್ತಿದೆ. ಭಾರತದಲ್ಲಿ ಇಂದು(ಫೆ.27) ಸಂಜೆ 6 ಗಂಟೆಗೆ ಭಾರೀ ಕೂತುಹಲ ಮೂಡಿಸಿರುವ 'ಗ್ಯಾಲಾಕ್ಸಿ M30' ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದ್ದು, ಶಿಯೋಮಿ, ಸೇರಿದಂತೆ ಬಹುತೇಕ ಎಲ್ಲಾ ಚೀನಾ ಮೊಬೈಲ್ ಕಂಪೆನಿಗಳು ಹೆದರಿ ಕುಳಿತಿವೆ.
ಹೌದು, 'ಗ್ಯಾಲ್ಯಾಕ್ಸಿ M10' ಮತ್ತು 'ಗ್ಯಾಲ್ಯಾಕ್ಸಿ M20' ಹೆಸರಿನ ಎರಡು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಚೀನಾ ಕಂಪೆನಿಗಳ ನಿದ್ದೆಗೆಡಿಸಿದ್ದ ಸ್ಯಾಮ್‌ಸಂಗ್, ಇದೀಗ ಡ್‌ಮಿ ನೋಟ್ 7 ಸ್ಮಾರ್ಟ್‌ಫೋನ್ ಬಿಡುಗಡೆಗೂ ಮುನ್ನವೇ ಭಾರತದ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಲು ಮುಂದಾಗಿದೆ. ನಾಳೆ ರೆಡ್ ಮಿ ನೋಟ್ 7 ಬಿಡುಗಡೆಗೂ ಮುನ್ನವೇ ಭಾರತದ ಸ್ಮಾರ್ಟ್‌ಫೋನ್ ಪ್ರಿಯರನ್ನು ಆಕರ್ಷಿಸಲು ಸ್ಯಾಮ್‌ಸಂಗ್ ಇಂದು ರೆಡಿಯಾಗಿದೆ.

ಮೊಬೈಲ್ ಪ್ರಿಯರಿಗೆ ಇದರ ಜೊತೆಗೆ ಮತ್ತೊಂದು ಸಿಹಿಸುದ್ದಿ ಎಂದರೆ, ಗ್ಯಾಲಾಕ್ಸಿ M30 ಸ್ಮಾರ್ಟ್‌ಫೋನ್ ಬೆಲೆ 15,000 ರೂ.ಗಳಿಗೆ ನಿಗದಿಯಾಗಿದೆ ಎಂದು ಹೇಳಲಾಗಿದ್ದು, ಪ್ರಖ್ಯಾತ ಇ ಕಾಮರ್ಸ್ ತಾಣವಾದ ಅಮೆಜಾನ್ನಲ್ಲಿ ನಾಳೆಯಿಂದಲೇ ಖರೀದಿಗೆ ಲಭ್ಯವಾಗಲಿದೆಯಂತೆ. ಹಾಗಾದರೆ, ಇಂದು ಭಾರತದ ಮೊಬೈಲ್ ಮಾರುಕಟ್ಟೆಯನ್ನು ನಡುಗಿಸಲು ಬರುತ್ತಿರುವ 'ಗ್ಯಾಲಾಕ್ಸಿ M30' ಸ್ಮಾರ್ಟ್‌ಫೋನ್ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಹೇಗಿದೆ 'ಗ್ಯಾಲಾಕ್ಸಿ ಎಂ 30'?
'ಗ್ಯಾಲಾಕ್ಸಿ ಎಂ 30' ಹೇಗಿದೆ ಎಂದು ತಿಳಿದರೆ ಕೇವಲ 15 ಸಾವಿರ ರೂಪಾಯಿಗಳಿಂದ 'ಗ್ಯಾಲಾಕ್ಸಿ ಎಂ 30' ಬೆಲೆ ಆರಂಭವಾಗಲಿದೆ ಎಂಬ ಊಹೆ ಕೂಡ ಸಿಲುಕದಂತಿದೆ. 6.38 ಇಂಚಿನ ಸೂಪರ್ ಅಮೊಲೆಡ್ ಡಿಸ್‌ಪ್ಲೇ, ಎಕ್ಸಿನೊಸ್ 7904 ಎಸ್‌ಒಸಿ, 5000mAh ಬ್ಯಾಟರಿ, ಮೂರು ಕ್ಯಾಮೆರಾಗಳಂತಹ ಫೀಚರ್ಸ್ ಹೊಂದಿರುವ 'ಗ್ಯಾಲಾಕ್ಸಿ ಎಂ 30' ವಿನ್ಯಾಸವಂತೂ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಡಿಸ್‌ಪ್ಲೇ ಇನ್ ಫಿಂಗರ್‌ಪ್ರಿಂಟ್ ಆಯ್ಕೆ ಮೊಬೈಲ್ ಪ್ರಿಯರನ್ನು ಸೆಳೆಯಲು ಕಾರಣವಾಗಿದೆ.

'ಗ್ಯಾಲಾಕ್ಸಿ ಎಂ 30' ವಿನ್ಯಾಸ ಮತ್ತು ಡಿಸ್‌ಪ್ಲೇ ?
ನೋಚ್ ವಿನ್ಯಾಸದಲ್ಲಿ ಬಿಡುಗಡೆಯಾಗಲಿರುವ 'ಗ್ಯಾಲಾಕ್ಸಿ ಎಂ 30' 2220 x 1080 ಪಿಕ್ಸೆಲ್‌ಗಳ ಸಾಮರ್ಥ್ಯದೊಂದಿಗೆ FHD + ರೆಸೊಲ್ಯೂಶನ್ನಿನ 6.38-ಇಂಚಿನ ಸೂಪರ್ AMOLED ಡಿಸ್‌ಪ್ಲೇಯನ್ನು ಹೊಂದಿದೆ ಎಂದು ಹೇಳಲಾಗಿದೆ. ಇದು 2.5 ಡಿ ವಕ್ರ ಮೃದುವಾದ ಗಾಜಿನಿಂದ ರಕ್ಷಣೆಯಾಗಿರಲಿದ್ದು, ಹಿಂಬಾಗದಲ್ಲಿ ಮೂರು ರಿಯರ್ ಕ್ಯಾಮೆರಾಗಳನ್ನು ಹೊಂದಿರುವ ಬೆಸ್ಟ್ ಸ್ಮಾರ್ಟ್‌ಫೋನ್ ಇದಾಗಿರಲಿದೆ ಎಂದು ಹೇಳಲಾಗಿದೆ.

'ಗ್ಯಾಲಾಕ್ಸಿ ಎಂ 30' ಕ್ಯಾಮೆರಾಗಳು!
ಈಗಾಗಲೇ ಲೀಕ್ ಆಗಿರುವ ಚಿತ್ರಗಳಲ್ಲೇ 'ಗ್ಯಾಲಾಕ್ಸಿ ಎಂ 30' ಸ್ಮಾರ್ಟ್‌ಫೋನ್ ಮೂರು ಕ್ಯಾಮೆರಾಗಳನ್ನು ಹೊಂದಿರುವುದು ಸ್ಪಷ್ಟವಾಗಿದೆ. ಎಫ್ / 1.9 ದ್ಯುತಿರಂಧ್ರದೊಂದಿಗೆ 13MP ಪ್ರಾಥಮಿಕ ಸಂವೇದಕ ತ್ರಿ ಕ್ಯಾಮೆರಾ ಘಟಕವನ್ನು ಹೊಂದಿರಲಿದೆ. f / 2.2 ದ್ಯುತಿರಂಧ್ರದೊಂದಿಗೆ 5MP ಮಾಧ್ಯಮಿಕ ವಿಶಾಲ ಕೋನ ಸಂವೇದಕ ಮತ್ತು f / 2.2 ದ್ಯುತಿರಂಧ್ರದೊಂದಿಗೆ ಮತ್ತೊಂದು 5MP ಆಳ ಸಂವೇದಕ ಸಂವೇದಕವನ್ನು ಹೊಂದಿರುತ್ತದೆ. ಸೆಲ್ಫೀ ಕ್ಯಾಮೆರಾವು f / 2.0 ದ್ಯುತಿರಂಧ್ರದೊಂದಿಗೆ 16MP ಸಂವೇದಕವನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.

'ಗ್ಯಾಲಾಕ್ಸಿ ಎಂ 30' ಹಾರ್ಡ್‌ವೇರ್!
4 ಜಿಬಿ RAM + 64 ಜಿಬಿ ಆಂತರಿಕ ಸಂಗ್ರಹ ಮತ್ತು 6 ಜಿಬಿ RAM + 128 ಆಂತರಿಕ ಸಂಗ್ರಹವಿರುವ ಎರಡು ರೂಪಾಂತರಗಳಲ್ಲಿ 'ಗ್ಯಾಲಾಕ್ಸಿ ಎಂ 30' ಸ್ಮಾರ್ಟ್‌ಪೋನ್ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಅತ್ಯುತ್ತಮ ಎಕ್ಸಿನೊಸ್ 7904 ಎಸ್‌ಒಸಿ ಪ್ರೊಸೆಸರ್ ಮೂಲಕ ಕಾರ್ಯನಿರ್ವಹಣೆ ನೀಡುವ ಸ್ಮಾರ್ಟ್‌ಫೋನ್ ಡ್ಯುಯಲ್ ಸಿಮ್ ಸಪೋರ್ಟ್ ಮತ್ತು ಯುಎಸ್‌ಬಿ ಟೈಪ್ ಸಿ ಪೊರ್ಟ್ ಅನ್ನು ಹೊಂದಿರಲಿದೆ ಎಂದು ಪ್ರಮುಖ ಟೆಕ್ ಮಾಧ್ಯಮಗಳು ವರದಿ ಮಾಡಿವೆ.

ಇತರೆ ಏನೆಲ್ಲಾ ಫೀಚರ್ಸ್?
5000mAh ಬ್ಯಾಟರಿ ಶಕ್ತಿಯನ್ನು ಹೊಂದಿರುವ 'ಗ್ಯಾಲಾಕ್ಸಿ ಎಂ 30' ಸ್ಮಾರ್ಟ್‌ಪೋನ್, 4G VoLTE, ಬ್ಲೂಟೂತ್ 5.0, ಡ್ಯೂಯಲ್ ಸಿಮ್ ಬೆಂಬಲ ಮತ್ತು ಯುಎಸ್ ಟೈಪ್ ಸಿ ಪೋರ್ಟ್‌ನಂತರ ಫೀಚರ್ಸ್‌ಗಳನ್ನು ಹೊಂದಿದೆ ಎಂದು ಹೇಳಲಾಗಿದೆ. ಇದರ ಜೊತೆಗೆ ಇತ್ತೀಚಿನ ಸ್ಮಾರ್ಟ್‌ಪೋನ್ ಫೀಚರ್ಸ್‌ಗಳಾದ ಫೇಸ್ ಅನ್‌ಲಾಕ್, ಹಿಂಬಾಗದಲ್ಲಿ ಗ್ಲಾಸ್ ಡಿಸೈನ್ ಮತ್ತು ಗ್ರೇಡಿಯಂಟ್ ಬಣ್ಣಗಳು ಸ್ಮಾರ್ಟ್‌ಫೋನಿನಲ್ಲಿ ಇರಲಿವೆ ಎಂದು ನಾವು ನಿರೀಕ್ಷಿಸಬಹುದಾಗಿದೆ.

ಸ್ಮಾರ್ಟ್‌ಪೋನ್ ಬೆಲೆಗಳು!
ಮಾರ್ಚ್ ತಿಂಗಳಾಂತ್ಯಕ್ಕೆ ಭಾರತದ ಮೊಬೈಲ್ ಮಾರುಕಟ್ಟೆಗೆ ಕಾಲಿಡಲಿರುವ 'ಗ್ಯಾಲಾಕ್ಸಿ ಎಂ 30' ಬೆಲೆ ಕೂಡ ಲೀಕ್ ಆಗಿವೆ. ಜನಪ್ರಿಯ ವೆಬ್‌ಸೈಟ್ ಮೈ ಸ್ಮಾರ್ಟ್‌ಪ್ರೈಸ್ ಈ ಬಗ್ಗೆ ಮಾಹಿತಿ ನೀಡಿದ್ದು, ಕೇವಲ 15 ಸಾವಿರ ರೂಪಾಯಿಗಳಿಂದ 'ಗ್ಯಾಲಾಕ್ಸಿ ಎಂ 30' ಬೆಲೆ ಆರಂಭವಾಗಲಿದೆ ಎಂದು ಹೇಳಿದೆ. 4 ಜಿಬಿ RAM + 64 ಜಿಬಿ ಆಂತರಿಕ ಸಂಗ್ರಹದ ಸ್ಮಾರ್ಟ್‌ಫೋನ್ ಬೆಲೆ 15 ಸಾವಿರ ರೂ.ಗಳಾದರೆ, 6 ಜಿಬಿ RAM + 128 ಆಂತರಿಕ ಸಂಗ್ರಹದ ಪೋನ್ ಬೆಲೆ 19 ಸಾವಿರ ರೂ.ಗಳಾಗಿರಬಹುದು ಎಂದು ಹೇಳಲಾಗಿದೆ.


Click it and Unblock the Notifications








